Posted on March 24, 2009 by pusthakapreeethi
ನಮ್ಮ ನಾಡಿನ ಹಿರಿಯ ಮುತ್ಸದ್ದಿ ಸಂಗಾತಿ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ) ಅವರಿಗೆ ಈಗ 90 ವರ್ಷ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಕಾರರಾಗಿ, ರಾಜ್ಯಸಭೆ ಮತ್ತು ಕರ್ನಾಟಕದ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ನಾಯಕರಾಗಿ ಇವರು ಸಲ್ಲಿಸಿರುವ ಸೇವೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಬಿವಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ವೈಚಾರಿಕ ಸಾಹಿತ್ಯ ಸಂಪದ ಹಲವು ಬಾರಿ ಕನ್ನಡ ಸಾಹಿತ್ಯ ಅಕಾಡಮಿಯ ಗೌರವಕ್ಕೆ, ಓದುಗರ ಆದರಕ್ಕೆ ಪಾತ್ರವಾಗಿದ್ದು, [...]
Filed under: ಅಭಿನಂದನ ಗ್ರಂಥ | Tagged: ಎಮ್.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ಕೆ.ಎಸ್.ಪಾರ್ಥಸಾರಥಿ, ನಿರಂತರ, ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ) | Leave a Comment »
Posted on March 11, 2009 by pusthakapreeethi
ಉತ್ತರ ಕನ್ನಡದ ಎಡ ಪಂಥೀಯ ಚಿಂತಕ, ಸಾಹಿತಿ, ಚಳವಳಿಗಾರ ಆರ್.ವಿ.ಭಂಡಾರಿಯವರ ಕೃತಿಗಳ ಕುರಿತ ಈ ಪುಸ್ತಕ, ಚಳವಳಿಗಳು ಮಾಯವಾಗಿರುವ ಈ ಕಾಲದಲ್ಲಿ ಹಿರಿದಾದ ಒಂದು ಆಶಯ ಹೊಂದಿದೆಯೆಂದೇ ಹೇಳಬೇಕು. ನಾಡಿನ ಸಾಹಿತ್ಯ ಚಿಂತನೆಯ ಮುಖ್ಯ ವಾಹಿನಿಗೆ ಭಂಡಾರಿಯವರ ವಿಚಾರಗಳು ಹರಿದುಬಂದ ಸಮಯವನ್ನು ವಿಮರ್ಶಕ ಕೇಶವ ಶರ್ಮ ಹೀಗೆ ಗುರುತಿಸುತ್ತಾರೆ : `1979ರಲ್ಲಿ ಬಂಡಾಯ ಮತ್ತು ಸಮುದಾಯ ಚಳವಳಿಗಳು ಮುಂಚೂಣಿಗೆ ಬರದೇ ಹೋಗಿದ್ದಲ್ಲಿ ಆರ್.ವಿ. ಯಂಥವರು ಬರೆಯುವ ವಾತಾವರಣ ನಿರ್ಮಾಣವಾಗುತ್ತಿತ್ತೆ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಹೊನ್ನಾವರ ಅರೆ ಅಂಗಡಿಯಂತಹ [...]
Filed under: ಅಭಿನಂದನ ಗ್ರಂಥ | Tagged: ಆರ್.ವಿ.ಭಂಡಾರಿ, ಚಿಂತನ ಪುಸ್ತಕ, ಸಹಯಾನ | Leave a Comment »
Posted on December 7, 2008 by pusthakapreeethi
ಶಾಂತರಸರ ಮಗಳು ಎಚ್.ಎಸ್.ಮುಕ್ತಾಯಕ್ಕ, ಅಪ್ಪನ ನೆನಪಿಗೆ ನುಡಿಸ್ಮಾರಕ ಕಟ್ಟಿದ್ದಾರೆ.
ಈಗ 15-20 ವರುಷಗಳ ಹಿಂದಿನ ಮಾತು. ನನಗೆ ನೆನಪಿದ್ದಂತೆ ಹಾ.ಮಾ.ನಾಯಕರು ಅವರ ತಂದೆ ದಿವಂಗತರಾದಾಗ ಒಂದು ಪುಸ್ತಕ ತಂದಿದ್ದರು. ಅದನ್ನು ನೋಡಿ ನಾನು ಅಪ್ಪನಿಗೆ `ಚೆನ್ನಾಗಿದೆ ಅಲ್ಲವೇ? ಎಂದು ಕೇಳಿದ್ದಲ್ಲದೆ, `ನಾನೂ ಈ ತರಹದ ಪುಸ್ತಕ ಮಾಡುವೆ ನಿನ್ನ ಬಗ್ಗೆ‘ ಎಂದುಬಿಟ್ಟೆ. ಯಾಕೆ ಹಾಗೆಂದೆನೋ? ಆಗ ಅಪ್ಪ `ಮಾಡುವೆಯಾ?’ ಎಂದು ಕೇಳಿದರು. `ಖಂಡಿತಾ‘ ಅಂದುಬಿಟ್ಟೆ.
ಆ ಮಾತಿನಂತೆ ಎಚ್.ಎಸ್.ಮುಕ್ತಾಯಕ್ಕ, `ಅಪ್ಪ‘ನ ಕುರಿತು ಪುಸ್ತಕ ತಂದಿದ್ದಾರೆ. ಅವರನ್ನು ಬಲ್ಲವರು ಬರೆದ [...]
Filed under: ಅಭಿನಂದನ ಗ್ರಂಥ | Tagged: ಅಪ್ಪ, ಎಚ್.ಎಸ್.ಮುಕ್ತಾಯಕ್ಕ, ಕನ್ನಡ ಪ್ರಭ, ಡಾ.ಚೆನ್ನಬಸವ ಪಟ್ಟದೇವ | Leave a Comment »
Posted on August 7, 2008 by pusthakapreeethi
ವಿಮರ್ಶಕ ಎಸ.ಆರ್.ವಿಜಯಶಂಕರ ಅವರ `ಒಡನಾಟ‘ ವ್ಯಕ್ತಿಚಿತ್ರಗಳ ಸಂಗ್ರಹ. `ಕಳೆದ ಇಪ್ಪತ್ತಾರು ವರ್ಷಗಳಲ್ಲಿ ಬರೆದ ವ್ಯಕ್ತಿಚಿತ್ರಗಳ ಸಂಗ್ರಹ. ಇವರಲ್ಲಿ ಅನೇಕರು ಸಾಹಿತ್ಯ, ಸಾಂಸ್ಕೃತಿಕ ಸಂದರ್ಭದ ಗಣ್ಯರು. ಇನ್ನು ಕೆಲವರು ಕೈಗಾರಿಕೆ ಪತ್ರಿಕೋದ್ಯಮಗಳ ಮೂಲಕ ಪರಿಚಿತರಾದವರು. ಮತ್ತೆ ಕೆಲವರು ಬದುಕಲ್ಲಿ ಹೇಗೋ ಬಂದು ನೆನಪಲ್ಲಿ ನಿಂದವರು‘ ಎಂದು ಕೃತಿಯ ಸ್ವರೂಪವನ್ನು ಲೇಖಕರು ವಿವರಿಸಿದ್ದಾರೆ.
ದ.ರಾ.ಬೇಂದ್ರೆ, ಬಿ.ಜಿ.ಎಲ್.ಸ್ವಾಮಿ, ಶಿವರಾಮ ಕಾರಂತ, ಕೆ.ವಿ.ಸುಬ್ಬಣ್ಣ, ಕೀರ್ತಿನಾಥ ಕುರ್ತಕೋಟಿ ಅವರಕ ಕುರಿತ ಬರಹಗಳು ಸೇರಿದಂತೆ ಇಪ್ಪತ್ತಾರು ಲೇಖನಗಳು ಕೃತಿಯಲ್ಲಿವೆ. ಈ ಹಿರಿಯರ ಅನನ್ಯ ಸಾಂಸ್ಕೃತಿಕ ವ್ಯಕ್ತಿತ್ವ ಹಾಗೂ [...]
Filed under: ಅಭಿನಂದನ ಗ್ರಂಥ | Leave a Comment »
Posted on June 10, 2008 by kandhakanmani
ನಂದಾದೀಪ, ಮಿಸ್ ಲೀಲಾವತಿ, ಪ್ರೊಫೆಸರ್ ಹುಚ್ಚೂರಾಯ, ನಕ್ಕರದೇ ಸ್ವರ್ಗ, ಹಣ್ಣೆಲೆ ಚಿಗುರಿದಾಗ, ಎರಡು ಮುಖ ಇತ್ಯಾದಿ ವಿಶಿಷ್ಟ ಚಿತ್ರಗಳನ್ನು ನೀಡಿದ ಎಂ.ಆರ್.ವಿಠಲ್ ಅವರ ಜನ್ಮ ಶತಮಾನೋತ್ಸವ ವರ್ಷವಿದು(2007-08). ಈ ಹಿನ್ನೆಲೆಯಲ್ಲಿ ವಿಠಲ್ ಅವರನ್ನು ಒಬ್ಬ ವ್ಯಕ್ತಿಯಾಗಿ, ವೃತ್ತಿಪರನಾಗಿ ಅಧ್ಯಯನ ಮಾಡಿರುವ ವಿಶ್ಲೇಷಣಾತ್ಮಕ ಪರಿಚಯ ಪುಸ್ತಕ ಇದು.
ಈ ಪುಸ್ತಕ ರಚನೆಯ ಹಿಂದೆ ಲೇಖಕರ ಸಾಕಷ್ಟು ಪರಿಶ್ರಮವಿದೆ. ವಿಠಲ್ ಅವರ ನಿಕಟವತರ್ಿಗಳಾಗಿದ್ದ 43 ಜನರನ್ನು ಈ ಪುಸ್ತಕ ರಚನೆಗೆ ಮುಂಚೆ ಸಂದರ್ಶಿಸಲಾಗಿದೆ.
ಚಲನಚಿತ್ರಗಳಿಗೆ ತನ್ನದೇ ಆದ ವ್ಯಾಕರಣವಿದೆ ಎಂದು ಪ್ರತಿಪಾದಿಸಿದ ಚಿಂತಕರಲ್ಲಿ [...]
Filed under: ಅಭಿನಂದನ ಗ್ರಂಥ | Leave a Comment »