ಹೆಸರಾಂತ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಅವರ ಈ ಪುಸ್ತಕ ಹಲವು ಮೌಲಿಕ ಲೇಖನಗಳನ್ನು ಒಳಗೊಂಡಿದೆ. ಅವರ ಭಾಷೆ ಆಧುನಿಕವಾಗಿ ಅಚ್ಚುಕಟ್ಟಾಗಿದೆ. ಕಲಾ ವಿಮರ್ಶೆ ಕುರಿತು ಸಾಮಾನ್ಯ ಓದುಗರಿಗೆ ಇರುವ ಭಯ ಕಸಿವಿಸಿಗಳನ್ನೆಲ್ಲಾ ತೊಡೆದುಹಾಕುವಷ್ಟು ತಿಳಿಯಾಗಿ ಬರೆಯುತ್ತಾರೆ, ಸುಬ್ರಹ್ಮಣ್ಯಂ.
ಕಲೆ ಕುರಿತು ಕನ್ನಡ ಮೂಲ ಕೃತಿಗಳು ಹೊರಬರುವುದು ಅಪರೂಪ. ಈ ಪುಸ್ತಕ ಅದನ್ನು ತುಂಬಿಕೊಡಲೆತ್ನಿಸುವುದಷ್ಟೇ ಅಲ್ಲ, ಮಾಮೂಲಿಯಂತೆ ಶಿಲ್ಪಕಲೆಯ ಇತಿಹಾಸ ಇತ್ಯಾದಿ ಚರ್ವಿತ ಚರ್ವಣಗಳಲ್ಲಿ ಕಳೆದುಹೋಗದೆ ನೇರವಾಗಿ ಸಮಕಾಲೀನ ಪರಿಸರಕ್ಕೆ ಧಾವಿಸಿ ಓದುವಿಕೆಯನ್ನು ಚುರುಕುಗೊಳಿಸುತ್ತದೆ. ಉದಾಹರಣೆಗೆ ಇತ್ತೀಚೆಗೆ ಸಂಚಲನ [...]
Filed under: ಕಲೆ | Tagged: ಕೆ.ವಿ.ಎಸ್., ಕೆ.ವಿ.ಸುಬ್ರಹ್ಮಣ್ಯಂ, ಶಿಲ್ಪಕಲೆ | 2 Comments »



