ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ

ಡಾ| ವಿನಯಾ ಅವರು ಈಗಾಗಲೇ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ `ಊರ ಒಳಗಣ ಬಯಲು‘ ಎಂಬ ಅವರ ಈ ಮೊದಲ ಕಥಾ ಸಂಕಲನದಲ್ಲಿ ಹನ್ನೊಂದು ಕತೆಗಳಿವೆ. ಈ ಕತೆಗಳೆಲ್ಲವೂ ಸ್ವಾರಸ್ಯಕರವಾಗಿ ಓದಿಸಿಕೊಳ್ಳುವಂತಿದೆ. ಇಲ್ಲಿನ ಹೆಚ್ಚಿನ ಕತೆಗಳು ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಾಗೂ ಪಟ್ಟಣಗಳ ಜೀವನದ ಗತಕಾಲದ ನೆನಪುಗಳನ್ನು ಆಧರಿಸಿ ನಿರೂಪಿತವಾಗಿರುವ ಈ ಕತೆಗಳಲ್ಲಿ ಪಾತ್ರಗಳ ವ್ಯಕ್ತಿತ್ವ, ಅವುಗಳ ಬದುಕಿನ ಸನ್ನಿವೇಶಗಳನ್ನು ಹಾಗೂ ಅನುಭವಗಳನ್ನು ದಟ್ಟವಾಗಿ ವಿವರಗಳ ಮೂಲಕ ಓದುಗರ ಕಣ್ಣ ಮುಂದೆ ಚಿತ್ರಗಳನ್ನಾಗಿ ಮೂಡಿಸಲಾಗಿದೆ. [...]

ಹೇ ರಾಮ್!!!

ವಿಶ್ವ ದಿಗಂತದಲ್ಲಿ ಗಾಂಧೀಜಿಯದು ಎದ್ದು ಕಾಣಿಸುವಂತಹ ವ್ಯಕ್ತಿತ್ವ. ಈ ವ್ಯಕ್ತಿತ್ವ ಬರೀ ಪಾಂಡಿತ್ಯದಿಂದ ಬಂದುದಲ್ಲ; ಸತ್ಯ ಮತ್ತು ಅಹಿಂಸೆಯ ಅನುಷ್ಟಾನದಿಂದ ಬಂದದ್ದು. ಅವರದು ವಿಶ್ವಮಾನ ದೃಷ್ಟಿ. ಇಡೀ ಮನುಕುಲ ಒಂದು ಪರಿವಾರ. ಅದರ ವಿಕಾಸ, ಅದರ ಉಳಿವಿಗಾಗಿ ಅವರು ಪ್ರಯತ್ನಸಿದರು. ಯಾವುದೇ ಜಾತಿ, ಯಾವುದೇ ಪಂಥ, ಯಾವುದೇ ಪೀಠಕ್ಕೆ ಅವರು ತಮ್ಮನ್ನು ಕಟ್ಟಿ ಹಾಕಿಕೊಳ್ಳಲಿಲ್ಲ. ಅವರದು ತೆರೆದ ಹೃದಯ, ತೆರೆದ ಮನಸ್ಸು. ಯಾವುದೇ ಸಮಾಜ, ರಾಷ್ಟ್ರ ವಿಕಾಸ ಹೊಂದಬೇಕಾದರೆ ಮಾನವೀಯ ಗುಣ ಅತಿ ಮುಖ್ಯ. ಈ ಗುಣದ [...]

ವಸ್ತುನಿಷ್ಟ ವ್ಯಕ್ತಿ ಚಿತ್ರಣ.

ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯವನ್ನು ತಮ್ಮ ವೈವಿಧ್ಯಮಯ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರಲ್ಲಿ ಪಿ.ಲಂಕೇಶ್ ಅವರೂ ಒಬ್ಬರು. ಭಾರತದ ಸಾಹಿತ್ಯ ಅಕಾಡೆಮಿಯು `ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ‘ಯಲ್ಲಿ ಲಂಕೇಶ್ ಅವರ ಸಮಗ್ರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಕುರಿತು ಪ್ರಕಟಿಸಿದ ಪರಿಚಯ ರೂಪದ ಪುಸ್ತಕ ಇದು. ಲಂಕೇಶ್ ಅವರು ಅಧ್ಯಾಪಕರಾಗಿ, ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ ಸುದೀರ್ಘ ಅವಧಿಯಲ್ಲಿ ಅವರ ಒಡನಾಡಿಯಾಗಿದ್ದ ಕೆ.ಮರುಳಸಿದ್ದಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಅತಿ ಪರಿಚಯದಿಂದ ವಸ್ತುನಿಷ್ಠತೆಗೆ ಭಂಗ ಬರಬಹುದೆಂಬ ಆಕ್ಷೇಪಕ್ಕೆ ಆಸ್ಪದವೇ ಇಲ್ಲದಂತೆ [...]

ಶಿಕ್ಷಣದ ಮೂಲಕ ಬದಲಾವಣೆ

ಹೊಸ ಪೀಳಿಗೆಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಕ ವೃತ್ತಿಗೆ ಹೊರತಾದ ವಿಭಿನ್ನ ಕ್ಷೇತ್ರಗಳಲ್ಲಿದ್ದು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡಿರುವ ಯುವಕರ ಬರವಣಿಗೆಗಳನ್ನು ಐದು ವರ್ಷಗಳಿಂದ ಪ್ರಕಟಿಸುತ್ತಿರುವ ಛಂದ ಪುಸ್ತಕ ಹೊರತಂದ ಕೃತಿ ಇದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಹುದ್ದೆಯಲ್ಲಿದ್ದು ಸದ್ಯ ಪೂರ್ವ ಆಫ್ರಿಕಾದ ತಾಂಜಾನಿಯದಲ್ಲಿ ವಾಸವಿರುವ ಪ್ರಶಾಂತ್ ಬೀರೂರು ಚಿಕ್ಕಣ್ಣ ದೇವರು (ಪ್ರಶಾಂತ್ ಬೀಚಿ) ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಮೂಲ ಲೇಖಕ ಹೆನ್ರಿ ಆರ್. ಓಲೆ ಕುಲೆಟ್ ಕೀನ್ಯಾ ದೇಶದ ಜನಪ್ರಿಯ ಕಾದಂಬರಿಕಾರ. ಆಫ್ರಿಕಾದ ಬುಡಕಟ್ಟುಗಳಲ್ಲಿ ಒಂದಾದ [...]

ಸ್ವಾತಂತ್ರ್ಯ ಹೋರಾಟಕ್ಕೆ ಇಳಿದ ಹಲವು ವಾಹಿನಿಗಳ ಸಮ್ಮಿಳಿತ ಪ್ರವಾಹ.

ಒಂದೊಂದು ಯುಗವೂ, ಒಂದೊಂದು ರಾಜಕೀಯ ಶಕ್ತಿಯೂ ತನ್ನ ಇತಿಹಾಸವನ್ನು ಮತ್ತು ತನಗೆ ಸಂಬಂಧ ಪಟ್ಟವರ ಇತಿಹಾಸವನ್ನು ತನ್ನ ರಾಜಕೀಯ ಆಶೋತ್ತರಗಳು, ಉದ್ದೇಶಗಳ ದೃಷ್ಟಿಯಿಂದ ಮರುಪರಿಶೀಲನೆ ಮಾಡುತ್ತದೆ. ಇಂತಹ ಮರುಪರಿಶೀಲನೆ ಮಾನವ ಪ್ರವೃತ್ತಿಗಳಲ್ಲಿ ಒಂದು. ಹಿಂದೆ ಬ್ರಿಟೀಷರು ಭಾರತದ ಇತಿಹಾಸದ ಅಧ್ಯಯನ ಮಾಡಿದುದು ಈ ದೃಷ್ಟಿಯಿಂದಲೇ. ಭಾರತವನ್ನೆಲ್ಲ ತಮ್ಮ ಸಾರ್ವಭೌಮತ್ವಕ್ಕೆ ಒಳಪಡಿಸಿಕೊಳ್ಳುವ ಉದ್ದೇಶದಿಂದ, ಆ ಉದ್ದೇಶಕ್ಕೆ ಅನುಕೂಲವಾಗುವಂತೆ ಅವರು ನಮ್ಮ ಇತಿಹಾಸವನ್ನು ವ್ಯಾಖ್ಯಾನಿಸಿದರು. ಅದರಿಂದ ಅವರು ಕಂಡುದು ಹಿಂದು, ಮುಸಲ್ಮಾನ ಯುಗಗಳು. ಬ್ರಿಟೀಷರಿಗಿಂತ ಮುಂಚೆ ಭಾರತಕ್ಕೆ ದಾಳಿ ಇಟ್ಟ [...]

ಭವಿಷ್ಯದಲ್ಲಿ ಹೆಣ್ಣಿಗೆ `ದ್ರೌಪದಿ’ಯ ಕಷ್ಟ ಬರದಿರಲಿ!!!

`ವರದಕ್ಷಿಣೆ ಎಂಬುದು ಹುಟ್ಟದಿರುವ ಹೆಣ್ಣುಮಗುವಿಗೂ ಕಡುವೈರಿ‘. ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುವ ಜಿಲ್ಲೆಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಮಂಡ್ಯ ಜಿಲ್ಲೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಂಡುಕೊಂಡ ಅಂಶವಿದು ಎಂದು ಪುಸ್ತಕದ ಮುನ್ನುಡಿಯಲ್ಲಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಯ ಡೋನಾ ಫರ್ನಾಂಡೀಸ್ ಹೇಳುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳಿಗೆ ಕಾರಣಗಳೇನು ಎಂಬುದನ್ನು ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳನ್ನು ಈ ಕೃತಿ ವಿವರವಾಗಿ ದಾಖಲಿಸಿದೆ. `ಮಂಡ್ಯದ ಏಳು ತಾಲ್ಲೂಕುಗಳ ನೂರಾರು ಹಳ್ಳಿಗಳಲ್ಲಿ ಎಲ್ಲ ವಯೋಮಾನದ ಜನರೂ [...]

`ಪದ್ಮ ಪಾಣಿ’, `ಕಪಿಲಿಪಿಸಾರ’ ಲೋಕಾರ್ಪಣೆ

ಅಂಕಿತ ಪುಸ್ತಕ:  ಕೆ.ಎನ್.ಗಣೇಶಯ್ಯ ಅವರ `ಕಪಿಲಿಪಿಸಾರ’ ಕಾದಂಬರಿ  ಹಾಗೂ `ಪದ್ಮಪಾಣಿ’ ಕಥಾಸಂಕಲನ ಲೋಕಾರ್ಪಣೆ ಸಮಾರಂಭ. ಅತಿಥಿಗಳು: ನಾಗೇಶ ಹೆಗಡೆ, ನೇಮಿಚಂದ್ರ, ರಮೇಶ್ ಅರವಿಂದ್ ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ. 6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ದಿನಾಂಕ:25-01-2009      ಸಮಯ : ಬೆಳಿಗ್ಗೆ 10:30

ಆಹ್ವಾನ ಪತ್ರಿಕೆ – ಚಿಂತನ ಪುಸ್ತಕ

ಸಂಪರ್ಕಿಸಿ chinthanapusthaka.wordpress.com

ಪುಸ್ತಕ ಬಿಡುಗಡೆಯ – ಚಿತ್ರ-ಕತೆ ಜಗತ್ತಿನ ಸಿನಿಮಾಗಳ ಅವಲೋಕನ

ವಿವರಗಳಿಗಾಗಿ ನೋಡಿ http://chinthanapusthaka.wordpress.com/

ಬೆಸ್ಟ್ ಸೆಲ್ಲರ್ ಕಿತ್ತಳೆ!

`ಅದೃಷ್ಟಕ್ಕೆ ಎಂಬಂತೆ ನಮಗೆ ದಕ್ಕಿದ ಈ `ಕಾಫಿ ನಾಡಿನ ಕಿತ್ತಳೆ‘ಯಲ್ಲಿ ಮಲೆನಾಡಿನ ಬದುಕಿನ ನವರಸಗಳೆಲ್ಲ ಮೇಳವಿಸಿವೆ. ಕವಿ ವಿ.ಜಿ.ಭಟ್ಟರ ಕಲ್ಪನೆಯ ಹತ್ತನೆಯ ರಸ (ಶುಷ್ಕರಸ) ಇಲ್ಲಿ ಲವಲೇಶವೂ ಕಾಣುತ್ತಿಲ್ಲ. ಕೆಲವೆಡೆ ಸಾಕ್ಷ್ಯಚಿತ್ರದಂತೆ, ಕೆಲವೆಡೆ ಕಾಲ್ಪನಿಕ ಕತೆಯಂತೆ, ಇನ್ನು ಕೆಲವೆಡೆ ಹಾಸ್ಯದ ಲಹರಿಯಂತೆ ಈ ಕೃತಿ ಪ್ರತಿ ಪುಟದಲ್ಲೂ ರೂಪ ಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತಾ, ಮಲೆನಾಡಿನ ಮಳೆಗಾಲದ ಹಳ್ಲಗಳಂತೆ ಒಮ್ಮೆ ಧಾವಿಸುತ್ತಾ, ಒಮ್ಮೆ ನಿಧಾನಕ್ಕೆ ಜುಳುಜುಳಿಸುತ್ತ, ಮರುಕ್ಷಣವೇ ಧುಮ್ಮಿಕ್ಕುತ್ತ, ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಹ್ರಸ್ವವಾಗುತ್ತ ಸಾಗುತ್ತದೆ. ಆರ್.ಕೆ.ನಾರಾಯಣರ `ಮಾಲ್ಗುಡಿ ಡೇಯ್ಸ್‘ [...]

Follow

Get every new post delivered to your Inbox.