ಅಂಕಿತ ಪುಸ್ತಕ ಟಾಪ್ -10 (26-10-2008)

ಅಂಕಿತ ಪುಸ್ತಕ (ದೂ.26617100, 26617755)
1. ಸುಮ್ಮನಿರಬಾರದೇ…? (ಪ್ರಯಾಸಕರ ಬದುಕಿಗೆ ಗುಡ್ ಬೈ) ಲೇ: ನೆಲ್ಲಿಕೆರೆ ವಿಜಯಕುಮಾರ್, ಪ್ರ:ಸುಮ್ ಸುಮ್ನೆ ಪ್ರಕಾಶನ, ನೊಣವಿಕೆರೆ ಬೆ:ರೂ.85/-
2. ಶಾಸ್ತ್ರೀಯ ಭಾಷೆಯಾಗಿ ಕನ್ನಡ (ಹಿನ್ನೆಲೆ ಮುನ್ನೆಲೆ), ಲೇ:ಡಾ.ಎಂ.ಚಿದಾನಂದ ಮೂರ್ತಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಗೊ.ರು.ಚನ್ನಬಸಪ್ಪ, ,ಪ್ರ:ಕನ್ನಡ ಗೆಳೆಯರ ಬಳಗ, ಬೆಂಗಳೂರು, ಬೆ:ರೂ.10/-
3. ಇಪ್ಪತ್ತೆಂಟು ಹಣತೆಗಳು (ನಿತ್ಯ ಜೀವನದಲ್ಲಿ ಬೆಳಕಾಗುವ ಕೆಲವು ವೈಚಾರಿಕ ಲೇಖನಗಳು) ಲೇ:ತೀರ್ಥರಾಂ ವಳಲಂಬೆ, ಪ್ರ:ಯಾನ ಪ್ರಕಾಶನ, ಮಂಗಳೂರು ಬೆ:ರೂ.75/-
4. ನೀನು ಇರುವಂತೆಯೇ ಇರು (ಶ್ರೀ ರಮಣ ಮಹರ್ಷಿಗಳ ಬೋಧಾಮೃತ) ಲೆ:ಡೇವಿಡ್ ಗಾಡ್ [...]

ಜುಂಜಪ್ಪ

ಜುಂಜಪ್ಪ ಕಾಡುಗೊಲ್ಲ ಬುಡಕಟ್ಟಿನ ಜನಪ್ರಿಯ ಸಾಂಸ್ಕೃತಿಕ ವೀರ. ಆತನ ಕುರಿತು ಗೊಲ್ಲ ಸಮುದಾಯದ ಹಿರಿಯರು ವಿವಿಧ ಸಂದರ್ಭಗಳಲ್ಲಿ ಪುನರ್ ಸೃಷ್ಟಿಸಿದ ಅಪೂರ್ಣ ಕತೆಗಳನ್ನು ಇಟ್ಟುಕೊಂಡು ಸಮಗ್ರ ಚಿತ್ರಣ ದೊರೆಯುವ ಹಾಗೆ ಕತೆಗಳನ್ನು ಶಿವಣ್ಣ ಇಲ್ಲಿ ಪುನರ್ರಚಿಸಿದ್ದಾರೆ. ಎತ್ತಪ್ಪ – ಜುಂಜಪ್ಪರ ಕುರಿತು ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಸುದೀರ್ಘ ಕ್ಷೇತ್ರ ಕಾರ್ಯಧಾರಿತ ಮಹಾಪ್ರಬಂಧ ರಚಿಸಿರುವ ಶಿವಣ್ಣ ಅವರು ಅಲ್ಲಿನ ಅಡಿಟಿಪ್ಪಣಿ ಹಾಗೂ ಗಂಭೀರ ಭಾಗಗಳನ್ನು ತೆಗೆದುಹಾಕಿ ಸರಳಗೊಳಿಸಿ ಜನಸಾಮಾನ್ಯರಿಗೆ ಎಟುಕುವಂತೆ ಈ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಾ
ಜನಪ್ರಿಯ ಮಾಸಿಕ `ಮಯೂರ‘ದಲ್ಲಿ [...]

ಎದೆಯ ಹೊಲದಲಿ ಬಿತ್ತಿ ಬೆಳೆವೆವು ಅಮರ ಪ್ರೀತಿಯ ಕಾಳನು

ಕನ್ನಡದ ಮಕ್ಕಳ ರಂಗಭೂಮಿಯಲ್ಲಿ ಡಾ. ಆರ್.ವಿ. ಭಂಡಾರಿ ಆದ್ಯರು. ಮಕ್ಕಳ ಕತೆ, ಕಾದಂಬರಿ, ನಾಟಕ ಯಾವುದೇ ಇರಲಿ ಇವುಗಳ ರಚನೆಯಲ್ಲಿ ಅವರು `ಪ್ರಸಿದ್ಧ’ರಲ್ಲದಿದ್ದರೂ `ಸಿದ್ಧ’ರು. ಮಕ್ಕಳ ರಂಗಭೂಮಿಯ ಚಹರೆ ಇನ್ನೂ ಸ್ಪಷ್ಟವಾಗುತ್ತಿದ್ದ ಕಾಲದಲ್ಲಿಯೇ ಅವರು ಇಂದು ನಾವು ಯಾವುದನ್ನು ಮಕ್ಕಳ ರಂಗಭೂಮಿಯ ಗಂಭೀರ ಪ್ರಯೋಗ ಅನ್ನುತ್ತಿದ್ದೇವೆಯೋ ಅಂತಹ ಮಾದರಿಗಳನ್ನು ರಚಿಸಿದವರು, ಪ್ರಯೋಗಿಸಿದವರು.
ಆರ್.ವಿ. ಮಕ್ಕಳ ನಾಟಕಗಳನ್ನು `ಚಂದಕ್ಕಾಗಿ’ ಬರೆದವರಲ್ಲ. ಅದನ್ನು ಚಂದಗೊಳಿಸಲಿಕ್ಕಾಗಿಯೇ ಕಷ್ಟಪಟ್ಟವರಲ್ಲ. ನಿರ್ದಷ್ಟ `ಆಶಯಗಳು’ ಅದರ ಬೆನ್ನ ಹಿಂದೆಯೇ ಇರುತ್ತದೆ. ಆದರೆ ಅವು ಗೊಂದಲಗೊಳ್ಳದೇ ಸರಳ, [...]

ಡಾ. ಆರ್. ವಿ. ಭಂಡಾರಿ ಅವರಿಗೆ ಶೃದ್ಧಾಂಜಲಿ

ಬೆಳಕು ಹಂಚಿದ ಬಾಲಕನನ್ನು ಕೆತ್ತಿದ ಡಾ. ಆರ್.ವಿ. ಭಂದಾರಿ ಡಾ ಇನ್ನಿಲ್ಲ. ಅವರ ಕೆಲವು ಕೃತಿಗಳು ಇವು.
ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ)
ಕೊಲೆಗಾರ ಪತ್ತೆಯಾಗಲಿಲ್ಲ (ಕವನ ಸಂಕಲನ)
ಬೆಂಕಿಯ ಮಧ್ಯೆ (ಕಾದಂಬರಿ)
ಬಿರುಗಾಳಿ (ಕಾದಂಬರಿ)
ಗೋಡೆಗಳು ಮತ್ತು ನೆರೆ ಹಾವಳಿ (ಕಾದಂಬರಿ)
ತಲೆಮಾರು (ಕಾದಂಬರಿ)
ಯಾನ ಮತ್ತು ಇತರ ನಾಟಕಗಳು (ಮಕ್ಕಳ ನಾಟಕಗಳು)
ಕೇವಲ ಸಹಿ (ನವ ಸಾಕ್ಷರ ಸಾಹಿತ್ಯ)
ಇಟ್ಟ ಹೆಜ್ಜೆ ಮುಂದಕೆ (ನವ ಸಾಕ್ಷರ ಸಾಹಿತ್ಯ)
ಐದು ಯಕ್ಷಗಾನ ಏಕಾಂಕ ಪ್ರಸಂಗಗಳು (ನವ ಸಾಕ್ಷರ ಸಾಹಿತ್ಯ)
ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ (ಮಕ್ಕಳ ನಾಟಕಗಳು)
ಬೆಳಕಿನೆಡೆಗೆ [...]

ಹಿರಿಯ ಬಂಡಾಯ ಸಾಹಿತಿ ಆರ್.ವಿ.ಭಂಡಾರಿ ಇನ್ನಿಲ್ಲ.

ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಆರ್.ವಿ.ಭಂಡಾರಿ (72) ದೀರ್ಘಕಾಲದ ಅಸ್ವಸ್ಥತೆಯ ನಂತರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಪರಿಚಿತರಾಗಿದ್ದ ಇವರು ಬಂಡಾಯ ಸಾಹಿತ್ಯದ ಆರಂಭದ ಚಳುವಳಿಯ ದಿನಗಳಲ್ಲಿ ಅದರ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲೊಬ್ಬರಾಗಿದ್ದರು.
ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ), ಬೆಂಕಿಯ ಮಧ್ಯೆ, ಬಿರುಗಾಳಿ, ಯಶವಂತನ ಯಶೋಗೀತೆ (ಮೂರೂ ಕಾದಂಬರಿ), ಯಾನ, ಬೆಳಕಿನೆಡೆಗೆ (ಮಕ್ಕಳ ನಾಟಕಗಳು), ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್ಷ (ವೈಚಾರಿಕ ವಿಮರ್ಶಾ ಸಂಕಲನ) ಮೊದಲಾದ ಕೃತಿಗಳನ್ನು ರಚಿಸಿದ್ದ ಭಂಡಾರಿಯವರಿಗೆ [...]

ಹೆಂತಾ ಚೆಂದಿತ್ತಾ

ಪುಸ್ತಕದ ಶೀರ್ಷಿಕೆ ನೋಡಿದರೆ ಜಾನಪದ ಲಾವಣಿಗಳ ಸಂಪಾದಿತ ಗ್ರಂಥ ಇದಾಗಿರಬಹುದು ಎನಿಸುತ್ತದೆ. ಲಾವಣಿ ಶೈಲಿಯಲ್ಲಿ ಬರೆದಿರುವ ಗೀತೆಗಳು ಇವು. `ಇವನ್ನು ಬೇಕಾದರೆ ಭಾವಗೀತಾತ್ಮಕ ಲಾವಣಿಗಳು ಎಂದು ಕರೆಯಿರಿ‘ ಎಂದು ಕವಿ ಪೋಲೀಸ್ ಪಾಟೀಲ ಅವರೇ ಹೇಳಿದ್ದಾರೆ. ಪಾಟೀಲರು ಕವಿ ಅಷ್ಟೇ ಅಲ್ಲ. ಉತ್ತಮ ಹಾಡುಗಾರರೂ ಸಹ. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣದ ಶಿಬಿರಗಳಲ್ಲಿ ಭಾಗವಹಿಸಿದಾಗ ತಾವೇ ರಚಿಸಿ ಹಾಡಿದ ಲಾವಣಿಗಳು ಇವು. ಒಟ್ಟು 55 ಲಾವಣಿಗಳು ಈ ಸಂಕಲನದಲ್ಲಿವೆ.
ನಿಶ್ವಿತ ಉದ್ದೇಶಕ್ಕೆ ರಚಿಸಿದ ಗೀತೆಗಳಲ್ಲಿ ಸಾರ್ವತ್ರಿಕ ಮೌಲ್ಯ ಇರುವುದೆ [...]

ಹಾರಕೂಡದ ಸಂಸ್ಥೆ ಪ್ರಕಟಿಸಿದ ಸಿಪಿಕೆ ವಿಚಾರಗಳು

ಸಿ.ಪಿ.ಕೆ ಹೆಸರಿನಲ್ಲಿ ಬರಹಗಳು (ಕೊನೆಯ ಪಕ್ಷ ಒಂದು ಪತ್ರವಾದರೂ) ಪ್ರಕಟವಾಗದ ಪತ್ರಿಕೆಗಳೇ ಇಲ್ಲ ಎಂದು ಹೇಳಬಹುದು. ಪ್ರಜಾವಾಣಿ, ಸುಧಾ ಸಮೂಹದ ಪತ್ರಿಕೆಗಳ ಓದುಗರಿಗಂತೂ ಅವರ ಚಿಂತನೆಗಳು ಚಿರಪರಿಚಿತ. ಕನ್ನಡದ ಹಿರಿಯ ಲೇಖಕರೂ ವಿದ್ವಾಂಸರೂ ಆದ ಡಾ.ಸಿ.ಪಿ.ಕೃಷ್ಣಕುಮಾರ್ ತಮ್ಮ ಹೆಸರನ್ನು ಸಿಪಿಕೆ ಎಂದು ಮೂರೇ ಅಕ್ಷರಕ್ಕೆ ಕಿರಿದುಗೊಳಿಸಿಕೊಂಡಷ್ಟೇ ಸಾಂದ್ರವಾಗಿ, ಪರಿಣಾಮಕಾರಿಯಾಗಿ ಬರೆಯಬಲ್ಲ ಲೇಖಕರು. ವಿವಿಧ ಸಂದರ್ಭದಲ್ಲಿ ಅವರು ಬರೆದ 51 ಚಿಂತನೆಗಳ ಧಾರೆ ಇದು.
ಘನ ವಿದ್ವಾಂಸರಾದ ಸಿಪಿಕೆ ಚಿಕ್ಕಪುಟ್ಟದಕ್ಕೆಲ್ಲಾ ಪ್ರತಿಕ್ರಯಿಸುತ್ತಾರೆ. ಎಲ್ಲದಕ್ಕೂ ಬರೆಯುತ್ತಾರೆ ಎಂದು ಜರಿಯುವವರಿದ್ದಾರೆ. ಆದರೆ ಸಿಪಿಕೆ. [...]

ಕದಂಬ ವನ

ರಾಜಶೇಖರ ಕದಂಬ ಮೈಸೂರಿನ ರಂಗಚಟುವಟಿಕೆಗಳಲ್ಲಿ ಸರ್ವಾಂತರ್ಯಾಮಿ. ರಂಗಕರ್ಮಿಗಳ, ನಟನಟಿಯರ ಸಖ್ಯ ಬೆಳೆಸಿಕೊಂಡು ಅವರ ಏಳಿಗೆಗಾಗಿ ಸದ್ದುಗದ್ದಲವಿಲ್ಲದೆ ಓಡಾಡುತ್ತಾ, ಅವರಿಗೆಲ್ಲಾ ಸಲ್ಲಬೇಕಾದ ಗೌರವಾದರಗಳಿಗಾಗಿ ಓಡಾಡುವ ಹಿರಿಯ ಚೇತನ ಎನ್ನುತ್ತಾರೆ ನ. ರತ್ನ.
ಕದಂಬ ಬರೆದಿರುವ `108 ರಂಗಮುಖಗಳು‘ ಪುಸ್ತಕ ಕರ್ನಾಟಕದಲ್ಲಿರುವ ರಂಗಕರ್ಮಿಗಳ ಪರಿಚಯ. ಎಲ್ಲಾ ಭಾಗಗಳ ಕಲಾವಿದರನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ ಕದಂಬ. ಪ್ರಸ್ತುತ ರಂಗಭೂಮಿಯಲ್ಲಿ ಪ್ರಚಲಿತವಿರುವ ಹಿಂದೆ ಸಾಕಷ್ಟು ಕೆಲಸ ಮಾಡಿ ಸಂಧ್ಯಾಕಾಲದಲ್ಲಿರುವ ವಯೋವೃದ್ಧ ಕಲಾವಿದರ ಪರಿಚಯವನ್ನು ಮಾಡುವ ಅಪರೂಪದ ಕೆಲಸ ಕದಂಬ ಮಾಡಿದ್ದಾರೆ.
ಶೀರ್ಷಿಕೆ : 108 ರಂಗಮುಖಗಳು [...]

ಮೂರ್ತಿಯವರ ಮೊನಚು

ನಾಡಿನ ಹಿರಿಯರು, ರಂಗಕರ್ಮಿಗಳು ಎಂದು ಖ್ಯಾತರಾದವರು ಎ.ಎಸ್.ಮೂರ್ತಿ. ಮೂರ್ತಿ ವಯಸ್ಸಿನಲ್ಲಿ ಹಿರಿಯರಾದರೂ ಕೀ ರ್ತಿಯೂ ಅಷ್ಟೇ ದೊಡ್ಡದು.
`ಒಂದು ವಿಧದಲ್ಲಿ ನಾಟಕವನ್ನು ಅವರು ಬಾಳಿನ ಅತ್ಯಂತ ಪ್ರಮುಖ ಕಾರ್ಯ ಎಂದು ತೀರ್ಮಾ ನಿಸಿಬಿಟ್ಟಿದ್ದರು. ಒಂದು ವಿಧದಲ್ಲಿ ಅದು ಅವರಿಗೆ ರಕ್ತಗತವಾಗಿ ಬಂದ ಆಸಕ್ತಿ. ಅವರ ತಂದೆ ಅ.ನ.ಸುಬ್ಬರಾಯರು ಸ್ವತಃ ನಾಟಕಕಾರರೂ ರಂಗಕರ್ಮಿಗಳೂ ಆಗಿದ್ದರು. ಅವರಿಗೆ ಕಲೆಯೇ ಜೀವನವಾಗಿತ್ತು’.
`ಕಲಾಮಂದಿರದ ಆಶ್ರಯದಲ್ಲಿ ಎ.ಎಸ್.ಮೂರ್ತಿಯವರು ಎಷ್ಟೊಂದು ಜನ ಯುವಕ ಯುವತಿಯರನ್ನು ಅಭಿನಯ ಕಲೆಯಲ್ಲಿ ತಯಾರು ಮಾಡಿದರು ಎಂಬುದೇ ಆಶ್ಚರ್ಯಕರವಾಗದ ವಿಷಯ’ [...]

ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕತೆಗಳು

ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕಥೆಗಳ ಸಂಕಲನವೇ ‘ಕಪ್ಪು ಹಕ್ಕಿಯ ಬೆಳಕಿನ ಹಾಡು‘ ಪುಸ್ತಕ. ಇಲ್ಲಿನ ಆತ್ಮಕಥೆಗಳನ್ನು ಎಂ.ಆರ್. ಕಮಲ ಕನ್ನಡಕ್ಕೆ ಅನುವಾದಿಸಿದ್ದಾರೆ. ಗುಲಾಮಗಿರಿಯ ಇತಿಹಾಸ, ಅಂದಿನ ರಾಜಕೀಯ ಸನ್ನಿವೇಶ, ಗುಲಾಮರ ಆತ್ಮಕಥೆಗಳನ್ನು ಒಳಗೊಂಡಿರುವ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲಬಾರಿಯಾಗಿದೆ. ಇಲ್ಲಿ ಅನುವಾದಿಸಲಾದ ಎಲ್ಲ ಆತ್ಮಕಥೆಗಳು ಹೆಣ್ಣುಮಕ್ಕಳದು ಅನ್ನುವುದು ಈ ಪುಸ್ತಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.
ಕಪ್ಪು ಜನಾಂಗ ಸೃಷ್ಟಿಸಿರುವ ಆತ್ಮಕಥೆಗಳು ಐತಿಹಾಸಿಕ ಮಹತ್ವ ಪಡೆದ ಸಾಹಿತ್ಯ-ಸಮಾಜಶಾಸ್ತ್ರೀಯ-ಸಾಂಸ್ಕೃತಿಕ ಸಂವಾದಿ ದಾಖಲೆಗಳಾಗಿವೆ. ಬಿಡುಗಡೆಗಾಗಿ ಅವರು ನಡೆಸಿದ [...]