ಕನ್ನಡನಾಡು ಪ್ರಾರಂಭದಿಂದಲೇ ಸಂಸ್ಕೃತಿ ಮತ್ತು ರಾಜಕೀಯದ ಹೆಜ್ಜೆ ಮೂಡಿಸಿ ಬೆಳೆದುಬಂದಿದೆ. ಆ ಚರಿತ್ರೆಯನ್ನು ಕುರಿತ ಆಹ್ವಾನಿತ ಬರಹಗಳ ಸಂಪಾದಿತ ಕೃತಿ ಇದು. ವಿವಿಧ ಲೇಖಕರು ತಮ್ಮ ಅಪಾರವಾದ ಓದಿನ ಫಲವಾಗಿ ಕನ್ನಡದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವಂತೆ ವಿಷಯ ನಿರೂಪಣೆ ಮಾಡಿದ್ದಾರೆ. ಹೆಚ್ಚಿನ ಲೇಖಕರೆಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗ ಮತ್ತು ಚರಿತ್ರೆಯ ವಿಭಾಗಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದು ಈ ಬೃಹತ್ ಕೃತಿಯನ್ನು ರೂಪಿಸಲು ನೆರವಾಗಿದ್ದಾರೆ. ಹಾಗಾಗಿ ಈ ಲೇಖನಗಳಿಗೆ ಹೆಚ್ಚಿನ ಮೌಲ್ಯವಿದೆ. ಕನ್ನಡನಾಡಿನ ನೆಲ-ಜಲ ಆಡಳಿತಕ್ಕೆ ಇಷ್ಟೊಂದು ವಿಶಾಲ ವ್ಯಾಪ್ತಿ ಇರುವುದು [...]
Filed under: ಐತಿಹಾಸಿಕ | Tagged: ಕನ್ನಡದೊಳ್ ಭಾವಿಸಿದ ಜನಪದಂ, ವಸು ಎಂ ವಿ., ಹೊಸತು ಮಾಸ ಪತ್ರಿಕೆ | Leave a Comment »



