Filed under: Uncategorized | Leave a Comment »
ಸಂಧ್ಯಾಮಾಮಿ ಸ್ಟೋರಿ
ಕ್ಲಾಸಿಕ್ ಕತೆಗಳು, ಪ್ರಾಣಿಗಳ ಕತೆಗಳು, ಬುದ್ಧಿವಂತರ ಕತೆಗಳು, ಜಾಣರ ಕತೆಗಳು, ಗಮ್ಮತ್ತಿನ ಕತೆಗಳು ಹೀಗೆ `ಕಲ್ಲುಸಕ್ಕರೆ‘ ಸರಣಿಯಲ್ಲಿ ಐದು ಪುಸ್ತಕಗಳಲ್ಲಿ ಸಂಧ್ಯಾಮಾಮಿ ಮಕ್ಕಳಿಗೆ ಕತೆಯನ್ನು ಹೇಳಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮಕ್ಕಳ ಕತೆಗಳಿಗೆ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಪ್ರಕಟಿಸುವ ಕೆಲಸ ಮಾಡಿದೆ. ಮಕ್ಕಳಿಗೆ ಮುದ ಕೊಡುವ ಚಿತ್ರಗಳಿವೆ. ಒಳಗಿನ ಚಿತ್ರಗಳು ಕಪ್ಪು ಬಿಳುಪು ಎಂಬುದನ್ನು ಬಿಟ್ಟರೆ ಪುಸ್ತಕ ಕಲರ್ ಫುಲ್ಲಾಗಿದೆ. ಕತೆಗಳಲ್ಲಿ ಯಾವುದೇ ವಿಚಾರವಾದ ಇರದ ಕಾರಣ ಮಕ್ಕಳಿಗೆ ಪ್ರಿಯವಾಗುತ್ತದೆ.
`ಸುಖವನ್ನು, ಸಂತೋಷವನ್ನು ಹಂಚಿಕೊಂಡರೆ ನೂರ್ಮಡಿಯಾಗುತ್ತದೆ ಎಂದರು [...]
Filed under: ಮಕ್ಕಳ ಸಾಹಿತ್ಯ | Tagged: ಕಲ್ಲುಸಕ್ಕರೆ - 2 ಸಂಧ್ಯಾಮಾಮಿ ಹೇಳಿದ ಪ್ರಾಣಿಗಳ ಕತೆಗಳು, ಪ್ರಜಾವಾಣಿ, ಸಂಧ್ಯಾಮಾಮಿ, ಸಾಹಿತ್ಯ ಪ್ರಕಾಶನ | Leave a Comment »
ಹಳ್ಳಿ, ಪೇಟೆಯ ನಡುವಣ ಸೇತುವೆ
ಎಲ್.ಸಿ.ಸುಮಿತ್ರಾ ಮಲೆಯ ತಡಿಯಲ್ಲಿ ನೆಲೆಸಿ ಮಲೆನಾಡಿನ ನಾಡನ್ನೂ ಅಲ್ಲಿನ ಕಾಡನ್ನೂ ಅರಿತವರಾಗಿ ಅವುಗಳ ನಡುವೆ ಒಂದು ಬಗೆಯ ಸಮನ್ವಯ ಸಾಧಿಸುವುದನ್ನು ಕೇಂದ್ರಬಿಂದುವಾಗಿಸಿ ಕತೆ ಬರೆದವರು. `ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ‘ ಅವರ ಒಂದು ಕತೆಯಾಗಿದ್ದರೂ ಇಡೀ ಸಂಕಲನದ ಜವಾಬ್ದಾರಿ ಹೊತ್ತುನಿಂತ ಶೀರ್ಷಿಕೆಯದು. `ಎಂತಹ ಕಡು ಬೇಸಿಗೆಯಲ್ಲಾದರೂ ಹಕ್ಕಿಗಳು ಕುಡಿಯುವಷ್ಟಾದರೂ ನೀರಿರುತ್ತದೆ ಎಂದು ಗುಬ್ಬಿಹಳ್ಳಿಯ ಹಳ್ಳಕ್ಕೆ ಬರುತ್ತವೆ. ಅಗತ್ಯ ಮುಗಿದಾಗ ನಗರಕ್ಕೆ ಮುಖಮಾಡುತ್ತವೆ! ಅಂತೆಯೇ ಇಲ್ಲಿನ ಕತೆಗಳ ಪಾತ್ರಗಳೂ.
`ಗುಡಿಯೊಳಗೆ‘ ಕತೆಯ ರಾಮ, ನಿಮ್ನ ಜಾತಿಯವ. ಹೇಗೋ ವಿದ್ಯಾಭ್ಯಾಸ ಪಡೆದು ನಗರ [...]
Filed under: ಕಥಾ ಸಂಕಲನ | Tagged: ಅಂಕಿತ ಪುಸ್ತಕ, ಎಲ್.ಸಿ.ಸುಮಿತ್ರಾ, ಗುಬ್ಬಿಹಳ್ಳದ ಸಾಕ್ಷಿಯ, ಪ್ರಜಾವಾಣಿ | Leave a Comment »
ರೂಪ, ರಸ, ಗಂಧ, ಸ್ಪರ್ಶ, ನಾದಗಳ ಮೂಲಕ ಗ್ರಹಿಸಿದ್ದು ಸಾಹಿತ್ಯವಾಗುತ್ತದೆ
ಮನುಷ್ಯ ಸುತ್ತಲಿನ ಜಗತ್ತನ್ನು, ಬದುಕನ್ನು ಗ್ರಹಿಸುವುದೇ ಪಂಚೇಂದ್ರಿಗಳ ಮೂಲಕ. ರೂಪ, ರಸ, ಗಂಧ, ಸ್ಪರ್ಶ, ನಾದಗಳ ಮೂಲಕ ಗ್ರಹಿಸಿದ್ದು ಸಾಹಿತ್ಯವಾಗುತ್ತದೆ ಎಂಬ ಮೂಲಭೂತ ಗ್ರಹಿಕೆಯನ್ನಿಟ್ಟುಕೊಂಡು ಈ `ಪಂಚಬಳ್ಳಿಯ ಕಥೆಗಳು‘ ಪುಸ್ತಕದಲ್ಲಿ ಐದು ಕಥೆಗಳನ್ನು ಸವಿತಾ ಶ್ರೀನಿವಾಸ್ ಕೊಟ್ಟಿದ್ದಾರೆ.
ಲೇಖಕಿಯೇ ಹೇಳುವಂತೆ ಇಲ್ಲಿನ ಕಥೆಗಳು `ಅಸಾಮಾಜಿಕವೇ‘. ಅವರು ಇಲ್ಲಿ ಫ್ಯಾಂಟಸಿ, ವಿಜ್ಞಾನ, ಮನಶಾಸ್ತ್ರ, ಪೌರಾಣಿಕ ವಿಷಯಗಳನ್ನು ಬಳಸಿದ್ದಾರೆ. ಹಾಗೆ ನೋಡಿದರೆ ಇಲ್ಲಿನ ಕಥೆಗಳು ಬಳಸುವ ಭಾಷೆ ನಾವು ಕೇಳುವ ನಿತ್ಯದ ಕನ್ನಡದಂತಿಲ್ಲ.
ಒಂದು ಉದಾಹರಣೆಯನ್ನು ನೋಡಬಹುದು.
`ಏನು ಪ್ರಿಯವರ, ಸರಿಯಾದ ಸಮಯಕ್ಕೆ [...]
Filed under: ಕಥಾ ಸಂಕಲನ | Tagged: ದಿವ್ಯಚಂದ್ರ ಪ್ರಕಾಶನ, ಪಂಚಬಳ್ಳಿಯ ಕಥೆಗಳು, ಪ್ರಜಾವಾಣಿ, ಸವಿತಾ ಶ್ರೀನಿವಾಸ | Leave a Comment »
ಕಾರ್ನಾಡರ ಕುರಿತ ಎತ್ತರದ ಚರ್ಚೆ
ಸ್ವಾತಂತ್ರ್ಯೋತ್ತರ ಭಾರತದ ಮುಖ್ಯ ನಾಟಕಕಾರರಲ್ಲಿ ಗಿರೀಶ್ ಕಾರ್ನಾಡರು ಪ್ರಮುಖರು. ಅವರ ತುಘಲಕ್ ಮತ್ತು ನಾಗಮಂಡಲ ನಾಟಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿವೆ. ಇಷ್ಟಿದ್ದರೂ ಕನ್ನಡ ವಿಮರ್ಶೆ ಎಲ್ಲೋ ಒಂದು ಕಡೆ ಅವರನ್ನು ನಿರ್ಲಕ್ಷಿಸಿಕೊಂಡು ಬಂದಿದೆ ಎಂಬ ಭಾವ ನನ್ನಂಥವರಲ್ಲಿ ನಿಧಾನವಾಗಿ ಮೂಡುತ್ತಿವೆ. ಇದೀಗ 70 ದಾಟಿರುವ (ಜನನ: ಮೇ 19, 1938) ಅವರ ಎಲ್ಲಾ ಕೃತಿಗಳನ್ನು ಸಮಗ್ರವಾಗಿ ವಿಶ್ಲೇಷಿಸುವ, ಪರಿಚಯಿಸುವ (ಕನಿಷ್ಠ ಅಭಿನಂದನಾ ಗ್ರಂಥ ರೂಪದಲ್ಲಾದರೂ) ಒಂದಾದರೂ ಮಹತ್ವದ ಗ್ರಂಥವೊಂದನ್ನು ನಮಗೆ ಇದುವರೆಗೆ ಹೊರತರಲಾಗಲಿಲ್ಲ. ಸಾಮಾನ್ಯ [...]
Filed under: ಜೀವನ-ಚರಿತ್ರೆ/ಕಥನ | Tagged: ಗಿರೀಶ್ ಕಾರ್ನಾಡ್ ಮತ್, ಡಾ. ಸಿ.ಎನ್.ರಾಮಚಂದ್ರನ್, ಪ್ರಜಾವಾಣಿ, ಸಪ್ನ ಬುಕ್ ಹೌಸ್ | Leave a Comment »
ನಿಮ್ಮ ಕೈಯಲ್ಲಿ
ಡಾ. ವಸುಂಧರಾ ಭೂಪತಿ ಈ ಹೆಸರು ಯಾರು ಕೇಳಿಲ್ಲ?
ವೈದ್ಯಕೀಯ ಲೇಖನಗಳನ್ನು ಓದುವವರು ಖಂಡಿತಾ ಓದಿರುತ್ತಾರೆ. `ಜಗತ್ತಿನ ಅತ್ಯಂತ ದೊಡ್ಡ ಡಾಕ್ಟರ್ ಗಳೆಂದರೆ ಡಾ.ಪಥ್ಯ, ಡಾ. ಶಾಂತಿ, ಡಾ.ಆನಂದ‘ ಎಂದು ಜೊನಾಥನ್ ಸ್ವಿಫ್ಟ್ ಹೇಳಿದ್ದಾನೆಂದು `ನನ್ನ ಮಾತು‘ ಬರೆಯುತ್ತಾರೆ ಭೂಪತಿ.
ಕೆಲವು ಸಾಮಾನ್ಯ ಕಾಯಿಲೆಗಳಿಗೆ ಕಾರಣಗಳು, ಆಹಾರ ಕ್ರಮ, ವೃದ್ಧಾಪ್ಯದ ಸಮಸ್ಯೆಗಳು ಮತ್ತು ಅವುಗಳಿಗೆ ಅನುಸರಿಸಬೇಕಾದ ಕ್ರಮಗಳು ಮುಂತಾದವುಗಳ ಕುರಿತು `ಆರೋಗ್ಯ ಆರೈಕೆ – ನಿಮ್ಮ ಕೈಯಲ್ಲಿ‘ ಪುಸ್ತಕವನ್ನು ಆಯುರ್ವೇದ ಡಾಕ್ಟರ್ ಬರೆದಿದ್ದಾರೆ. `ನಮ್ಮ ಆಹಾರ ಕ್ರಮ ಸರಿಯಾಗಿದ್ದು ಮನದಲ್ಲಿ [...]
Filed under: ವೈದ್ಯಕೀಯ-ಮನಶ್ಯಾಸ್ತ್ | Tagged: ಆರೋಗ್ಯ ಆರೈಕೆ-ನಿಮ್ಮ ಕ, ಕನ್ನಡ ಪ್ರಭ, ಕರ್ನಾಟಕ ವಿಜ್ಞಾನ ಪರಿ, ಡಾ. ವಸುಂಧರಾ ಭೂಪತಿ | Leave a Comment »
ಅಬ್ಬಾಸರ ಜನ್ನತ್
ಅಬ್ಬಾಸರ ಈ ಕಾದಂಬರಿಯಲ್ಲಿ ಹೆಜ್ಜೆಹೆಜ್ಜೆಗೆ ಹಿಂಸೆಯ ಬೀಜಗಳಿವೆ. ಒಂದಿಷ್ಟು ಅವಕಾಶ ಸಿಕ್ಕರೂ ಸಾಕು, ಈ ಬೀಜಗಳು ಮೊಳಕೆಯೊಡೆದು ಎಲ್ಲೆಲ್ಲೂ ಹಿಂಸೆಯ ರುದ್ರನರ್ತನ ಈ ಕಾದಂಬರಿಯ ತುಂಬ ರಂಗುರಂಗಾಗಿ ಕಾಣಿಸಿಬಿಡಬಹುದು. ಆದರೆ ಕಾದಂಬರಿ ಉದ್ದಕ್ಕೂ ಹಿಂಸೆಯನ್ನು ಗೆಲ್ಲಲು ನೋಡುತ್ತದೆ. ಅಬ್ಬಾಸ್ ಅವರ ನಂಬಿಕೆ ಅಹಿಂಸೆಯಲ್ಲಿ, ಪ್ರೀತಿಯಲ್ಲಿ, ಮಾನವತೆಯಲ್ಲಿ, ವ್ಯಕ್ತಿ ಘನತೆಯಲ್ಲಿ, ಮೊಹಲ್ಲಾದ, ಊರಿನ, ದೇಶದ ಹಿತದಲ್ಲಿ‘ ಎಂಬ ಭಾಷಣರೂಪಿ ಮುನ್ನುಡಿ ಬರೆದಿರುವುದು ಜಿ.ಪಿ.ಬಸವರಾಜು.
ಅಬ್ಬಾಸ ಉತ್ತಮ ಕತೆಗಳನ್ನು ಓದಿದವರು ಈ `ಜನ್ನತ್ ಮೊಹಲ್ಲಾ‘ ಪ್ರವೇಶಿಸಲೇಬೇಕು. ಕತೆ ಹೇಳುವ ಶೈಲಿ, ಪಾತ್ರವನ್ನು [...]
Filed under: ಕಾದಂಬರಿ | Tagged: ಅಬ್ಬಾಸ್ ಮೇಲಿನಮನಿ, ಕನ್ನಡ ಪ್ರಭ, ಜನ್ನತ್ ಮೊಹಲ್ಲಾ, ಲಕ್ಷ್ಯ ಪ್ರಕಾಶನ | Leave a Comment »
ಜ್ಞಾಪಕ ಚಿತ್ರ ಶಾಲೆ
ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಉತ್ತರ ಕನ್ನಡದ ಹವ್ಯಕ ಪರಿಸರಕ್ಕೆ ಸಂಬಂಧಿಸಿದ ಕಾದಂಬರಿ `ನಂಬಿಕೆಯ ನೆರಳು‘. ಅಂದಿನ ಜೀವನ ಪದ್ಧತಿ, ಸಂಪ್ರದಾಯದಲ್ಲಿ ಇಂದು ಅನೇಕ ಬದಲಾವಣೆಗಳನ್ನು ಕಾಣಬಹುದಾದರೂ, ಆ ಜನರ ಜೀವನ ಜೀವನಮೌಲ್ಯ, ಶ್ರದ್ಧೆ ಮತ್ತು ನಂಬಿಕೆಗಳು ಇಂದಿಗೂ ಮುಂದುವರೆದಿವೆ. ಡಿ.ವಿ.ಹೆಗಡೆಯವರ ಈ ಕಾದಂಬರಿ ಓದಿದ ನಂತರ ಮನಸ್ಸಿನಲ್ಲಿ ಉಳಿಯುವುದಲ್ಲದೇ ಅನೇಕ ಬಿಂಬಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ.
ಕಾದಂಬರಿಯ ಮುಖ್ಯ ಪಾತ್ರ ರಾಮಣ್ಣನ ಮೂಲಕ ಡಿ.ವಿ.ಹೆಗಡೆಯವರು ಇಡೀ ಉತ್ತರ ಕನ್ನಡದ ಪರಿಸರವನ್ನು ಅತ್ಯಂತ ಸರಳವಾಗಿ ಕಟ್ಟಿಕೊಡುತ್ತಾರೆ. ಅದು ವಿಸ್ತೃತವಾದಂತೆ ಅತ್ಯಂತ [...]
Filed under: ಕಾದಂಬರಿ | Tagged: ಅಕ್ಷಯ ಪ್ರಕಾಶನ, ಕನ್ನಡ ಪ್ರಭ, ಡಿ.ವಿ.ಹೆಗಡೆ, ನಂಬಿಗೆಯ ನೆರಳು | Leave a Comment »
ವಿಜ್ಞಾನದ ಕಾಲದಲ್ಲಿ ತಲೆಗೆ `ಮದ್ದು ಹಾಕುವ ಕೆಲಸ’ ಈ ಚರ್ಚಾಸ್ಪದ ಪುಸ್ತಕ ಮಾಡುತ್ತದೆ!
ವಿಜ್ಞಾನವೆಂಬ ಯಜಮಾನನಿಗೆ ಅರ್ಥಾತ್ ಆಧುನಿಕತೆಯ ಜನತೆಯ ಜ್ಞಾನ ಸೊರಗಿ, ಸೋತುಹೋಯಿತು. ಇಲ್ಲಿಂದಲೇ ಬಡವರ ಸೋಲು ಆರಂಭವಾಯಿತು. ಎಲ್ಲ ಸ್ಥಳೀಯ ಜ್ಞಾನಿಗಳು ಮತ್ತು ಕುಶಲಕರ್ಮಿಗಳು ಕೈಚೆಲ್ಲಿದರು. ಅನೇಕ ಶತಮಾನಗಳ ಜ್ಞಾನ ಅವನತಿಯ ಹಾದಿ ಹಿಡಿಯಿತು. ಇದೇ ಜಾನಪದ; ಜನರ ಜ್ಞಾನವಿಜ್ಞಾನ ಎಂದು ಬೆನ್ನುಡಿಯಲ್ಲಿ ಹೇಳಿದ್ದಾರೆ ಡಾ. ಟಿ.ಗೋವಿಂದರಾಜು ಪುಸ್ತಕ `ಜನಪದ ವೈದ್ಯ‘.
ವಿಜ್ಞಾನದ ಸಾಮಾಜಿಕರಣದ ಕುರಿತು ಮಾತನಾಡುವ ಪುಸ್ತಕವಿದು. ಶತಮಾನಗಳ ನಿರಂತರ ಜ್ಞಾನವನ್ನು ಪ್ರಸ್ತುತ ಸಂದರ್ಭಕ್ಕೆ ತಂದುಕೊಳ್ಳುವ ಪ್ರಯತ್ನವಾಗಿ ಗೋವಿಂದರಾಜುರವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ಕರ್ನಾಟಕ ಜಾನಪದ ವೈದ್ಯ [...]
Filed under: ವೈದ್ಯಕೀಯ-ಮನಶ್ಯಾಸ್ತ್ | Tagged: ಕನ್ನಡ ಪ್ರಭ, ಕನ್ನಡ ಭವನ, ಜನಪದ ವೈದ್ಯ, ಡಾ. ಗೋವಿಂದರಾಜು | Leave a Comment »
ವಸಂತಕುಮಾರ ಸಂಭವ
ನನ್ನ ಪ್ರೀತಿಯ ಕವಿತೆ
ಬೆರೆಸಿ ಆತ್ಮೀಯತೆ
ಹೇಳಿದಳು ಒಂದು ಮುಂಜಾನೆ
ಸಪ್ತಸಾಗರದಾಚೆ ಇದೆ ನನ್ನ ವೀಣೆ
ಹೋಗಿ ತರಲೇನು ಹೊತ್ತು ಮೇನೆ?
ವಸಂತಕುಮಾರ ಪೆರ್ಲರ `ರಂಗಸ್ಥಳ‘ ಕವನ ಸಂಕಲನದ `ನನ್ನ ಪ್ರೀತಿಯ ಕವಿತೆ‘ಯ ಸಾಲುಗಳಿವು. ಇಲ್ಲಿರುವ ಮುಂಜಾನೆ, ಮೇನೆ, ವೀಣೆಗಳೆಲ್ಲ ಕವಿತೆಯನ್ನು ಸಿಂಗರಿಸಿವೆ.
ಭಾವಗೀತೆ, ಗಂಭೀರ ಕವಿತೆ, ಪುರಾಣದ ರೂಪಕ – ಇವೆಲ್ಲ ಈ ಕವಿತೆಗಳಲ್ಲಿವೆ. ಒಂದಷ್ಟು ಹನಿಗವಿತೆಗಳು ಕೊನೆಗಿವೆ. ವೇಣುನಾದದಿ ತೇಲಿಸು, ಸೊದೆಯನೀಂಟಲು ತೋಯಿಸು ಮುಂತಾದ ಅಪರೂಪದ ಸಾಲುಗಳಿವೆ. ಗೋವಿಂದ ಪೈ ಸೈನ್ಯವಿರದ ಗಡಿ ರಾಜ್ಯಗಳ ಗೆದ್ದ ಸೇನಾನಿಯಾಗಿ, ರಥಬೀದಿಯುದ್ದ ತೇರೆಳೆದ ದಳವಾಯಿಯಾಗಿ [...]
Filed under: ಕಾವ್ಯ-ಕವನ, ಜೀವನ-ಚರಿತ್ರೆ/ಕಥನ | Tagged: ಕನ್ನಡ ಪ್ರಭ, ರಂಗಸ್ಥಳ, ವಸಂತ ಕುಮಾರ ಪೆರ್ಲ, ಸ್ವಾಗತ ಸಮಿತಿ 74ನೇ ಅಖಿ | 3 Comments »



