Posted on August 2, 2008 by pusthakapreeethi
ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ನಿಗೂಢವಾಗಿ ಕಣ್ಮರೆಯಾಗಿ ದಶಕಗಳೇ ಕಳೆದುಹೋಗಿದ್ದರೂ ಅವರ ಬಗೆಗಿನ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಸುಭಾಷರ ಕುರಿತು ಅನೇಕ ಪುಸ್ತಕಗಳು ಪ್ರಕಟವಾಗುತ್ತಿರುವುದೇ ಸಾಕ್ಷಿ. ಇಂಥ ಪುಸ್ತಕಗಳ ಸಾಲಿಗೆ ಹೊಸ ಸೇರ್ಪಡೆ ಚಂದ್ರಶೇಖರಯ್ಯನವರ `ನೇತಾಜಿ ಸುಭಾಶ್ಚಂದ್ರ ಬೋಸ್ ‘.
ಸ್ವಾತಂತ್ರ್ಯ ಗಳಿಕೆಗೆ ಹೋರಾಟದ ಮಾರ್ಗವೇ ಸೂಕ್ತವೆಂದು ಅದರಲ್ಲಿ ಕಾರ್ಯೋನ್ಮುಖರಾಗಿದ್ದ ನೇತಾಜಿ ಅವರದು ಭಾರತೀಯ ಯುವಜನರಲ್ಲಿ ಸ್ಫೂರ್ತಿ ಮೂಡಿಸುವಂಥ ಧೀರ ವ್ಯಕ್ತಿತ್ವ . ಸ್ವಾತಂತ್ರ್ಯ ಹೋರಾಟದ ಒಂದೂವರೆ ಶತಮಾನದ ಸಂದರ್ಭದಲ್ಲಿ ಎಲ್ಲ ಸ್ವಾತಂತ್ರ್ಯ ಯೋಧರ ಕುರಿತಾದ ಚಿಂತನೆ ಅಲ್ಲಲ್ಲಿ ನಡೆದಿದೆ. [...]
Filed under: ಜೀವನ-ಚರಿತ್ರೆ/ಕಥನ | Tagged: azad hind fouz, ಆಜಾದ್ ಹಿಂದ್ ಸೇನೆ, INA, Indian Nation Army | Leave a Comment »
Posted on August 2, 2008 by pusthakapreeethi
`ಮರೆಯಲ್ಲಿರುವ ಮಹಾನುಭಾವರು‘ ಮಾಲಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ `ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ‘ ಪುಸ್ತಕ ಎರಡು ರೀತಿಯಿಂದ ಮುಖ್ಯವಾದದು. ಮೊದಲನೆಯದು, ಪ್ರಚಾರದ ಪ್ರಭಾವಳಿಯಿಂದ ದೂರವುಳಿದ ಸಾಧಕನೊಬ್ಬನನ್ನು ಪರಿಚಯಿಸುವುದು. ಎರಡನೆಯದು, ಮುಂತಕಾ ಅವರ ಪರಿಚಯದ ಮೂಲಕ ಅವರ ದಾರಿಯಲ್ಲಿ ನಡೆಯಲು ಕೆಲವರನ್ನಾದರೂ ಕೃತಿ ಪ್ರಭಾವಿಸಬಹುದು ಎನ್ನುವುದು.
ಮುಂತಕಾ ಓರ್ವ ವಿಲಕ್ಷಣ ಛಾಯಾಗ್ರಾಹಕ. ಬೀದರ್ ನ ಈ ಛಾಯಾಗ್ರಾಹಕನನ್ನು ಲೇಖಕರು ಕ್ಯಾಮರಾ ಇಂಜಿನಿಯರ್ ಎನ್ನುತ್ತಾರೆ. ಏಕೆಂದರೆ ಫೋಟೋ ಕ್ಲಿಕ್ಕಿಸುವುದಕ್ಕೆ ಮಾತ್ರಾ ಮುಂತಕಾ ಅವರ ಪ್ರತಿಭೆ ಸೀಮಿತವಲ್ಲ. ಅವರ ಬಳಿ [...]
Filed under: ವಿಶಿಷ್ಟ ಸಾಧನೆ (ಸಾಧಕ) | Tagged: ಕ್ಯಾಮರಾ, ಗುಲಾಂ ಮುಂತಕಾ | Leave a Comment »