Posted on July 20, 2009 by pusthakapreeethi
ಡಾ.ಕೆ.ಸರೋಜಾ ಅವರು ಮಹಿಳೆಯರ ಆರೋಗ್ಯ ಕುರಿತಂತೆ ಹಲವಾರು ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಅವರು ಪಡೆದು `ಮಹಿಳಾ ಆರೋಗ್ಯ; ಒಂದು ಮರುಚಿಂತನೆ’ ಎಂಬ ಗ್ರಂಥವನ್ನು ರಚನೆ ಮಾಡಿದ್ದಾರೆ. `ಜೀವನ್ ಭದ್ರಾಣಿ ಪಶ್ಯತಿ’ ಎಂಬ ಹಳೆಯ ಮಾತೊಂದುಂಟು. ಪ್ರತಿಯೊಬ್ಬರೂ ತಮ್ಮ ಸ್ವಾಸ್ಥ್ಯದ ಕಡೆ ಲಕ್ಷ್ಯ ವಹಿಸಬೇಕು. ಒಂದು ಪಕ್ಷ ಲಕ್ಷ್ಯ ವಹಿಸದಿದ್ದರೆ ಜೀವಕ್ಕೆ ಹಾನಿ. ಆ ಹಾನಿಯಿಂದ ಕುಟುಂಬದ ಹಾನಿ. ಹೀಗಾಗಿ, ಇದೊಂದು ಸ್ವಾಸ್ಥ್ಯದ ದುರಂತದಮಾಲೆ ಆದೀತು. ಮಹಿಳೆಯರ ದೇಹ ಮತ್ತು ವಿಶಿಷ್ಟವಾದುದು. [...]
Filed under: ವೈದ್ಯಕೀಯ-ಮನಶ್ಯಾಸ್ತ್ | Tagged: ಡಾ.ಕೆ.ಸರೋಜಾ, ಪ್ರಸಾರಾಂಗ ಕನ್ನಡ ವಿಶ, ಮಹಿಳಾ ಆರೋಗ್ಯ - ಒಂದು ಮರುಚಿಂತನೆ | Leave a Comment »
Posted on July 17, 2009 by pusthakapreeethi
ಸಣ್ಣಕತೆ ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪುಗೊಂಡಿದ್ದರೂ ಕತೆಯನ್ನು ಹೇಳುವ ಪರಂಪರೆ ಹೊಸದೇನೂ ಅಲ್ಲ. ಇಂಗ್ಲೀಷ್ ಸಾಹಿತ್ಯದ ಪರಿಚಯದಿಂದ ಸಣ್ಣಕತೆಯ ಮಾದರಿ ಹುಟ್ಟಿಕೊಂಡಿದೆ ಎಂದು ವಿಮರ್ಶಕರು ಪರಿಭಾವಿಸಿಕೊಂಡು ಬಂದಿದ್ದಾರೆ. ಅಂಥ ಗ್ರಹಿಕೆಯಿಂದ ಇಪ್ಪತ್ತನೆಯ ಶತಮಾನದ ಆರಂಭದಿಂದ ಇದುವರೆಗೆ ಬಂದಿರುವ ಕಥಾ ಸಾಮಾಗ್ರಿಯನ್ನು ನೋಡಲಾಗುತ್ತಿದೆ. ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾ ಲೇಖನಗಳ ಸಂಗ್ರಹ `ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ’ ಇದೇ ಜಾಡಿನಲ್ಲಿ ಸಾಗಿರುವ ಚಿಂತನೆ. ಗಿರಡ್ಡಿ ಗೋವಿಂದರಾಜ `ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾಪರಂಪರೆಯ ಸಹಜ ಬೆಳವಣಿಗೆಯ [...]
Filed under: ವೈಜ್ಞಾನಿಕ ಸಾಹಿತ್ಯ | Tagged: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ, ಗಿರಡ್ಡಿ ಗೋವಿಂದರಾಜ, ಪ್ರಜಾವಾಣಿ, ಸಾಹಿತ್ಯ ಪ್ರಕಾಶನ | Leave a Comment »
Posted on July 15, 2009 by pusthakapreeethi
ಆನಂದ ಋಗ್ವೇದಿಯವರು ಕವಿ, ಕಥೆಗಾರ ಹಾಗೂ ನಾಟಕಕಾರರೂ ಆಗಿದ್ದಾರೆ. ಅವರು ಬರೆದ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಇದು. ಇದು ಕೇವಲ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಮಾತ್ರವಾಗಿಲ್ಲ. ಇಲ್ಲಿ ಕನ್ನಡ ಲೇಖಕರ ಕುರಿತಂತೆ ನುಡಿ ಚಿತ್ರಗಳೂ ಇವೆ. ಈ ಭಾಗದಲ್ಲಿ ಅಕಾಲಿಕ ನಿಧನ ಹೊಂದಿದ ವಿಭಾ ತಿರಕಪಡಿ, ಮುದೇನೂರು ಸಂಗಣ್ಣ, ಚಿ.ಶ್ರೀನಿವಾಸರಾಜು ಅವರ ಕುರಿತ ನುಡಿಚಿತ್ರಗಳು ಆಪ್ತವಾಗಿವೆ. ಇವೆಲ್ಲವೂ ಅವರ ವೈಯಕ್ತಿಕ ಸಂಬಂಧ ಹಾಗೂ ನೆನಪುಗಳಿಂದ ಕಟ್ಟಿದ ನುಡಿಚಿತ್ರಗಳಾಗಿವೆ.
`ಹಾದಿ ಒಂದು’ ಎಂಬ ಭಾಗದಲ್ಲಿ ಹಿ.ಚಿ.ಬೋರಲಿಂಗಯ್ಯ, ಬಾಳಾಸಾಹೇಬ ಲೋಕಾಪುರ, [...]
Filed under: ವಿಮರ್ಶೆ | Tagged: ಆನಂದ ಋಗ್ವೇದಿ, ತಳಮಳದ ಹಾದಿ (ಸಾಹಿತ್ಯ ಅಭ್ಯಾಸಿಯ ವಿಮರ್ಶಾತ್ಮಕ ಟಿಪ್ಪಣಿಗಳು), ಪಲ್ಲವ ಪ್ರಕಾಶನ, ಪ್ರಜಾವಾಣಿ | Leave a Comment »
Posted on July 15, 2009 by pusthakapreeethi
ಪ್ರೊ. ಉಷಾ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ `ಹಸಿವೆಂಬೋ ಮಾಯೆ’ಯಲ್ಲಿನ ನಲವತ್ತಾರು ಕವಿತೆಗಳಲ್ಲಿ ಒಡೆದು ಕಾಣುವುದು ಕವಯತ್ರಿಯ ಸಾಹಿತ್ಯಿಕ ಹಸಿವು. ಹಾಸನದ ಎ.ವಿ.ಕೆ. ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವ ಉಷಾ ಈಗ ನಿವೃತ್ತರು. ವೃತ್ತಿಯಿಂದ ನಿವೃತ್ತರಾಗಿ ಕಾವ್ಯದ ಧ್ಯಾನದಲ್ಲಿ ಮುಳುಗಿರುವ ಅವರ ಕವಿತೆಗಳಲ್ಲಿ ಮಾಗಿದ ಬದುಕು ಪ್ರತಿಫಲಿಸುತ್ತದೆ.
ಪ್ರಾಮಾಣಿಕತೆ ಹಾಗೂ ಸೋಗಿಲ್ಲದ ಜೀವನ ಪ್ರೀತಿ `ಹಸಿವೆಂಬೋ ಮಾಯೆ’ ಸಂಕಲನದಲ್ಲಿ ಎದ್ದು ಕಾಣುವ ಗುಣಗಳು. ಬದಲಾದ ಕಾಲದ ಬಗೆಗಿನ ವಿಷಾದ ಒಡೆದು ಕಾಣುತ್ತದಾದರೂ, ಈ ವಿಷಾದ ಜೀವನ [...]
Filed under: ಕಾವ್ಯ-ಕವನ | Tagged: ಪ್ರಜಾವಾಣಿ, ಪ್ರೊ.ಉಷಾ ಕೃಷ್ಣಮೂರ್ತಿ, ಸಿ.ವಿ.ಜಿ. ಪ್ರಕಾಶನ, ಹಸಿವೆಂಬೊ ಮಾಯೆ | Leave a Comment »
Posted on July 9, 2009 by pusthakapreeethi
ಶೀರ್ಷಿಕೆ:ನೂರೆಂಟು ಸುಭಾಷಿತಗಳು ಲೇಖಕರು:ಮಹಾಬಲ ಸೀತಾಳಭಾವಿ ಪ್ರಕಾಶನ:ಅಂಕಿತ ಪುಸ್ತಕ
ಶೀರ್ಷಿಕೆ:ಆಂಟನ್ ಚೆಕಾಫ್ ಕಥೆಗಳು ಪ್ರಕಾಶನ:ಅಂಕಿತ ಪುಸ್ತಕ
ಶೀರ್ಷಿಕೆ:ಪಟ್ಟದ ಗೊಂಬೆಯೂ ಪರದೇಶವೂ ಲೇಖಕರು:ಶಾಂತಾ ನಾಗರಾಜ್ ಪ್ರಕಾಶಕರು:ಅಂಕಿತ ಪುಸ್ತಕ
ಶೀರ್ಷಿಕೆ:ನನ್ನ ಅಜ್ಜಿಯ ಜಗತ್ತು ಲೇಖಕರು:ರಜನೀ ನರಹಳ್ಳಿ ಪ್ರಕಾಶಕರು:ಸುಮುಖ ಪ್ರಕಾಶನ
ಶೀರ್ಷಿಕೆ:ಘಳಿಗೆಗೊಂದು ಗುಳಿಗೆ ಲೇಖಕರು:ಸಿ.ಎನ್.ಕೃಷ್ಣಮಾಚಾರ‍್ ಪ್ರಕಾಶಕರು:ಸುಮುಖ ಪ್ರಕಾಶನ
ಕೃಪೆ: ಉದಯವಾಣಿ
Filed under: ಬಿಡುಗಡೆ | Tagged: ಅಂಕಿತ ಪುಸ್ತಕ, ಆಂಟನ್ ಚೆಕಾಫ್ ಕಥೆಗಳು, ಉದಯವಾಣಿ, ಘಳಿಗೆಗೊಂದು ಗುಳಿಗೆ, ನನ್ನ ಅಜ್ಜಿಯ ಜಗತ್ತು, ನೂರೆಂಟು ಸುಭಾಷಿತಗಳು, ಪಟ್ಟದ ಗೊಂಬೆಯೂ ಪರದೇಶವೂ, ಮಹಾಬಲ ಸೀತಾಳಭಾವಿ, ರಜನೀ ನರಹಳ್ಳಿ, ಶಾಂತಾ ನಾಗರಾಜ್, ಸಿ.ಎನ್.ಕೃಷ್ಣಮಾಚಾರ‍್, ಸುಮುಖ ಪ್ರಕಾಶನ | Leave a Comment »
Posted on July 4, 2009 by pusthakapreeethi
ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ವಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ.
“……..ದಾರಿದ್ರದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ. ಹಸಿವೆ ಮತ್ತು [...]
Filed under: ಜೀವನ-ಚರಿತ್ರೆ/ಕಥನ | Tagged: ಆರ್ನೆಸ್ಟೋ ಚೆ ಗುವಾರ, ಐ ಲಾವ್ರೆತ್ ಸ್ಕಿ, ಕೆ.ಪಿ.ಸ್ವಾಮಿ, ಗೊ.ರು.ಚನ್ನಬಸಪ್ಪ, ನವಕರ್ನಾಟಕ, ಸೂರ್ಯಕಾಂತ ಸೊನ್ನದ | Leave a Comment »