ಗ್ರಾಮೀಣ ಬದುಕಿನ ಆಳ-ವಿಸ್ತಾರ ಹೊಂದಿರುವ ಕತೆಗಳು

ದ.ರಾ. ಬೇಂದ್ರೆ ಕಾವ್ಯ ಪುರಸ್ಕಾರ ಗಳಿಸಿದ ಕವನ ಸಂಕಲನ `ಕನಸು ಮಾರುವ ಹುಡುಗಿ’ ಕಥಾಸಂಕಲನಗಳಾದ `ಮೂಕ ಹಕ್ಕಿ ನಕ್ಕಾಗ’, `ಬಾರಪ್ಪಾ ಬಾರೋ ಮಳೆರಾಯ’ ಹಾಗೂ ಕಾದಂಬರಿ `ಸಪ್ನ ಗೆಜ್ಜೆ’ ಗಳ ಮೂಲಕ ಈಗಾಗಲೇ ಸಾರಸ್ವತ ಲೋಕದಲ್ಲಿ ಯುವ ಬರಹಗಾರರಾಗಿ ಗುರುತಿಸಿಕೊಂಡು ಗಟ್ಟಿ ಹೆಜ್ಜೆಯನ್ನಿಟ್ಟಿರುವ ವೈ.ಎಸ್.ಹರಗಿಯವರ ಈ ಮೂರನೇ ಕಥಾಸಂಕಲನ `ದೇವ್ರು ಬರ್ತಾನೆ ದಾರಿಬಿಡಿ’. ಸಣ್ಣ ಕತೆಗಳ ಲಕ್ಷಣ ಏನೆಲ್ಲಾ ಒಳಗೊಂಡ ಇಲ್ಲಿಯ ಕಥೆಗಳು ಗ್ರಾಮೀಣ ಬದುಕಿನ ಆಳ-ವಿಸ್ತಾರವನ್ನು ಕಂಡು, ಉಂಡು ಅನುಭವದ ರಸಘಟ್ಟಿಯಾಗಿ ಹುಟ್ಟಿಕೊಂಡಿವೆ. ಇದರಿಂದಾಗಿಯೇ ಈ [...]

ವಸ್ತು ನಿಷ್ಟ ನಿಲುವಿನ ಬರವಣಿಗೆ

ಶೀರ್ಷಿಕೆ: ಹಳ್ಳ ಬಂತು ಹಳ್ಳ       ಲೇಖಕರು:ಶ್ರೀನಿವಾಸ ವೈದ್ಯ     ಪ್ರಕಾಶಕರು:ಮನೋಹರ ಗ್ರಂಥಮಾಲಾ ಪುಟಗಳು:281  ಬೆಲೆ:ರೂ.200/- ಕೃಪೆ: ದೇಶ ಕಾಲ ವಿಶೇಷ

ಮೈಸೂರು ದಸರ! ಎಷ್ಟೊಂದು ಸುಂದರ!!!

ಈ ಪುಸ್ತಕದಲ್ಲಿ ವಿಜಯನಗರದಿಂದ ಮೈಸೂರಿನ ಒಡೆಯರು ದಸರಾವನ್ನು ಹೇಗೆ ಮುಂದುವರಿಸಿಕೊಂಡು ಬಂದರು. ರಾಜ್ಯದ ಇತರೆಡೆಗಳಲ್ಲಿ ಎಲ್ಲೆಲ್ಲಿ ದಸರಾ ಆಚರಣೆಯಿದೆ. ಮೈಸೂರಿನ ಸುತ್ತಮುತ್ತಲಿನ ಪ್ರಸಿದ್ಧ ಪ್ರದೇಶಗಳಾವುವು, ಮೈಸೂರು ಒಡೆಯರ ಸಾಧನೆ, ಆಳ್ವಿಕೆ, ಮೈಸೂರು ಅರಮನೆ, ಚಿನ್ನದ ಸಿಂಹಾಸನ, ಜಂಬೂಸವಾರಿ ಹೀಗೆ ಹಲವಾರು ಮಾಹಿತಿಗಳನ್ನೊಳಗೊಂಡಿದೆ. ಇದು ಈ ಪುಸ್ತಕದ ಸ್ವರೂಪ. ಶೀರ್ಷಿಕೆ: ಮೈಸೂರು ದಸರಾ ಸಂಪಾದಕರು: ಗೌರಿ ಸುಂದರ‍್ ಪ್ರಕಾಶಕರು: ಸುಂದರ ಪ್ರಕಾಶನ ಪುಟ:313 ಬೆಲೆ:ರೂ.395/-

ಗಾಂಧೀಜಿ ಉದಾರೀಕರಣವನ್ನು ಸ್ವಾಗತಿಸುತ್ತಿದ್ದರೇ?

ಗಾಂಧೀಜಿಯ ಮಹಾನತೆಯ ಬಗ್ಗೆ ಇಂತಹ ತದ್ವಿರುದ್ಧವಾದ ನಿಲುವುಗಳು ಹೊಸದೇನಲ್ಲ. ಏಕೆ ಗಾಂಧೀಜಿಯ ಮಹಾನತೆ ಹಾಗೂ ಗಾಂಧೀವಾದದ ಬಗ್ಗೆ ಇಂತಹ ಗೊಂದಲ? ಗಾಂಧೀಜಿಯ ಮಹಾನತೆಯನ್ನು ವಿವರಿಸುವ ಕೃತಿಗಳೇನೋ ವಿಫುಲವಾಗಿ ದೊರೆಯುತ್ತವೆ. ಆದರೆ ಈ ಅಪರೂಪದ ಇತಿಹಾಸಪುರುಷನ ಮಹಾನತೆಯನ್ನು, ಗಾಂಧಿವಾದವೆಂದರೆ ನಿಜವಾಗಿ ಏನು ಎಂಬುದನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಕೃತಿಗಳು ಮಾತ್ರ ಅಪರೂಪ. ಇಂತಹ ಅಪರೂಪದ ಕೃತಿಗಳಲ್ಲಿ ಹಿರಿಯ ಮಾರ್ಕ್ಸ್‌ವಾದೀ ಚಿಂತಕ ಹಾಗೂ ಮುತ್ಸದ್ದಿ ಇ.ಎಂ.ಎಸ್. ನಂಬೂದರಿಪ್ಪಾಡ್ ರವರ “The Mahatma and The Ism” ಪುಸ್ತಕವೂ ಒಂದು. ಇ.ಎಂ.ಎಸ್. ನಂಬೂದರಿಪ್ಪಾಡ್ [...]

ದೊರೆತಿರುವ ವಸ್ತು ಅವಶೇಷಗಳು ಏನು ತಿಳಿಸುತ್ತವೆ

ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯ ಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ. ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ; ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ [...]

Follow

Get every new post delivered to your Inbox.