ಸರಳ ಸುಲಭ ರಚನೆಯ ಕವನಗಳು

ಸುಮಾರು 97 ಕವಿತೆಗಳನ್ನು ತಮ್ಮ ಕವನ ಸಂಗ್ರಹ `ಸ್ವಗತ‘ ದಲ್ಲಿ ನೀಡಿದ್ದಾರೆ ಎಸ್. ಪ್ರಸಾದಸ್ವಾಮಿ. ಸರಳವಾಗಿ ಬರೆಯುವುದನ್ನು ತಮ್ಮ ಉದ್ದೇಶವನ್ನಾಗಿ ಉಳ್ಳ ಕವಿ ಸರಳ ಸುಲಭ ರಚನೆಗಳನ್ನು ಇಲ್ಲಿ ನೀಡಿದ್ದಾರೆ.
`ಒಲುಮೆ ಗಿಲುಮೆಯ ಮಾತು ಅಲ್ಲಿರಲಿ ಈಗನೀ ಹೆಣ್ಣು ನಾ ಗಂಡು ಅಷ್ಟೆ ಸಾಕು‘(
ನಲ್ಲೆಗೆ/ ೨೧) ಎಂದು ಬರೆದಿರುವುದು ಅವರ ಸರಳವಾಗಿ ಕವಿತೆಗಳನ್ನು ಹೇಳುವುದಕ್ಕೆ ಉದಾಹರಣೆಯಾಗಬಹುದು.`

ಕಾವ್ಯದ ಲಯದಲ್ಲಿ ನೀವು ತುಂಬ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ., ಅಡಿಗ, ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು [...]

ಅಪರಾಧ, ಪೊಲೀಸರು ಹಾಗೂ ಕಾನೂನಿನ ಅರಿವು ಉಂಟುಮಾಡಬಹುದಾದ ಪುಸ್ತಕ

ಇಡೀ ಜಗತ್ತು ಆತಂಕವಾದದ ಬಿಸಿಯನ್ನು ಅನುಭವಿಸುತ್ತಿದೆ. ಅದರ ರೂಪಗಳು ಹಲವು. ಅವುಗಳ ಮೂಲ ಆಸಕ್ತಿ ಮಾತ್ರ ಜನರಿಗೆ ತೊಂದರೆ ಉಂಟು ಮಾಡುವುದೇ ಆಗಿದೆ. ಆತಂಕವಾದ ಹಾಗೂ ಅಪರಾಧ ಜಗತ್ತಿನ ಪರಿಚಯವನ್ನು ಹಿರಿಯ ಪೊಲೀಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಇಲ್ಲಿ ಮಾಡಿಕೊಟ್ಟಿದ್ದಾರೆ.
ಅಪರಾಧ ಹಾಗೂ ಅಪರಾಧಿಗಳ ವೈಭವೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಗುರುಪ್ರಸಾದ್ ಕನ್ನಡದಲ್ಲಿ ಜನರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಅದರ ಎಲ್ಲ ವಿವರಗಳೊಂದಿಗೆ ನೀಡಿದ್ದಾರೆ. ಇದರಲ್ಲಿ ಮುಂಬೈ ಮೇಲಿನ ದಾಳಿ, ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ‍್ ಅಪರಾಧ, ವಂಚಕರು, ನಕ್ಸಲರ ಕುರಿತಂತೆ ಇಲ್ಲಿ [...]

ಪುಸ್ತಕ ಹಬ್ಬದಲ್ಲಿ ನಮ್ಮ ಸ್ಟಾಲ್ – 254 ಪುಸ್ತಕ ಪ್ರೀತಿ

ಪುಸ್ತಕ ಹಬ್ಬ

ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭವಾಗುವ ಪುಸ್ತಕೋತ್ಸವದಲ್ಲಿ 340 ಕ್ಕೂ ಹೆಚ್ಚು ಮಳಿಗೆಗಳಿವೆ. ಲಕ್ಷಾಂತರ ಪುಸ್ತಕಗಳಿವೆ. ಇದೊಂದು ಜ್ಞಾನ ಭಂಡಾರ.
ಪುಸ್ತಕ ಪ್ರಿಯರು ಕಾತರದಿಂದ ನಿರೀಕ್ಷಿಸುವ ಬೆಂಗಳೂರು ಪುಸ್ತಕ ಹಬ್ಬ ಶುಕ್ರವಾರ 06-11-2009 ದಿಂದ ಹತ್ತು ದಿನ ಕಾಲ ಅರಮನೆ ಮೈದಾನದಲ್ಲಿ ನಡೆಯಲಿದೆ.
ಏಷ್ಯಾದ ಎರಡನೇ ಅತಿ ದೊಡ್ಡ ಪುಸ್ತಕೋತ್ಸವ ಎನ್ನುವುದು ಇದರ ಹೆಗ್ಗಳಿಕೆ. ಈ ಬಾರಿಯದು ಏಳನೇ ವರ್ಷದ ಪುಸ್ತಕೋತ್ಸವ.
ಮೂರು ಲಕ್ಷಕ್ಕೂ ಅಧಿಕ ಮಂದಿ ಪುಸ್ತಕ ಪ್ರೇಮಿಗಳು ಭೇಟಿ ಸಂಘಟಕರ ಅಂದಾಜು. ಈ ಕಾರಣದಿಂದಾಗಿಯೇ ದೇಶದ ಪ್ರಮುಖ ಪ್ರಕಾಶಕರು ತಮ್ಮ [...]

ವಿಮೋಚನೆಯ ಸಮರದ ಅನುಭವ ಮತ್ತು ನೆನಪು

 ತಮ್ಮ ಹದಿನಾಲ್ಕನೆಯ ವಯಸ್ಸಿಗೇ ಬ್ರಿಟೀಷರ ವಿರುದ್ಧ ಪ್ರತಿಭಟಿಸುವ ಮನೋಭಾವವನ್ನು ಗಟ್ಟಿಗೊಳಿಸಿಕೊಂಡು ಮುಂದಡಿ ಇಟ್ಟ ಮೇಜರ‍್ ಜೈಪಾಲ್ ಸಿಂಗ್ ರವರ ನೆನಪುಗಳನ್ನು ಮಂಡಿಸುವ ಪುಸ್ತಕ `ವಿಮೋಚನೆಯ ಸಮರದಲ್ಲಿ’. ಜೈಪಾಲ್ ಸಿಂಗ್ ರವರು ಉತ್ತರ ಪ್ರದೇಶದವರು. ಅಲ್ಲಿಯ ಮುಜಾಪುರ‍್ ನಗರ ಜಿಲ್ಲೆಯ ಒಂದು ಹಳ್ಳಿಯ ಬಡ ಜಾಟ್ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜೈಪಾಲ್ ಸಿಂಗ್, ಜಾಟ್ ಜನಾಂಗದ ಹುಮ್ಮಸ್ಸು, ಎದೆಗಾರಿಕೆ, ಆಕ್ರೋಶ, ಮೈಕಟ್ಟನ್ನು ಹಾಗೇ ಸ್ವಾಭಿಮಾನವನ್ನು ಪ್ರತಿಬಿಂಬಿಸುವಂತಿದ್ದರು. ಅವರು ಬೆಳೆಯುತ್ತಾ ಬಂದಂತೆ ಆಗಿನ ದಿನಗಳಲ್ಲಿ ಬ್ರಿಟೀಷರನ್ನು ಬಗ್ಗು ಬಡಿಯಲು [...]