
ಆಂಧ್ರಪ್ರದೇಶದ ಶ್ರೀಕಾಕುಳಂ ಚಿಲ್ಲೆಯ ಮುರಪಾಕದವರಾದ ಕಾಳೀಪಟ್ನಂ ರಾಮಾರಾವ್ ತೆಲುಗಿನ ಪ್ರಸಿದ್ಧ ಕಥಾಲೇಖಕ. `ಕಾ.ರಾ.ಮಾಸ್ಟಾರು‘ ಎಂದೇ ಆಂಧ್ರದ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವ ರಾಮಾರಾವ್ ಈವರೆಗೆ ಬರೆದದ್ದು ಕಡಿಮೆ. ೨೫ ಕಥೆಗಳನ್ನಷ್ಟೇ ಅವರು ಬರೆದಿರುವುದು. `ರಾಗಮಾಯಿ‘, `ಅಭಿಮಾನಾಲು‘ ಅವರ ಕಾದಂಬರಿಗಳು.
ಮಾಕ್ಸ್೯ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಈ ಲೇಖಕ ತಾವು ನೆಲಸಿರುವ ಶ್ರೀಕಾಕುಳಂ ಜಿಲ್ಲೆಯ ಕಥನವನ್ನೇ ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಈ ಲೇಖಕನ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಕಥೆಗಾರ ಚಿದಾನಂದ ಸಾಲಿ.
ಈ ಸಂಕಲನದಲ್ಲೂ ಕಾಳೀಪಟ್ನಂ ರಾಮಾರಾವ್ 25 ಕಥೆಗಳಲ್ಲಿ ಆಯ್ದ ಒಂಬತ್ತು ಕಥೆಗಳು ಮಾತ್ರ. ಕೊಳ್ಳುವವರಿಗೆ ಭಾರವಾಗುತ್ತದೆ ಎಂಬ ಕಾರಣಕ್ಕೆ ರಾಮಾರಾವ್ ಅವರ ತುಂಬಾ ಜನಕ್ಕೆ ಇಷ್ಟವಾಗಿರುವ ಕಥೆಗಳನ್ನು ಮಾತ್ರ ಸೇರಿಸಿ ಈ ಸಂಕಲನವನ್ನು ಪ್ರಕಟಿಸಿದ್ದಾರೆ.
ಅತ್ಯಂತ ಚಿಕ್ಕ ವಾಕ್ಯಗಳು, ದೀರ್ಘವಾದ ಕಥೆಗಳು, ಚಿಕ್ಕ ತಲೆ ಬರಹ (ಯಜ್ಞ, ಹಿಂಸೆ, ನೋ ರೂಮ್, ನೋವು … ಇತ್ಯಾದಿ( ರಾಮಾರಾವ್ ಅವರ ಕಥೆಗಳ ವಿಶೇಷ ಅಂಶಗಳು. ಅವರ ಸರಳ ನಿರೂಪಣೆಯ ಶೈಲಿಯನ್ನು ಕನ್ನಡ ನುಡಿಗಟ್ಟಿಗೆ ಅನುವಾದಿಸಿದ್ದಾರೆ ಚಿದಾನಂದ ಸಾಲಿ. ಅನುವಾದ ರಾಮರಾವು ಕಥಾಲೋಕವನ್ನು ಅರಿಯಲು ಸಹಾಯವಾಗುವಂತಿದೆ. ಭಿನ್ನವಾದ ಹಾಗೂ ದೀರ್ಘ ಎನಿಸುವ ಈ ಕಥೆಗಳು ಓದುತ್ತಾ ಓದುತ್ತಾ ಮರಳು ಮಾಡುವಷ್ಟು ಶಕ್ತಿಶಾಲಿಯಾಗಿವೆ.
ಕೃಪೆ : ಪ್ರಜಾವಾಣಿ
Filed under: ಕಥಾ ಸಂಕಲನ | Tagged: ಕಾಳೀಪಟ್ನಂ ರಾಮಾರಾವ್, ಚಿದಾನಂದ ಸಾಲಿ, ಯಜ್ಞ, ಸಾಹಿತ್ಯ ಅಕಾಡಮಿ




ಆಂಧ್ರದ ಕಥಾ ಸಾಹಿತ್ಯ
ಜಗತ್ತಿನಲ್ಲಿ ಉತ್ತಮ ಕೃಷಿ ಮಾಡಿ
ಹೆಸರಾದ ಕಾಳೀಪಟ್ನಂ ರಾಮಾರಾವ್
ಅವರ ಕಥೆಗಳನ್ನು ಕನ್ನಡಕ್ಕೆ ತಂದ
ಕಥೆಗಾರರಾದ ಚಿದಾನಂದ ಸಾಲಿ ಅವರ
ಹಾಗೂ ಪುಸ್ತಕ ಪರಿಚಯಿಸಿದ
ಪುಸ್ತಕ ಪ್ರೀತಿಯ
ಕಾರ್ಯ ಶ್ಲಾಘನೀಯ….
-ಗವಿಸಿದ್ಧ ಹೊಸಮನಿ
ಧನ್ಯವಾದಗಳು