ಇದು ಶಿಕ್ಷಕನೊಬ್ಬನ ಪ್ರಥಮ ಎನ್ನಬಹುದಾದ ಆತ್ಮಕಥೆ. ಜನಪ್ರಿಯ ಶಿಕ್ಷಕರು, ಹೋರಾಟಗಾರರೂ ಆದ ಕೊಣಂದೂರು ವೆಂಕಪ್ಪಗೌಡರು ಲೋಹಿಯಾ ಸಮಾಜವಾದಿ ಚಿಂತನೆಯಲ್ಲಿ ಗೋಪಾಲಗೌಡರ ಒಡನಾಟದಲ್ಲಿ ಬೆಳೆದು ಬಂದವರು. ಕುವೆಂಪು ಅವರಿಂದ ಪ್ರಭಾವಿತರಾದವರು.
ವೆಂಕಪ್ಪಗೌಡರು ಬೆಳೆದು ಬಂದ ಪರಿಸರವನ್ನು ಮೊದಲ ಭಾಗ ಹೃದಯಸ್ಪರ್ಶಿಯಾಗಿ ಪರಿಚಯಿಸಿದರೆ, ಎರಡನೇ ಭಾಗ ಅವರಿಗಾದ ಅನ್ಯಾಯದ ವಿರುದ್ಧದ ಹೋರಾಟ ರೋಚಕವಾದ ನಿರೂಪಣೆಯಲ್ಲಿ ಸುಧೀರ್ಘವಾಗಿ ಸಾಗುತ್ತದೆ. ಕುವೆಂಪು ಹೆಸರಿನಲ್ಲಿ ವಿದ್ಯಾಸಂಸ್ಥೆಯೊಂದು ನಡೆಸುವ ಅನ್ಯಾಯ-ಅಕ್ರಮವನ್ನು ಬಯಲಿಗೆಳೆದು ಈ ಕಾರಣಕ್ಕೆ ತಮ್ಮ ಉದ್ಯೋಗ ಕಳೆದುಕೊಂಡು ಸುಪ್ರೀಂ ಕೋರ್ಟ್ ವರೆಗೂ ಹೋರಾಟ ಮಾಡಿ ವಿಫಲರಾದ ವಿವರ ಇಲ್ಲಿದೆ. ತಮಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಈ ಕೃತಿ ರಚಿಸಿದರೇನೋ ಎಂದು ಕೃತಿಯ ಶೀರ್ಷಿಕೆ, ಇದಕ್ಕೆ ಸಿಕ್ಕ ಪ್ರಚಾರ ನೋಡಿದರೆ ತಕ್ಷಣ ಅನಿಸುತ್ತದೆ. ಅಷ್ಟೇ ಆಗಿದ್ದರೆ ಇದೊಂದು ಕರಪತ್ರ ಆಗಿಬಿಡಬಹುದಿತ್ತು. ಆದರೆ ವೆಂಕಪ್ಪಗೌಡರು ಲೇಖಕರೂ ಹೌದು. ಹಲವಾರು ಜೀವನ ಚರಿತ್ರೆಗಳನ್ನೂ ರಚಿಸಿದವರು. ಬರವಣಿಗೆ ಮೇಲಿನ ಪರಿಣಿತಿ, ಕತೆಗಾರನ ಸೂಕ್ಷ್ಮತೆ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿದೆ
ಶೀರ್ಷಿಕೆ : ಶಿಕ್ಷಕನ ಹೋರಾಟ ಲೇಖಕರು : ಕೋಣಂದೂರು ವೆಂಕಪ್ಪ ಗೌಡ ಪ್ರಕಾಶಕರು : ಯಶಸ್ವಿನಿ ಪ್ರಕಾಶನ ಪುಟಗಳು : 302 ಬೆಲೆ: ರೂ.150/-
ಕೃಪೆ : ಸುಧಾ
: ಕಡತದೊಂದಿಗೆ ಸಂಪಾದಿಸಲಾಗಿದೆ ಆತ್ಮ - ಚರಿತ್ರೆ/ಕಥನ | Tagged: ಆತ್ಮಕಥೆ, ಲೋಹಿಯಾ, ಶಿಕ್ಷಕ




