ನವಕರ್ನಾಟಕಕ್ಕೆ ಚಿನ್ನದ ಹಬ್ಬದ ಶುಭಾಶಯಗಳು

ಪುಸ್ತಕಗಳು ಸಾಯುವುದಿಲ್ಲ, ಉಸಿರಾಡುತ್ತವೆ ಸಂದರ್ಶನ : ಸಂದೀಪ ನಾಯಕ `ನವಕರ್ನಾಟಕ ಪ್ರಕಾಶನ’ ತನ್ನ ಐದು ದಶಕಗಳ ಪುಸ್ತಕ ಪ್ರಕಟಣೆಯಲ್ಲಿ ತಲೆಮಾರುಗಳ ಓದುವ ರುಚಿಯನ್ನು ಹೆಚ್ಚಿಸಿದೆ. ಕನ್ನಡದಲ್ಲಿ ಚಿಂತನೆ ಮಾಡುವುದನ್ನು ಯುವತಲೆಮಾರಿಗೆ ಕಲಿಸಿದೆ. ಕೇವಲ ಪುಸ್ತಕ ಪ್ರಕಟಣೆ ಮೂಲಕ ಸಾಧ್ಯವಾದ ಅಸಾಮಾನ್ಯ ಸಂಗತಿ ಇದು. ಕನ್ನಡದ ಈ ವಿಶಿಷ್ಟ ಪ್ರಕಾಶನದ ಒಂದು ಹೊರಳು ನೋಟ… ಕನ್ನಡ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಲ್ಲಿ ತನ್ನದೇ ಆದ ಅಚ್ಚನ್ನು ಓದುಗರ ಮನದಲ್ಲಿ ಮೂಡಿಸಿರುವ ನವಕರ್ನಾಟಕ ಪ್ರಕಾಶನಕ್ಕೆ ಈಗ ಐವತ್ತರ ಹರೆಯ. 1960ರಲ್ಲಿ ಆರಂಭವಾದ [...]

ಬೋಳುವಾರು ಮಹಮದ್ ಕುಞ್ಞಿ ಅವರಿಗೆ ಅಭಿನಂದನೆಗಳು

ಬೆಂಗಳೂರು : ಆಗಸ್ಟ ೨೨ : ಹೆಸರಾಂತ ಕನ್ನಡ ಲೇಖಕರಾದ ಬೋಳುವಾರು ಮಹಮದ್ ಕುಞ್ಞಿ ಅವರನ್ನು ೨೦೧೦ ನೇ ವರ್ಷದ ಪ್ರತಿಷ್ಟಿತ `ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ’ ಗಾಗಿ ಅವರ ಪುಸ್ತಕ “ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ” ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಪ್ರಧಾನ ಸಮಾರಂಭ ದೆಹಲಿಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ. ಪ್ರತಿಕ್ರಿಯೆ “ಭಾರತ ಉನ್ನತ ಪ್ರಶಸ್ತಿಯಾದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಾಗಿ ನನ್ನನ್ನು ಆಯ್ಕೆ ಮಾಡಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಈ ಪ್ರಶಸ್ತಿ ಹಲವು [...]

ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ

ಏನನ್ನು ಓದಬೇಕು ಎಂದು ನಿಗದಿ ಮಾಡುವಾಗ ಕೆಲಮೊಮ್ಮೆ ಗೊತ್ತಿದ್ದೂ ಮತ್ತೆ ಕೆಲವೊಮ್ಮೆ ಗೊತ್ತಿಲ್ಲದೆಯೂ ಯಜಮಾನಿಕೆಯ ನೆಲೆಗಳು ತಮ್ಮ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತಿರುತ್ತವೆ. ಕಲಿಯುವವರು, ಮೊದಲಿನಂತೆ ತಲೆಮಾರುಗಳಿಂದ ಕಲಿಕೆ ಮತ್ತು ತಿಳಿವಿನ ಹಕ್ಕುಗಳನ್ನು ಪಡೆದುಕೊಂಡವರಷ್ಟೇ ಆಗಿಲ್ಲ. ಈಗ ಹಲವು ಮೂಲೆ ಮುಡುಕುಗಳಿಂದ ಮಕ್ಕಳು ಕಲಿಯುವ ವಲಯಕ್ಕೆ ಬರುತ್ತಿದ್ದಾರೆ. ಆದರೆ ಅವರು ಏನನ್ನು ಕಲಿಯಬೇಕೆಂದು ಹೇಳುವವರು ಮಾತ್ರ ಈ ಬದಲಾವಣೆಗೆ ತಾವು ಸಜ್ಜುಗೊಳ್ಳಬೇಕೆಂದು ತಿಳಿದಿಲ್ಲ. ಇದು ತಿಳಿವಿನ ಕೊರತೆಯೆಂದು ಹೇಳಲಾಗದು. ಬೇಕೆಂತಲೇ ಕಲಿಕೆಯಲ್ಲಿ ನಡೆಯಬೇಕಿದ್ದ ಬದಲಾವಣೆಗಳನ್ನು ಹತ್ತಿಕ್ಕುವುದು ಮತ್ತು ತಾರತಮ್ಯಗಳನ್ನು ಮುಂದುವರೆಸುವುದು [...]

ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?!

ಇವಳು `ತುಂಗಾ’ ಅಲ್ಲ ಗಾಯತ್ರಿ. . . ಜಪಾನಿನ ಟೆಲಿವಿಷನ್ ಕ್ಷೇತ್ರದ ದೊಡ್ಡ ಹೆಸರು ತೆತ್ಸುಕೋ ಕುರೋಯಾನಾಗಿ. `ಸರಿಯಾದ’ ಶಾಲೆ ಪಡೆಯಲು ಆಕೆ (ಆಕೆಯ ತಾಯಿ) ಪಟ್ಟ ಬವಣೆಯೇ `ತೊತ್ತೋಚಾನ್’ ಕಾದಂಬರಿಯಾಗಿ ಮೂಡಿ ಬಂದಿದೆ. ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೃತಿ ಇದು. ಈ ಕೃತಿಯನ್ನು ಕನ್ನಡಕ್ಕೆ ತಂದದ್ದು ವಿ. ಗಾಯತ್ರಿ. ಈಗ ಅದೇ `ತೊತ್ತೋಚಾನ್’ ನಿಂದ ಪ್ರೇರಣೆ ಪಡೆದ, ಅದೇ ಎಳೆ ಹೊಂದಿರುವ `ತುಂಗಾ’ವನ್ನು ನಮ್ಮೆದುರು ಇಡುತ್ತಿದ್ದಾರೆ. ಒಂದು ಘಟ್ಟದವರೆಗೆ ಆತ್ಮ ಕಥಾನಕ ಎನಿಸುವ ಈ [...]

ಆರ್.ಐ.ಎನ್. ಹೋರಾಟದ ಧೀರ ಯೋಧರಿಗೆ ನಮ್ಮ ಕೃತಜ್ಞತಾಪೂರ್ವಕ ಶ್ರದ್ಧಾಂಜಲಿಗಳು.

ಸರ್ವ ಸಾಧಾರಣವಾಗಿ 1757 ರ ಪ್ಲಾಸಿ ಕದನದೊಂದಿಗೆ ಭಾರತದಲ್ಲಿ ಬ್ರಿಟಿಷ್ ಆಧಿಪತ್ಯವು ಭದ್ರವಾಗಿ ನೆಲೆ ಊರಿತೆನ್ನಲಾಗುತ್ತದೆ. ನೂರು ವರ್ಷಗಳಲ್ಲಿ ಎಲ್ಲ ಪ್ರತಿರೋಧಗಳನ್ನು ಧಮನಿಸಿ ಬ್ರಿಟಿಷ್ ಆಧಿಪತ್ಯ ಭದ್ರವಾಗಿ ತಳವೂರಿತು. ಆದರೆ ನಮ್ಮ ಸ್ವಾತಂತ್ರ್ಯಾಭಿಮಾನಿ ಜನರು ಬ್ರಿಟಿಷರ ವಿರುದ್ಧ ಹೊರಾಟವನ್ನು ಬೇರೆ ಬೇರೆ ಕಡೆ, ಬೇರೆ ಬೇರೆ ರೂಪಗಳಲ್ಲಿ ನಿರಂತರವಾಗಿ ನಡೆಸುತ್ತಲೇ ಬಂದರು. ಅಹಿಂಸಾ ಹೋರಾಟದಿಂದ ನಾವು ಸ್ವಾತಂತ್ರ್ಯ ಗಳಿಸಿದ್ದೇವೆ ಎನ್ನುವುದು ಪೂರ್ಣ ಸತ್ಯವಲ್ಲ. ನಾಯಕತ್ವದ ಅಹಿಂಸೆಗೆ ಮಣಿಯುವಂತೆ ತೋರಿಸುತ್ತಲಿದ್ದರೂ ಎಂದೂ ಬ್ರಿಟಿಷ್ ಆಡಳಿತ ಜನಸಾಮಾನ್ಯರ ರಕ್ತ ಹರಿಸುವುದನ್ನು [...]

ಜ್ಯೋತಿಬಸು ಅಧಿಕೃತ ಜೀವನ ಚರಿತ್ರೆ

ಜ್ಯೋತಿಬಸು ಕೂಡಾ ರಾತ್ರೋರಾತ್ರಿ ರಾಜಕೀಯ ಶಿಖರಕ್ಕೇರಿಲ್ಲ. ಈ ಎತ್ತರದ ಸ್ಥಾನ ಅವರಿಗೆ ಲಭಿಸಿರುವುದರ ಹಿಂದೆ ಅತುಲ ತ್ಯಾಗವಿದೆ; ಸಹನೆ ಸಂಕಟಗಳ ಪರಂಪರೆಯಿದೆ; ರಾಜಕೀಯ ಚತುರತೆಯಿದೆ; ತಾತ್ವಿಕ ಬದ್ಧತೆಯಿದೆ; ಜನತೆಯ ಬಗ್ಗೆ ಅಪಾರ ಪ್ರೀತಿ, ವಿಶ್ವಾಸವಿದೆ. ಎಲ್ಲಕ್ಕೂ ಮಿಗಿಲಾಗಿ, ವಾಸ್ತವದ ಸಮಸ್ಯೆಗಳ ಸಂಕೀರ್ಣತೆಯನ್ನು ಅರಿತು ಅದಕ್ಕನುಗುಣವಾಗಿ ಸೈದ್ಧಾಂತಿಕ ನಿಲುವುಗಳನ್ನು ಅನ್ವಯಿಸಿ ಆಚರಿಸುವ ಔಚಿತ್ಯ ಪ್ರಜ್ಞೆಯಿದೆ; ಸಂಘಟನಾ ನಿಪುಣತೆಯಿದೆ. ಅವರೊಬ್ಬ ಅಚಲ ನಿರ್ಧಾರದ ಮನುಷ್ಯ. ಶ್ಲಾಘನೀಯ ನಮ್ರತೆ, ಜಿದ್ದಿನ ಜಿಗುಟುತನ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿವೆ. ಯಾರ ಮೇಲೂ ದಬ್ಬಾಳಿಕೆ [...]

Follow

Get every new post delivered to your Inbox.