Posted on July 4, 2009 by pusthakapreeethi
ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ವಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ.
“……..ದಾರಿದ್ರದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ. ಹಸಿವೆ ಮತ್ತು [...]
Filed under: ಜೀವನ-ಚರಿತ್ರೆ/ಕಥನ | Tagged: ಆರ್ನೆಸ್ಟೋ ಚೆ ಗುವಾರ, ಐ ಲಾವ್ರೆತ್ ಸ್ಕಿ, ಕೆ.ಪಿ.ಸ್ವಾಮಿ, ಗೊ.ರು.ಚನ್ನಬಸಪ್ಪ, ನವಕರ್ನಾಟಕ, ಸೂರ್ಯಕಾಂತ ಸೊನ್ನದ | Leave a Comment »
Posted on January 29, 2009 by pusthakapreeethi
ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯವನ್ನು ತಮ್ಮ ವೈವಿಧ್ಯಮಯ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರಲ್ಲಿ ಪಿ.ಲಂಕೇಶ್ ಅವರೂ ಒಬ್ಬರು. ಭಾರತದ ಸಾಹಿತ್ಯ ಅಕಾಡೆಮಿಯು `ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ‘ಯಲ್ಲಿ ಲಂಕೇಶ್ ಅವರ ಸಮಗ್ರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಕುರಿತು ಪ್ರಕಟಿಸಿದ ಪರಿಚಯ ರೂಪದ ಪುಸ್ತಕ ಇದು. ಲಂಕೇಶ್ ಅವರು ಅಧ್ಯಾಪಕರಾಗಿ, ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ ಸುದೀರ್ಘ ಅವಧಿಯಲ್ಲಿ ಅವರ ಒಡನಾಡಿಯಾಗಿದ್ದ ಕೆ.ಮರುಳಸಿದ್ದಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಅತಿ ಪರಿಚಯದಿಂದ ವಸ್ತುನಿಷ್ಠತೆಗೆ ಭಂಗ ಬರಬಹುದೆಂಬ ಆಕ್ಷೇಪಕ್ಕೆ ಆಸ್ಪದವೇ ಇಲ್ಲದಂತೆ [...]
Filed under: ಜೀವನ-ಚರಿತ್ರೆ/ಕಥನ | Tagged: ಕೆ. ಮರುಳಸಿದ್ದಪ್ಪ, ಪಿ.ಲಂಕೇಶ್, ಪ್ರಜಾವಾಣಿ, ಸಾಹಿತ್ಯ ಅಕಾಡಮಿ | 3 Comments »
Posted on December 27, 2008 by pusthakapreeethi
ಸ್ವಾತಂತ್ರ್ಯೋತ್ತರ ಭಾರತದ ಮುಖ್ಯ ನಾಟಕಕಾರರಲ್ಲಿ ಗಿರೀಶ್ ಕಾರ್ನಾಡರು ಪ್ರಮುಖರು. ಅವರ ತುಘಲಕ್ ಮತ್ತು ನಾಗಮಂಡಲ ನಾಟಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿವೆ. ಇಷ್ಟಿದ್ದರೂ ಕನ್ನಡ ವಿಮರ್ಶೆ ಎಲ್ಲೋ ಒಂದು ಕಡೆ ಅವರನ್ನು ನಿರ್ಲಕ್ಷಿಸಿಕೊಂಡು ಬಂದಿದೆ ಎಂಬ ಭಾವ ನನ್ನಂಥವರಲ್ಲಿ ನಿಧಾನವಾಗಿ ಮೂಡುತ್ತಿವೆ. ಇದೀಗ 70 ದಾಟಿರುವ (ಜನನ: ಮೇ 19, 1938) ಅವರ ಎಲ್ಲಾ ಕೃತಿಗಳನ್ನು ಸಮಗ್ರವಾಗಿ ವಿಶ್ಲೇಷಿಸುವ, ಪರಿಚಯಿಸುವ (ಕನಿಷ್ಠ ಅಭಿನಂದನಾ ಗ್ರಂಥ ರೂಪದಲ್ಲಾದರೂ) ಒಂದಾದರೂ ಮಹತ್ವದ ಗ್ರಂಥವೊಂದನ್ನು ನಮಗೆ ಇದುವರೆಗೆ ಹೊರತರಲಾಗಲಿಲ್ಲ. ಸಾಮಾನ್ಯ [...]
Filed under: ಜೀವನ-ಚರಿತ್ರೆ/ಕಥನ | Tagged: ಗಿರೀಶ್ ಕಾರ್ನಾಡ್ ಮತ್, ಡಾ. ಸಿ.ಎನ್.ರಾಮಚಂದ್ರನ್, ಪ್ರಜಾವಾಣಿ, ಸಪ್ನ ಬುಕ್ ಹೌಸ್ | Leave a Comment »
Posted on December 22, 2008 by pusthakapreeethi
ನನ್ನ ಪ್ರೀತಿಯ ಕವಿತೆ
ಬೆರೆಸಿ ಆತ್ಮೀಯತೆ
ಹೇಳಿದಳು ಒಂದು ಮುಂಜಾನೆ
ಸಪ್ತಸಾಗರದಾಚೆ ಇದೆ ನನ್ನ ವೀಣೆ
ಹೋಗಿ ತರಲೇನು ಹೊತ್ತು ಮೇನೆ?
ವಸಂತಕುಮಾರ ಪೆರ್ಲರ `ರಂಗಸ್ಥಳ‘ ಕವನ ಸಂಕಲನದ `ನನ್ನ ಪ್ರೀತಿಯ ಕವಿತೆ‘ಯ ಸಾಲುಗಳಿವು. ಇಲ್ಲಿರುವ ಮುಂಜಾನೆ, ಮೇನೆ, ವೀಣೆಗಳೆಲ್ಲ ಕವಿತೆಯನ್ನು ಸಿಂಗರಿಸಿವೆ.
ಭಾವಗೀತೆ, ಗಂಭೀರ ಕವಿತೆ, ಪುರಾಣದ ರೂಪಕ – ಇವೆಲ್ಲ ಈ ಕವಿತೆಗಳಲ್ಲಿವೆ. ಒಂದಷ್ಟು ಹನಿಗವಿತೆಗಳು ಕೊನೆಗಿವೆ. ವೇಣುನಾದದಿ ತೇಲಿಸು, ಸೊದೆಯನೀಂಟಲು ತೋಯಿಸು ಮುಂತಾದ ಅಪರೂಪದ ಸಾಲುಗಳಿವೆ. ಗೋವಿಂದ ಪೈ ಸೈನ್ಯವಿರದ ಗಡಿ ರಾಜ್ಯಗಳ ಗೆದ್ದ ಸೇನಾನಿಯಾಗಿ, ರಥಬೀದಿಯುದ್ದ ತೇರೆಳೆದ ದಳವಾಯಿಯಾಗಿ [...]
Filed under: ಕಾವ್ಯ-ಕವನ, ಜೀವನ-ಚರಿತ್ರೆ/ಕಥನ | Tagged: ಕನ್ನಡ ಪ್ರಭ, ರಂಗಸ್ಥಳ, ವಸಂತ ಕುಮಾರ ಪೆರ್ಲ, ಸ್ವಾಗತ ಸಮಿತಿ 74ನೇ ಅಖಿ | 3 Comments »
Posted on December 14, 2008 by pusthakapreeethi
ಕುಗ್ರಾಮದಲ್ಲಿ ಎಮ್ಮೆ ಮೇಯಿಸುತ್ತಿದ್ದ ಬಾಲಕನೊಬ್ಬ ಸಂಪುಟ ಸಚಿವನಾಗುವ ಮಟ್ಟಕ್ಕೆ ಬೆಳೆದ ರಾಮೇಗೌಡರ ವಿಕಾಸ ಕಥನವೇ `ಬಚ್ಚಳ್ಳಿಯ ಬೆಳಕು‘.
ವರ್ತಮಾನದಲ್ಲಿ ಭೂತ ಉಳಿಸಿರುವ ಅಸ್ಪಷ್ಟ ಹೆಜ್ಜೆ ಗುರುತುಗಳ ಜಾಡು ಹಿಡಿವ ಕಾರ್ಯವನ್ನು ಮಾಡಿದ್ದಾರೆ. ಎಂ.ಜಿ.ಚಂದ್ರಶೇಖರಯ್ಯ. ರಾಮೇಗೌಡರನ್ನು ನಿಕಟವಾಗಿ ಬಲ್ಲ ಹತ್ತಾರು ಮಂದಿ ತಮ್ಮ ನೆನಪನ್ನು ಕೆದಕಿರುವುದು ಇಲ್ಲಿ ಪುಸ್ತಕವಾಗಿದೆ. ದಶಕಗಳ ಹಿಂದೆ ಸಂದುಹೋದ ವ್ಯಕ್ತಿಯೊಬ್ಬನ ನಡವಳಿಕೆ, ಗುಣಸಂಪನ್ನತೆ, ಮಾಡಿರುವ ಕೆಲಸಗಳನ್ನು ಇಲ್ಲಿ ಸ್ಮರಿಸಲಾಗಿದೆ.
ಸಾರ್ವಜನಿಕರ ನೆನಪು ಅಲ್ಪಾಯು. `ಆ ಕ್ಷಣ‘ವೇ ಮುಖ್ಯ ಎಂಬ ನಂಬಿಕೆ ಪ್ರಬಲವಾಗಿರುವ ಕಾಲಘಟ್ಟವಿದು ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ [...]
Filed under: ಜೀವನ-ಚರಿತ್ರೆ/ಕಥನ | Tagged: ಎಂ.ಜಿ. ಚಂದ್ರಶೇಖರಯ್ಯ, ಕನ್ನಡ ಪ್ರಭ, ಗೋಧೂಳಿ ಪ್ರಕಾಶನ, ಬಚ್ಚಳ್ಳಿಯ ಬೆಳಕು | Leave a Comment »
Posted on November 10, 2008 by pusthakapreeethi
ಭಾರತರತ್ನ ಭೀಮಸೇನ ಜೋಶಿ ಅವರನ್ನು ಕುರಿತು ವಸಂತ ಪೋತದಾರು ಮರಾಠಿಯಲ್ಲಿ ಬರೆದಿರುವ `ಭೀಮಸೇನ‘ ಎಂಬ ಜೀವನಚರಿತ್ರೆಯ ಕನ್ನಡ ಭಾಷಾಂತರವನ್ನು ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಟಿಸಿದೆ. (2006). ಈ ಪುಸ್ತಕವನ್ನು ನಾನು ಸಪ್ಟೆಂಬರ್ 23, 2007ರ `ಪುಸ್ತಕ ಪ್ರೀತಿ‘ ಅಂಕಣದಲ್ಲಿ ಪರಿಚಯಿಸಿದ್ದೆ. `ಗಾಯಕ ಒಬ್ಬ ಕಳ್ಳನಿರಬೇಕು. ಪ್ರತಿಯೊಬ್ಬ ಗಾಯಕ ಎಲ್ಲರಿಂದ ಉತ್ತಮವಾದುದನ್ನು ತೆಗೆದುಕೊಂಡು ತನ್ನದೇ ರಸಾಯನ ಸಿದ್ಧಗೊಳಿಸಬೇಕು‘ ಎನ್ನುವ ಭೀಮಸೇನ ಜೋಶಿಯವರ ಜೀವ ಚರಿತ್ರೆ ಒಂದು ಯಶಸ್ವೀ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ.
ಪಂಡರಪುರದಲ್ಲಿ ಕಾನಡಿ ವಿಠ್ಠಲ, ಪೂನಾದಲ್ಲಿ ಕನ್ನಡ [...]
Filed under: ಜೀವನ-ಚರಿತ್ರೆ/ಕಥನ | Tagged: ಉದಯವಾಣಿ, ಭೀಮಸೇನ, ಮನೋಹರ ಗ್ರಂಥಮಾಲೆ, ವಸಂತ ಪೋತದಾರು | Leave a Comment »
Posted on November 9, 2008 by pusthakapreeethi
ದೊಡ್ಡಬಳ್ಳಾಪುರದಿಂದ ನಂದಿಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ನಂದಿಮೋರಿ ದಾಟಿದರೆ, ಅಲ್ಲೆ ಎಡಕ್ಕೆ ರಸ್ತೆಯೊಂದು ತೆರೆದುಕೊಳ್ಳುತ್ತದೆ. ಆ ಚಿಕ್ಕ ರಸ್ತೆಯಲ್ಲಿ ವಡ್ಡರ ಪಾಳ್ಯ ದಾಟಿ ಹಾಗೆ ಮುಂದೆ ಸಾಗಿದರೆ, ಇದ್ದಕಿದ್ದಂತೆ ದಟ್ಟವಾದ ಮರಗಳ ನೆರಳು ಕವಿದ ಜಾಗವೊಂದು ಎದುರಾಗುತ್ತದೆ. ಬಿಸಿಲಲ್ಲಿ ಬಳಲಿ ಬಂದವರಿಗೆ ಒಂದರೆಗಳಿಗೆ ಅಲ್ಲೆ ವಿಶ್ರಮಿಸಿಕೊಳ್ಳುವ ಬಯಕೆ ಅನಪೇಕ್ಷಿತವಾಗಿ ಬಂದೂ ಬಿಡುತ್ತದೆ. ಹಾಗೆ ಎದುರಿಗೆ ಕಣ್ಣಾಡಿಸಿದರೆ ಆ ಮರದ ಪಕ್ಕದಲ್ಲೇ ಮೂಡಣ ದಿಕ್ಕಿಗೆ ಹಾದು ಹೋಗುವ ಸಾಧಾರಣ ಕಚ್ಚಾರಸ್ತೆಯೊಂದು ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಹೊಂಗೆ ಮರಗಳ ನೆರಳಲ್ಲಿ [...]
Filed under: ಜೀವನ-ಚರಿತ್ರೆ/ಕಥನ | Tagged: ಎಂ.ಜಿ.ಚಂದ್ರಶೇಖರಯ್ಯ, ಕನ್ನಡ ಪ್ರಭ, ಗೋಧೂಳಿ ಪ್ರಕಾಶನ ಬೆಂಗ, ಬಚ್ಚಳ್ಳಿಯ ಬೆಳಕು | Leave a Comment »
Posted on October 3, 2008 by pusthakapreeethi
ವಿಶ್ವೇಶ್ವರಯ್ಯನವರ ಕುರಿತು ನಮಗೆಲ್ಲಾ ಅಗಾಧ ಅಭಿಮಾನವಿದೆಯಾದರೂ ಅವರ ಕುರಿತು ಲಭ್ಯವಿರುವ ಮಾಹಿತಿ ಕಮ್ಮಿ. ಜೀವನ ವಿವರಗಳಂತೂ ಚಿತ್ರಾನ್ನ. ಸಾಧನೆ ಬೃಹತ್ತಾದುದರಿಂದ ಪುಣ್ಯವಶಾತ್ ಅದನ್ನು ನೋಡಿ, ನೋಡಿ ಅವರನ್ನು ನೆನಯುತ್ತಿರುತ್ತೇವೆ. (ವಿಶ್ವೇಶ್ವರಯ್ಯನವರಂಥ ಪ್ರತಿಭಾವಂತ ಮಹಾವ್ಯಕ್ತಿಯ ಸವಿಸ್ತಾರ ಜೀವನ ಚರಿತ್ರೆ ಪ್ರಕಟವಾಗದಿರುವುದು ನಮ್ಮ ಜನರ ಕೃತಘ್ನತೆ ಮತ್ತು ಸೋಮಾರಿ ಸ್ವಭಾವವನ್ನು ನಿರ್ದೇಶಿಸುತ್ತದೆ ಎಂದು ಡಿವಿಜಿಯೇ ಒಮ್ಮೆ ಗುಡುಗಿದ್ದರಂತೆ. ಪ್ರಮಾದವಶಾತ್ ಪುಸ್ತಕದಲ್ಲಿ `ಕೃತಜ್ಞತೆ‘ ಅಂತ ಅಚ್ಚಾಗಿಬಿಟ್ಟಿರುವುದು ಬೇರೆಯೇ ವಿಷಯ ಬಿಡಿ!)
1978ರಲ್ಲಿ ಪ್ರಕಟಗೊಂಡಿದ್ದ ಈ ಬೃಹತ್ ಪುಸ್ತಕದ ಮರು ಮುದ್ರಣ ಮೇಲಿನ [...]
Filed under: ಜೀವನ-ಚರಿತ್ರೆ/ಕಥನ | Tagged: ಅಂಕಿತ ಪುಸ್ತಕ, ಮೋಕ್ಷ ಗುಂಡಂ ವಿಶ್ವೇಶ, ವಿ. ಎಸ್. ನಾರಾಯಣರಾವ್ | Leave a Comment »
Posted on October 2, 2008 by pusthakapreeethi
ಶೀರ್ಷಿಕೆ: ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ ಲೇಖಕರು: ಬೋಳುವಾರು ಮಹಮದ್ ಕುಞ ಪ್ರಕಾಶಕರು : ಕನ್ನಡ ಪುಸ್ತಕ ಪ್ರಾಧಿಕಾರ ಪುಟಗಳು : 184 ಬೆಲೆ:ರೂ.90/-
Filed under: ಜೀವನ-ಚರಿತ್ರೆ/ಕಥನ | Tagged: ಕನ್ನಡ ಪುಸ್ತಕ ಪ್ರಾಧಿ, ತಟ್ಟು ಚಪ್ಪಾಳೆ ಪುಟ್ಟ , ಪಾಪು ಗಾಂಧಿ ಗಾಂಧಿ ಬಾಪ, ಬೋಳುವಾರು ಮಹಮದ್ ಕುಞ | 2 Comments »
Posted on August 16, 2008 by pusthakapreeethi
ನೌಕೆಯಂತೆ ತೀರದಲ್ಲಿ ಇಳಿಸಲಿಕ್ಕಾಗಿ ನಾನು ವಿಚಾರಗಳನ್ನು ಸ್ವೀಕರಿಸುವವನು. ತಲೆಯ ಮೇಲೇರಿಸಿಕೊಂಡು ತಿರುಗಲಿಕ್ಕಲ್ಲ ಎಂಬ ಬುದ್ದವಚನದ ಅನುಯಾಯಿ ವೋಲ್ಗಾ-ಗಂಗಾ ಲೇಖಕನ ವಿರಾಟ ವ್ಯಕ್ತಿತ್ವದ ಪರಿಚಯ ಬೇಕೇ ಈ ಪುಸ್ತಕ ಓದಿ.
ಮಹಾಪಂಡಿತ ರಾಹುಲ ಸಾಂಕೃತ್ಯಾಯನರು ತಮ್ಮ ಉದಾರತೆ, ಕರ್ತವ್ಯ ನಿಷ್ಠೆ, ಸಹಜತೆ ಮತ್ತು ಸತತ ಪರಿಶ್ರಮದಿಂದ ಇಡೀ ಭಾರತದಲ್ಲಿ ಇಂದಿನ ಸಂದರ್ಭಕ್ಕೆ ಒಬ್ಬ ಪ್ರೇರಣಾಪೂರ್ಣ ವ್ಯಕ್ತಿಯಾಗಿದ್ದಾರೆ. ಅವರ ಸಾಹಿತ್ಯಸೃಷ್ಟಿ ಎಷ್ಟು ವಿಶಾಲವ್ಯಾಪ್ತಿಯದೆಂದರೆ ಶಿಕ್ಷಣದ ಯಾವ ಭಾಗಕ್ಕೇ ಆಗಲಿ ಅದರ ಅಧ್ಯಯನ ತೀರ ಅಗತ್ಯವೆನಿಸಿದೆ. ಈ ಪುಸ್ತಕವು ರಾಹುಲರ ವ್ಯಕ್ತಿತ್ವ [...]
Filed under: ಜೀವನ-ಚರಿತ್ರೆ/ಕಥನ | Tagged: ಜಯ ಯೌಧ್ಯೇಯ, ವೋಲ್ಗಾ-ಗಂಗಾ, ಸಿಂಹ ಸೇನಾಪತಿ, Selected Essays of Rahul Sankrityayan | Leave a Comment »