ಪುಸ್ತಕ ಪ್ರೀತಿ ಬಗ್ಗೆ

ನೀವು ಪುಸ್ತಕ ಪ್ರೀತಿಸುತ್ತೀರಾ?

ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ ಒನ್ ಸ್ಟಾಪ್ ಶಾಪ್ಇದು.

ಇತ್ತೀಚಿಗೆ ಪ್ರಕಟವಾದ, ಪುಸ್ತಕಗಳ ಪರಿಚಯ, ವಿಮರ್ಶೆ ಇಲ್ಲಿ ಸಿಗುವಂತೆ ಮಾಡುವುದು ನಮ್ಮ ಆಶಯ. ಇದು, ನಮ್ಮ ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯ-ವಿಮರ್ಶೆ ಯ ಡೈಜೆಸ್ಟ್ ಸಹ.

ನೀವು ಓದಿದ, ಮೆಚ್ಚಿದ, ಎಲ್ಲರೂ ಓದಲೇಬೇಕೆಂದು ನೀವು ಬಯಸುವ ಪುಸ್ತಕದ ಬಗ್ಗೆ ಬರೆಯಿರಿ.

ನಿಮಗೆ ಸಿಗದ ಪುಸ್ತಕ ಎಲ್ಲಿ ಸಿಗಬಹುದು ಎಂಬ ಬಗ್ಗೆ ಪ್ರಶ್ನೆ ಕೇಳಿ.

ನೀವು ಲೇಖಕರು ಅಥವಾ ಪ್ರಕಾಶಕರಾಗಿದ್ದರೆ ನಿಮ್ಮ ಪುಸ್ತಕಗಳ ಮಾಹಿತಿ ಕಳಿಸಿ.

ಪುಸ್ತಕದ ಎಲ್ಲಾ ಮಗ್ಗುಲುಗಳನ್ನು ಮುಟ್ಟುವ ನಮ್ಮ ಆಶಯದಲ್ಲಿ ಕೈಜೋಡಿಸಿ.

3 Responses

  1. ಇಂಥ ಒಂದು ಒಳ್ಳೆಯ ಬ್ಲಾಗ್ ಬಗ್ಗೆ ನನಗೆ ಇಷ್ಟು ದಿನ ಗೊತ್ತೇ ಇರಲಿಲ್ಲವಲ್ಲ ಅಂತ ನಾಚಿಕೆಯಾಯಿತು. ಒಳ್ಳೆಯ ಕೆಲಸ, ನಿಜಕ್ಕೂ ಒಳ್ಳೆಯ ಕೆಲಸ. ನನಗೆ ಈ ಪುಸ್ತಕಗಳು (ಎಲ್ಲವೂ ಹಳೆಯ ಪುಸ್ತಕಗಳು ಎನ್ನುವುದು ನಿಜ) ಎಲ್ಲಿ ಸಿಗಬಹುದು ಅಂತ ಮಾಹಿತಿ ಬೇಕು, ಸಿಗಬಹುದೆ?

    ೧. ಕೆ. ಸತ್ಯನಾರಾಯಣರ ಮನೋಧರ್ಮ ಎನ್ನುವ ಕೃತಿ.
    ೨. ಎಂ.ಟಿ.ವಾಸುದೇವನ್ ನಾಯರ್ ಅವರ ಕಾಲ ಎನ್ನುವ ಕಾದಂಬರಿ.
    ೩. ರಾಘವೇಂದ್ರ ಪಾಟೀಲರ ಒಡಪುಗಳು ಮತ್ತು ಪ್ರತಿಮೆಗಳು (ಹಳೆಯ ಪುಸ್ತಕಗಳು)
    ೪. ಅಮರೇಶ ನುಗಡೋಣಿಯವರ ತಮಂಧದ ಕೇಡು ಕಥಾಸಂಕಲನ
    ೫. ಎಂ.ಎಸ್. ಶ್ರೀರಾಮರ ಕಥಾಸಂಕಲನ ಮಾಯಾದರ್ಪಣ

  2. Ajeya – A book on Chandrashekar Ajad is really very good and it should be be read by every Indian.

  3. pusthakagala olau mudisuva parinamakari prayatnavidu

Leave a Reply