ಆಹಾ! ವಿಶ್ವ ಕಥಾ ಕೋಶ ಮತ್ತೆ ಕನ್ನಡಿಗರಿಗೆ ಲಭ್ಯವಾಗಲಿದೆ!!!

ಈ ಕಥಾಸಂಕಲನದ ಸಂಕಲನದ ಆಕರ್ಷಣೆ ಇದರ ಸಂಪಾದಕ ನಿರಂಜನ ಎಂಬುದರಲ್ಲಿದೆ. ಅಷ್ಟೇ ಅಲ್ಲ ಇದರ ಎಲ್ಲಾ ಸಂಪುಟಗಳು ನಿರಂಜನ ಅವರ ಪ್ರಾಸ್ತಾವಿಕ ಮಾತುಗಳನ್ನು ಹೊಂದಿದೆ. ಈ ಪ್ರಸ್ತಾವನೆಗಳು ಆ ಸಂಪುಟ ಯಾವ ದೇಶಗಳ ಕತೆಗಳಿಗೆ ಸಂಬಂಧಿಸಿದ್ದೋ ಆ ದೇಶಗಳ ಭೂಗೋಳ, ಇತಿಹಾಸ ಎಲ್ಲಾ ಚುಟಕಾದರೂ ಮಾಹಿತಿ ಭರಿತವಾಗಿವೆ. ಈ ಮೇಲಿನ ಸಂಪುಟಗಳನ್ನು ಹೊಂದಿರುವ ಈ ವಿಶ್ವ ಕಥಾ ಕೋಶದಲ್ಲಿ ಮೇಲೆ ಪಟ್ಟಿಮಾಡಿದ ಶೀರ್ಷಿಕೆಗಳಡಿಯಲ್ಲಿ ಭಾರತ (ಎರಡು ಸಂಪುಟ – ಧರಣಿ ಮಂಡಲ ಮಧ್ಯದೊಳಗೆ ಕನ್ನಡದ ಕತೆಗಳಾದರೆ ಸುಭಾಷಿಣಿ [...]

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅನುವಾದ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟ

  ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನೀಡುವ 2009-2010, 2010-2011ನೇ ಸಾಲಿನ ಅನುವಾದ ಪ್ರಶಸ್ತಿ ಮತ್ತು 2008, 2009ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟವಾಗಿವೆ. 2009-2010ನೇ ಸಾಲಿನಲ್ಲಿ ಡಾ. ಸಿ.ಪಿ. ಕೃಷ್ಣಕುಮಾರ್, ಡಾ. ಕೆ.ಎಲ್. ಗೋಪಾಲಕೃಷ್ಣ ರಾವ್, ಡಾ. ಉಮಾ ವಿರೂಪಾಕ್ಷ ಕುಲಕರ್ಣಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಮತ್ತು ಪ್ರೊ.ಕೆ.ಎಸ್. ಭಗವಾನ್ ಅವರು ಅನುವಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2010-2011ನೇ ಸಾಲಿನಲ್ಲಿ ಅನುವಾದ ಪ್ರಶಸ್ತಿಗೆ ಡಾ. ಸದಾನಂದ ಕನವಳ್ಳಿ, ಡಾ.ಜಿ. ರಾಮಕೃಷ್ಣ, ಜಿ.ಎನ್. ರಂಗನಾಥ [...]

ಹುತಾತ್ಮ ದಿನದ ಸಂದರ್ಭದಲ್ಲಿ ಅಮರ ಹುತಾತ್ಮ ಭಗತ್ ಸಿಂಗರ ಜೈಲಿನ ದಿನಚರಿ

1931 ರ ಮಾರ್ಚ್ 23. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭಾರತೀಯರ ಪಾಲಿಗೆ ಅತ್ಯಂತ ದುಃಖದಾಯಕ ದಿನ. ಅಂದು ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳನ್ನು ಬ್ರಿಟಿಷ್ ಸರ್ಕಾರ  ನೇಣಿಗೇರಿಸಿದ ದಿನ. ಇಂದಿಗೂ ಭಗತ್ ಸಿಂಗ್ ಹುತಾತ್ಮನಾಗಿರದಿದ್ದರೆ ಈಗ ಇಷ್ಟು ವರ್ಷದ ಹಿರಿಯರಾಗಿರುತ್ತಿದ್ದರು ಅಯ್ಯೋ, ಆ ದಿನ ಕ್ಯಾಲೆಂಡರಿನಲ್ಲೇ ಇರಬಾರದಿತ್ತು ಎಂದು ದೇಶಭಕ್ತ ಭಾರತೀಯರು (ಹಿರಿಯ ಕಿರಿಯರೆನ್ನದೆ) ಹಂಬಲಿಸುವ ದಿನ. ಅವರ ಬಗ್ಗೆ ನೆನಸುವ ದಿನ. ಇವತ್ತು ಲೆಫ್ಟ್ ವರ್ಡ ಹೊರತಂದಿರುವ The Jail Notebook and Other Writings [...]

ಅಂತರ್ರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವದ ಶುಭಾಶಯಗಳೊಂದಿಗೆ ಅಡ್ಡಗೋಡೆಗಳನ್ನೊಡೆದು ಮುನ್ನಡೆದ 12 ಮಹಿಳೆಯರ ಕಥೆಗಳು

ತಮ್ಮ ಬದುಕಿನುದ್ದಕ್ಕೂ ಒಂದು ಶೋಷಣಾತ್ಮಕ ಯಥಾಸ್ಥಿತಿಗೆ ಸವಾಲೆಸೆದು, ಭಾರತದಲ್ಲಿ ಒಂದು ಮಹಿಳಾ ವಿಮೋಚನೆಯ ಆಂದೋಲನವನ್ನು ಕಟ್ಟಲು ಶ್ರಮಿಸಿದ ಹನ್ನೆರಡು ಮಹಿಳೆಯರನ್ನು ಕುರಿತ ಪುಸ್ತಕವಿದು. ಇವು ಅಸಾಮಾನ್ಯ ಬದುಕುಗಳ ಅಸಾಮಾನ್ಯ ಕಥೆಗಳು – ಪುಸ್ತಕದ ಬೆನ್ನುಡಿಯಿಂದ         ಇದು, ಬೃಂದಾ ಕಾರಟ್ ಅವರು ಮುನ್ನುಡಿಯಲ್ಲಿ ಹೇಳಿರುವಂತೆ, ಹನ್ನೆರಡು ಅಸಾಮಾನ್ಯ ಮಹಿಳೆಯರ ಅಸಾಮಾನ್ಯ ಕಥೆಗಳ ಒಂದು ಸಂಗ್ರಹ. ಇವರೆಲ್ಲಾ ಭಾರತದ ವಿಭಿನ್ನ ಪ್ರದೇಶಗಳಿಂದ, ವಿಭಿನ್ನ ಹಿನ್ನೆಲೆಗಳಿಂದ ಬಂದವರು. ಆದರೆ ಅವರೆಲ್ಲರಲ್ಲಿದ್ದ ಒಂದು ಸಮಾನ ಸಂಗತಿಯೆಂದರೆ ಭಾರತ [...]

Follow

Get every new post delivered to your Inbox.