Posted on November 30, 2008 by pusthakapreeethi
ಪತ್ರಿಕೆಯೊಂದಕ್ಕೆ ಬರೆದ ಅಂಕಣದ 33 ಲೇಖನಗಳ ಸಂಕಲನ ಇದು. ವಿದ್ಯಾರ್ಥಿ ಅಂಕಣದ ಇಲ್ಲಿನ ಬರಹಗಳು ಸಹಜವಾಗಿ ಶಿಕ್ಷಣ ತಜ್ಞರ, ಸಾಹಿತಿಗಳ, ಅನುಭಾವಿಗಳ ಕುರಿತಾಗಿವೆ. ಪಾಶ್ಚಾತ್ಯ ಚಿಂತಕರ ಜತೆಗೆ ಭಾರತೀಯರು, ಜತೆಗೆ ಕನ್ನಡದ ಮನಸ್ಸುಗಳು ಶಿಕ್ಷಣದ ಬಗ್ಗೆ ಹೇಗೆ ಯೋಚಿಸಿವೆ ಎಂಬುದರ ದಾಖಲೆಯೂ ಇದಾಗಿದೆ.
ಪಿಯಾಜೆ, ಝಾಕಿರ್ ಹುಸೇನ್, ಅಲ್ಲಮ, ಜಿಡ್ಡು, ಬ್ರೂನರ್, ಬೀಚಿ, ಅರವಿಂದ – ಹೀಗೆ ಇವರ ಆಯ್ಕೆ ಕನ್ನಡದಿಂದ ವಿಶ್ವದ ನಾನಾ ಭಾಷೆಗಳ ಚಿಂತಕರವರೆಗೆ ಹರಿದಾಡುತ್ತದೆ. ಅಂಕಣವಾದ್ದರಿಂದ ವಿಸ್ತೃತ ಚಚರ್ೆ, ಬರಹಗಳಿಗೆ ಬದಲಾಗಿ ಪದಗಳ [...]
Filed under: ವೈಚಾರಿಕ ಸಾಹಿತ್ಯ | Tagged: ಕುರುಹು ತೋರಿದ ಗುರು, ಪ್ರೊ. ಎಚ್.ಎಸ್. ಉಮೇಶ, ವಿಸ್ಮಯ ಪ್ರಕಾಶನ, ಸುಧಾ | Leave a Comment »
Posted on November 29, 2008 by pusthakapreeethi
ಗಾಳಿಪಟ ವಿನ್ಯಾಸಕಾರನಾಗಿ, ಚಾರಣಿಗನಾಗಿ ಸದಾ ನೆಲದಿಂದ ಮೇಲ ಮೇಲಕ್ಕೆ ಹಾರುವ ಸಾಹಸಿ ಮನಸ್ಸಿನ ದಿನೇಶ್ ಹೊಳ್ಳರ ಇಲ್ಲಿ ಕಥೆಗಳು ನೆಲದ ಮೇಲಿನ ಪ್ರೀತಿಯಿಂದ ಹೊರಹೊಮ್ಮಿವೆ. ಕಥೆ, ಮಿನಿಗಥೆ, ಹನಿಗಥೆ ಸೇರಿದಂತೆ 8 ಕಥೆಗಳ ಈ ಸಂಕಲನ ತನ್ನ ವೈವಿಧ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಎಲ್ಲ ಕಥೆಗಳು ಈಗಾಗಲೇ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಸಂಕಲನದ ಮೊದಲ ಕಥೆ `ಹುಲಿಬಲಿ‘ಗೆ ಸಿದ್ದೇಶ್ ಎಂಬ ಬಾಲಕ ಪ್ರೇರಣೆ. ಅವನ ಅಗಾಧ ಪರಿಸರ ಜ್ಞಾನ, ಪ್ಯಾಟಿ ಧಣಿಗಳು ಬಂದು ವನ್ಯಜೀವಿಗಳನ್ನು ಬೇಟೆಯಾಡುವುದರ ಬಗ್ಗೆ ಅವನಿಗಿರುವ ಕೋಪಕ್ಕೆ [...]
Filed under: ಕಥಾ ಸಂಕಲನ | Tagged: ಗಾಯತ್ರಿ ಪ್ರಕಾಶನ, ದಿನೇಶ್ ಹೊಳ್ಳ, ಬೆಟ್ಟದ ಹೆಜ್ಜೆಗಳು, ಸುಧಾ | Leave a Comment »
Posted on November 28, 2008 by pusthakapreeethi
ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಯನ್ನು ಆ ಮನೆಯಲ್ಲಿರುವ ಇತರ ಸದಸ್ಯರು, ಅಜ್ಜ-ಅಜ್ಜಿಯರು ವಹಿಸುತ್ತಿದ್ದರು. ಆದರೆ ವಿದ್ಯಾವಂತ ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಪೋಷಣೆಯೇ ದೊಡ್ಡ ಸಮಸ್ಯೆಯಾಗಿದೆ. ಇದೊಂದು ಅನಿವಾರ್ಯ ಸ್ಥಿತಿ. ಹಾಗಾದರೆ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿ, ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವುದು ಹೇಗೆ? ಈ ಕುರಿತು ಶಿಕ್ಷಣ, ಮನಶ್ಯಾಸ್ತ್ರ, ವೈದ್ಯಕೀಯ ಕ್ಷೇತ್ರಗಳ ತಜ್ಞರು ಅಲ್ಲಲ್ಲಿ ಲೇಖನಗಳನ್ನು ಬರೆದೇ ಇದ್ದಾರೆ. ಮಕ್ಕಳ ಪೋಷಣೆಗೆ ಪೂರಕವಾದ ಇಂತಹ ಹಲವು ಉಪಯುಕ್ತ ಲೇಖನಗಳನ್ನು ಹನುಮಂತಪ್ಪ ಒಂದೆಡೆ ಇಲ್ಲಿ ಕಲೆಹಾಕಿದ್ದಾರೆ. [...]
Filed under: ವೈಚಾರಿಕ ಸಾಹಿತ್ಯ | Tagged: ಐ.ಬಿ.ಎಚ್. ಪ್ರಕಾಶನ, ನಮ್ಮ ಮಕ್ಕಳು ಮತ್ತು ನಾ, ಬಳ್ಳೇಕೆರೆ ಹನುಮಂತಪ್ಪ, ಸುಧಾ | Leave a Comment »
Posted on November 27, 2008 by pusthakapreeethi
ಈ ಪುಟ್ಟ ಮೂರು ಕವಿತಾ ಸಂಕಲನಗಳನ್ನು ಅಂದವಾಗಿ ಮುದ್ರಿಸಲಾಗಿದೆ. `ನೀರಜ‘ ಶಿಶು ಪದ್ಯಗಳ ವಸ್ತು ನಿತ್ಯದ ಸಹಜ ಸಂಗತಿಗಳು. ಮಗುವಿಗೆ ಕಥೆಯನ್ನು ಸರಳವಾಗಿ ಹೇಳುವಂತೆ ಇಲ್ಲಿ ಅವನ್ನು ಪುಟ್ಟ ಕವಿತೆ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ನೀರಜ ನೀನು ಬಾಯ್ದೆರೆದೆ/ಅಲ್ಲಿ ಬ್ರಹ್ಮಾಂಡವಿರಲಿಲ್ಲ / ಮಣ್ಣಿತ್ತು, ಕಲ್ಲಿತ್ತು, ನೀರಿತ್ತು, ಕಾಳಿತ್ತು/ – ಇಂತಹ ಚಿಕ್ಕ ಚಿಕ್ಕ ರೂಪಕಗಳು ರೇಖಾ ಚಿತ್ರಗಳೊಂದಿಗೆ ಮಕ್ಕಳ ಗಮನವನ್ನು ಥಟ್ಟನೆ ಸೆಳೆಯುವಂತಿವೆ. ಕವಿತೆಗಳನ್ನು ಮತ್ತಷ್ಟು ಧ್ವನಿ ಪೂರ್ಣವಾಗಿಸಿರುವುದು ಇಲ್ಲಿನ ಶಿವ ಹೂಗಾರರ ರೇಖಾ ಚಿತ್ರಗಳು. ವಾತಾವರಣದ ತುಂಬ [...]
Filed under: ಮಕ್ಕಳ ಸಾಹಿತ್ಯ | Tagged: ಕನ್ನಡಿ (ಚುಟುಕಗಳು ಮತ್, ನೀರಜ (ಮಗು ಪದ್ಯಗಳು), ಮಂದಹಾಸ (ಹೈಕುಗಳು), ವಿನಯ ಪ್ರಕಾಶನ, ಶಾರದಾ ಮುಳ್ಳೂರ, ಸುಧಾ | Leave a Comment »
Posted on November 26, 2008 by pusthakapreeethi
ತಮ್ಮ ಕಥೆಗಾರನ ಸೃಜನಶೀಲತೆಯನ್ನು ಮೂರು ದಶಕಗಳ ಕಾಲ `ಪ್ರಜಾವಾಣಿ‘ಗೆ ಧಾರೆ ಎರೆದ ಲಕ್ಷಣ ಕೊಡಸೆ ಅವರು ಪತ್ರಿಕಾ ವೃತ್ತಿಯ ಕೊನೆಯ ದಿನಗಳಲ್ಲಿ ಪ್ರಥಮ ಕಾದಂಬರಿಯನ್ನು ಹೊರತಂದಿದ್ದಾರೆ. ಮೂಲತಃ ಒಳ್ಳೆಯ ಕಥೆಗಾರರಾದ ಕೊಡಸೆ ಹಿಂದಿನಿಂದಲೂ ಕಥೆ ಬರೆಯುತ್ತಿದ್ದರು. ಆದರೆ ಅವರ ಪ್ರಥಮ ಕಥಾ ಸಂಕಲನ ಹೊರಬಂದದ್ದೂ ಇತ್ತೀಚೆಗೆ. ಬಸ್ಸಿನಲ್ಲಿ ಪಯಣಿಸುವ ಕರೇನಾಯ್ಕನ ನೆನಪುಗಳ ಮೂಲಕ ಒಂದು ಕಾಲಘಟ್ಟದ ಸಮುದಾಯದ ಬದುಕನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ `ಪಯಣ‘ ಕಾದಂಬರಿಯಲ್ಲಿ ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಾರೆ. ಪತ್ರಕರ್ತನ ಸರಳ ಭಾಷೆ, ಕಾದಂಬರಿಕಾರ ಬಳಸುವ ಜನ [...]
Filed under: ಕಥಾ ಸಂಕಲನ | Tagged: ಪಯಣ, ಲಕ್ಷ್ಮಣ ಕೊಡಸೆ, ಸುಧಾ, ಸುಮುಖ ಪ್ರಕಾಶನ | Leave a Comment »
Posted on November 25, 2008 by pusthakapreeethi
ಪೋಲೀಸರಾಗಿರುವ ಗಂಗಾಧರಯ್ಯ ಜಾಲಿಬೆಂಚಿ ರಚಿಸಿರುವ 13 ಕಥೆಗಳ ಸಂಕಲನ ಇದು. ಕೆಲವು ಮಿನಿಕಥೆಗಳಾದರೆ ಮತ್ತೆ ಕೆಲವು ನೀಳ್ಗತೆಗಳು. ಪೋಲೀಸ್ ಇಲಾಖೆಯಲ್ಲಿರುವ ಕಥೆಗಾರರಿಗೆ ವಸ್ತುವಿಗೆ ಕೊರತೆಯಿಲ್ಲ. ಅದೇ ದಾವಂತದಲ್ಲಿ ಕಥೆಗಳನ್ನೂ ರಚಿಸಿದ್ದಾರೆ. ಮೋಸ, ವಂಚನೆಯನ್ನು ಪ್ರೀತಿ, ಸ್ನೇಹದಿಂದ ಗೆಲ್ಲುವ ಇಲ್ಲಿನ ಕಥೆಗಳ ಆಶಯ ಮಾನವೀಯವಾದುದು. ಆದರ್ಶವಾದಿ ನೆಲೆಯಲ್ಲಿ ಇಲ್ಲಿ ಕಥೆಗಳು ಆಕೃತಿ ಪಡೆದಿವೆ. ನಿರಾಳವಾದ ಕಥನ ಕ್ರಮ ಓದಿಸಿಕೊಂಡು ಹೋಗುತ್ತವೆ.
ಕಥೆಗಳ ಜೀವಾಳವೇ ಅನುಭವ. ಅದಿಲ್ಲಿ ಹೇರಳವಾಗಿದೆ, ವೈವಿಧ್ಯಮಯವೂ ಆಗಿದೆ. ಆದರೆ ಕಥೆ ಕಟ್ಟುವ ಕ್ರಮದಲ್ಲಿ ಮತ್ತಷ್ಟು ಕಲಾತ್ಮಕ ಕೌಶಲ್ಯ [...]
Filed under: ಕಥಾ ಸಂಕಲನ | Tagged: ಕವಲುದಾರಿ, ಗಂಗಾಧರಯ್ಯ ಜಾಲಿಬೆಂಚಿ, ವಿವೇಕಶ್ರೀ ಪ್ರಕಾಶನ, ಸುಧಾ | Leave a Comment »
Posted on November 24, 2008 by pusthakapreeethi
ಕೋಟ್ಯಂತರ ಬೆಲೆ ಬಾಳುವ ಕಬ್ಬಿಣದ ಅದಿರು, ದಟ್ಟವಾದ ಕಾಡು, ಫಲವತ್ತಾದ ಜಮೀನನ್ನು ಹೊಂದಿದ ಸೊಂಡೂರು ಪ್ರದೇಶದ ಭೂಹೋರಾಟ ವಿಶಿಷ್ಟವಾದುದು. ಯಾಕೆಂದರೆ ಇದು ಒಬ್ಬ ಭೂಮಾಲಿಕನ ವಿರುದ್ಧ ಮಾತ್ರವಲ್ಲ. ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ ಆಗಿತ್ತು. ಸ್ವತಂತ್ರ ಪ್ರಾಂತ್ಯವಾಗಿದ್ದ ಸೊಂಡೂರು ಬ್ರಿಟೀಷರು ಭಾರತ ಬಿಟ್ಟುಕೊಟ್ಟ ಬಳಿಕ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯವೂ ಹೌದು. ಸೊಂಡೂರು ರಾಜಮನೆತನ ಕಾಂಗ್ರೇಸ್ ಚಳವಳಿಯನ್ನು ನಿಷೇಧಿಸಿತ್ತು. ಮುಂದೆ ಇದೇ ವಂಶದವರು ಅರಸು ಮಂತ್ರಿ ಮಂಡಲದಲ್ಲಿ ದೀರ್ಘಕಾಲ ಅರ್ಥ [...]
Filed under: ದಾಖಲೆ ಸಾಹಿತ್ಯ | Tagged: ಅರುಣ್ ಜೋಳದ ಕೂಡ್ಲಿಗಿ, ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗ, ಸುಧಾ, ಸೊಂಡೂರು ಭೂ ಹೋರಾಟ, ಹಂಪಿ | Leave a Comment »
Posted on November 23, 2008 by pusthakapreeethi
ವಿಶಿಷ್ಟ ಬಗೆಯ 66 ಚಿಕ್ಕ ಪದ್ಯಗಳ ಸಂಕಲನ ಇದು. ಆದರೆ ಇವು ಹನಿಗವಿತೆಗಳಲ್ಲ. ಗಜಲ್ ನಂತಹ ಪದ್ಯಗಳು ಎಂದು ಕವಿಯೇ ಹೇಳಿಕೊಂಡಿದ್ದಾರೆ. ಹನಿಗವಿತೆಗಳಿಂದ ಆರಂಭವಾಗಿ ಗಜಲ್ ನತ್ತ ಬೆಳೆಯುವ ಪದ್ಯಗಳು ಎಂಬ ಕವಿಯ ನಿವೇದನೆಯನ್ನು ಬೆನ್ನುಡಿ ಬರೆದಿರುವ ಮೀರಾ ಸಾಬಿಹಳ್ಳಿ ಶಿವಣ್ಣ ಸಮರ್ಥಿಸಿದ್ದಾರೆ. ಆದ್ದರಿಂದಲೇ ಇವು ಕನ್ನಡ ಕಾವ್ಯ ಪ್ರಪಂಚಕ್ಕೆ ಅಪರೂಪ ಎನಿಸುವ ಹನಿಗವಿತೆ-ಗಜಲ್ ಗಳ ಹದವರಿತ ಮಿಶ್ರಣ.
ನನ್ನ ಕವಿತೆಯ ಸಾಲುಗಳ ಮೇಲೆ ಕೆಂಡ ಸುರಿಸಿದ ಸೂರ್ಯ/ಆಕೆಯ ಕೆನ್ನೆ ಸವರಿ ಗುಲ್ ಮೊಹರ್ ಅರಳಿಸಿದ/ ಆಕೆಯ ದಾವಣಿ [...]
Filed under: ಕಾವ್ಯ-ಕವನ | Tagged: ಅವಳ ಸಾವಿರದ ಚಿತ್ರ, ಟಿ. ಎಸ್. ರಾಜೇಂದ್ರ ಪ್ರ, ಮೇಘ ಪಬ್ಲಿಕೇಷನ್ಸ್, ಸುಧಾ | Leave a Comment »
Posted on November 22, 2008 by pusthakapreeethi
ಅತ್ಯುತ್ತಮ ಮಾನವೀಯ ಮೌಲ್ಯ ವರದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ 1973 ರಿಂದ ಪ್ರತಿ ವರ್ಷ ಕೊಡುತ್ತ ಬಂದಿರುವ ಪಟೇಲ್ ಭೈರಹನುಮಯ್ಯ ಪ್ರಶಸ್ತಿ ಪುರಸ್ಕೃತರ 39 ಲೇಖನಗಳ ಸಂಕಲನ ಇದು. ಇದರಲ್ಲಿ 5 ಇಂಗ್ಲೀಷ್ ಬರಹಗಳೂ ಇವೆ. ಬರದಿಂದ ಬೆಂದು ಬಂದವರ ಬವಣೆ, ಬೆಂಗಳೂರಿನಲ್ಲಿ 10,000 ವೇಶ್ಯೆಯರು (ಈಗ ಈ ಸಂಖ್ಯೆ ಲಕ್ಷ ಮೀರಿರಬೇಕು) ಭೂಮಿ ನಡುಗಿಸುವ ನರಕ, ಮಧ್ಯಮವರ್ಗದ ಮಹಿಳೆ, ಮಲ ಹೊರುವ ಪದ್ದತಿ ಇನ್ನೂ ಜೀವಂತ – ಮುಂತಾದ ಲೇಖನಗಳು ಕರುಳು ಹಿಂಡುವಂತಿದೆ. ತೀರಾ [...]
Filed under: ವೈಚಾರಿಕ ಸಾಹಿತ್ಯ | Tagged: ಮಾನವೀಯ ಮುತ್ತುಗಳು, ಲೀಗಲ್ ಟೈಮ್ ಪಬ್ಲಿಕೇಶ, ಶಾಂತಕುಮಾರಿ, ಸುಧಾ | Leave a Comment »
Posted on November 21, 2008 by pusthakapreeethi
`ದೇವರೆಂಬ ಸುಳ್ಳು‘ ಎಂದೇ ತಮ್ಮ ಗ್ರಂಥಕ್ಕೆ ಶೀರ್ಷಿಕೆ ಕೊಟ್ಟಿರುವ ಸೋಮಯಾಜಿ ಅವರಿಗೆ ಸ್ವತಃ ದೇವರ ಮೇಲೆ ನಂಬಿಕೆ ಇದೆಯಂತೆ! ಆದರೆ ಅವರ ದೇವರು ಬೇರೆಲ್ಲರಿಗಿಂತ ಭಿನ್ನ. ಅದು ಅವರೇ ಸೃಷ್ಟಿಸಿಕೊಂಡ ದೇವರು. ಒಂದು ಆದರ್ಶ ಹಾಗೂ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಬಾಳಪರ್ಯಂತ ಹೆಣಗಬೇಕು. ದೇಹವನ್ನೇ ದೇಗುಲವಾಗಿಸಿಕೊಂಡು ಪ್ರೀತಿ, ಸಹನೆ, ಸೌಹಾರ್ದದಿಂದ ನಮ್ಮ ಗುರಿ ಸಾಧನೆಗೆ ಶ್ರಮಿಸಿದರೆ ಆಗ ನಾವೇ ದೇವರಾಗುತ್ತೇವೆ. `ಅಹಂ ಬ್ರಹ್ಮಾಸ್ಮಿ‘, `ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ…‘ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ದೇವರ [...]
Filed under: ವೈಚಾರಿಕ ಸಾಹಿತ್ಯ | Tagged: ದೇವರೆಂಬ ಸುಳ್ಳು ಧರ್ಮ, ನವ ಕರ್ನಾಟಕ ಪ್ರಕಾಶನ, ಶಾಂತಾರಾಮ ಸೋಮಯಾಜಿ, ಸುಧಾ | Leave a Comment »