Posted on April 21, 2009 by pusthakapreeethi
“ಈಗ ನೀನು ಈ ಶಾಲೆಯ ವಿದ್ಯಾರ್ಥಿನಿ” ಎಂದು ಮುಖ್ಯೋಪಧ್ಯಾಯರು ಹೇಳಿದ ಮೇಲೆ ತೊತ್ತೊ-ಚಾನ್ ನಾಳೆ ಬೆಳಗಾಗುವುದನ್ನೇ ಕಾಯ್ದಳು. ಈ ಮೊದಲು ಆಕೆ ಎಂದೂ ಹಾಗೆ ಕಾಯ್ದಿರಲಿಲ್ಲ.
ಪುಟ್ಟ ತೊತ್ತೊ-ಚಾನ್ ತೊಮೊಯೆ ಗಾಕುಯೆನ್ ಶಾಲೆಯ ವಾತಾವರಣ ತಾನು ಹಾಗೂ ತನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಇಷ್ಟವಾಗಬೇಕು ಹಾಗೂ ಸಮವಸ್ತ್ರ ಮತ್ತು ಪಠ್ಯಕ್ರಮಕ್ಕಿಂತ ಮಕ್ಕಳಿಗೆ ಬೇಕಾದ ಸ್ವಾದಿಷ್ಟ ಊಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮುಖ್ಯೋಪದ್ಯಾಯರು ಇರಬೇಕು ಎಂದು ಆಶಿಸಿದ್ದಳು. ಅಲ್ಲಿ ಎಲ್ಲ ಮಕ್ಕಳು ಸಂಗೀತ ಕಲಿಯುತ್ತಿದ್ದರು, ಆಟವಾಡುತ್ತಿದ್ದರು, ಬೇಸಿಗೆಯಲ್ಲಿ ಹೊರಗೆ [...]
Filed under: ಕಾದಂಬರಿ | Tagged: ಕನ್ನಡ ಪ್ರಭ, ತೆತ್ಸುಕೊ ಕುರೋಯಾನಾಗಿ, ತೊತ್ತೊ-ಚಾನ್, ನ್ಯಾಷನಲ್ ಬುಕ್ ಟ್ರಸ್ಟ್, ವಿ.ಗಾಯತ್ರಿ | 3 Comments »
Posted on April 17, 2009 by pusthakapreeethi
ಸರಳ ಭಾಷೆ, ನಿರೂಪಣೆ, ನೇರ ಶೈಲಿಯಿಂದ ಗಮನ ಸೆಳೆಯುವ ಲೇಖಕಿ ವಸುಮತಿ ಉಡುಪ. ಕಾದಂಬರಿ, ಕಥಾಸಂಕಲನ, ಪ್ರಬಂಧ . . . ಹೀಗೆ ಗುರುತಿಸಿಕೊಂಡಿರುವ ವಸುಮತಿ ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಅವರ ಕಥೆಗಳ ಸಂಗ್ರಹ ‘ಸಂಕ್ರಮಣ’ ಈಗ ಹೊರಬಂದಿದೆ. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಈ ಸಂಕಲನದ ಬೆಲೆ ೯೫ ರೂಪಾಯಿ. ೧೭ ಕಥೆಗಳ ಓದಿಗೆ ಇದೇನೂ ಹೆಚ್ಚೆನಿಸುವುದಿಲ್ಲ
ಶೀರ್ಷಿಕೆ: [...]
Filed under: ಕಥಾ ಸಂಕಲನ | Tagged: ಅಂಕಿತ ಪ್ರಕಾಶನ, ವಸುಮತಿ ಉಡುಪ, ಸಂಕ್ರಮಣ | Leave a Comment »
Posted on April 16, 2009 by pusthakapreeethi
1. ಮಾಯಾಲೋಕ (ತೇಜಸ್ವಿ ಕೊನೇ ಕಾದಂಬರಿ): ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ ಮೂಡಿಗೆರೆ, ಬೆಲೆ:ರೂ.೧೯೮/-
2. ಮೇಜರ‍್ ಸಂದೀಪ್ ಹತ್ಯೆ (ಮುಂಬೈ ಮಾರಣ ಹೋಮದ ಕಥೆ) : ರವಿ ಬೆಳಗೆರೆ, ಭಾವನಾ ಪ್ರಕಾಶನ, ಬೆಂಗಳೂರು, ಬೆಲೆ:ರೂ.೧೫೦/-
3. ಹೊಸ ತಲೆಮಾರಿನ ತಲ್ಲಣ : (ಯುವ ಲೇಖಕರ ಅನುಭವ, ಚಿಂತನೆ) ಸಂ:ರಹಮತ್ ತರಿಕೆರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆಲೆ:ರೂ.೮೦/-
4. ಅಂತರಂಗದ ಪಿಸುನುಡಿ (ಕಥಾ ಸಂಕಲನ): ವಸುಮತಿ ಉಡುಪ, ಅಂಕಿತ ಪುಸ್ತಕ, ಬೆಂಗಳೂರು ಬೆಲೆ:ರೂ.೧೨೦/-
5. ಕುಂತಿಯ ಅಂತರಾಳ (ಮಹಾಭಾರತದ ಮತ್ತೊಂದು ನೋಟ): ತಾರಾಮೂರ್ತಿ, [...]
Filed under: ಟಾಪ್ -10 | Tagged: ಅಂಕಿತ ಟಾಪ್ 10, ವಿಜಯ ಕರ್ನಾಟಕ | Leave a Comment »
Posted on April 15, 2009 by pusthakapreeethi
ಈ ಪುಸ್ತಕದಲ್ಲಿ ಸಾಗುವ ದೀರ್ಘ ಸ್ವಗತ (ಸಹಜವಾಗಿಯೇ) ಮಹಾಭಾರತದ ಮುಖ್ಯ ಪಾತ್ರ ಕುಂತಿಯದ್ದು. ಪುಟಗಟ್ಟಲೆ ಇದು ಹರಿಯುತ್ತದೆ ಮತ್ತು ಈಗಾಗಲೇ ಕುಂತಿಯ ಕುರಿತು ಗೊತ್ತಿರುವ (ಇನ್ನಿತರರು ಬರೆದ ಪುಸ್ತಕಗಳಿಂದಾಗಿ) ಹಲವು ಸಂಗತಿ, ಭಾವನೆ, ತಲ್ಲಣ, ಇಬ್ಬಂದಿಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುತ್ತದೆ. ಇದಕ್ಕಾಗಿ ಲೇಖಕಿ ಸಾಕಷ್ಟು ಹೋಮ್ ವರ್ಕ್ ಸಹ ಮಾಡಿದ್ದಾರೆ. ಓದುತ್ತಾ ಓದುತ್ತಾ ನಮಗೆ ಕಾಣಿಸುವ ಅಸಂಬದ್ಧತೆ, ಅಭಾಸ, ತರ್ಕವಲ್ಲದ ತರ್ಕ, ಸೂಕ್ತವೆನಿಸದ ವಿವರಣೆ ಬರೆದಿಟ್ಟುಕೊಂಡರೆ ಮುಂದೊಮ್ಮೆ ನಾವೂ `ಕುಂತಿಯ ಅಂತರಾಳ‘ ಕುರಿತು ಕಿರು ಪುಸ್ತಕ ಬರೆಯಬಹುದು!
ಶೀರ್ಷಿಕೆ: [...]
Filed under: ವೈಚಾರಿಕ ಸಾಹಿತ್ಯ | Tagged: ಕುಂತಿಯ ಅಂತರಾಳ, ತಾರಾ ಮೂರ್ತಿ, ಬಿ.ಎಮ್.ಶ್ರೀ ಪ್ರತಿಷ್ಠಾನ, ವಿಜಯ ಕರ್ನಾಟಕ | Leave a Comment »
Posted on April 14, 2009 by pusthakapreeethi
ಇದು ವಸುಮತಿ ಉಡುಪ ಅವರ ಇತ್ತೀಚಿನ ಕತೆಗಳ ಸಂಕಲನ. ಶುದ್ಧ ಸಾಂಸಾರಿಕ ಕತೆಗಳು ಎನ್ನಬಹುದಾದವು ಇಲ್ಲಿವೆಯಾದೂ ಲೇಖಕಿ ಕಾಲ ದೇಶಕ್ಕೆ ತಕ್ಕಂತೆ ಸಾಂಸಾರಿಕ ಕತೆಗಳ ಹಂದರದಲ್ಲೇ ಹತ್ತು ಹಲವು ಸಮಸ್ಯೆಗಳನ್ನು ಹೆಣೆಯುತ್ತಾರೆ. ಅದು ಅತ್ಯಾಚಾರಕ್ಕೊಳಗಾದ ಮಹಿಳೆಯ ವಿವಾಹ ಕುರಿತಂತೆ ಇರಬಹುದು, ಕಷ್ಟಜೀವಿ ಅಮಾಯಕ ತಮ್ಮನಿಗೆ, ಆತನ ಸುಶಿಕ್ಷಿತ, ಸ್ಫುರದ್ರೂಪಿ, ಚಾಲಾಕಿ ಅಣ್ಣ ಮತ್ತು (ತಮ್ಮನ ಹೆಂಡತಿಯಾಗಿ ಮನೆ ಸೇರುವ) ಆತನ ಪ್ರೇಯಸಿ ಮಾಡುವ ಘೋರ ವಿದ್ರೋಹ ಇರಬಹುದು, ತಾನು ಬಹುವಾಗಿ ಮೆಚ್ಚುವ ಪತಿ, ತನ್ನ ಮಾತು, ಧೋರಣೆಗಳಲ್ಲಿಯಾದರೂ [...]
Filed under: ಕಥಾ ಸಂಕಲನ | Tagged: ಅಂಕಿತ ಪುಸ್ತಕ, ಅಂತರಂಗದ ಪಿಸುನುಡಿ, ವಸುಮತಿ ಉಡುಪ, ವಿಜಯ ಕರ್ನಾಟಕ | Leave a Comment »
Posted on April 3, 2009 by pusthakapreeethi
ಈ ಪುಸ್ತಕ ನಾರಾಯಣ ಮಧ್ಯಸ್ಥ ಅವರ ಅಧ್ಯಯನದ ಫಲವಾಗಿದೆ. ಅವರು ಉತ್ತರ ಕನ್ನಡದ ಹೊನ್ನಾವರದ ಕರ್ಕಿ ಯಕ್ಷಗಾನ ಮೇಳದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಎಂದಿನ ಅಕಡಮಿಕ್ ಅಧ್ಯಯನದ ಕ್ರಮವನ್ನು ಅನುಸರಿಸಿರುವ ಮಧ್ಯಸ್ಥರು ಮೊದಲ ಮೂರು ಅಧ್ಯಾಯಗಳನ್ನು ಅಧ್ಯಯನದ ಉದ್ದೇಶ, ವ್ಯಾಪ್ತಿ, ಯಕ್ಷಗಾನದ ಹಿನ್ನೆಲೆಗೆ ಮೀಸಲಾಗಿರಿಸಿದ್ದಾರೆ.
ಉತ್ತರ ಕನ್ನಡ ತಿಟ್ಟಿನ ಪರಂಪರೆ ಪ್ರಸಂಗ, ಬಣ್ಣಗಾರಿಕೆ, ನೃತ್ಯಾಭಿನಯ, ಮುದ್ರೆಗಳ ಬಳಕೆ, ಹಿಮ್ಮೇಳಗಳ ವಿಶೇಷತೆಯಿಂದಾಗಿ ಪಡುವಲಪಾಯ ಯಕ್ಷಗಾನದಲ್ಲಿ ತನ್ನದೇ ಆದ ಪರಂಪರೆ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದೆ – ಎಂದು ಗುರುತಿಸುತ್ತಾರೆ ಲೇಖಕರು. ಈ [...]
Filed under: ಪ್ರದರ್ಶನ ಕಲೆ | Tagged: ಕರ್ಕಿ ಹಾಸ್ಯಗಾರ ಮೇಳ ಸಂಪ್ರದಾಯ ಮತ್ತು ಪ್ರಯೋಗಶೀಲತೆ, ಡಾ.ನಾರಾಯಣ ಮಧ್ಯಸ್ಥ, ಪ್ರಜಾವಾಣಿ, ಬಂಡಾರ ಪ್ರಕಾಶನ | Leave a Comment »
Posted on April 1, 2009 by pusthakapreeethi
ದಾಮೋದರ ಧರ್ಮಾನಂದ ಕೊಸಾಂಬಿಯವರು ಆಧುನಿಕ ಭಾರತದ ಕೆಲವೇ ಶ್ರೇಷ್ಠ ವಿದ್ವಾಂಸರಲ್ಲಿ ಪ್ರಮುಖರು (1907-1966). ಅವರ ಬರವಣಿಗೆ ವೈಜ್ಞಾನಿಕ, ವಸ್ತುನಿಷ್ಠ ಪರಿಶೀಲನೆಗೆ ಹೆಸರಾಗಿದೆ. ವಿಜ್ಞಾನ, ಪುರಾತತ್ವ ಶಾಸ್ತ್ರ, ಸಾಹಿತ್ಯ, ಭಾಷಾ ಶಾಸ್ತ್ರ, ಸಂಸ್ಕೃತಿ – ಹೀಗೆ ಜ್ಞಾನದ ಹಲವು ಕ್ಷೇತ್ರಗಳಲ್ಲಿ ಆಳವಾದ ಅರಿವನ್ನು ಸಂಪಾದಿಸಿ ಅದನ್ನು ತಮ್ಮ ಅನೇಕ ಲೇಖನಗಳ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಕೊಸಾಂಬಿಯವರ `ದಿ ಕಲ್ಚರ್ ಅಂಡ್ ಸಿವಿಲೈಸೇಷನ್ ಆಫ್ ಏನ್ಶಿಯೆಂಟ್ ಇಂಡಿಯಾ ಇನ್ ಹಿಸ್ಟೋರಿಕಲ್ ಔಟ್ಲೈನ್ ನ `ದಿ ಆರ್ಯನ್’ ಎಂಬ ಅಧ್ಯಾಯದ ಕನ್ನಡಾನುವಾದ ಈ [...]
Filed under: ಐತಿಹಾಸಿಕ, ವೈಚಾರಿಕ ಸಾಹಿತ್ಯ | Tagged: ಆರ್ಯರು, ಡಿ.ಡಿ.ಕೊಸಾಂಬಿ, ಬೆಳ್ಳಿಚುಕ್ಕಿ ಪ್ರಕಾಶನ | 1 Comment »