ಹುತಾತ್ಮ ದಿನದ ಸಂದರ್ಭದಲ್ಲಿ ಅಮರ ಹುತಾತ್ಮ ಭಗತ್ ಸಿಂಗರ ಜೈಲಿನ ದಿನಚರಿ

1931 ರ ಮಾರ್ಚ್ 23. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭಾರತೀಯರ ಪಾಲಿಗೆ ಅತ್ಯಂತ ದುಃಖದಾಯಕ ದಿನ. ಅಂದು ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳನ್ನು ಬ್ರಿಟಿಷ್ ಸರ್ಕಾರ  ನೇಣಿಗೇರಿಸಿದ ದಿನ. ಇಂದಿಗೂ ಭಗತ್ ಸಿಂಗ್ ಹುತಾತ್ಮನಾಗಿರದಿದ್ದರೆ ಈಗ ಇಷ್ಟು ವರ್ಷದ ಹಿರಿಯರಾಗಿರುತ್ತಿದ್ದರು ಅಯ್ಯೋ, ಆ ದಿನ ಕ್ಯಾಲೆಂಡರಿನಲ್ಲೇ ಇರಬಾರದಿತ್ತು ಎಂದು ದೇಶಭಕ್ತ ಭಾರತೀಯರು (ಹಿರಿಯ ಕಿರಿಯರೆನ್ನದೆ) ಹಂಬಲಿಸುವ ದಿನ. ಅವರ ಬಗ್ಗೆ ನೆನಸುವ ದಿನ. ಇವತ್ತು ಲೆಫ್ಟ್ ವರ್ಡ ಹೊರತಂದಿರುವ The Jail Notebook and Other Writings [...]

ಗಾಂಧೀಜಿ ಉದಾರೀಕರಣವನ್ನು ಸ್ವಾಗತಿಸುತ್ತಿದ್ದರೇ?

ಗಾಂಧೀಜಿಯ ಮಹಾನತೆಯ ಬಗ್ಗೆ ಇಂತಹ ತದ್ವಿರುದ್ಧವಾದ ನಿಲುವುಗಳು ಹೊಸದೇನಲ್ಲ. ಏಕೆ ಗಾಂಧೀಜಿಯ ಮಹಾನತೆ ಹಾಗೂ ಗಾಂಧೀವಾದದ ಬಗ್ಗೆ ಇಂತಹ ಗೊಂದಲ? ಗಾಂಧೀಜಿಯ ಮಹಾನತೆಯನ್ನು ವಿವರಿಸುವ ಕೃತಿಗಳೇನೋ ವಿಫುಲವಾಗಿ ದೊರೆಯುತ್ತವೆ. ಆದರೆ ಈ ಅಪರೂಪದ ಇತಿಹಾಸಪುರುಷನ ಮಹಾನತೆಯನ್ನು, ಗಾಂಧಿವಾದವೆಂದರೆ ನಿಜವಾಗಿ ಏನು ಎಂಬುದನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಕೃತಿಗಳು ಮಾತ್ರ ಅಪರೂಪ. ಇಂತಹ ಅಪರೂಪದ ಕೃತಿಗಳಲ್ಲಿ ಹಿರಿಯ ಮಾರ್ಕ್ಸ್‌ವಾದೀ ಚಿಂತಕ ಹಾಗೂ ಮುತ್ಸದ್ದಿ ಇ.ಎಂ.ಎಸ್. ನಂಬೂದರಿಪ್ಪಾಡ್ ರವರ “The Mahatma and The Ism” ಪುಸ್ತಕವೂ ಒಂದು. ಇ.ಎಂ.ಎಸ್. ನಂಬೂದರಿಪ್ಪಾಡ್ [...]

ದೊರೆತಿರುವ ವಸ್ತು ಅವಶೇಷಗಳು ಏನು ತಿಳಿಸುತ್ತವೆ

ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯ ಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ. ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ; ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ [...]

ಹುತಾತ್ಮ ಭಗತ್ ಸಿಂಗರ ಅಲ್ಪಕಾಲದ ಬದುಕಿನ ಅಸಾಮಾನ್ಯ ಹರಹಿನ ಸಂಗ್ರಹರೂಪ

ಕೇವಲ 23 ವರ್ಷಗಳ ಬದುಕು. ಅಷ್ಟರಲ್ಲೇ ಇತಿಹಾಸದಲ್ಲಿ ಒಂದು ಶಾಶ್ವತ ಸ್ಥಾನ ಪಡೆದ ಭಗತ್ ಸಿಂಗ್ ಹುತಾತ್ಮನಾಗಿ ೮೦ ವರ್ಷಗಳಾಗುತ್ತಿದ್ದರೂ ಈಗಲೂ ಯುವಜನರ ಆರಾಧ್ಯ ಮೂರ್ತಿ, ಅದರಲ್ಲೂ ಒಂದು ಸಮಾನತೆಯ ಸಮಾಜದ ಕನಸನ್ನು ತುಂಬಿಕೊಂಡಿರುವವರಿಗೆ. ಧೈರ್ಯ, ಸಾಹಸ, ತ್ಯಾಗ, ಜತೆಗೆ ತಾತ್ವಿಕ ಸ್ಪಷ್ಟತೆ ಮತ್ತು ಜನಮಾನಸವನ್ನು ತಟ್ಟು ಸಾಮರ್ಥ್ಯ ಅವರ ಬದುಕನ್ನು ಅಮರಗಾಥೆಯನ್ನಾಗಿಸಿದೆ. ಸಹಜವಾಗಿಯೇ ಬಾಲಿವುಡ್ ಕೂಡಾ ಈ ಗಾಥೆಯ ಆಕರ್ಷಣೆಗೆ ಒಳಗಾಗದಿಲ್ಲ. ಅವರ ಮೇಲೆ ಕನಿಷ್ಟ ಐದು ಚಲನಚಿತ್ರಗಳು ತಯಾರಾಗಿವೆ. ಬರವಣಿಗೆಗಳಂತೂ ಲೆಕ್ಕವಿಲ್ಲದಷ್ಟು. ಭಗತ್ ಸಿಂಗ್ [...]

ಆರ್.ಐ.ಎನ್. ಹೋರಾಟದ ಧೀರ ಯೋಧರಿಗೆ ನಮ್ಮ ಕೃತಜ್ಞತಾಪೂರ್ವಕ ಶ್ರದ್ಧಾಂಜಲಿಗಳು.

ಸರ್ವ ಸಾಧಾರಣವಾಗಿ 1757 ರ ಪ್ಲಾಸಿ ಕದನದೊಂದಿಗೆ ಭಾರತದಲ್ಲಿ ಬ್ರಿಟಿಷ್ ಆಧಿಪತ್ಯವು ಭದ್ರವಾಗಿ ನೆಲೆ ಊರಿತೆನ್ನಲಾಗುತ್ತದೆ. ನೂರು ವರ್ಷಗಳಲ್ಲಿ ಎಲ್ಲ ಪ್ರತಿರೋಧಗಳನ್ನು ಧಮನಿಸಿ ಬ್ರಿಟಿಷ್ ಆಧಿಪತ್ಯ ಭದ್ರವಾಗಿ ತಳವೂರಿತು. ಆದರೆ ನಮ್ಮ ಸ್ವಾತಂತ್ರ್ಯಾಭಿಮಾನಿ ಜನರು ಬ್ರಿಟಿಷರ ವಿರುದ್ಧ ಹೊರಾಟವನ್ನು ಬೇರೆ ಬೇರೆ ಕಡೆ, ಬೇರೆ ಬೇರೆ ರೂಪಗಳಲ್ಲಿ ನಿರಂತರವಾಗಿ ನಡೆಸುತ್ತಲೇ ಬಂದರು. ಅಹಿಂಸಾ ಹೋರಾಟದಿಂದ ನಾವು ಸ್ವಾತಂತ್ರ್ಯ ಗಳಿಸಿದ್ದೇವೆ ಎನ್ನುವುದು ಪೂರ್ಣ ಸತ್ಯವಲ್ಲ. ನಾಯಕತ್ವದ ಅಹಿಂಸೆಗೆ ಮಣಿಯುವಂತೆ ತೋರಿಸುತ್ತಲಿದ್ದರೂ ಎಂದೂ ಬ್ರಿಟಿಷ್ ಆಡಳಿತ ಜನಸಾಮಾನ್ಯರ ರಕ್ತ ಹರಿಸುವುದನ್ನು [...]

ವಿದ್ಯಾರ್ಥಿಗಳಿಗೆ ಉಪಯುಕ್ತ ಆಕರ ಗ್ರಂಥ

ಕನ್ನಡನಾಡು ಪ್ರಾರಂಭದಿಂದಲೇ ಸಂಸ್ಕೃತಿ ಮತ್ತು ರಾಜಕೀಯದ ಹೆಜ್ಜೆ ಮೂಡಿಸಿ ಬೆಳೆದುಬಂದಿದೆ. ಆ ಚರಿತ್ರೆಯನ್ನು ಕುರಿತ ಆಹ್ವಾನಿತ ಬರಹಗಳ ಸಂಪಾದಿತ ಕೃತಿ ಇದು. ವಿವಿಧ ಲೇಖಕರು ತಮ್ಮ ಅಪಾರವಾದ ಓದಿನ ಫಲವಾಗಿ ಕನ್ನಡದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವಂತೆ ವಿಷಯ ನಿರೂಪಣೆ ಮಾಡಿದ್ದಾರೆ. ಹೆಚ್ಚಿನ ಲೇಖಕರೆಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗ ಮತ್ತು ಚರಿತ್ರೆಯ ವಿಭಾಗಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದು ಈ ಬೃಹತ್ ಕೃತಿಯನ್ನು ರೂಪಿಸಲು ನೆರವಾಗಿದ್ದಾರೆ. ಹಾಗಾಗಿ ಈ ಲೇಖನಗಳಿಗೆ ಹೆಚ್ಚಿನ ಮೌಲ್ಯವಿದೆ. ಕನ್ನಡನಾಡಿನ ನೆಲ-ಜಲ ಆಡಳಿತಕ್ಕೆ ಇಷ್ಟೊಂದು ವಿಶಾಲ ವ್ಯಾಪ್ತಿ ಇರುವುದು [...]

ಮಹಿಳಾ ದಿನಾಚರಣೆಯ ಶತಮಾನೋತ್ಸವದ ಶುಭಾಶಯಗಳು

ಶೀರ್ಷಿಕೆ : ಮಹಿಳಾ ಚಳುವಳಿಯ ಮಜಲುಗಳು ಲೇಖಕರು: ಎನ್. ಗಾಯತ್ರಿ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟ: ಬೆಲೆ:ರೂ.35/-

ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ – ಸಂಶೋಧನಾ ಲೇಖನ ಸಂಕಲನ

ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ – ಸಂಶೋಧನಾ ಲೇಖನಗಳನ್ನೊಳಗೊಂಡ ಈ ಕೃತಿಯನ್ನು ವಸು ಎಂ.ವಿ.ಯವರು ಸಂಪಾದಿಸಿದ್ದಾರೆ. ಅಶ್ವತ್ಥನಾರಾಯಣ, ಉಷಾದೇವಿ ಎಂ.ವಿ., ಶಶಿಧರ‍್ ಎಂ. ಸಂಪಾದಕ ಬಳಗದಲ್ಲಿದ್ದಾರೆ. ಈ ಕೃತಿಯ 30 ಲೇಖನಗಳಲ್ಲಿ ಒಂದೊಂದು ಲೇಖನವೂ ಕರ್ನಾಟಕದಲ್ಲಿ ಇತಿಹಾಸ ಸಂಶೋಧನೆಯ ಒಂದೊಂದು ಸವಾಲನ್ನು ಪ್ರತಿನಿಧಿಸುತ್ತದೆ. ವಿಷಯ, ಆಕರ, ಒಳತೋಟಿಯಲ್ಲಿ ಹರಿಯುವ ಧೋರಣೆ, ಸಂಶೋಧಕರ ಹಿನ್ನೆಲೆ ಎಲ್ಲಕ್ಕೂ ಒಂದು ಅರ್ಥ ಕಾಣಿಸುತ್ತದೆ. ಲೇಖನಗಳ ಸಾಮ್ಯತೆಯ ಆಧಾರದ ಮೇಲೆ ಉಪಶೀರ್ಷಿಕೆಯೊಂದಿಗೆ ವಿಭಾಗಿಸಲಾಗಿದ್ದು `ಸಾಹಿತ್ಯದೊಳಗಣ ಚರಿತ್ರೆ‘ ಭಾಗದ ಎಲ್ಲ ಲೇಖನಗಳು ಒಂದಲ್ಲ ಒಂದು [...]

ವೇಣು ನಿನಾದ

1981 ರಲ್ಲಿ ಪ್ರಕಟವಾದ ‘ಗಂಡುಗಲಿ ಮದಕರಿನಾಯಕ‘ ಕಾದಂಬರಿಯನ್ನು ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಮಿತ್ತ, ಮರುಮುದ್ರಣ ಮಾಡಿದ್ದಾರೆ. ಇದು ನಾಲ್ಕನೆಯ ಮುದ್ರಣ. ಸಾಹಿತ್ಯ ಸಮ್ಮೇಳನದಲ್ಲಿ ಈ ಕಾದಂಬರಿಯ 748 ಪ್ರತಿಗಳು ಮಾರಾಟವಾಗಿವೆ ಎನ್ನುತ್ತಾರೆ ಪ್ರಕಾಶಕರು. ದಲಿತ, ಬಂಡಾಯ, ಸಸ್ಪೆನ್ಸ್, ಪಾಲಿಟಿಕ್ಸ್, ಡೀಪ್ ಲವ್, ಐತಿಹಾಸಿಕ, ಕೌಟುಂಬಿಕ, ಸಂಗೀತ, ನೃತ್ಯ- ಯಾವ ಪ್ರಕಾರವನ್ನೇ ಆರಿಸಿಕೊಂಡರೂ ಅಧ್ಯಯನ ಮಾಡಿ ವಸ್ತುನಿಷ್ಟವಾಗಿಯೂ ಬರೆವ ವೇಣು ಯಾವುದೇ ಲೇಬಲ್ ಅಂಟಿಸಿಕೊಳ್ಳದ ಸೃಜನಶೀಲ ಬರಹಗಾರರು. ಐತಿಹಾಸಿಕ ಕಾದಂಬರಿಗಳ ಅವನತಿಯ ಕಾಲದಲ್ಲಿ ಓಯಸ್ಸಿಸ್ ನಂತೆ ದುರ್ಗದ ಇತಿಹಾಸ [...]

ಚರಿತ್ರೆಯನ್ನು ಮುಚ್ಚಿರುವ ಪುರಾಣ, ದಂತಕಥೆಗಳ ಮುಸುಕನ್ನು ಸರಿಸಿ

ದಾಮೋದರ ಧರ್ಮಾನಂದ ಕೊಸಾಂಬಿಯವರು ಆಧುನಿಕ ಭಾರತದ ಕೆಲವೇ ಶ್ರೇಷ್ಠ ವಿದ್ವಾಂಸರಲ್ಲಿ ಪ್ರಮುಖರು (1907-1966). ಅವರ ಬರವಣಿಗೆ ವೈಜ್ಞಾನಿಕ, ವಸ್ತುನಿಷ್ಠ ಪರಿಶೀಲನೆಗೆ ಹೆಸರಾಗಿದೆ. ವಿಜ್ಞಾನ, ಪುರಾತತ್ವ ಶಾಸ್ತ್ರ, ಸಾಹಿತ್ಯ, ಭಾಷಾ ಶಾಸ್ತ್ರ, ಸಂಸ್ಕೃತಿ – ಹೀಗೆ ಜ್ಞಾನದ ಹಲವು ಕ್ಷೇತ್ರಗಳಲ್ಲಿ ಆಳವಾದ ಅರಿವನ್ನು ಸಂಪಾದಿಸಿ ಅದನ್ನು ತಮ್ಮ ಅನೇಕ ಲೇಖನಗಳ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಕೊಸಾಂಬಿಯವರ `ದಿ ಕಲ್ಚರ್ ಅಂಡ್ ಸಿವಿಲೈಸೇಷನ್ ಆಫ್ ಏನ್ಶಿಯೆಂಟ್ ಇಂಡಿಯಾ ಇನ್ ಹಿಸ್ಟೋರಿಕಲ್ ಔಟ್ಲೈನ್ ನ `ದಿ ಆರ್ಯನ್’ ಎಂಬ ಅಧ್ಯಾಯದ ಕನ್ನಡಾನುವಾದ [...]

Follow

Get every new post delivered to your Inbox.