ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ …

ಕನ್ನಡದ ಪ್ರಮುಖ ವೈದ್ಯ ಸಾಹಿತಿಗಳಲ್ಲೊಬ್ಬರಾದ ಡಾ.ಹೆಚ್.ಗಿರಿಜಮ್ಮನವರ `ಗರ್ಭಧಾರಣೆ:ಸಂದೇಹ ನಿವಾರಣೆ‘ ಪುಸ್ತಕ ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ತಿಳುವಳಿಕೆ ಕೊಡುವ ಕೈಪಿಡಿ. ಒಂದೆಡೆ ಜನಸಂಖ್ಯೆ ನಾಗಾಲೋಟದಲ್ಲಿ ಏರುತ್ತಲೇ ಇದ್ದರೆ, ಮತ್ತೊಂದೆಡೆ ಲೈಂಗಿಕ ವಿಷಯಗಳ ಕುರಿತ ಅಜ್ಞಾನವೂ ಹೆಚ್ಚುತ್ತಿದೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ಜನಸಾಮಾನ್ಯರಿಗೆ ದಾಂಪತ್ಯ-ಸಾಂಗತ್ಯದ ಕುರಿತು ಸುಲಭ ಭಾಷೆಯಲ್ಲಿ ಅರಿವು ನೀಡುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿರುವ ಗಿರಿಜಮ್ಮನವರ ಈ ಪುಸ್ತಕ ಗರ್ಭಧಾರಣೆ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ವಿಷಯಗಳನ್ನು ಚರ್ಚಿಸುತ್ತದೆ. ಗಂಡು ಹೆಣ್ಣಿನ ಸಾಂಗತ್ಯ, ಗರ್ಭ ನಿರೋಧಕಗಳ [...]

ವ್ಯೂಹ – ಕತೆ ಹೇಳಲೆಂದೇ ಬದುಕಿದ ಲೇಖಕನ ಕಾದಂಬರಿ

ನೊಬೆಲ್ ವಿಜೇತ ಲ್ಯಾಟಿನ್ ಅಮೇರಿಕನ್ ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಕನ್ನಡ ಸಾಹಿತ್ಯ ವಾತಾವರಣಕ್ಕೆ ಅಪರಿಚಿತರೇನಲ್ಲ. ಅವರ ಕಾದಂಬರಿಗಳ ಉಲ್ಲೇಖ, ಮಾಯಾ ವಾಸ್ತವ ಶೈಲಿ ಎಲ್ಲ ಅಷ್ಟಿಷ್ಟು ಇಲ್ಲಿಯೂ ಚರ್ಚೆಗೊಳಗಾಗಿವೆ. ಕನ್ನಡಿಗರ ಸಾಹಿತ್ಯಕ ಸಂವೇದನೆಯನ್ನೂ ಅವರು ಮೀಟಿದ್ದಾರೆ, he strikes a chord. ಆದರೆ ಮಾರ್ಕ್ವೆಜ್ ಕಾದಂಬರಿಗಳ ಕನ್ನಡ ಅನುವಾದ ಓದುವುದು ಮಾತ್ರ ದುಸ್ತರ. ಪ್ರಸ್ತುತ ಅನುವಾದ ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ಇರುವ (ಪುಟ ತಿರುವಿದಾಗ) ಭರವಸೆ ಹುಟ್ಟಿಸುವುದರಿಂದ ಪರವಾಗಿಲ್ಲ. ಲ್ಯಾಟಿನ್ ಅಮೆರಿಕಾದ ಆರು ದೇಶಗಳಲ್ಲಿ ವಿಮೋಚಕನೆಂದು [...]

24 ಆಗಸ್ಟ್ 2008 – ಟಾಪ್ 10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755) 1. ಉತ್ತರಾಯಣ ಮತ್ತು … (ಎಚ್ಚೆಸ್ವಿ ಅವರ ಹೊಸ ಕವನ ಸಂಕಲನ) ಲೆ:ಎಚ್.ಎಸ್.ವೆಂಕಟೇಶ ಮೂರ್ತಿ, ಪ್ರ:ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ ಬೆ:ರೂ.100/- 2. ಕಲಾಮ್ ಕಮಾಲ್ (ರಾಷ್ಟ್ರಪತಿ ಕಲಾಮ್ ಕುರಿತು ಅವರ ಕಾರ್ಯದರ್ಶಿಯವರ ನೆನಪುಗಳು), ಲೇ:ಪಿ.ಎಂ.ನಾಯರ್,ಅ:ವಿಶ್ವೇಶ್ವರ ಭಟ್,ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.130/- 3. ಬೆಳ್ಳಕ್ಕಿ ಹಿಂಡು (ಸು.ರಂ.ಎಕ್ಕುಂಡಿ ಸಮಗ್ರ ಕಾವ್ಯ) ಸಂ:ಡಿ.ವಿ.ಪ್ರಹ್ಲಾದ್ ಪ್ರ:ಸಂಚಯ ಪ್ರಕಾಶನ, ಬೆಂಗಳೂರು ಬೆ:ರೂ.350/- 4. ಹಳ್ಳ ಬಂತು ಹಳ್ಳ (ಕಾದಂಬರಿ) ಲೇ:ಶ್ರೀನಿವಾಸ ವೈದ್ಯ ಪ್ರ:ಮನೋಹರ ಗ್ರಂಥಮಾಲಾ,ಧಾರವಾಡ ಬೆ:ರೂ.200/- 5. [...]

ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ

ನವೋದಯ ಸಾಹಿತ್ಯ ವಸಾಹತುಶಾಹಿಯ ಒತ್ತಡ ಅಥವಾ ಪ್ರಭಾವದಿಂದ ಮಾತ್ರ ಹುಟ್ಟಿದ್ದಲ್ಲ. ಜಾನಪದದ ಪ್ರಭಾವ ಅದರ ಮೇಲೆ ಅತ್ಯಧಿಕವಾಗಿದೆ ಎಂಬುದನ್ನು ಖಾಡೆ ಅವರು ಇಲ್ಲಿ ಸಂಶೋಧಿಸಿ ಸಿದ್ಧಪಡಿಸಿದ್ದಾರೆ. ಧಾರವಾಡದ ಗೆಳೆಯರ ಗುಂಪು, ಹಲಸಂಗಿ ಗೆಳೆಯರು, ಮಂಗಳೂರಿನ ಮಿತ್ರ ಮಂಡಳಿಯ ಸಾಧನೆಗಳನ್ನು ಪರಿಚಯಿಸುವ ಮೂಲಕ ಮೈಸೂರು ಕರ್ನಾಟಕ ಸಾಹಿತ್ಯ ಪರಂಪರೆಯ ಸುತ್ತ ನಡೆದ ಚರ್ಚೆಗಳಷ್ಟೇ ಸತ್ಯ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಜನಪದ ಸಾಹಿತ್ಯದ ಪ್ರೇರಣೆ, ಪ್ರಭಾವಗಳೇ ಹೆಚ್ಚಾಗಿವೆ ಎಂಬ ಅಂಶ ನವೋದಯ ಸಾಹಿತ್ಯದ ಮೇಲೆ [...]

ಹಸಿವು, ಬಡತನ …. ಗಳಿಗೆ ಪರಿಹಾರ ಗಾಂಧಿ? ನೆಹರೂ? ಲೋಹಿಯಾ?…… ಯಾವ ವಾದ?

ನಮ್ಮ ದೇಶದ ಜನತೆಯನ್ನು ನೂರಾರು ಸಮಸ್ಯೆಗಳು ಸುಡುತ್ತಿವೆ – ಹಸಿವು, ಬಡತನ, ನಿರುದ್ಯೋಗ, ನಿರಕ್ಷರತೆ, ಅಸಮಾನತೆ, ಕೋಮುಗಲಭೆಗಳು, ಜಾತೀಯತೆ, ಅಸ್ಪೃಶ್ಯತೆ, ಪ್ರತ್ಯೇಕತೆ. ಈ ಸಮಸ್ಯೆಗಳು ಸ್ವಾತಂತ್ರ್ಯ ಬಂದು 55 ವರ್ಷಗಳು ಕಳೆದರೂ ಇನ್ನೂ ಏಕೆ ಇವೆ? ನಮ್ಮನ್ನು ಸುಡುತ್ತಿರುವ ಸಮಸ್ಯೆಗಳಿಗೆ ಹಲವಾರು ಪರಿಹಾರಗಳನ್ನು ಸೂಚಿಸಲಾಗಿದೆ. ಹಲವು `ವಾದ‘ಗಳು ಸಮಸ್ಯೆಗಳಿಗೆ ಮೂಲ ಕಾರಣ ಮತ್ತು ಪರಿಹಾರಗಳನ್ನು ಮುಂದಿಟ್ಟಿವೆ – ನೆಹರೂವಾದ, ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್ ವಾದ, ಉದಾರೀಕರಣ-ಜಾಗತೀಕರಣ, ಸಮಾಜವಾದ, ನಕ್ಸಲ್ ವಾದ, ಜನತಾ ಪ್ರಜಾಪ್ರಭುತ್ವ, ಹಿಂದೂತ್ವ, ಕಮ್ಯುನಿಸಂ, ಮಿಲಿಟರಿ [...]

ಸಮಗ್ರ ನಾಟಕ

ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಾಲಕ್ಕೆ ನಾಟಕ ರಚಿಸುವ ಕನ್ನಡದ ಹೆಸರಾಂತ ನಟ-ನಾಟಕಕಾರ ಗಿರೀಶ ಕಾರ್ನಾಡರ ಸಮಗ್ರ ನಾಟಕಗಳು ಇಂಗ್ಲೀಷ್ನಲ್ಲಿ ಆಕ್ಸ್ ಫರ್ಡ್ ಪ್ರೆಸ್ ನವರು ಪ್ರಕಟಿಸಿದ ನಂತರ ಇದೀಗ ಕನ್ನಡದಲ್ಲೂ ಪ್ರಕಟವಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಾರ್ನಾಡರು ಇದುವರೆಗೆ ಬರೆದಿರುವ ನಾಟಕಗಳ ಸಂಖ್ಯೆ ಕೇವಲ 11 ಎಂಬುದು ಕೆಲವರಿಗೆ ಅಚ್ಚರಿ ಸಂಗತಿಯಾಗಬಹುದು. ಅವರು ರಚಿಸಿದ 3-4 ನಾಟಕಗಳನ್ನು ಹೊರತುಪಡಿಸಿ ಇತರ ಎಲ್ಲಾ ನಾಟಕಗಳು ಕನ್ನಡ, ಇಂಗ್ಲೀಷ್ ಹಾಗೂ ನಾಲ್ಕಾರು ಭಾರತೀಯ ಭಾಷೆಗಳಲ್ಲಿ ಹಲವು ಪ್ರಯೋಗ [...]

ಸಿಡಿ ಕಿಡಿ ನಾಡ ತೋಪುಗಳು ಸಿಗಲಿಲ್ಲವೇ

ಸಿನಿಮಾ ನಿರ್ದೇಶಕ ಟಿ. ಎಸ್. ನಾಗಾಭರಣ ಪ್ರೇಮಗೀತೆಗಳಿಂದಲೇ ಒಂದು ಕಥಾ ಹಂದರ ಸೃಷ್ಟಿಸಿ `ಮೈಸೂರು ಮಲ್ಲಿಗೆ‘ ನಿರ್ಮಿಸಿದ ಹಾಗೆ `ರಂಗಾಯಣ‘ದ ಮೂವರು ವೃತ್ತಿ ನಟರು ಬೀಚಿಯವರ ಸಾಹಿತ್ಯವನ್ನು `ಕಟ್ಟುವ ಕ್ರಿಯೆ‘ಯಾಗಿಸಿದ ಫಲವೇ ಈ ಪುಸ್ತಕ. ಹೊಸ ನಾಟಕವೊಂದರ ಹುಡುಕಾಟವಾಗಿ ಆರಂಭವಾದ ಈ ಕ್ರಿಯೆ ರಂಗಭೂಮಿಯಲ್ಲಿ ಈ ವರೆಗೆ ಪ್ರಯೋಗಗೊಳ್ಳದಿರುವ ಬೀಚಿ ಸಾಹಿತ್ಯವನ್ನು ಅನಾವರಣಗೊಳಿಸುವ ಮಹತ್ವದ ಕೆಲಸ ಮಾಡಿದೆ. ಬಹುಶ್ರುತ ಪ್ರತಿಭಾವಂತರೂ `ಹಾಸ್ಯ ಸಾಹಿತಿ‘ ಎಂದಷ್ಟೇ ಚಿತ್ರಿತರಾಗಿರುವ, ಜನರ ನೆನಪಿನಿಂದ ಬಹುತೇಕ ಮರೆಯಾಗಿರುವ ಭೀಮಸೇನರಾಯರನ್ನು ಆನ್ ಅರ್ತ್ ಮಾಡುವ [...]

Top Ten (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ:26617100, 26617755) 1.     ಬೆಳ್ಳಕ್ಕಿ ಹಿಂಡು (ಸು. ರಂ. ಎಕ್ಕುಂಡಿ ಸಮಗ್ರ ಕಾವ್ಯ ಸಂ:ಡಿ. ವಿ. ಪ್ರಹ್ಲಾದ್ ಪ್ರ:ಸಂಚಯ ಪ್ರಕಾಶನ ಬೆಲೆ:ರೂ.350/- 2.     ಕಲಾಮ್ ಕಮಾಲ್ ಲೇ:ವಿಶ್ವೇಶ್ವರ ಭಟ್ ಪ್ರ:ಅಂಕಿತ ಪುಸ್ತಕ ಬೆಲೆ:ರೂ.130/- 3.     ಚಲಂ - ಖ್ಯಾತ ತೆಲುಗು ಲೇಖಕರೊಬ್ಬರ ಆತ್ಮಕಥೆ ಲೇ:ರವಿ ಬೆಳಗೆರೆ ಪ್ರ:ಭಾವನಾ ಪ್ರಕಾಶನ ಬೆಲೆ:ರೂ.100 4.     ಎರಡು ದ್ರುವ - ಪ್ರಸಿದ್ದ ಮರಾಠಿ ಕಾದಂಬರಿ ಲೇ:ವಿ. ಎಸ್. ಖಾಂಡೆಕರ್ ಅಣು:ವಿ. ಎಂ. ಇನಾಂದಾರ್ ಪ್ರ:ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಬೆಲೆ:ರೂ.80/- 5.     ಕಶ್ಯಪ ಸೂತ್ರಗಳು (ಕಶ್ಯಪ ಸೂತ್ರಗಳ ಸುಲಭ ವ್ಯಾಖ್ಯಾನ) ಲೇ:ಶ್ರೀ.ಶ್ರೀ. ನಿಮಿಷಾ ನಂದ ಪ್ರ:ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾ ಲಯ ಬೆಲೆ:ರೂ.140/- 6.     ಹೊಕ್ಕುಳ ಬಳ್ಳಿಯ ಸಂಬಂಧ (ಸಂಸ್ಕೃತಿ, ದರ್ಶನ, ವಿವೇಚನೆಗಳು) ಲೇ:ಶತಾವಧಾನಿ ಡಾ. ಆರ್. ಗಣೇಶ್ ಪ್ರ:ವಸಂತ ಪ್ರಕಾಶನ ಬೆಲೆ:ರೂ.95/- 7.     ಮಹಾಪಲಾಯನ (ದಿ ಲಾಂಗ್ ವಾಕ್ ಕೃತಿಯ ಕನ್ನಡಾನುವಾದ) ಲೇ:ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಪ್ರ:ಪುಸ್ತಕ ಪ್ರಕಾಶನ ಬೆಲೆ:ರೂ.57/- 8.     ಫೆರಾರಿ ಮಾರಿದ ಫಕೀರ (ಬದುಕಿಗೆ ಸ್ಫೂರ್ತಿ ನೀಡುವ ಪ್ರಸಿದ್ದ ಇಂಗ್ಲೀಷ್ ಪುಸ್ತಕದ ಕನ್ನಡಾನುವಾದ) ಲೇ:ರಾಬಿನ್ ಶರ್ಮಾ ಪ್ರ:ಜೈಕೋ ಬುಕ್ಸ್ ಬೆಲೆ:ರೂ.115/- 9.     ಮೂಕಜ್ಜಿಯ ಕನಸುಗಳು (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ) ಲೇ:ಶಿವರಾಮ ಕಾರಂತ ಪ್ರ:ಸಪ್ನ ಬುಕ್ ಹೌಸ್ ಬೆಲೆ:ರೂ.100/- 10.  ವಿಚಾರವಾದ ವಿಜ್ಞಾನ ಆಧ್ಯಾತ್ಮ ಮತ್ತು ದೇವರು (ಒಂದು ಚಿಂತನೆ) ಲೇ:ತೀರ್ತಾರಾಂ ವಳ ಲಾಂಬೆ ಪ್ರ:ಯಾಣ ಪ್ರಕಾಶನ ಬೆಲೆ:ರೂ.75/- ಸಪ್ನ ಬುಕ್ [...]

ವಿಜ್ಞಾನ ಮತ್ತು ವಿಜ್ಞಾನಿಗಳು – ದಂತಕತೆಗಳ ಸಂಕಲನ

ಈ ಪುಸ್ತಕದ ಮುಖಪುಟ ನೋಡಿ ಶೀರ್ಷಿಕೆ ಓದುತ್ತಿದ್ದಂತೆ ನನ್ನ ಮೊದಲ ಯೋಚನೆ ನನ್ನ 10 ವರ್ಷ ವಯಸ್ಸಿನ ಮಗನ ಈ ಹುಟ್ಟುಹಬ್ಬದ ಉಡುಗೊರೆಯ ಪಟ್ಟಿಯಲ್ಲಿ ಇದನ್ನು ಸೇರಿಸಬೇಕು ಎಂಬುದು. ಇದು 1994ರಲ್ಲಿ ಮುದ್ರಣಗೊಂಡ ಎ ಎನ್ ಕೊಠಾರಿ ಮತ್ತಿತರರು ಬರೆದ Of Science and Scientists ದ ಕನ್ನಡ ರೂಪ. ನ್ಯಾಷನಲ್ ಬುಕ್ ಟ್ರಸ್ಟನ ಸುಮಾರು 14 ಪುಸ್ತಕ ಮಾಲಿಕೆಗಳಲ್ಲೊಂದಾದ ಜನಪ್ರಿಯ ವಿಜ್ಞಾನ ಮಾಲೆ ಯ ಒಂದು ಬಿಡಿ ಜನಪ್ರಿಯ ವಿಜ್ಞಾನ ಹೊತ್ತಿಗೆ ಇದು. ಪುಸ್ತಕದ ಮೊದಲ [...]

ರಾಮ ರಹೀಮರ ಚರಿತ್ರೆಯ ಹಿನ್ನೋಟ

1931ರ ಮಾರ್ಚನಲ್ಲಿ ಕಾನ್ಪುರದಲ್ಲಿ ನಡೆದ ಗಲಭೆಯನ್ನು ಕುರಿತು ವಿಚಾರಣೆ ನಡೆಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಕರಾಚಿ ಅಧಿವೇಶನ 1931) ನೇಮಿತವಾದ ಸಮಿತಿಯ ವರದಿಯ ಪುಸ್ತಕ ರೂಪದ ಕನ್ನಡ ಆವೃತ್ತಿ ಇದು. ಕಾನ್ಪುರ ಗಲಭೆ ವಿಚಾರಣಾ ಸಮಿತಿಯ ಕಾರ್ಯದರ್ಶಿ ಸುಂದರಲಾಲ ಅವರು 1933 ರಲ್ಲಿ ಇದನ್ನು ಇಂಗ್ಲೀಷ್ ನಲ್ಲಿ ಮೊದಲು ಪ್ರಕಟಿಸಿದ್ದರು. ಅವರ ಅಭಿಪ್ರಾಯದಂತೆ : ಈ ವರದಿಯನ್ನು ಸಕಾಲದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಿಗೆ ಅಕ್ಟೋಬರ್ 1931 ರಲ್ಲಿ ಸಲ್ಲಿಸಲಾಯಿತು. ಅಖಿಲ ಭಾರತ ಕಾಂಗ್ರೆಸ್ [...]

Follow

Get every new post delivered to your Inbox.