Posted on June 3, 2008 by kandhakanmani
ಇದೊಂದು ಉತ್ತರ ಕರ್ನಾಟಕ ಲೇಖಕಿಯರ ಆಯ್ದ ಕತೆಗಳ ಸಂಕಲನ.
ಕತೆಗಾರ್ತಿಯರ ಪ್ರಾದೇಶಿಕತೆಯಿಂದ ನಿರ್ದೇಶಿಸಲ್ಪಟ್ಟಿದ್ದು, ಗೀತಾ ಕುಲಕರ್ಣಿ, ಶಾಂತದೇವಿ ಮಾಳವಾಡ/ ಕಣವಿ, ವೀಣಾ ಶಾಂತೇಶ್ವರರಂತಹ ಪ್ರಸಿದ್ಧ ಹೆಸರುಗಳೊಂದಿಗೆ ಅಪರೂಪಕ್ಕೆ ಬರೆಯುವ ದಮಯಂತಿ ನರೇಗಲ್ಲ, ಹೊಸ ಹೆಸರುಗಳಾದ ಮಂದಾಕಿನಿ ಪುರೋಹಿತ, ವೀಣಾ ಕುಲಕರ್ಣಿಗಳೂ ಸೇಪ್ರ್ರಡೆಗೊಂಡಿವೆ.
ಹಳಬರು ಬರೆದವು `ಹಿಂದಿನ‘ ಕತೆಗಳಾದರೆ ಸುನಂದಾ ಕಡಮೆ ಹಾಗೂ ವಿನಯಾ ಬರೆದಿರುವವು `ಇಂದಿನವು‘ ಹೊಸವು. ಇದರಿಂದಾಗಿ ಒಂದು ದೀರ್ಘ ಕಾಲಘಟ್ಟದ ಸ್ಪೆಕ್ಟ್ರಮ್ ಕೂಡ ಇವುಗಳಿಗೆ ಲಭ್ಯವಾಗಿದೆ.
ಸ್ತ್ರೀಪರ ಚಿಂತನೆಯ ದಿಕ್ಕು ದೆಸೆಗಳನ್ನೂ ಇವು ಅಯಾಚಿತವಾಗಿ [...]
Filed under: ಕಥಾ ಸಂಕಲನ | Leave a Comment »
Posted on June 3, 2008 by kandhakanmani
“ಮಣೆಗಾರ” ಹೆಸರಿನ ಆತ್ಮಕಥಾನಕ ಬರೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ತಂಬಾಡಿ ರಾಮಯ್ಯ ಅವರ ಈ ನೆನಪುಗಳ ಕಥನ (ನಂ.2) ಅದೇ ಸಂಯಮ, ಚಿತ್ರಕ ಶಕ್ತಿ, ಮೆಲು ಧನಿಯ ನಿರೂಪಣೆಯನ್ನು ಹೊಂದಿದೆ.
‘ಸಾಮಾನ್ಯ ಜ್ಞಾನ ಸಾಂಸ್ಕೃತಿಕ ಜ್ಞಾನವನ್ನು ಆಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ತೆರನ ಬರಹ ಧನಿಸುವ ಜೀವನ ಪ್ರೀತಿ ಮಹತ್ವದ್ದು‘ ಎಂದು ಅಭಿಪ್ರಾಯಪಡುತ್ತಾ ಕಲಾವಿದ ಎಂ. ಎಸ್. ಮೂರ್ತಿ ಈ ಬಗೆಯ ಕಥಾನಕಗಳ ಓದಿಗೆ ಬೇಕಾದ ಒಂದು ಸೂಕ್ಷ್ಮ ಹೊಳಹನ್ನು ನೀಡಿದ್ದಾರೆ. ಇದನ್ನು ಅವರು ‘ಸಾವಯವ ಚಿಂತನೆ‘ ಎಂತಲೂ [...]
Filed under: ಆತ್ಮ - ಚರಿತ್ರೆ/ಕಥನ | Leave a Comment »