Posted on September 25, 2009 by pusthakapreeethi
ಕವಿ, ಜಾನಪದ ಸಂಶೋಧಕ ವಿ.ಗ. ನಾಯಕ ಆಗಾಗ ಬರೆದ ತಮ್ಮ ಅಂಕಣ ಬರಹಗಳನ್ನು `ಕರಿಕೆಯ ಕುಡಿ‘ ಯಲ್ಲಿ ಕೊಟ್ಟಿದ್ದಾರೆ. 37 ಕುಡಿಗಳು ಇಲ್ಲಿವೆ. ಉತ್ಸಾಹಿಗಳೂ, ಸೂಕ್ಷ್ಮಮತಿಗಳೂ ಜೊತೆಗೆ ವಿನಯವಂತರೂ ಆದ ಲೇಖಕರು `ಇಲ್ಲಿನ ಬರಹ ಹೆಮ್ಮರವೂ ಅಲ್ಲ, ಮರ, ಗಿಡ, ಹೂ, ಬಳ್ಳಿಗಳ ಸಾಲಿಗೆ ಸೇರುವಂಥದ್ದೂ ಅಲ್ಲ. ಒಂದೊಂದೂ ಕರಿಕೆಯ ಕುಡಿ‘ ಎಂದಿದ್ದಾರೆ. ಕರಿಕೆಯ ಕುಡಿ ದೇವರ ಪೂಜೆಗೆಂದು ಬಳಸುವ ಹುಲ್ಲಿನ ಜಾತಿ. ಅಂದರೆ, ಪುಟ್ಟದಾದರೂ ಅದರ ಮಹತ್ವ ಅದಕ್ಕಿದ್ದೇ ಇದೆ.
ಲೇಖಕರು ಸಾಹಿತ್ಯ, ಸಂಸ್ಕೃತಿ, ವ್ಯಕ್ತಿ, ಜಾತಿ [...]
Filed under: ವೈಚಾರಿಕ ಸಾಹಿತ್ಯ | Tagged: ಕರಿಕೆಯ ಕುಡಿ, ವಿ.ಗ. ನಾಯಕ, ಸ್ಮೃತಿ ಪ್ರಕಾಶನ | Leave a Comment »
Posted on September 23, 2009 by pusthakapreeethi
ಆಂಧ್ರಪ್ರದೇಶದ ಶ್ರೀಕಾಕುಳಂ ಚಿಲ್ಲೆಯ ಮುರಪಾಕದವರಾದ ಕಾಳೀಪಟ್ನಂ ರಾಮಾರಾವ್ ತೆಲುಗಿನ ಪ್ರಸಿದ್ಧ ಕಥಾಲೇಖಕ. `ಕಾ.ರಾ.ಮಾಸ್ಟಾರು‘ ಎಂದೇ ಆಂಧ್ರದ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವ ರಾಮಾರಾವ್ ಈವರೆಗೆ ಬರೆದದ್ದು ಕಡಿಮೆ. ೨೫ ಕಥೆಗಳನ್ನಷ್ಟೇ ಅವರು ಬರೆದಿರುವುದು. `ರಾಗಮಾಯಿ‘, `ಅಭಿಮಾನಾಲು‘ ಅವರ ಕಾದಂಬರಿಗಳು.
ಮಾಕ್ಸ್೯ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಈ ಲೇಖಕ ತಾವು ನೆಲಸಿರುವ ಶ್ರೀಕಾಕುಳಂ ಜಿಲ್ಲೆಯ ಕಥನವನ್ನೇ ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಈ ಲೇಖಕನ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಕಥೆಗಾರ ಚಿದಾನಂದ ಸಾಲಿ.
ಈ ಸಂಕಲನದಲ್ಲೂ ಕಾಳೀಪಟ್ನಂ ರಾಮಾರಾವ್ 25 ಕಥೆಗಳಲ್ಲಿ ಆಯ್ದ ಒಂಬತ್ತು [...]
Filed under: ಕಥಾ ಸಂಕಲನ | Tagged: ಕಾಳೀಪಟ್ನಂ ರಾಮಾರಾವ್, ಚಿದಾನಂದ ಸಾಲಿ, ಯಜ್ಞ, ಸಾಹಿತ್ಯ ಅಕಾಡಮಿ | 2 Comments »
Posted on September 21, 2009 by pusthakapreeethi
ಹಿರಿಯ ವಿದ್ವಾಂಸರಾದ ಎಲ್. ಬಸವರಾಜು ಬರೆದ ತಾತ್ವಿಕ ಚಿಂತನೆಗಳನ್ನು ಇಲ್ಲಿನ ಪುಟ್ಟ ಬರಹಗಳು ಒಳಗೊಂಡಿವೆ. ಸುಮಾರು ೧೭೦ ಬರಹಗಳನ್ನು ಒಳಗೊಂಡಿರುವ ಈ ಪುಸ್ತಕ ಬದುಕು ಹಾಗೂ ಜಗತ್ತಿನ ಕುರಿತಾಗಿ ತಾತ್ವಿಕವಾಗಿ ಚಿಂತಿಸುತ್ತದೆ ಮತ್ತು ಓದಿದವರನ್ನು ಯೋಚನೆಗೆ ಹಚ್ಚುತ್ತದೆ. ಇಲ್ಲೆಲ್ಲ ಎಲ್.ಬಿ. ಅವರ ಅಗಾಧ ಪಾಂಡಿತ್ಯ, ಜೀವನಾನುಭವ ತಿಳಿಜಲದಂತೆ ಪ್ರವಹಿಸುವುದನ್ನು ಕಾಣಬಹುದು.
ಇಲ್ಲಿ ಲೇಖಕರು ಮುಟ್ಟದ ವಿಷಯವೇ ಇಲ್ಲ ಎನ್ನಬಹುದು. ಪ್ರೀತಿಯಿಂದ, ಯೋಗದವರೆಗೆ, ಚಟದಿಂದ ದೇವರ ಬಗ್ಗೆ, ಅಂಬಿಗನಿಂದ ಬುದ್ಧನವರೆಗೆ ಅವರು ಚಿಂತನೆಯ ಒರೆಗೆ ಹಚ್ಚದ ವಿಷಯವೇ ಇಲ್ಲ. ಸಾಮಾನ್ಯ [...]
Filed under: ವೈಚಾರಿಕ ಸಾಹಿತ್ಯ | Tagged: ಕತ್ತಲೆ ರಾಕ್ಷಸರಿಗೆ ಬೆಳಕು, ಡಾ. ಎಲ್. ಬಸವರಾಜು, ತಾತ್ವಿಕ ಚಿಂತನ ಬರಹಗಳು, ರೂಪ ಪ್ರಕಾಶನ | Leave a Comment »
Posted on September 13, 2009 by pusthakapreeethi
‘ಅವಧೇಶ್ವರಿ’, `ಗಂಗವ್ವ ಗಂಗಾಮಾಯಿ’,`ನಟ ನಾರಾಯಣ’ ದಂಥ ಕನ್ನಡದ ಪ್ರಮುಖ ಕಾದಂಬರಿಗಳನ್ನು ಬರೆದ ಶಂಕರ ಮೊಕಾಶಿ ಪುಣೇಕರ ಅನನ್ಯ ಒಳನೋಟಗಳ ವಿಮರ್ಶಕರೂ ಆಗಿದ್ದರು. ಅವರು ಭಾರತೀಯ ಸಂಸ್ಕ್ರತಿಯನ್ನು ಅಭ್ಯಸಿಸಿ ಬರೆದ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು ತಮ್ಮ ವಿಶಿಷ್ಠ ಒಳನೋಟಗಳಿಂದಾಗಿಯೇ ಗಮನ ಸೆಳೆಯುತ್ತವೆ.
ಇಂಥ ಲೇಖಕನ ಲೇಖನಗಳನ್ನು ಒಂದೆಡೆ ತಂದಿದ್ದಾರೆ ಜಿ.ಬಿ.ಹರೀಶ್. ಇದರೊಂದಿಗೆ ಸುಮತೀಂದ್ರ ನಾಡಿಗ್, ಮಲ್ಲೇಪುರಂ ಜಿ. ವೆಂಕಟೇಶ್, ರಹಮತ್ ತರೀಕೆರೆಯವರು ಮಾಡಿದ ಅವರ ವ್ಯಕ್ತಿತ್ವವನ್ನು ಇಡಿಯಾಗಿ ಪ್ರಕಟಿಸುವ [...]
Filed under: ವೈಚಾರಿಕ ಸಾಹಿತ್ಯ | Tagged: ಜಿ.ಬಿ.ಹರೀಶ, ನೀರಬೆಳಗು, ಪ್ರಜಾವಾಣಿ, ಶಂಕರ ಮೊಕಾಶಿ ಪುಣೇಕರ, ಸಪ್ನ ಬುಕ್ ಹೌಸ್ | Leave a Comment »