ಸಂಕಲನದ ಹತ್ತು ಕಥೆಗಳಲ್ಲಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಮಧ್ಯ ಕರ್ನಾಟಕದ ಗ್ರಾಮೀಣ ಪರಿಸರವನ್ನು ಲೋಕೇಶ ಅಗಸನಕಟ್ಟೆಯವರು ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮಗಳಲ್ಲಿ ದಲಿತರು ಮತ್ತಿತರ ಜಾತಿಯ ಜನರ ಸಹಜೀವನದ ಅನಿವಾರ್ಯತೆಯನ್ನು ಕತೆಗಳು ಪ್ರತಿಪಾದಿಸುತ್ತವೆ. ಜಾತಿ, ವರ್ಗದ ಸೈದ್ಧಾಂತಿಕ ಹಿನ್ನೆಲೆಯಲ್ಲಷ್ಟೆ ಗ್ರಾಮ್ಯ ಜೀವನವನ್ನು ನೋಡಿದರೆ ಸಾಕಾಗದು ಎಂಬುದನ್ನು ಕತೆಗಳು ಹೇಳುತ್ತವೆ. ಗ್ರಾಮೀಣ ಜೀವನ ಅತ್ಯಂತ ಸಂಕೀರ್ಣವಾದುದು. ಸಂಘರ್ಷ ಹಾಗೂ ಸಮನ್ವಯದ ಬಿಕ್ಕಟ್ಟುಗಳ ಸಂಕೀರ್ಣ ಸ್ಥಿತಿಗೆ ಇಲ್ಲಿನ ಕತೆಗಳು ಕನ್ನಡಿ ಹಿಡಿಯುತ್ತವೆ.
ಶೀರ್ಷಿಕೆ : ಹಟ್ಟಿಯೆಂಬ ಭೂಮಿಯ ತುಣುಕು ಲೇಖಕರು : ಲೋಕೇಶ ಅಗಸನಕಟ್ಟೆ ಪ್ರಕಾಶಕರು : ಛoದ ಪುಸ್ತಕ ಪುಟಗಳು : 148 ಬೆಲೆ: ರೂ.60/-
ಕೃಪೆ : ಸುಧಾ
Filed under: ಕಥಾ ಸಂಕಲನ




