`ರೊಟ್ಟಿ ಮತ್ತು ಗುಲಾಬಿ’ ಘೋಷಣೆಯ ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ

ರೊಟ್ಟಿ – ತುಂಬಿದ ಹೊಟ್ಟೆಯ ಹಾಗೂ  ಗುಲಾಬಿ – ಗೌರವಾನ್ವಿತ ಬದುಕಿನ ಸಂಕೇತ. ಕೆಲವು ಮಹಿಳೆಯರು ಮಹಿಳೆ ಎನ್ನುವ ಕಾರಣದಿಂದಲೇ ಹಸಿವಿನಿಂದ ಬಳಲುತ್ತಿದ್ದರೆ ಇನ್ನೊಂದು ಭಾಗ ಹಸಿವಿನಿಂದಲ್ಲದಿದ್ದರೂ ತನ್ನೆಲ್ಲಾ ಕೊಡುಗೆಯಿದ್ದರೂ ನಿರ್ಧಾರದಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ `ಎರಡನೇ ದರ್ಜೆ’ಗೆ ತಳ್ಳಲ್ಪಡುವ ಅವಮಾನದಿಂದ ಬಳಲುತ್ತಿದ್ದಾಳೆ. ಮಹಿಳೆಯ ಕುರಿತಾದ ಜೀವವಿರೋಧಿ ತಾರತಮ್ಯದ ವಿರುದ್ಧ ಹೋರಾಡಿದ, ಹೋರಾಡುತ್ತಿರುವ ಕೋಟಿ ಮಹಿಳೆಯರಿಗೆ ನಮ್ಮ ಧನ್ಯವಾದಗಳು. ಇಂತಹ ಸಮರಧೀರ ಮಹಿಳೆಯರಿಂದಾಗಿಯೇ (ನಿರಂತರ ಹೋರಾಟದ ನೂರು ವರ್ಷಗಳ ನಂತರವೂ) ಮಹಿಳೆಯರಿಗೆ ಕೆ(ಹ)ಲವು ಕೊರತೆಗಳಿದ್ದರೂ ಇಷ್ಟಾದರೂ ಒಳ್ಳೆಯ [...]

ಹೇಳಿ ಮುಗಿಸುವ `ಅಸೀಮ ಕಾವ್ಯ’

ಕಂಡದ್ದಕ್ಕೆ ಅನುಭವಿಸಿದ್ದಕ್ಕೆ ತನ್ನೊಳಗಿನಿಂದ ಮಾತುಗಳನ್ನು ಹುಟ್ಟಿಸಿಕೊಳ್ಳದಿರುವ ಕವಿಗೆ ಹೊರಗೆ ಸಿದ್ಧವಾಗಿರುವ ಪದಗಳನ್ನು ಒದಗಿಸಿಕೊಳ್ಳುವುದರಲ್ಲಿಯೇ ಹೆಚ್ಚು ಆಸಕ್ತಿ ಇದ್ದಂತಿದೆ. `ಅಸೀಮ ರೂಪಿ’ ನಾಲ್ಕು ದಶಕಗಳಿಂದ ಇಲ್ಲಿಯವರೆಗೆ ದೊಡ್ಡರಂಗೇಗೌಡ ಅವರು ಬರೆದಿರುವ ಆಯ್ದ ಕವಿತೆಗಳು ಹಾಗೂ ಭಾವಗೀತೆಗಳ ಸಂಕಲನ. ಈ ಸಂಗ್ರಹದಲ್ಲಿ 327 ರಚನೆಗಳಿವೆ. ಆದ ದುಃಖ, ಪುಳಕ, ಸಂಗಾತಿಗಳು ಉಳಿಸಿಹೋದ ನೆನಪು, ಅಳಿಸಿಹೋದ ಕನಸು, ಪುಟಿದೇಳುವ ಕನ್ನಡಾಭಿಮಾನ, ಯುಗಾದಿಯ ಸಡಗರ, ಮೆಚ್ಚಿನ ಮೇಷ್ಟ್ರು, ಮೊಮ್ಮಗನ ತುಂಟಾಟ, ಕಾಡುವ ಹಿರಿಯರು, ಸಮಾಜಹಿತ- ಈ ಎಲ್ಲದರ ಬಗೆಗೂ ಉತ್ಸಾಹಮಿಶ್ರಿತ ಉದ್ಗಾರದಲ್ಲಿ ಹೇಳುವ [...]

ಬಡವನಿಗೆ ಹೊಟ್ಟೆ ಹಸಿವು ಸಂಗಾತಿ ಹಾಗೂ ಶ್ರೀಮಂತನಿಗೆ ಅದು ಗೇಟಿನಾಚೆಯ ಅಪರಿಚಿತ ಅತಿಥಿ

“ಒಲೆಯೊಳಗೆ ಬೆಕ್ಕು, ಒಡಲೊಳಗೆ ಬೆಂಕಿ” ಇದು ಹಸಿದ ಬಡವನ ಮನೆಯ ದಾರುಣ ಚಿತ್ರ ನೀಡುವ, ಆರ‍್. ವಿ. ಭಂಡಾರಿಯವರ ಕವನದ ಒಂದು ಸಾಲು. ಹಸಿವಿನ ತೀವ್ರತೆಯನ್ನು ಹೆಚ್ಚು ಬಡವರಿರುವ ನಮ್ಮ ದೇಶದಲ್ಲಿ ಹೊಸದಾಗಿ ಪರಿಚಯಿಸುವ ಮೊದಲೇ ಜನ ಅದನ್ನು ಅನುಭವಿಸಿದ್ದಾರೆ. ವರ್ಣನೆಗಿಂತಲೂ ಭೀಕರತೆ ಮತ್ತು ಆಳ ಹಸಿವಿಗಿದೆ. ಬಡವನಿಗೆ ಹೊಟ್ಟೆ ಹಸಿವು ಸಂಗಾತಿ ಹಾಗೂ ಶ್ರೀಮಂತನಿಗೆ ಅದು ಗೇಟಿನಾಚೆಯ ಅಪರಿಚಿತ ಅತಿಥಿ. `ಗರೀಬಿ ಹಟಾವ್’,`ರೋಟಿ, ಕಪಡಾ, ಮಕಾನ್’ ಇವೆಲ್ಲಾ ಘೋಷಣೆಗಳು ಸ್ವಾತಂತ್ಯ್ರಾ ನಂತರದ ಉತ್ಸಾಹದ ಸ್ಯಾಂಪಲ್ ಮಾತ್ರ. [...]

ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ! ಜಗವನೆನಗೆ ಬಿಟ್ಟಿರುವೆ, ಏಕೆ ಕಾಡಲಿ!

ದಿನ ನಿತ್ಯದ ಕಿಟಿಕಿಟಿ ಶ್ರಮದ ನಂತರವೂ ಜೀವನ ಪ್ರೀತಿಯನ್ನು ಮೈ ಮನದಲ್ಲಿ ತುಂಬಿಕೊಳಬಯಸುವವರಿಗೆ ತಮ್ಮ ಕವನಗಳ ಮೂಲಕ ಎಲ್ಲವನ್ನೂ ಕೊಟ್ಟ ಕೆ.ಎಸ್.ನ. ಅವರನ್ನು ಮತ್ತೆ ಏನನ್ನೂ ಬೇಡಬೇಕಾಗಿಲ್ಲ. ನನ್ನವಳು ನನ್ನೆದೆಯ ಹೊನ್ನಾಡನಾಳುವಳು ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ! ಶಾನುಭೋಗರ ಮಗಳು ರತ್ನದಂತಹ ಹುಡುಗಿ; ಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾಗಿ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ?- ನಷ್ಟವಿಲ್ಲ ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು -   ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ [...]

ಸರಳ ಸುಲಭ ರಚನೆಯ ಕವನಗಳು

ಸುಮಾರು 97 ಕವಿತೆಗಳನ್ನು ತಮ್ಮ ಕವನ ಸಂಗ್ರಹ `ಸ್ವಗತ‘ ದಲ್ಲಿ ನೀಡಿದ್ದಾರೆ ಎಸ್. ಪ್ರಸಾದಸ್ವಾಮಿ. ಸರಳವಾಗಿ ಬರೆಯುವುದನ್ನು ತಮ್ಮ ಉದ್ದೇಶವನ್ನಾಗಿ ಉಳ್ಳ ಕವಿ ಸರಳ ಸುಲಭ ರಚನೆಗಳನ್ನು ಇಲ್ಲಿ ನೀಡಿದ್ದಾರೆ. `ಒಲುಮೆ ಗಿಲುಮೆಯ ಮಾತು ಅಲ್ಲಿರಲಿ ಈಗನೀ ಹೆಣ್ಣು ನಾ ಗಂಡು ಅಷ್ಟೆ ಸಾಕು‘( ನಲ್ಲೆಗೆ/ ೨೧) ಎಂದು ಬರೆದಿರುವುದು ಅವರ ಸರಳವಾಗಿ ಕವಿತೆಗಳನ್ನು ಹೇಳುವುದಕ್ಕೆ ಉದಾಹರಣೆಯಾಗಬಹುದು.` ಕಾವ್ಯದ ಲಯದಲ್ಲಿ ನೀವು ತುಂಬ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ., ಅಡಿಗ, ಬೇಂದ್ರೆ ಮುಂತಾದ ಕವಿಗಳ [...]

ನಾನೊಬ್ಬ ಎ.ಬಿ.ಸಿ.ಡಿ.

ಪ್ರೊ. ಉಷಾ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ `ಹಸಿವೆಂಬೋ ಮಾಯೆ’ಯಲ್ಲಿನ ನಲವತ್ತಾರು ಕವಿತೆಗಳಲ್ಲಿ ಒಡೆದು ಕಾಣುವುದು ಕವಯತ್ರಿಯ ಸಾಹಿತ್ಯಿಕ ಹಸಿವು. ಹಾಸನದ ಎ.ವಿ.ಕೆ. ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವ ಉಷಾ ಈಗ ನಿವೃತ್ತರು. ವೃತ್ತಿಯಿಂದ ನಿವೃತ್ತರಾಗಿ ಕಾವ್ಯದ ಧ್ಯಾನದಲ್ಲಿ ಮುಳುಗಿರುವ ಅವರ ಕವಿತೆಗಳಲ್ಲಿ ಮಾಗಿದ ಬದುಕು ಪ್ರತಿಫಲಿಸುತ್ತದೆ. ಪ್ರಾಮಾಣಿಕತೆ ಹಾಗೂ ಸೋಗಿಲ್ಲದ ಜೀವನ ಪ್ರೀತಿ `ಹಸಿವೆಂಬೋ ಮಾಯೆ’ ಸಂಕಲನದಲ್ಲಿ ಎದ್ದು ಕಾಣುವ ಗುಣಗಳು. ಬದಲಾದ ಕಾಲದ ಬಗೆಗಿನ ವಿಷಾದ ಒಡೆದು ಕಾಣುತ್ತದಾದರೂ, ಈ ವಿಷಾದ [...]

ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ

‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’ (ನನ್ನ ಮಗು/ಪು.37) ಎಂದು ಲಯಬದ್ಧವಾಗಿ ಬರೆಯುವ ಛಾಯಾ ಭಗವತಿಯವರ ಮೊದಲ ಸಂಕಲನವಿದು. ತುಂಬಾ ಪುಟ್ಟ ಕವನ ಸಂಗ್ರಹವಾದ ಇದರಲ್ಲಿ 19 ಕವಿತೆಗಳಿವೆ. ರಮ್ಯವಾದ, ಬಾಲ್ಯವನ್ನು ನೆನಪಿಸುವ ಚಿತ್ರಗಳು ಇದರಲ್ಲಿವೆ. ಹೆಣ್ಣಿನ ಬದುಕಿನ ಹಂತಗಳಾದ ಬಾಲ್ಯ, ಹರೆಯ, ಮದುವೆ, ತಾಯ್ತನ ಇಲ್ಲಿ ಕವಿತೆಗಳಾಗಿವೆ. ಕೆಲವೆಡೆ ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬರೆಯುವ ಕವಿ ಒಂದು ಸುಂದರ ಚಿತ್ರವನ್ನು ಕಣ್ಣಮುಂದೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. [...]

… ನಾನು ಮಧ್ಯಬಿಂದುವಿನಂತೆ ತಟಸ್ಥ,

ಇಂದಿರಾ ಸಂತ್ ಮರಾಠಿಯ ಪ್ರಸಿದ್ಧ ಕವಿ. ಭಾವಗೀತೆಯ ಕವಿಯಾಗಿ ಅವರು ಪರಿಚಿತರು. ಅವರ ಮೊದಲ ಕವಿತಾ ಸಂಗ್ರಹ `ಗೊಂಬೆಗಳು’ ಎಂಬುದು. ಬಳಿಕ ಪ್ರಕಟವಾದ `ಗರ್ಭರೇಶಿಮೆ’ ಕವಿತೆಗಳನ್ನು ಸಾಹತ್ಯ ಅಕಾಡೆಮಿ ಮರು ಮುದ್ರಿಸಿದೆ. ಬದುಕಿನ ದಾರುಣತೆಯನ್ನು ಬಿಂಬಿಸುವ ಕವಿತೆಗಳನ್ನು ಬರೆವ ಇಂದಿರಾ ಸಂತ್ ಬಾಲ್ಯದ ನೆನಪುಗಳು ಹಾಗೂ ದೈನಿಕ ಬದುಕಿನಿಂದ ಕವಿತೆಗಳನ್ನು ಕಟ್ಟಿದವರು. ಹಾಗೂ ನಾವು ನಿತ್ಯ ನೋಡುತ್ತಿರುವ ಸಂಗತಿಗಳಿಂದಲೇ ಕವಿತೆಗಳ ವಸ್ತುಗಳನ್ನು ಅವರು ಆಯ್ದುಕೊಂಡಿರುವುದನ್ನು ಕಾಣಬಹುದು. … ನಾನು ಮಧ್ಯಬಿಂದುವಿನಂತೆ ತಟಸ್ಥ, ಮನಮಗ್ನ ನವಿಲುಗರಿಯ ಮೇಲಿನ ಕಣ್ಣಿನಂತೆ. [...]

ಕೊರಗೆಂದರೆ

ಕೊರಗೆಂದರೆ ನಾವು ಎಲ್ಲರಂತೆ ಪ್ರೇಮಿಸಲಿಲ್ಲ ನಿರೀಕ್ಷೆಗಳೆಲ್ಲ ಹುಸಿಯಾದ ಮೇಲೆ ‘ಹುಸಿ‘ ಎಂಬ ಪದಕ್ಕೆ ಅನ್ವರ್ಥವಾಗಿ ನಿರೀಕ್ಷೆ ಎಂದು ಬರೆದಿಟ್ಟುಕೊಂಡಿದ್ದೇನೆ ಹೌದು, ನಮ್ಮಿಬ್ಬರ ಭೇಟಿಗೆ ಬೆಳದಿಂಗಳು ಚೆಲ್ಲುತ್ತಿದ್ದ ಚಂದಿರ ಈಗಲೂ ನಿಮ್ಮೂರಲ್ಲಿ ನೆಲಸಿದ್ದಾನ? (ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ-ಪು-೩೬) ಎಂದು ಸಂಕಲನದ ಮುಖ್ಯ ಕವಿತೆಯಲ್ಲಿ ಚಿತ್ರವತ್ತಾಗಿ ಬರೆಯುವ ಕವಿ ಸಿದ್ದು ದೇವರಮನಿಯವರದು ಒಂದು ರೀತಿಯ ವಿಷಾದಗೀತೆಗಳು. ಇದು ಕವಿಯ ಮೊದಲ ಸಂಕಲನ. ಇವರ ಕವಿತೆಗಳಲ್ಲಿ ಪ್ರೀತಿಯ ಕನವರಿಕೆಗಳಿವೆ, ಷರೀಫಜ್ಜನಿಗೊಂದು ಪತ್ರವಿದೆ, ಪ್ರಕೃತಿಯ ಕುರಿತಾದ ವ್ಯಾಮೋಹವಿದೆ. ರೋಮ್ಯಾಂಟಿಕ್ ಆಗಿ ಬರೆಯುವ [...]

ಸಂಗಾತಿ – ಕವನ ಸಂಕಲನ

ಈ ಕವನ ಸಂಕಲನದಲ್ಲಿ 106 ಕವಿತೆಗಳಿವೆ. ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯನ್ನೇ ಬಳಸಿ ಶಿಕ್ಷಣ, ಸಂಸ್ಕಾರ, ಪರಿಸರ, ನೈತಿಕತೆ, ಸಾಮಾಜಿಕ ಕಳಕಳಿ, ಪ್ರೇಮ, ತ್ಯಾಗ ಮುಂತಾದ ಮೌಲ್ಯಗಳನ್ನು ಸಾರುವ ನಿಟ್ಟಿನಲ್ಲಿ ಕವನಗಳನ್ನು ರಚಿಸಿದ್ದಾರೆ. ಕವಿತೆಗಳಲ್ಲಿ ವೈವಿಧ್ಯತೆಯಿದೆ. ಕವಿಗೆ ಸಂಗೀತದ ಲಯದ ಜ್ಞಾನವಿರುವುದರಿಂದ ಇಲ್ಲಿನ ಬಹುಪಾಲು ಕವಿತೆಗಳು ಹಾಡಲು ಯೋಗ್ಯವಾಗಿವೆ. ಕವಿತೆಗಳ ಸಂಯೋಜನೆಯನ್ನು ರಾಗಕ್ಕೆ ಹೊಂದುವಂತೆ ರಚಿಸಲಾಗಿದೆ. ಶೀರ್ಷಿಕೆ: ಸಂಗಾತಿ ಲೇಖಕರು: ಶಂಕರ ಎಸ್. ಲಮಾಣಿ ಪ್ರಕಾಶಕರು: ಶ್ರೀಲಮಾಣಿ ಪ್ರಕಾಶನ ಜಮಖಂಡಿ ಪುಟ: 132 ಬೆಲೆ:ರೂ. 120/- ಕೃಪೆ [...]

Follow

Get every new post delivered to your Inbox.