ತುಳು ನಾಡಿನ ಭೂತ ಕಟ್ಟುವ ಪಂಬ ಜನಾಂಗದ ಬದುಕಿನ ಚಿತ್ರಣ

ವೀರಪ್ಪ ಮೊಯಿಲಿಯವರ ಕಾದಂಬರಿ `ತೆಂಬೆರೆ‘ ತುಳುನಾಡಿನ ಭೂತಕಟ್ಟುವ ಪಂಬ ಜನಾಂಗದ ಬದುಕನ್ನು ಚಿತ್ರಿಸುತ್ತದೆ. ಈ ಜನಾಂಗದ ನಂಬಿಕೆಗಳು, ಸಂಪ್ರದಾಯ, ನ್ಯಾಯ, ಆಚರಣೆಗಳು ಇವೆಲ್ಲವನ್ನು ಒಂದು ಬೀಸಿನಲ್ಲಿ ಹಿಡಿದಿಡುವ ಪ್ರಯತ್ನವಾಗಿ ಈ ಕಾದಂಬರಿ ಇದೆ.
ಕಾದಂಬರಿಯು ತನ್ನ ವಿವರಗಳಲ್ಲಿ ದಟ್ಟವಾದ ಮಾನವಶಾಸ್ತ್ರೀಯವಾಗಿ ತುಳುನಾಡಿನ ಬದುಕನ್ನು ಹಿಡಿದಿಡುತ್ತದೆ. ಇದರೊಂದಿಗೆ ಲೇಖಕರು ಯಕ್ಷಗಾನ ಪ್ರಸಂಗ, ಸಿರಿ-ಕಲ್ಲುರ್ಟಿ ಬಗೆಯ ಪಾಡ್ದನಗಳನ್ನು, ಭೂತಾರಾಧನೆಯನ್ನು ಕೊಡುತ್ತಾ, ಅವುಗಳನ್ನು ಕಾದಂಬರಿಯ ವಾತಾವರಣದಲ್ಲಿ ಬೆರೆಸುತ್ತಾರೆ. ಇದೆಲ್ಲದರಿಂದಾಗಿ ಕಾದಂಬರಿಗೆ ಬೇರೆಯದೇ ಆದ ಅನನ್ಯ ಹೊಳಹುಗಳು ದೊರಕಿದಂತಾಗುತ್ತದೆ. ಇದರೊಂದಿಗೆ ದಕ್ಷಿಣ ಕನ್ನಡದ [...]

ಇವು ಕತೆಗಳಲ್ಲ, ವಾಸ್ತವ ಘಟನೆಗಳು

ಇವು ಕಥೆಗಳಲ್ಲ. ವಾಸ್ತವ ಘಟನೆಗಳು ಎಂದು ಲೇಖಕರು ನೆನಪಿಸಿದ್ದಾರೆ. ಕಳೆದ 26 ವರ್ಷಗಳ ಕಾಲ ಪೋಲೀಸ್ ಅಧಿಕಾರಿಯಾಗಿ ಕೈಗೊಂಡ ತನಿಖೆಗಳಲ್ಲಿ ಯಶಸ್ವಿಯಾದವುಗಳನ್ನು ಸ್ವಾರಸ್ಯಕರವಾಗಿ ಪಾಲಾಕ್ಷಯ್ಯ ಇಲ್ಲಿ ಹೇಳಿಕೊಂಡು ಹೋಗಿದ್ದಾರೆ. ಹಾಗಾಗಿ ಇವು ಕತೆಯ ಸ್ವರೂಪವನ್ನೂ ಪಡೆದಿವೆ.
ಪೋಲೀಸರಿಗೆ ಗೊತ್ತಾಗದಿದ್ದ ಕೊಲೆ, ಪತ್ತೆ ಮಾಡಲು ಸಾಧ್ಯವೇ ಇಲ್ಲವೆಂದು ಫೈಲು ಮುಚ್ಚಿ ಹಾಕಿದ್ದ ಕೊಲೆ, ಸತ್ತ ವ್ಯಕ್ತಿ ಯಾರೆಂದು ಗೊತ್ತೇ ಆಗದೆ ದಿಕ್ಕು ತಪ್ಪಿಸಿದ ಪ್ರಕರಣ – ಇನ್ನೂ ಇಂತಹದೇ ಅತಿ ಕ್ಲಿಷ್ಟಕರವಾದ 9 ಕೊಲೆ ಪ್ರಕರಣಗಳನ್ನು ಪತ್ತೆ [...]

ಭಾಷಾ ಶಾಸ್ತ್ರದ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳು

ಈ ಕೃತಿಯಲ್ಲಿನ ಲೇಖನಗಳು ಭಾಷಾಶಾಸ್ತ್ರಕ್ಕೆ ನೇರವಾಗಿಯೋ ಪರೋಕ್ಷವಾಗಿಯೋ ಸಂಬಂಧಿಸಿವೆ. ಸಾಹಿತ್ಯಕೃತಿಗಳನ್ನು ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ.
`ನವೋದಯ ಕಾವ್ಯದ ಭಾಷೆ ಮತ್ತು ಆಲೋಚನೆ‘ `ರೂಪಕಗಳ ಬಳಕೆ‘ ಹಾಗೂ `ಜಿ.ಎಸ್.ಎಸ್. ಕಾವ್ಯ ಭಾಷೆ‘-ಎಂಬ ಲೇಖನಗಳಲ್ಲಿ ಮುಖ್ಯವಾಗಿ ಶಬ್ದಗಳ ಬಳಕೆಯನ್ನು ಆಧರಿಸಿದ ವಿಶ್ಲೇಷಣೆಯಿದೆ. `ಹರಿವ ನೀರಿದು: ಒಂದು ಭಾಷಿಕ ವಿಶ್ಲೇಷಣೆ‘ ಎಂಬುದು ವಾಕ್ಯರಚನೆಯನ್ನಾಧರಿಸಿದೆ. `ಪಾಂಡುವಿನ ಮರಣ ಪ್ರಸಂಗ‘ ಹಾಗೂ `ಮಾಸ್ತಿಯವರ ಕತೆಗಳ ಭಾಷೆ‘ಗಳಲ್ಲಿ ವಾಕ್ಯಗಳ ಒಳರಚನೆ ಹಾಗೂ ಭಾಷೇತರ ಮಾಹಿತಿಗಳ ಹಿನ್ನೆಲೆಯಲ್ಲಿ ವಸ್ತುವನ್ನು ನೋಡುವ ಪ್ರಯತ್ನವಿದೆ. `ಶಂ. ಬಾ. ಅವರ [...]

ಸ್ತ್ರೀವಾದ ಅಲ್ಲ ಸ್ತ್ರೀಪ್ರಜ್ಞೆ

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕುರಿತ ಲೇಖನಗಳ ಸಂಗ್ರಹ ಇದು. ಇವು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುವ ಘಟನೆಗಳನ್ನು ಆಧರಿಸಿ, ಸ್ತ್ರೀಗೆ ಆಗುತ್ತಿರುವ ಅನ್ಯಾಯ, ಅನಿಷ್ಟಗಳನ್ನು ವಿಮರ್ಶಿಸುತ್ತದೆ, ಮತ್ತು ಆ ಮೂಲಕ ತಿಳಿವನ್ನುಂಟುಮಾಡುತ್ತವೆ.
ಸ್ತ್ರೀಯರ ಕುರಿತು ಈ ಸಮಾಜ ಕಟ್ಟಿಕೊಂಡ ಅರಿವಿನ ಎಲ್ಲ ಆಯಾಮಗಳನ್ನು, ಅವುಗಳ ಹಿಂದಿನ ನಿಜಸ್ಥಿತಿಯನ್ನು ಪ್ರಸ್ತುತ ಸಂಕಲನದ ಲೇಖನಗಳು ವಿಶ್ಲೇಷಿಸುತ್ತವೆ. `ಈ ವಿಶ್ಲೇಷಣೆಯನ್ನು `ಸ್ತ್ರೀವಾದ‘ ಎನ್ನುವುದಕ್ಕಿಂತ `ಸ್ತ್ರೀಪ್ರಜ್ಞೆ‘ ಎಂದು ಕರೆಯುವುದೇ ಸೂಕ್ತ‘ – ಎಂದು ಮುನ್ನುಡಿಯಲ್ಲಿ ಜಿ. ರಾಜಶೇಖರ್ ಹೇಳಿರುವುದು ವಸ್ತುನಿಷ್ಟ ಸಂಗತಿಯೇ [...]

ರಂಗ ಸುರೇಶ

ಕೆಲವು ವರುಷಗಳ ಹಿಂದಿನ ಚಿತ್ರಕ್ಕೂ ಇವತ್ತು ಕಾಣಿಸುತ್ತಿರುವ ಚಿತ್ರಣಕ್ಕೂ ಇರುವ ವ್ಯತ್ಯಾಸ ಗಮನಿಸಿ. ಆರೆಂಟು ವರುಷಗಳ ಹಿಂದೆ ಹೊಸ ನಾಟಕಗಳ ಸೃಷ್ಟಿ ಬಹುತೇಕ ನಿಂತೇ ಹೋಗಿತ್ತು. ಹವ್ಯಾಸಿ ರಂಗ ತಂಡಗಳು ಕತೆಯನ್ನೋ ಕಾದಂಬರಿಯನ್ನೋ ನಾಟಕರೂಪಕ್ಕೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಇತ್ತು.
ಆದರೆ ಕಳೆದ ಒಂದೆರಡು ವರುಷಗಳಿಂದ ಸಾಕಷ್ಟು ಹೊಸ ನಾಟಕಗಳನ್ನು ಬರೆಯುತ್ತಿದ್ದಾರೆ. ಸೂರಿ, ವಿವೇಕ ಶಾನಭಾಗ, ಅಕ್ಷರ, ಮಂಜುನಾಥ ಮುಂತಾದವರ ಜೊತೆ ಹೊಸಬರೂ ಸೇರಿಕೊಂಡು ಈ ವರುಷ ನಾಟಕದ ಹುಲುಸು ಫಸಲು.
ರಂಗಭೂಮಿಯ ಜೊತೆಗೆ ಹಲವಾರು ವರುಷಗಳ ಆಪ್ತ ಒಡನಾಟ [...]

ರಂಗಕ್ರಿಯೆಗಳ ವರ್ತಮಾನಗಳು

ರಂಗಾಸಕ್ತ ಸಿರಿಗೆರೆ ಯರಿಸ್ವಾಮಿಯವರ ರಂಗಭೂಮಿಯನ್ನೇ ಕೇಂದ್ರವಾಗಿಟ್ಟುಕೊಂಡು ಬರೆದ ಬರಹಗಳು ಇಲ್ಲಿವೆ. ಮುಂಬೈ ನಾಟಕ ಪ್ರಯೋಗಗಳಿಂದ ಹಿಡಿದು ಕರ್ನಾಟಕ ಸ್ಥಳೀಯ ಎನ್ನಬಹುದಾದ ರಂಗ ಚಟುವಟಿಕೆಗಳ ಬಗ್ಗೆ ಅವರಲ್ಲಿ ಬರೆದಿದ್ದಾರೆ.
ಹೆಚ್ಚಿನ ಲೇಖನಗಳು ರಂಗಕ್ರಿಯೆಗಳ ವರ್ತಮಾನವನ್ನು ಹಿಡಿದಿಟ್ಟರೆ, ಉಳಿದವು ಉತ್ತರ ಹಾಗೂ ಹೈದ್ರಾಬಾದ್ ಕರ್ನಾಟಕದ ರಂಗ ಚಟುವಟಿಕೆಗಳನ್ನು ಹಿಡಿದಿಟ್ಟಿವೆ. ಈ ನಡುವೆ ನಾಟಕಕಾರರಾದ ಸಂಸ ಹಾಗೂ ಗಿರೀಶ ಕಾರ್ನಾಡರ ನಾಟಕಗಳ ಬಗ್ಗೆ ಲೇಖಕರು ಬರೆದಿದ್ದಾರೆ.
ಯರಿಸ್ವಾಮಿ ಸರಳವಾಗಿ, ನೇರವಾಗಿ ಮನಮುಟ್ಟುವಂತೆ ಇಲ್ಲಿ ಬರದಿದ್ದಾರೆ. ಕರ್ನಾಟಕದ ಎಲ್ಲ ರಂಗ ಚಟುವಟಿಕೆಗಳ ಬಗ್ಗೆ ಬರೆಯುವಂತಾದರೆ ಈ [...]

ಜುಗಲಬಂದಿ ಚಿಂತಕ

ಅತ್ಯುತ್ತಮ ಕತೆ ಕಾದಂಬರಿ ಬರೆದು, ವಿಮರ್ಶಾ ಮಾರ್ಗವನ್ನು ರೂಪಿಸಿ, ಸಂಸ್ಕೃತಿ ಚಿಂತನೆಗೆ ಹೊರಳಿ ಅಲ್ಲಿ ಗಟ್ಟಿಯಾಗಿ ನಿಲ್ಲಲು ಅನಂತಮೂರ್ತಿಯವರು ಹವಣಿಸಿದ್ದು ಚಲಾವಣೆಯ ಒತ್ತಡವೇ?
ಸಮಾಜವಾದಿಯಾಗಿ ಸಾಹಿತ್ಯಲೋಕ ಪ್ರವೇಶಿಸಿ, ಸಂಸ್ಕೃತಿ ಚಿಂತಕರಾಗಿ ಬೆಳೆದು ಈಗ `ಸಮಾಜವಾದಿ‘ ಎಂದು ಕೇವಲ ಹೇಳಿಕೊಳ್ಳಬೇಕಾದ ತಮ್ಮ ಬೆಳವಣಿಗೆಯನ್ನು ಅನಂತಮೂರ್ತಿ ನೇರವಾಗಿ ಎದುರಿಸಿದ್ದಾರೆಯೇ
ಇಂಥ ಪ್ರಶ್ನೆಗಳನ್ನು ಕೇಳುತ್ತಿರುವವರು ಜಿ.ಕೆ.ರವೀಂದ್ರಕುಮಾರ್. ಅನಂತಮೂರ್ತಿಯವರು ತಮ್ಮ ಏಕಾಂತವನ್ನು ಕಳೆದುಕೊಂಡಿದ್ದಾರೆ. ಗಾಂಧೀಜಿಯನ್ನು ಹೆಜ್ಜೆಹೆಜ್ಜೆಗೂ ಜ್ಞಾಪಿಸಿಕೊಳ್ಳುವ ಅವರು ಗಾಂಧೀಜಿಯ ಮೌನವನ್ನು ಬಲವಂತವಾಗಿ ಆದರೂ ಒಂದು ವ್ರತದಂತೆ ಕಾಣಬೇಕಾಗಿದೆ ಎಂದೂ ರವೀಂದ್ರಕುಮಾರ್ ಅಭಿಪ್ರಾಯ.
ಚೇತನ ಸಾಹಿತ್ಯ [...]

ಬೈಯುವುದು ಹೇಗೆ?

ಲೆಕ್ಕದ ಭಯ ಹೋಗಲಾಡಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಆರ್. ಶ್ರೀ ನಾಗೇಶ್ `ಮಕ್ಕಳನ್ನು ಬೈಯ್ಯುವುದು ಹೇಗೆ?’ ಎಂಬ ಅಪರೂಪದ ಪುಸ್ತಕವನ್ನು ಹೊರತಂದಿದ್ದಾರೆ.
ಮಕ್ಕಳ ಮೇಲೆ ಸಿಟ್ಟು ಬರುತ್ತದೆ. ಆ ಸಿಟ್ಟಿಗೆ ನಾವೇ ಕಾರಣಕರ್ತರೂ ಆಗಿರುತ್ತೇವೆ ಅನ್ನುವುದನ್ನು ಮರೆತು ಮಕ್ಕಳನ್ನು ಬೈಯುತ್ತೇವೆ. ಆದರೆ ಆ ಬೈಗಳು ಅವರನ್ನು ತಿದ್ದುವಂತಿರಬೇಕು ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಹಾಗೆ, ಸಕಾರಾತ್ಮಕವಾಗಿ ಬೈಯುವುದು ಹೇಗೆ ಎಂಬ ಕಲೆಯನ್ನು ಇಲ್ಲಿ ಶ್ರೀ ನಾಗೇಶ್ ಹೇಳಲೆತ್ನಿಸಿದ್ದಾರೆ. ಒಂದು ಉದಾಹರಣೆ ನೋಡಿ; `ಅಪ್ಪ ಬರಲಿ ತಾಳು‘ ಎಂದು [...]

21-09-2008 ಟಾಪ್ -10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)
1. ಕುವೆಂಪು ದರ್ಶನ (ಕುವೆಂಪು ದೃಷ್ಟಿಕೋನ ಕುರಿತು) ಲೆ:ದೇಜಗೌ, ಪ್ರ:ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆ:ರೂ.400/-
2. ಫಸ್ಟ್ ಹಾಫ್ (ಐವತ್ತರ ರವಿ ಬೆಳೆಗೆರೆಗೆ ಅಕ್ಕರೆಯ ಕೊಡುಗೆ) ಸಂ:ಶರತ್ ಕಲ್ಕೊಡ್, ಪ್ರ:ಭಾವನಾ ಪ್ರಕಾಶನ, ಬೆಂಗಳೂರು ಬೆ:ರೂ.500/-
3. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಒಬ್ಬ ಕರ್ಮಯೋಗಿಯ ಕಥೆ) ಲೆ:ವಿ.ಎಸ್.ನಾರಾಯಣ ರಾವ್, ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.225/-
4. ಭಾರತದ ನದಿಗಳು (ಒಂದು ವಿಸ್ತೃತ ಪರಿಚಯ) ಲೆ:ಟಿ. ಗಿರಿಜ, ಪ್ರ:ನಿಹಾರಿಕಾ ಪ್ರಕಾಶನ, ದಾವಣಗೆರೆ ಬೆ:ರೂ.350/-
5. ಅನಾದಿ (ಮೊಗಳ್ಳಿಯವರ ಕಾದಂಬರಿ) ಲೆ:ಮೊಗಳ್ಳಿ ಗಣೇಶ್, [...]

ಕಡಲಿಗೆ ಕಳಿಸಿದ ದೀಪ

ಹೆಂಗರುಳಿನ ಕವಿ ಟಿ. ಯಲ್ಲಪ್ಪ ಅವರ ಇಲ್ಲಿನ ಕವಿತೆಗಳು ಭಿನ್ನವಾದ ಲಯ, ಲವಲವಿಕೆಯಿಂದ ಗಮನ ಸೆಳೆಯುತ್ತವೆ. ಕವಿತೆಗೆ ಅವರು ಆಯ್ದುಕೊಳ್ಳುವ ವಿಷಯ `ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ?’ ಎಂದೇನೂ ಅನ್ನಿಸುವುದಿಲ್ಲ.
ಕೆಲವು ಕವಿತೆಗಳು ತೆಳುವಾದರೂ `ಇಲ್ಲಿ ಹೆಜ್ಜೆಗಳ ಗುರುತಿಲ್ಲ, ಗಜ್ಜೆಗಳ ಸಪ್ಪಳವೂ ಇಲ್ಲ, ನಾನೇ ಕುಣಿಯುವುದ ಕಲಿತುಕೊಂಡೆ. . .” ಎಂಬ ಸ್ವಂತಿಕೆಯನ್ನು ಕಂಡುಕೊಳ್ಳುವ ಇಲ್ಲಿನ ಕವಿತೆಗಳು ಕವಿಯ ಮುಂದಿನ ಹೆಜ್ಜೆಯ ಬಗ್ಗೆ ಭರವಸೆ ಹುಟ್ಟಿಸುತ್ತವೆ.

ಶೀರ್ಷಿಕೆ: ಕಡಲಿಗೆ ಕಳಿಸಿದ ದೀಪ ಲೇಖಕರು: ಟಿ. ಯಲ್ಲಪ್ಪ [...]