Posted on March 30, 2009 by pusthakapreeethi
ಕತೆಗಾರ, ಅನುವಾದಕ ಎ.ಎನ್.ಪ್ರಸನ್ನ ನಾಟಕ, ಕಿರುತೆರೆ, ಸಿನಿಮಾರಂಗದಲ್ಲೂ ತಮ್ಮ ಆಸಕ್ತಿ ಹರಿಯಬಿಟ್ಟವರು. ಅವರ `ಚಿತ್ರ-ಕತೆ’ ಪುಸ್ತಕ ಜಾಗತಿಕ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಲ್ಲಿ ಒಂದು.
ಸಿನೆಮಾ ಒಂದು ಭಾಷೆ ಎಂದು ಹೇಳುತ್ತಲೇ ಅದೊಂದು ಕಲಾಪ್ರಕಾರ ಎನ್ನುವ ಲೇಖಕರು ಪುಸ್ತಕದಲ್ಲಿ ಅದನ್ನು ವಿವರಿಸಿದ್ದಾರೆ. ಸಿನೆಮಾ ಭಾಷೆಯ ರೀತಿ ಕೆಲಸ ಮಾಡುತ್ತದೆ. ಅದು ಹಾಗೆ ಕೆಲಸ ಮಾಡುವುದರಿಂದ ಕತೆಯನ್ನು ಪ್ರಸ್ತುತಪಡಿಸುವುದಿಲ್ಲ. ಕತೆಯನ್ನು ಹೇಳುತ್ತದೆ. ಅದರಿಂದಲೇ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದು ಸುಲಭ ಎಂಬುದು ಅವರ ಅಭಿಪ್ರಾಯ. ಅಲ್ಲದೆ ಸಿನಿಮಾವನ್ನು ನೋಡುವುದಕ್ಕಿಂತ ನೋಡದ ಭಾಗದಿಂದಲೇ [...]
Filed under: ವಿಮರ್ಶೆ | Tagged: ಎ.ಎನ್.ಪ್ರಸನ್ನ, ಚಿಂತನ ಪುಸ್ತಕ, ಚಿತ್ರ-ಕತೆ, ಪ್ರಜಾವಾಣಿ | Leave a Comment »
Posted on March 24, 2009 by pusthakapreeethi
ನಮ್ಮ ನಾಡಿನ ಹಿರಿಯ ಮುತ್ಸದ್ದಿ ಸಂಗಾತಿ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ) ಅವರಿಗೆ ಈಗ 90 ವರ್ಷ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಕಾರರಾಗಿ, ರಾಜ್ಯಸಭೆ ಮತ್ತು ಕರ್ನಾಟಕದ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ನಾಯಕರಾಗಿ ಇವರು ಸಲ್ಲಿಸಿರುವ ಸೇವೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಬಿವಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ವೈಚಾರಿಕ ಸಾಹಿತ್ಯ ಸಂಪದ ಹಲವು ಬಾರಿ ಕನ್ನಡ ಸಾಹಿತ್ಯ ಅಕಾಡಮಿಯ ಗೌರವಕ್ಕೆ, ಓದುಗರ ಆದರಕ್ಕೆ ಪಾತ್ರವಾಗಿದ್ದು, [...]
Filed under: ಅಭಿನಂದನ ಗ್ರಂಥ | Tagged: ಎಮ್.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ಕೆ.ಎಸ್.ಪಾರ್ಥಸಾರಥಿ, ನಿರಂತರ, ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ) | Leave a Comment »
Posted on March 20, 2009 by pusthakapreeethi
ಈ ಕವನ ಸಂಕಲನದಲ್ಲಿ 106 ಕವಿತೆಗಳಿವೆ. ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯನ್ನೇ ಬಳಸಿ ಶಿಕ್ಷಣ, ಸಂಸ್ಕಾರ, ಪರಿಸರ, ನೈತಿಕತೆ, ಸಾಮಾಜಿಕ ಕಳಕಳಿ, ಪ್ರೇಮ, ತ್ಯಾಗ ಮುಂತಾದ ಮೌಲ್ಯಗಳನ್ನು ಸಾರುವ ನಿಟ್ಟಿನಲ್ಲಿ ಕವನಗಳನ್ನು ರಚಿಸಿದ್ದಾರೆ. ಕವಿತೆಗಳಲ್ಲಿ ವೈವಿಧ್ಯತೆಯಿದೆ. ಕವಿಗೆ ಸಂಗೀತದ ಲಯದ ಜ್ಞಾನವಿರುವುದರಿಂದ ಇಲ್ಲಿನ ಬಹುಪಾಲು ಕವಿತೆಗಳು ಹಾಡಲು ಯೋಗ್ಯವಾಗಿವೆ. ಕವಿತೆಗಳ ಸಂಯೋಜನೆಯನ್ನು ರಾಗಕ್ಕೆ ಹೊಂದುವಂತೆ ರಚಿಸಲಾಗಿದೆ. ಶೀರ್ಷಿಕೆ: ಸಂಗಾತಿ ಲೇಖಕರು: ಶಂಕರ ಎಸ್. ಲಮಾಣಿ ಪ್ರಕಾಶಕರು: ಶ್ರೀಲಮಾಣಿ ಪ್ರಕಾಶನ ಜಮಖಂಡಿ ಪುಟ: [...]
Filed under: ಕಾವ್ಯ-ಕವನ | Tagged: ಶಂಕರ ಎಸ್. ಲಮಾಣಿ, ಶ್ರೀಲಮಾಣಿ ಪ್ರಕಾಶನ ಜಮಖಂಡಿ, ಸಂಗಾತಿ, ಸಂಯುಕ್ತ ಕರ್ನಾಟಕ | Leave a Comment »
Posted on March 19, 2009 by pusthakapreeethi
ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಲೇಖಕರು ಡಾಕ್ಟರೇಟ್ ಪದವಿಗಾಗಿ ಸಲ್ಲಿಸಿದ ಪ್ರೌಢ ಪ್ರಬಂಧ ಈಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ಇಲ್ಲಿನ ಕೆಲವು ಲೇಖನಗಳು ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜಾಗತೀಕರಣದ ಹಲವು ಮಗ್ಗಲುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಗ್ರಾಮ ಭಾರತದ ಮೇಲೆ ಜಾಗತೀಕರಣದ ಪ್ರಭಾವ ಕುರಿತು ಚರ್ಚಿಸಿದ್ದಾರೆ.
ದೇಶದ ಬೃಹತ್ ಮಾನವ ಸಂಪನ್ಮೂಲವನ್ನು ಶಿಕ್ಷಣ, ಆರೋಗ್ಯ, ನೀಡಿ ಸದುಪಯೋಗಪಡಿಸಿಕೊಂಡರೆ ಮಾತ್ರ ಜಾಗತೀಕರಣದ ಲಾಭ ಭಾರತಕ್ಕೆ ಆಗಬಹುದು. ಈ ಪ್ರಕ್ರಿಯೆಯಲ್ಲಿ ಭಾರತ ಎಚ್ಚರದಿಂದ ಹೆಜ್ಜೆ ಇಡಬೇಕಾಗುವುದು ಎಂದು ಲೇಖಕರು ಅಭಿಪ್ರಾಯ [...]
Filed under: ಪ್ರಬಂಧ ಸಂಕಲನ | Tagged: ಜಾಗತೀಕರಣ ಮತ್ತು ಗ್ರಾಮ ಭಾರತ, ಡಾ.ಎನ್.ಜಗದೀಶಕೊಪ್ಪ, ಸಂಯುಕ್ತ ಕರ್ನಾಟಕ, ಸಿಂಚನ ಗ್ರಂಥಮಾಲೆ ಹಾವೇರಿ | Leave a Comment »
Posted on March 14, 2009 by pusthakapreeethi
ರಾಜ್ಯದ ಸಾಹಿತಿಗಳು, ಕಲಾವಿದರು, ಚಿಂತಕರು ಕೂಡಿ, ನಮ್ಮ ಕಡಲ ನಾಡು, ಮಂಗಳೂರಿನಲ್ಲಿ ಆಯೋಜಿಸಿದ ಸೌಹಾರ್ದ ನಡಿಗೆ, ಸೌಹಾರ್ದ ಸಮಾವೇಶದಲ್ಲಿ ಕೆ.ಎಸ್. ರವಿಕುಮಾರ್ ಅವರ ಬಿ ನೆಗೆಟಿವ್ – ನೋವಿನದೊಂದು ಮೂಟೆ ಪುಸ್ತಕ ಬಿಡುಗಡೆಯಾಗಲಿದೆ.
ರಂಗ ನಿರ್ದೇಶಕರಾದ ಪ್ರಸನ್ನ, ಸಾಹಿತಿಗಳಾದ ರಂಜಾನ್ ದರ್ಗಾ, ಡಾ. ಮೀನಾಕ್ಷಿ ಬಾಳಿ, ಸಮುದಾಯ ಸಂಘಟನೆಯ ಅಧ್ಯಕ್ಷರಾದ ಪ್ರೊಫೆಸರ್ ಆರ್ ಕೆ ಹುಡಗಿ, ಟೀವೀ ಧಾರಾವಾಹಿ ನಿರ್ದೇಶಕರಾದ ಬಿ. ಸುರೇಶ್ ಮುಂತಾದ ವಿವಿಧ ರಂಗದ ದಿಗ್ಗಜರ ಸಮ್ಮುಖದಲ್ಲಿ ಈ ಪುಸ್ತಕ ಇಂದು (14-3-2009) ಸಂಜೆ [...]
Filed under: ಕಥಾ ಸಂಕಲನ | Tagged: ಕೆ.ಎಸ್. ರವಿಕುಮಾರ್, ಚಿಂತನ ಪುಸ್ತಕ, ಬಿ ನೆಗೆಟಿವ್ - ನೋವಿನದೊಂದು ಮೂಟೆ | 3 Comments »
Posted on March 11, 2009 by pusthakapreeethi
ಉತ್ತರ ಕನ್ನಡದ ಎಡ ಪಂಥೀಯ ಚಿಂತಕ, ಸಾಹಿತಿ, ಚಳವಳಿಗಾರ ಆರ್.ವಿ.ಭಂಡಾರಿಯವರ ಕೃತಿಗಳ ಕುರಿತ ಈ ಪುಸ್ತಕ, ಚಳವಳಿಗಳು ಮಾಯವಾಗಿರುವ ಈ ಕಾಲದಲ್ಲಿ ಹಿರಿದಾದ ಒಂದು ಆಶಯ ಹೊಂದಿದೆಯೆಂದೇ ಹೇಳಬೇಕು. ನಾಡಿನ ಸಾಹಿತ್ಯ ಚಿಂತನೆಯ ಮುಖ್ಯ ವಾಹಿನಿಗೆ ಭಂಡಾರಿಯವರ ವಿಚಾರಗಳು ಹರಿದುಬಂದ ಸಮಯವನ್ನು ವಿಮರ್ಶಕ ಕೇಶವ ಶರ್ಮ ಹೀಗೆ ಗುರುತಿಸುತ್ತಾರೆ : `1979ರಲ್ಲಿ ಬಂಡಾಯ ಮತ್ತು ಸಮುದಾಯ ಚಳವಳಿಗಳು ಮುಂಚೂಣಿಗೆ ಬರದೇ ಹೋಗಿದ್ದಲ್ಲಿ ಆರ್.ವಿ. ಯಂಥವರು ಬರೆಯುವ ವಾತಾವರಣ ನಿರ್ಮಾಣವಾಗುತ್ತಿತ್ತೆ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಹೊನ್ನಾವರ ಅರೆ ಅಂಗಡಿಯಂತಹ [...]
Filed under: ಅಭಿನಂದನ ಗ್ರಂಥ | Tagged: ಆರ್.ವಿ.ಭಂಡಾರಿ, ಚಿಂತನ ಪುಸ್ತಕ, ಸಹಯಾನ | Leave a Comment »
Posted on March 10, 2009 by pusthakapreeethi
ಕನ್ನಡದಲ್ಲಿ ವ್ಯಂಗ್ಯಚಿತ್ರಗಳ ಸಂಗ್ರಹಗಳು ಕಡಿಮೆ. ಆದರೆ ಈಗ ಹಿರಿಯ ವ್ಯಂಗ್ಯಚಿತ್ರಕಾರ ಕೆ ಆರ್ ಸ್ವಾಮಿಯವರ ಕಾರ್ಟೂನುಗಳು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿವೆ. ಒಂದಲ್ಲ, ಎರಡು ಪುಸ್ತಕಗಳು. ಮೊದಲ ಪುಸ್ತಕದ ಹೆಸರು `ಬ್ರಹ್ಮಗಂಟು-ನಗೆ ನೂರೆಂಟು‘. ಇಲ್ಲಿನ ವ್ಯಂಗ್ಯಚಿತ್ರಗಳೆಲ್ಲಾ ವೈವಾಹಿಕ ಬದುಕಿನತ್ತ ಬೀರಿದ ನಗೆನೋಟಗಳು. ಹೆಚ್ಚಿನವು ಮದುವೆ ಮಂಟಪದಲ್ಲೇ ನಡೆಯುವ ಮೋಜಿನ ಪ್ರಸಂಗಗಳು. ಉಬ್ಬು ಹಲ್ಲು, ಕಪ್ಪು ಹುಡುಗಿ, ವರದಕ್ಷಿಣೆಯಂಥ ಹಳೆಯ ಸಂಗತಿಗಳಿಂದ ಹಿಡಿದು ವೆಬ್ ಕ್ಯಾಮರಾ ಮುಂದೆ ಕುಳಿತು ನಡೆಸುವ ಮದುವೆಗಳವರೆಗೂ ಇಲ್ಲಿನ ಕಾರ್ಟೂನುಗಳ ವ್ಯಾಪ್ತಿ ಇದೆ. ಸ್ವಾಮಿ [...]
Filed under: ಬಿಡುಗಡೆ | Tagged: ಇಂಡಿಯನ್ ಕಾರ್ಟೂನ್ ಗ್ಯಾಲರಿ, ಕೆ ಆರ್ ಸ್ವಾಮಿ, ವಿಜಯ ಕರ್ನಾಟಕ, ವ್ಯಂಗ್ಯಚಿತ್ರಗಳ ಸಂಗ್ರಹ | 1 Comment »
Posted on March 8, 2009 by pusthakapreeethi
`ಮಾತೆಯರು ಮಾನ್ಯರಾಗಿದ್ದಾಗ‘ ಡಾ. ದೇವಿಪ್ರಸಾದ್ ಚಟ್ಟೋಪಧ್ಯಾಯರ ಪುಟ್ಟ ಅಂತೆಯೇ ವಿಚಾರ ಪ್ರಚೋದಕ ಪುಸ್ತಕ.
ಕೃಷಿಕಾರ್ಯದ ತಿಳುವಳಿಕೆಯಿಂದಲೇ ಎಲ್ಲ ನಾಗರೀಕತೆಗಳು ಉಗಮಗೊಂಡವು. ಈಜಿಪ್ಟ್, ಮೆಸಪಟೋಮಿಯ ಮತ್ತು ಮೊಹೆಂಜೋದಾರೋ – ಈ ಅಪರೂಪದ ಹಾಗೂ ವಿಸ್ಮಯಕರ ನಾಗರೀಕತೆಗಳೆಲ್ಲಾ ನದಿ ದಂಡೆಗಳ ಮೇಲೆಯೇ ಬೆಳೆದವಲ್ಲವೇ? ಕೃಷಿಕಾರ್ಯದ ತಿಳುವಳಿಕೆ ಖಗೋಳ ವಿಜ್ಞಾನದ, ತರುವಾಯ ಇತರ ವಿಜ್ಞಾನಗಳ ಆವಿಷ್ಕಾರಕ್ಕೆ ಕಾರಣವಾಯಿತು.
ಕೃಷಿ ಕೆಲಸದ ಆವಿಷ್ಕಾರವೇ ನಾಗರೀಕತೆಗಳ ಬುನಾದಿ ಎಂಬುದು ಸರಿಯಷ್ಟೆ. ಆದರೆ ಈ ಆವಿಷ್ಕಾರದ ಮೂಲ ಕಾರಣಕರ್ತರು ಯಾರು? ಪುರುಷರೋ? ಸ್ತ್ರೀಯರೋ? ಉತ್ತರ ಕೇಳಿದರೆ ಈಗಿನವರಾದ ನಮಗೆ [...]
Filed under: ಮಹಿಳಾ ಸಾಹಿತ್ಯ | 1 Comment »
Posted on March 4, 2009 by pusthakapreeethi
ಉಮರ್ ಖಯ್ಯಾಮನ ರೂಬಾಯತುಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದರು. ಕೆಲವು ವರುಷಗಳ ಹಿಂದೆ ಶಾ. ಬಾಲೂರಾವ್ ಕೂಡ ಅವನ್ನು ಅನುವಾದಿಸಿದ್ದರು. ಇದೀಗ ಅವು ಜಗದೀಶ್ ಕೊಪ್ಪ ಅನುವಾದದಲ್ಲಿ ಮತ್ತೆ ಕನ್ನಡಕ್ಕೆ ಕಾಲಿಟಿವೆ.
ಖಯ್ಯಾಮ್ ಕವಿತೆಗಳ ಇಂಗ್ಲೀಷ್ ಅನುವಾದಗಳ ಪೈಕಿ ಅತ್ಯುತ್ತಮ ಎಂದು ಕರೆಸಿಕೊಳ್ಳುವುದು ಪಿಟ್ ಜೆರಾಲ್ಡ್ ಅವರ ಭಾಷಾಂತರ. ಡಿ.ವಿ.ಜಿ ಮತ್ತು ಬಾಲೂರಾವ್ ಕೂಡ ಅದನ್ನೇ ಇಟ್ಟುಕೊಂಡು ಕವಿತೆಗಳನ್ನು ಅನುವಾದ ಮಾಡಿದ್ದರು. ಜಗದೀಶ್ ಕೂಡ ಅದನ್ನೇ ಮುಂದಿಟ್ಟುಕೊಂಡಿದ್ದಾರೆ.
There was the Door to which I found no Key;
There [...]
Filed under: ಕಾವ್ಯ-ಕವನ | Tagged: ಉಮರ್ ಖಯ್ಯಾಮನ ಪದ್ಯಗಳು, ಎನ್.ಜಗದೀಶ್ ಕೊಪ್ಪ, ಕನ್ನಡ ಪ್ರಭ, ಲಡಾಯಿ ಪ್ರಕಾಶನ | 2 Comments »
Posted on March 3, 2009 by pusthakapreeethi
ಮನಸೂರೆ
ಮನಸೂರೆ ಹೋಯಿತೋ
ಹೋ ಇದ್ದಕ್ಕಿದ್ದಂತೆ
ಈ ಗೀತೆ ಹಾಡಿದುದು
ಹೊಸ ಸಪ್ನ ಬಿದ್ದಂತೆ
ಅಂತೆ, ಇಂತೆ, ಎನ್ನುತ್ತಾ
ಮನಮೀರಿ ನಾನಿಂತೆ.
ಕಳಚಿ ಬಿದ್ದಿತು ಗೆಳೆಯ
ಜಗದ ಸಂತೆಯ ಚಿಂತೆ
ಮಲ್ಲಿಕಾರ್ಜುನ ಮನ್ಸೂರರ ಗಾಯನ ಕೇಳಿ ಬೇಂದ್ರೆ ಬರೆದ ಸಾಲುಗಳಿವು. ಈ ಗಾನಜೀವನದ ಮಹೋತ್ಸವದ ಗಳಿಗೆಗಳನ್ನು ಕುರಿತು ಮನ್ಸೂರರು 1983ರಲ್ಲೇ ಬರೆದಿದ್ದರು. ಆ ಅನುಭವದ ಸವಿಬುತ್ತಿಗಂಟಿಗೆ `ನನ್ನ ರಸಯಾತ್ರೆ‘ ಎಂದು ಹೆಸರಿಟ್ಟಿದ್ದರು. ಅದೀಗ 25 ವರುಷಗಳ ನಂತರ ಮರುಮುದ್ರಣ ಕಾಣುತ್ತಿದೆ.
ಮನ್ಸೂರರನ್ನು ಈ ಕೃತಿ ಬರೆಯುವಂತೆ ಒತ್ತಾಯಿಸಿದವರು ಅನಕೃ. ಆಮೇಲೆ ಪುಲ ದೇಶಪಾಂಡೆ, ರಮೇಶ ನಾಡಕರ್ಣಿ ಮತ್ತು ಬಿಎ ಸನದಿಯವರು ಬೆನ್ನು [...]
Filed under: ಆತ್ಮ - ಚರಿತ್ರೆ/ಕಥನ | Tagged: ಅಭಿನವ, ನನ್ನ ರಸಯಾತ್ರೆ, ಮಲ್ಲಿಕಾರ್ಜುನ ಮನ್ಸೂರ್ | Leave a Comment »