ಮಾರ್ಕ್ವೇಜ್ ಬದುಕಿರುವುದೇ ಕತೆ ಹೇಳಲು

ಐದಾರು ವರ್ಷಗಳ ಕೆಳಗೆ ಲ್ಯಾಟಿನ್ ಅಮೇರಿಕಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆಗ ಮಾರ್ಕ್ವೆಜ್ ನ ಮನಸ್ಥತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಸಾವನ್ನು ಮುಂದೂಡಲೋ ಅಥವಾ ಸಾವಿನ ಆತಂಕದಿಂದ ಪಾರಾಗಲೋ ಆತ ಆತ್ಮಚರಿತ್ರೆ ಬರೆಯಲಾರಂಭಿಸಿದ. ಎರಡು ವರ್ಷಗಳ ಕೆಳಗೆ ಆ ಆತ್ಮಚರಿತ್ರೆ “ಲಿವಿಂಗ್ ಟು ಟೆಲ್ ದಿ ಟೇಲ್” ಪ್ರಕಟವಾಯಿತು. ಬೃಹತ್ ಸಂಪುಟವಾದ ಈ ಆತ್ಮಚರಿತ್ರೆ ಲೇಖಕನ ಬದುಕಿನ ತಾರುಣ್ಯದ ಘಟ್ಟದಲ್ಲಿ ನಿಂತಿದೆ. ಇದಾದ ನಂತರ ಆತ `ಇನ್ನೂ ಎರಡು [...]

ಕೇಳುವ ಕಾದಂಬರಿ ಬಿಡುಗಡೆ ಸಮಾರಂಭ

ಅನಕೃ ಶತಮಾನೋತ್ಸವ ಸಂದರ್ಭದಲ್ಲಿ ಅನಕೃ ರವರ ಸಂಧ್ಯಾರಾಗ ಓದುವ ಕಾದಂಬರಿಯನ್ನು, ಕೇಳುವ ಕಾದಂಬರಿಯಾಗಿ ಪರಿವರ್ತಿಸಿ ಅನಕೃ ಪ್ರತಿಷ್ಟಾನದವರು ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕಾಣಿಕೆಯನ್ನು ಪ್ರಥಮವಾಗಿ ನೀಡಿದ್ದಾರೆ.
ಇದೇ ಜೂನ್ 25 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ಬಿ.ವಿ.ರಾಜಾರಾಂ ಅವರು ಸರಳವಾಗಿ ಸುಂದರವಾಗಿ ನಡೆಸಿಕೊಟ್ಟ ಬಿಡುಗಡೆ ಸಮಾರಂಭದಲ್ಲಿ 95 ವರ್ಷ ವಯಸ್ಸಿನ ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಮತ್ತು ಅನಕೃ ಪ್ರತಿಷ್ಠಾನದ ಅಧ್ಯಕ್ಷ ಹಾರ್ನಳ್ಳಿ ರಾಮಸ್ವಾಮಿಯವರು ಮುಖ್ಯ ಅತಿಥಿಗಳಾಗಿದ್ದರು. ಸಿಡಿ ಬಿಡುಗಡೆಯನ್ನು ಶ್ರೀ ವಿ. ಲಕ್ಷ್ಮಿನಾರಾಯಣ್, [...]