ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ

ಜಾನಪದ ವಿದ್ವಾಂಸರಾದ ಶಿವಾನಂದ ಗುಬ್ಬಣ್ಣನವರು ಸಂಗ್ರಹಿಸಿದ ಡೊಳ್ಳಿನ ಪದಗಳ ಸಂಗ್ರಹವಿದು. ಉತ್ತರ ಕನರ್ಾಟಕದ ಜನಪದ ಪ್ರಕಾರಗಳಲ್ಲಿ ಡೊಳ್ಳಿನ ಹಾಡಿನ ಹಿನ್ನೆಲೆ, ಸಂದರ್ಭ ಇದೆಲ್ಲದರ ಸಹಿತ ಇಲ್ಲಿ ಕೊಡಲಾಗಿದೆ.
ಮೂಲತಃ ಡೊಳ್ಳಿನ ಹಾಡುಗಳು ಹಾಲುಮತ ಸಂಪ್ರದಾಯಕ್ಕೆ ಸೇರಿದವು. ಬಳಿಕ ಅವು ಶೈವ, ವೈದಿಕ ಸಂಪ್ರದಾಯಗಳನ್ನೂ ಹಾದು ಬಂದಿವೆ. ಇಲ್ಲಿ ಸಂಗ್ರಹಕಾರರು ಕುರುಬರ ಮೂಲ ಅವರ ಪೂರ್ತಿಯಾದ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಕೊಟ್ಟಿದ್ದಾರೆ. ಹೀಗಾಗಿ ಅವು ಹೆಚ್ಚು ಅರ್ಥಪೂರ್ಣ ಎನ್ನಿಸುತ್ತವೆ.
ಇಲ್ಲಿರುವ `ಜಾರತನ‘ ಎಂಬ ಡೊಳ್ಳಿನ ಪದವು ಒಂದು ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ [...]

ಒಂಟಿ ಒಬ್ಬಂಟಿ

ಗಂಡು ವೇಷಧಾರಿಗಳೆಲ್ಲ ಗಂಡಸರಲ್ಲ, ಸೀರೆ ಉಟ್ಟವರೆಲ್ಲ ಹೆಂಗಸರಲ್ಲ, ನಪುಂಸಕರಲ್ಲಿ ಹತ್ತು ಹಲವು ವಿಧದ ನಪುಂಸಕರಿದ್ದಾರೆ ಎನ್ನುವ ಲೇಖಕರು ಮನುಷ್ಯರು ಎಂಬ ಮಾನವ ಕುಲದ ಬದುಕನ್ನು `ಒಬ್ಬ ಒಬ್ಬಂಟಿ‘ ಕಾದಂಬರಿಯನ್ನಾಗಿಸಿದ್ದಾರೆ. ನಪುಂಸಕರು, ಜೋಗಿ ಜೋಗತಿಯರ ಬದುಕಿನ ಸುತ್ತಸಾಗುವ `ಒಂಟಿ ಒಬ್ಬಂಟಿ‘, ಕಾದಂಬರಿ ಎಂದರೆ ಕಾದಂಬರಿಯೇ ಅಲ್ಲ. ಸಂಶೋಧನಾಗ್ರಂಥ ಎಂದರೂ ಸರಿಯೇ. ಆದರೆ ಅದನ್ನು ಲೇಖಕರು ಅಲ್ಲಗಳೆಯುತ್ತಾರೆ. ಜನಪದ ಕಥೆ ಆಧಾರವಾಗಿದ್ದರೂ ಕಥಾವಸ್ತು ಮಾತ್ರ ಸಮಕಾಲೀನ. ಬೈಲಹೊಂಗಲ, ಸವದತ್ತಿಗಳಲ್ಲಿನ ಜೋಗ, ಜೋಗತಿಯರ ನಂಬಿಕೆ, ಆಚರಣೆಗಳ ಪ್ರತೀಕ ಈ ಕಾದಂಬರಿ ಎಂದೇ [...]

ಸದ್ಭಾವ

ಕವಿ ಚೆನ್ನವೀರ ಕಣವಿಯವರ ಮುನ್ನುಡಿ, ಬೆನ್ನುಡಿಗಳನ್ನು ಹಾಗೂ ಕೆಲವು ಹಿರಿಯರು, ಕಿರಿಯರ ಕುರಿತಾದ ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಒಳಗೊಂಡ ಸಂಗ್ರಹ ಇದು. ಈ ಮೊದಲು ಅವರ ಮುನ್ನುಡಿಗಳದೇ ಒಂದು ಸಂಗ್ರಹ `ಶುಭ ನುಡಿಯೆ ಹಕ್ಕಿ‘ ಪ್ರಕಟವಾಗಿತ್ತು.
ಸ.ಸ.ಮಾಳವಾಡ, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಸಾದರ ಮುಂತಾದ ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಲೇಖಕರಿಗೂ ಬೆನ್ನುತಟ್ಟಿ ಅವರು ಮುನ್ನುಡಿಗಳನ್ನು ಬರೆದಿರುವುದನ್ನು ನೋಡಬಹುದು.
ಇಲ್ಲಿ ಕುತೂಹಲಕಾರಿಯಾಗಿರುವುದು ಶೆ.ಗೋ.ಕುಲಕರ್ಣಿಯವರ `ನಾ ಕಂಡ ಗೆಳೆಯರ ಗುಂಪು‘ ಪುಸ್ತಕಕ್ಕೆ ಬರೆದ ಬೆನ್ನುಡಿ. ಈ ಪುಸ್ತಕ ಮೂರು [...]

ಮಡುಗಟ್ಟಿದ ಮಾನವ ಪ್ರೀತಿ

ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ವ್ಯಾವಹಾರಿಕ ಸಂಬಂಧಗಳು ಬಲಗೊಳ್ಳುತ್ತಾ ಭಾವನಾತ್ಮಕ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿರುವುದನ್ನು ತಡೆಯುವುದು ಅನಿವಾರ್ಯವೆಂಬ ಎಚ್ಚರಿಕೆಯನ್ನು ಗುಂಡಣ್ಣ ಕಲಬುರ್ಗಿ `ಎಲ್ಲಿ ಹೋದಳು ಈಕೆ‘ ಕವನ ಸಂಕಲನದಲ್ಲಿ ನೀಡಿದ್ದಾರೆ. ಬೆಳಗು ಜಗದ ಕತ್ತಲನ್ನು ಕರಗಿಸದಿರುವ ಪರಿಣಾಮದಿಂದ ಹಿರಿಯರು ಹೆಜ್ಜೆ ಇಟ್ಟ ಹೆದ್ದಾರಿ ಇಂದು ತಿರುವು ಪಡೆದು ಹಿಂಸಾಮಾರ್ಗಗಳಾಗಿ ಕವಲೊಡೆದು ಬದಲಾಗಿರುವುದಕ್ಕೆ ಕವಿಮನ ತಲ್ಲಣಿಸಿದೆ.
ಧರ್ಮದ ಹುಟ್ಟಿನ ಉದ್ದೇಶ ಭಾವನೆಗಳನ್ನು ಬೆಸೆದು ಆತ್ಮ ಪರಮಾತ್ಮರ ನಡುವಿನ ಅಂತರವನ್ನು ಕಡಿಮೆ ಮಾಡುವುದಕ್ಕಾಗಿ, ಆದರೆ ಪ್ರಸ್ತುತ ಪರಿಸರದಲ್ಲಿ [...]

ಹೆಲ್ತ್ ಕೇರ್

ಆರೋಗ್ಯ ಸಂಬಂಧಿ ಲೇಖನಗಳು ಯಾವತ್ತೂ ಸಕಾಲಿಕವಾದದ್ದರಿಂದ ಅವು ಸಾರ್ವಕಾಲಿಕವೂ! ಹಾಗಂತ ಅನಾರೋಗ್ಯದ ಬಗ್ಗೆ ಆರೋಗ್ಯಕರ ಲೇಖನಗಳನ್ನು ಬರೆಯುವುದು ಸುಲಭವೇನಲ್ಲ. ಸರಳತೆ ಮತ್ತು ಸ್ಪಷ್ಟತೆ ಅಲ್ಲಿ ಬಹಳ ಮುಖ್ಯ. ಇಂತಹ ಪುಸ್ತಕಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ. ಕಾಯಿಲೆಗಳ ಬಗೆಗಿನ ಸಂಶಯ, ಪ್ರಶ್ನೆಗಳನ್ನು ನಿವಾರಿಸಿ ಸಮಾಧಾನ ನೀಡುವಲ್ಲಿ ಇವುಗಳ ಪಾಲು ದೊಡ್ಡದು. ಆರು ಭಾಗಗಳಲ್ಲಿ ಹರಡಿಕೊಂಡಿರುವ ಈ ಪುಸ್ತಕದಲ್ಲಿ ಕಣ್ಣಿನ ನಾನಾ ತೊಂದರೆಗಳ ಬಗ್ಗೆಯೇ ಇಪ್ಪತ್ತು ಲೇಖನಗಳಿವೆ. ಪತ್ರಿಕೆಯಲ್ಲಿ ಆಗಾಗ ಪ್ರಕಟವಾಗಿರುವ ಈ ಲೇಖನಗಳು, ಪುಸ್ತಕದಲ್ಲಿ ಒಟ್ಟಾಗಿ ಒಂದು ತರಹದ [...]

ಕಣ್ಣ ಕಣಿವೆ

ರೇಣುಕಾ ನಿಡಗುಂದಿ ದೆಹಲಿಯಂತಹ ಮಹಾನಗರದಲ್ಲಿ ಕುಳಿತು ಕನ್ನಡ ಕವಿತೆ ಬರೆಯುತ್ತಿರುವವರು. ಆದ್ದರಿಂದ, ಸಹಜವಾಗಿ, ಅವರಿಗೆ ಹೀಗೆನಿಸುತ್ತದೆ; ` … ನಮ್ಮದೆನ್ನುವ ಎಲ್ಲದರಿಂದಲೂ ದೂರವಿರುವ ಹೊರನಾಡಿನಲ್ಲಿ ನಮ್ಮ ನೋವು, ನಲಿವುಗಳನ್ನು ಸಂತೈಸಿಕೊಳ್ಳುತ್ತ, ಹೊರಗಿನ ಆರ್ಭಟ, ರೀತಿ ನೀತಿಗಳಿಗೆ ಒಗ್ಗಿಕೊಳ್ಳುತ್ತ ನಮ್ಮ ಸಾಹಿತ್ಯಾಸಕ್ತಿ ಅಮೂರ್ತವಾದ ಅದೇನನ್ನೋ ಕಂಡುಕೊಳ್ಳುವ ನಿರಾಳ ಮನಸ್ಸಿನ ಚಿಂತನೆಯ ಒಂದು ಅಪೂರ್ವ ಹಂತದಲ್ಲಿ ಕಾವ್ಯ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ’. ಹೀಗೆ ಹುಟ್ಟಿ ಸೂಕ್ಷ್ಮಾಭಿವ್ಯಕ್ತಿಯ ಈ ತುಣುಕು ಗಮನಿಸಿ : ತೋರುತ್ತದೆ ಒಮ್ಮೊಮ್ಮೆ / ವ್ಯಥೆಯೂ ಸಣ್ಣಗೆ / ಕೊರಕಲಿನಲ್ಲಿ [...]

ಕನ್ನಡಿಗರ ಕೈಗೆ `ಜನರ ಚರಿತ್ರೆ’

‘People’s History of India’ ಯೋಜನೆ ಪ್ರೊ. ಇರ್ಫಾನ್ ಹಬಿಬ್ ರ ನೇತೃತ್ವದಲ್ಲಿ ಆರಂಭವಾಗಿ ಈಗಾಗಲೇ ಅದರ ಅಡಿಯಲ್ಲಿ ಆರು ಸಂಪುಟಗಳು ಪ್ರಕಟಗೊಂಡಿವೆ. ಈ ಮಾಲಿಕೆಯ ಮೊದಲ ಕೃತಿ, ಹಬೀಬರೇ ರಚಿಸಿರುವ Pre History ಕನ್ನಡಕ್ಕೆ ಅನುವಾದಗೊಂಡಿದೆ. ಪ್ರದೀಪ್ ಬೆಳಗಲ್ ಅನುವಾದಿತ ಕೃತಿ ‘ ಪೂರ್ವೇತಿಹಾಸ ‘ ವನ್ನು ‘ಚಿಂತನ ಪುಸ್ತಕ‘ ಪ್ರಕಾಶಕರು ಕನ್ನಡದ ಓದುಗರ ಕೈಗಿತ್ತಿದ್ದಾರೆ.
ಪೀಪಲ್ಸ್ ಹಿಸ್ಟರಿ ಸಂಪುಟಗಳು ಹೆಸರೇ ಸೂಚಿಸುವಂತೆ ‘ಜನರ‘ ಚರಿತ್ರೆಯನ್ನು ಹೇಳುವ ಉದ್ದೇಶವನ್ನು ಹೊಂದಿರುತ್ತವೆ. ಹಲವು ದೇಶಗಳಲ್ಲಿ ಆಯಾ ದೇಶದ [...]

ಚೆಲುವಿನ ಚಿತ್ತಾಲ

ಮುಂಬಯಿ ಮತ್ತು ಹನೇಹಳ್ಳಿಗಳ ನಡುವೆ ಸುಳಿವ ಆತ್ಮಗಳನ್ನು ಪಾತ್ರ ಮಾಡುವ ಕತೆಗಾರ ಯಶವಂತ ಚಿತ್ತಾಲ. ಕತೆಗಾರರಾಗಿ ಹೆಸರಾದರೂ ಅವರು ಕತೆಗಳ ಬಗ್ಗೆ ಅತ್ಯುತ್ತಮವಾಗಿ ಮಾತಾಡಬಲ್ಲರು, ಬರೆಯಬಲ್ಲವರು. ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಸಮಾರಂಭವೊಂದಕ್ಕೆ ಬಂದಿದ್ದಾಗ ಅವರು ಮಾಡಿದ ಭಾಷಣವನ್ನು ಸಾಹಿತ್ಯಾಸಕ್ತರು ಮರೆತಿಲ್ಲ.
ಆ ಭಾಷಣದ ಪೂರ್ಣಪಾಠವೂ ಸೇರಿದಂತೆ ಚಿತ್ತಾಲರು ಬರೆದ ಅನೇಕ ಲೇಖನಗಳನ್ನು ಸಂಕಲಿಸಿ, `ಅಂತಃಕರಣ‘ವನ್ನು ಇದೀಗ ಹೊರತರಲಾಗಿದೆ. ಇದರಲ್ಲಿ ಚಿತ್ತಾಲರು ಅನೇಕ ಕಡೆ ಮಾಡಿದ ಭಾಷಣಗಳಿವೆ. `ಓದುವ ಕೋಣೆಯಲ್ಲಿ‘ ವಿಭಾಗದಲ್ಲಿ ಅವರನ್ನು ಪ್ರಭಾವಿಸಿದ ಲೇಖಕರ, ಗೆಳೆಯರ, ನೆಂಟರ [...]

ಹಳ್ಳಿ ಥೇಟರ್ ಎಟ್ ಬೆಳ್ಳೇಕೆರೆ

ರಂಗಭೂಮಿ ಬೆಂಗಳೂರಿನಿಂದ ಆಚೆ ಹೋಗಿಲ್ಲ ಎಂಬ ಭಾವನೆ ಮೂಡುವಂತೆ ಸದ್ಯದ ಸ್ಥಿತಿ ಇದೆ. ಪ್ರಕಟವಾಗುವ ಪತ್ರಿಕಾ ವಿಮಶರ್ೆಗಳಲ್ಲಿ ಬೆಂಗಳೂರಿನ ನಾಟಕಗಳೇ ತುಂಬಿರುತ್ತವೆ. ದೃಶ್ಯ ಮಾಧ್ಯಮಗಳ ಪಾಲಿಗೆ ಥಿಯೇಟರ್ ಅಕ್ಷರಶಃ `ಮೃತ ರಂಗಭೂಮಿ‘. ಬೆಂಗಳೂರಿನ ಹೊರಗೂ ರಂಗಭೂಮಿ ಇದೆ ಎಂದು ಹೇಳಲು ಆದಾರಕ್ಕೆ ನೀನಾಸಂ, ರಂಗಾಯಣಗಳನ್ನಷ್ಟೇ ಹೆಸರಿಸುತ್ತೇವೆ. ಆದರೆ ತಿಪಟೂರು, ಸಾಣೆಹಳ್ಳಿ, ಶಿವಮೊಗ್ಗ, ಉಡುಪಿಗಳಲ್ಲಿ ರಂಗಭೂಮಿಯನ್ನು ಹಲವರು ಹಚ್ಚಿಕೊಂಡು, ಬೆಳೆಸುತ್ತಿದ್ದಾರೆ. ಗ್ರಾಮೀಣ ರಂಗಭೂಮಿ ಇನ್ನೂ ಹೆಚ್ಚು ಹುಲುಸಾಗಿದೆ.
ಈ ನಿಟ್ಟಿನಲ್ಲಿ `ಬೆಳ್ಳೇಕೆರೆ ಹಳ್ಳಿ ಥೇಟರ್‘ ಎಂಬ ಕೃತಿ ಇಲ್ಲಿ ಉಲ್ಲೇಖಾರ್ಹ. [...]

ಕೆ.ಪಿ.ಕವಿತೆ

ಗೆಲ್ಲಲ್ಲಿ ಕೂತ ಮಿಂಚುಳ್ಳಿ
ಪ್ರಾರ್ಥನೆ ಮಾಡುತ್ತಿರುತ್ತದೆ,
ಅದರ ಪ್ರಾರ್ಥನೆ ನನಗೆ ಗೊತ್ತು
ಕೆರೆ ಬತ್ತಬಾರದು,
ಮನುಷ್ಯರು ಮೀನು ತಿನ್ನಬಾರದು.
ಶ್ರೀ
ಬಾವಲಿ ಹಗಲಿಡೀ ತಲೆ ಕೆಳಗಾಗಿ ನೇತಿರುತ್ತದೆ.
ನಾವೂ ಅದರಂತೇ, ಗೆಲ್ಲಲ್ಲಿ ತಲೆಕೆಳಗಾಗಿ ನೇತರೆ
ಹುಲ್ಲು, ಗಿಡ, ನಾಯಿ ಎಲ್ಲ ಬೇರೆ ತರ ಕಾಣಿಸೀತು.
ಇನ್ನೂ ಎತ್ತರದಲ್ಲಿ ನೇತರೆ, ಮನುಷ್ಯರೂ
ಬೇರೆ ತರ ಕಂಡಾರು
ಹೀಗೆ ಶೀರ್ಷಿಕೆ ಇಲ್ಲದೇ ಬರೆಯಲಾದ ಕೆ.ಪಿ.ಸುರೇಶ್ ಕವಿತೆಗಳದು ಒಂದು ವಿಭಿನ್ನ ಪ್ರಯತ್ನ. ಇಲ್ಲಿ ಮನುಷ್ಯರನ್ನು ಅರ್ಥ ಮಾಡಿಕೊಳ್ಳಲು ಕವಿ ಪಶು, ಪಕ್ಷಿ, ಕ್ರಿಮಿ, ಕೀಟಗಳ ಮಾರ್ಗ ಬಳಸಿದ್ದಾರೆ. ಕಪಿ, ಗುಬ್ಬಚ್ಚಿ, ನವಿಲು, ಕೆಂಬೂತ, ಕೊಕ್ಕರೆಗಳನ್ನು, ನಾಯಿ, ಬೆಕ್ಕುಗಳನ್ನು [...]