ಸಾಹಿತಿ, ಸಾಹಿತ್ಯ, ವಿಮರ್ಶೆ

ಲೇಖಕರು : ಪಿ. ಲಂಕೇಶ್
ಪ್ರಕಾಶಕರು : ಲಂಕೇಶ್ ಪ್ರಕಾಶನ
ಪುಟಗಳು : 496
ಬೆಲೆ: ರೂ.300.00
ಕೃಪೆ : ಪ್ರಜಾವಾಣಿ
 

ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಚೊಕ್ಕವಾಗಿ, ತಪ್ಪಿಲ್ಲದೆ ಪ್ರಕಟಿಸಿರುವ ಈ ಕೈಪಿಡಿ ಡಾ. ಸಿ. ಆರ್. ಚಂದ್ರಶೇಖರ್ ಅವರು ಬರೆದದ್ದು ಎನ್ನುವ ಕಾರಣಕ್ಕಾಗಿಯೇ ಅತ್ಯಂತ ಉಪಯುಕ್ತ. ತತ್ಸಂಬಂಧಿತ ವಿಷಯಗಳ ಕುರಿತಂತೆ ಸಿ.ಆರ್. ಅವರಿಗೆ ಇರುವ ಕಾಳಜಿ ಅವರ ಶೈಲಿ, ವಿಷಯ ನಿರ್ವಹಣೆಯಲ್ಲಿ ಪಾರದರ್ಶಕವಾಗಿದೆ.
ಹದಿ ಹರೆಯ ಬಾಳಿನ ವಸಂತಕಾಲವಾಗಿರುವಂತೆ age of turbulence ಸಹ ಎಂದು ಆರಂಭಿಸುವ ಲೇಖಕರು ಟೀನೇಜರ್ಸ್ ಗೆ ಒಪ್ಪಿತವಾಗುವ ರೀತಿಯಲ್ಲಿಯೇ Adolescent ಪದದಲ್ಲಿಯೇ ಇರುವ Academic problems, Disappointments, Old v/s New [...]