Posted on June 15, 2009 by pusthakapreeethi
2006ರ ಸಪ್ಟೆಂಬರ‍್ 29ರಂದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಭೋತ್ಮಾಂಗೆ ಮತ್ತವರ ಮಗಳು ಪ್ರಿಯಾಂಕ ಭೋತ್ಮಾಂಗೆಯವರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ ಸತತವಾಗಿ ಅತ್ಯಾಚಾರ ನಡೆಸಿ ಕೊಲ್ಲಲಾಯಿತು. ಸುರೇಖಾರ ಮಕ್ಕಳಾದ ರೋಷನ್ ಮತ್ತು ಸುಧೀರ‍್ ರನ್ನು ಕೊಚ್ಚಿ ಕೊಲ್ಲಲಾಯಿತು. ಈ ಭೀಕರ ಹತ್ಯಾಕಾಂಡದಲ್ಲಿ ಇಡೀ ಹಳ್ಳಿಯೇ ತೊಡಗಿಕೊಂಡಿತ್ತು. ಭೋತ್ಮಾಂಗೆಗಳು ದಲಿತರಾಗಿದ್ದರು. ಭೋತ್ಮಾಂಗೆಗಳನ್ನು ಈಗ ಮರೆತುಬಿಡಲಾಗಿದೆ. ಏಕೆಂದರೆ, ಹೇಗಿದ್ದರೂ ಈ ದೇಶದಲ್ಲಿ ದಿನಕ್ಕೆರಡು ದಲಿತರ ಕೊಲೆಯಾಗುತ್ತಲೇ ಇದೆ.
ಡಾ. ಆನಂದ್ ತೇಲ್ ತುಂಬ್ಡೆಯವರು ಸ್ವಾತಂತ್ರೋತ್ತರ ಭಾರತದ ಅತ್ಯಂತ ಹೀನಾಯ ಜಾತಿ ದೌರ್ಜನ್ಯವೊಂದನ್ನು ಈ [...]
Filed under: ವೈಚಾರಿಕ ಸಾಹಿತ್ಯ | Tagged: ಅರುಂಧತಿ ರಾಯ್, ಆನಂದ್ ತೇಲ್ ತುಂಬ್ಡೆ, ಖೆರ್ಲಾಂಜಿ, ದಿ ಟೆಲಿಗ್ರಾಫ್, ಲಂಕೇಶ್ ಪ್ರಕಾಶನ, ಶಿವಸುಂದರ‍್ | 1 Comment »
Posted on June 8, 2009 by pusthakapreeethi
ಐವರಿಗೆ ಸಾಹಿತ್ಯ ಅಕಾಡೆಮಿ ಗರಿ
ಹಿರಿಯ ಸಾಹಿತಿ ಪ್ರೊ.ಅ.ರಾ.ಮಿತ್ರ ರೊಂದಿಗೆ ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮತ್ತು ಲಕ್ಷ್ಮಣ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2007ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಕಾವ್ಯ ಕಾದಂಬರಿ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಿಂದ 18 ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಬಹುಮಾನಿತ ಕೃತಿಗಳು :
ಕಾವ್ಯ – ಒಡೆಯಲಾರದ ಪ್ರತಿಮೆ – ಬಸವರಾಜ ವಕ್ಕುಂದ
ಕಾದಂಬರಿ – ಯಾದ್ ವಶೀಮ್ – ನೇಮಿಚಂದ್ರ
ಸಣ್ಣಕತೆ – ನನ್ನ ಇನ್ನಷ್ಟು ಕತೆಗಳು – [...]
Filed under: Uncategorized | Tagged: ಕರ್ನಾಟಕ ಸಾಹಿತ್ಯ ಅಕಾ, ಪ್ರಜಾವಾಣಿ, ಯಾದ್ ವಶೀಮ್ | Leave a Comment »
Posted on June 3, 2009 by pusthakapreeethi
‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ
ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’
(ನನ್ನ ಮಗು/ಪು.37)
ಎಂದು ಲಯಬದ್ಧವಾಗಿ ಬರೆಯುವ ಛಾಯಾ ಭಗವತಿಯವರ ಮೊದಲ ಸಂಕಲನವಿದು. ತುಂಬಾ ಪುಟ್ಟ ಕವನ ಸಂಗ್ರಹವಾದ ಇದರಲ್ಲಿ 19 ಕವಿತೆಗಳಿವೆ. ರಮ್ಯವಾದ, ಬಾಲ್ಯವನ್ನು ನೆನಪಿಸುವ ಚಿತ್ರಗಳು ಇದರಲ್ಲಿವೆ. ಹೆಣ್ಣಿನ ಬದುಕಿನ ಹಂತಗಳಾದ ಬಾಲ್ಯ, ಹರೆಯ, ಮದುವೆ, ತಾಯ್ತನ ಇಲ್ಲಿ ಕವಿತೆಗಳಾಗಿವೆ.
ಕೆಲವೆಡೆ ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬರೆಯುವ ಕವಿ ಒಂದು ಸುಂದರ ಚಿತ್ರವನ್ನು ಕಣ್ಣಮುಂದೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಸೀಮಿತ ಅನುಭವದ ಕುರಿತು [...]
Filed under: ಕಾವ್ಯ-ಕವನ | Tagged: ಛಾಯಾ ಭಗವತಿ, ಪುಟಾಣಿ ಕೆಂಪು ಶೂ, ಪ್ರಜಾವಾಣಿ, ಲೋಹಿಯಾ ಪ್ರಕಾಶನ | Leave a Comment »