ಪಿಸುಮಾತಿನ ಗಟ್ಟಿತನ

  ನೀಲಾ ಅವರು ವಾರಪತ್ರಿಕೆಯೊಂದಕ್ಕಾಗಿ ಬರೆದ ಅಂಕಣ ಬರಹಗಳ ಸಂಕಲನವಿದು. ಇದು ನೀಲಾರ ಮೂರನೇ ಕೃತಿ. ಕಾಮ್ರೇಡ್ ನೀಲಾ ಸಂಘಟನಾಕಾರ್ತಿಯಾಗಿ, ಹೋರಾಟಗಾರ್ತಿಯಾಗಿ ಜನರ ಮಧ್ಯೆ ಓಡಾಡಿದ ಹೆಜ್ಜೆ ಗುರುತುಗಳು ಈ ಕೃತಿಯಲ್ಲಿ ನಿಚ್ಚಳವಾಗಿ ಗೋಚರಿಸುತ್ತವೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದವರ ಬದುಕು ಬವಣೆ, ವಿಶೇಷವಾಗಿ ಬದುಕಿನಲ್ಲಿ ನೊಂದು, ಬೆಂದ ಮಹಿಳೆಯರ ಬದುಕು ನೀಲಾರ ಹೆಚ್ಚಿನ ಅಂಕಣದ ವಸ್ತು. ಹಳ್ಳಿಗಳಲ್ಲಿ ಇಂದಿಗೂ ಇರುವ ಯಾಜಮಾನ್ಯ ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆ, ಎಲ್ಲೆಡೆ ಕಂಡುಬರುವ ಲಿಂಗ ತಾರತಮ್ಯ, ಕೋಮುವಾದಿ-ಮೂಲಭೂತವಾದಿತ್ವ [...]

ಆನಂದ ತೇಲ್ ತುಂಬ್ಡೆ ಅವರಿಂದ ಪುಸ್ತಕ ಬಿಡುಗಡೆ

ಕೃಪೆ : ವಾರ್ತಾ ಭಾರತಿ

ನೀ ಹೋದ ಮರುದಿನ ಮೊದಲ್ಹಂಗೆ ನಮ್ಮ ಬದುಕು ಆಗ್ಯಾದೋ ಬಾಬಾ ಸಾಹೇಬ ಅಂಬೇಡ್ಕರ‍್

ಶೀರ್ಷಿಕೆ : ಅಂಬೇಡ್ಕರೋತ್ತರ ದಲಿತ ಸಂಘರ್ಷ ದಾರಿ-ದಿಕ್ಕು ಲೇಖಕರು : ಆನಂದ್ ತೇಲ್ ತುಂಬ್ಡೆ ಅನುವಾದಕರು : ರಾಹು ಪ್ರಕಾಶಕರು : ಚಿಂತನ ಪುಸ್ತಕ ಪುಟಗಳು: 176 ಬೆಲೆ: ರೂ.120/-

ಛಾಯಾಗ್ರಾಹಕ ಜಂಬುಕೇಶ್ವರ ಅಭಿನಂದನ ಗ್ರಂಥ

ಕರ್ನಾಟಕದ ಛಾಯಾಗ್ರಾಹಕರಾದ ಎಸ್. ಎಂ. ಜಂಬುಕೇಶ್ವರ ಅವರ ಕುರಿತಂತೆ ಹೊರತರಲಾದ ಅಭಿನಂದನ ಗ್ರಂಥವಿದು. ಛಾಯಾಗ್ರಹಣ ಮಾತ್ರವಲ್ಲ ಜಂಬುಕೇಶ್ವರ ಕಲಾವಿದರೂ ಕೂಡಾ. ಅವರು ಜಲವರ್ಣ, ತೈಲವರ್ಣದಲ್ಲಿ ಚಿತ್ರಗಳನ್ನು ಬಿಡಿಸುವುದರ ಮೂಲಕ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ, ಬಹುಮುಖ್ಯವಾಗಿ ಅವರನ್ನು ಗುರುತಿಸುವುದು ಛಾಯಾಗ್ರಾಹಕರೆಂದೇ. ಈ ಅಭಿನಂದನ ಗ್ರಂಥದ ಮುಖ್ಯ ಅಂಶ ಜಂಬುಕೇಶ್ವರ ಅವರು ತಮ್ಮ ಬದುಕಿನ ಕುರಿತಂತೆ ವಿವರಗಳನ್ನು ಕೊಡುತ್ತದೆ. ಇದರ ಮುಂದುವರಿಕೆಯಾಗಿ ಅವರ ಪತ್ನಿ, ಮಗ, ಗೆಳೆಯರು, ಆತ್ಮೀಯರು ಬರೆದಿದ್ದಾರೆ. ಇದಲ್ಲದೆ ಜಂಬುಕೇಶ್ವರ ಅವರು ತೆಗೆದ ಅಪರೂಪದ ಛಾಯಾಚಿತ್ರಗಳು [...]

Follow

Get every new post delivered to your Inbox.