ನಾಚಿಕೆಯಿಂದ ತಲೆತಗ್ಗಿಸುವ ದಿನ

ಡಿಸೆಂಬರ‍್ 6, 1992. ತಮ್ಮ ಜಾತ್ಯಾತೀತ ಸಂವಿಧಾನದ ಬಗ್ಗೆ ಹೆಮ್ಮೆ ಪಡುವಂತಹ ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ದಿನ. ಈ ದಿನದಂದು ಭಾರತೀಯರ ಹೆಮ್ಮೆಯ ಜಾತ್ಯಾತೀತ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಿಷ್ಟೆಯ ಮಹಾ ಗೋಪುರಗಳು ನೆಲಕಚ್ಚಿದ ದಿನ. ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್  ಖ್ಯಾತ ಆಂಗ್ಲ ದೈನಿಕ [...]

ಕಲೆಯ ವಿರಾಟ ದರ್ಶನ ಮಾಡಿಸುವ “ಕರ್ನಾಟಕ ಕಲಾದರ್ಶನ”

ನವೆಂಬರ್ ಹತ್ತಿರ ಬಂತೆಂದರೆ ಕನ್ನಡ, ಕರ್ನಾಟಕ ಪದಗಳಿಗೆ ಜೀವ ಬರುತ್ತದೆ.  ಕನ್ನಡಮ್ಮನ ತೇರು ಎಳೆಯುವ ಉತ್ಸಾಹ, ರಾಜ್ಯೋತ್ಸವದ ಭರಾಟೆ ಎಲ್ಲೆಡೆ.  ಕನ್ನಡ ಸಾಹಿತ್ಯದ ದಾಖಲೀಕರಣಗೊಂಡು ಒಂದು ಸಾವಿರದ ಐದುನೂರು ವರ್ಷಗಳಾಗಿವೆ.  ಅದಕ್ಕೂ ಅನೇಕ ಶತಮಾನಗಳ ಹಿಂದಿನಿಂದಲೂ ಕರ್ನಾಟಕ ಸಂಸ್ಕೃತಿ ಜನಪದ, ಕಲೆ, ವಾಸ್ತುಶಿಲ್ಪ ಇತ್ಯಾದಿ ರೂಪದಲ್ಲಿ ಜೀವಂತವಾಗಿ ಇಂದಿಗೂ ಉಳಿದಿದೆ.  ಈ ಸಜೀವ ಸಂಸ್ಕೃತಿಯನ್ನು ಒಂದೆಡೆ ದಾಖಲಿಸುವ, ಕರ್ನಾಟಕ ಸುವರ್ಣ ಸಂಭ್ರಮಕ್ಕೆ ನವಕರ್ನಾಟಕ  ಸುವರ್ಣ ಸಂಭ್ರಮದ ಎರಡು ಬೃಹತ್ ಸಂಪುಟಗಳು ಕಲಾಕಾಣಿಕೆಯಾಗಿ ಲೋಕಾರ್ಪಣೆಯಾಗಿವೆ. ಎರಡು ಸಾವಿರ ವರ್ಷಗಳ [...]

ಅವು ಯಾವ ದೇವತೆಗಳಿಗೆ ಸೇರಿದ್ದು?

ಸೋಮನಾಥಪುರವನ್ನು ನೋಡದಿರುವವರಾರು? ಆದರೆ ಇತಿಹಾಸಜ್ಞ ಸಂಶೋಧಕ ಷ.ಶೆಟ್ಟರ್ ಬರೆದಿರುವ ಈ ಸಚಿತ್ರ ಪುಸ್ತಿಕೆಯ ಗುರಿ, ಪ್ರೌಢ ಓದುಗ ಮತ್ತು ಪ್ರಬುದ್ಧ ಸಂದರ್ಶಕರಿಗಾಗಿ ಬೇಕಾದ ಮಾಹಿತಿ ಒದಗಿಸುವುದು. ಪುಸ್ತಕ ತಿರುವಿಹಾಕಿದಾಗ ದೊರೆಯುವ ಅನೇಕ `ಮಾಹಿತಿ ಮುತ್ತು‘ಗಳಲ್ಲಿ ಕೆಲವು ಹೀಗಿವೆ: – ಸೋಮನಾಥಪುರ ಒಂದು ಪರಿಪೂರ್ಣ ದೇವಾಲಯ ನಗರ, ಮಧ್ಯಕಾಲೀನ ಅಗ್ರಹಾರ ಕೇಂದ್ರವಾಗಿರುವುದರಿಂದ ಇದರ ವಿವರಗಳು ಮಧ್ಯಕಾಲೀನ ನಗರ ಬೆಳವಣಿಗೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೂ ಉಪಯುಕ್ತ ಮಾಹಿತಿ. – ಈ ಶೈಲಿಯ ಪ್ರಮುಖ ವಾಸ್ತು ಮತ್ತು ಶಿಲ್ಪ ಕಲಾಂಶಗಳು ಚಾಳುಕ್ಯರಿಂದ, [...]

ಕಲೆ ಎಂದರೇನು?

`ಸಮಗ್ರವಾಗದಿದ್ದರೂ ಸಂಕ್ಷಿಪ್ತವಾಗಿಯಾದರೂ, ಪ್ರಪಂಚದ ದೃಶ್ಯಕಲೆಯ ಬಗ್ಗೆ ಪುಸ್ತಕ ಬರೆಯಬೇಕು ಎನ್ನುವುದು ನನ್ನ ಬಹುದಿನದ ಕನಸು‘ ಎಂದು ಮೊದಲ ಮಾತಿನಲ್ಲಿ ಹೇಳಿಕೊಂಡಿರುವ ಕಲಾವಿದ ಮರಿಶಾಮಾಚಾರ್ ಅವರ ಇಪ್ಪತ್ತನೆಯ ಪುಸ್ತಕ ಇದು. ಅವರದೇ ರಕ್ಷಪುಟ ಹಾಗೂ ಒಳಪುಟ ವಿನ್ಯಾಸದೊಂದಿಗೆ ಸುಂದರವಾಗಿ ಸಜ್ಜಾಗಿದೆ ಹಾಗೂ ಕಲಾವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಅಲಭ್ಯವಾಗಿರುವ ಪುಸ್ತಕಗಳ ಕೊರತೆಯನ್ನು ತುಂಬಿಕೊಡುವಂತಿದೆ. `ಕಲೆ ಎಂದರೇನು? ಕಲೆಯ ಹುಟ್ಟಿಗೆ ಮುನ್ನ ಇದ್ದ ದೃಶ್ಯ ಸೃಷ್ಟಿಗಳಾವುವು? `ಕಲೆಯ ಸಾವಿನ‘ ನಂತರ ದೃಶ್ಯಕಲೆ ಹಾಗೂ ಅದರ ವ್ಯಾಖ್ಯೆ-ವಾಚ್ಯಾರ್ಥಗಳು ಬೆರೆತ ತತ್ವಾಧಾರಿತ ಕಲೆಯ ವಿಶ್ವರೂಪವು ಹೇಗೆ [...]

ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ

ಹೆಸರಾಂತ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಅವರ ಈ ಪುಸ್ತಕ ಹಲವು ಮೌಲಿಕ ಲೇಖನಗಳನ್ನು ಒಳಗೊಂಡಿದೆ. ಅವರ ಭಾಷೆ ಆಧುನಿಕವಾಗಿ ಅಚ್ಚುಕಟ್ಟಾಗಿದೆ. ಕಲಾ ವಿಮರ್ಶೆ ಕುರಿತು ಸಾಮಾನ್ಯ ಓದುಗರಿಗೆ ಇರುವ ಭಯ ಕಸಿವಿಸಿಗಳನ್ನೆಲ್ಲಾ ತೊಡೆದುಹಾಕುವಷ್ಟು ತಿಳಿಯಾಗಿ ಬರೆಯುತ್ತಾರೆ, ಸುಬ್ರಹ್ಮಣ್ಯಂ. ಕಲೆ ಕುರಿತು ಕನ್ನಡ ಮೂಲ ಕೃತಿಗಳು ಹೊರಬರುವುದು ಅಪರೂಪ. ಈ ಪುಸ್ತಕ ಅದನ್ನು ತುಂಬಿಕೊಡಲೆತ್ನಿಸುವುದಷ್ಟೇ ಅಲ್ಲ, ಮಾಮೂಲಿಯಂತೆ ಶಿಲ್ಪಕಲೆಯ ಇತಿಹಾಸ ಇತ್ಯಾದಿ ಚರ್ವಿತ ಚರ್ವಣಗಳಲ್ಲಿ ಕಳೆದುಹೋಗದೆ ನೇರವಾಗಿ ಸಮಕಾಲೀನ ಪರಿಸರಕ್ಕೆ ಧಾವಿಸಿ ಓದುವಿಕೆಯನ್ನು ಚುರುಕುಗೊಳಿಸುತ್ತದೆ. ಉದಾಹರಣೆಗೆ ಇತ್ತೀಚೆಗೆ ಸಂಚಲನ [...]

Follow

Get every new post delivered to your Inbox.