ಗಣಿಯಾಳದಲ್ಲಿ ಸಿಕ್ಕಿಹಾಕಿಕೊಂಡ 33 ಕಾರ್ಮಿಕರನ್ನು ಮೇಲಕ್ಕೆತ್ತಿದ ಅಭೂತಪೂರ್ವ ಘಟನೆಯ ದಾಖಲೆ ಕನ್ನಡದಲ್ಲಿ !

. . . ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲಾ ಕ್ಯಾಮರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು. ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರೊ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. `ನಾವು 33 ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ `ಲೋಸ್ 33′ (ಈ 33) ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್ ಗಳಲ್ಲಿ, [...]

ಮೇ ದಿನ ಚಿರಾಯುವಾಗಲಿ

ಎಂಟು ಗಂಟೆಯ ದುಡಿಯುವ ದಿನ‘ ದ ಬೇಡಿಕೆಯಿಟ್ಟು ಹೋರಾಟ ಬಲಿದಾನಗಳಿಂದ ಸಾಧಿಸಿದ ಗೆಲವಿನ ದಿನವೇ ಮೇದಿನ. “ಎಂಟು ಗಂಟೆಯ ದುಡಿಯುವ ದಿನದ ಬೇಡಿಕೆ ಎಲ್ಲಾ ಕಾರ್ಮಿಕ ವರ್ಗದ ಬೇಡಿಕೆ. ಇದು ಕೆಲವು ಮಾಲಿಕರೆದುರು ಕೆಲವು ಕಾರ್ಮಿಕರು ಇಟ್ಟಿರುವ ಬೇಡಿಕೆಯಲ್ಲ. ಸದ್ಯದ ಸಮಸ್ತ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಗಳಾದ ಪ್ರಭುತ್ವದ ಅಧಿಕಾರಿಗಳ ಸಮಸ್ತ ಬಂಡವಾಳಶಾಹಿವರ್ಗದ ಉತ್ಪಾದನಾ ಸಾಧನಗಳ ಒಡೆಯರ ಎದುರಿಗೆ ಇಟ್ಟಿರುವ ಬೇಡಿಕೆ ಇದು.. . .” -ಲೆನಿನ್ ಮಕ್ಕಳನ್ನು ಓದಿಸಿ ಇಂಜಿನಿಯರ‍್ ಮಾಡಿಸುವ ಕನಸು ಕಾಣದ [...]

ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ

ಕೋಟ್ಯಂತರ ಬೆಲೆ ಬಾಳುವ ಕಬ್ಬಿಣದ ಅದಿರು, ದಟ್ಟವಾದ ಕಾಡು, ಫಲವತ್ತಾದ ಜಮೀನನ್ನು ಹೊಂದಿದ ಸೊಂಡೂರು ಪ್ರದೇಶದ ಭೂಹೋರಾಟ ವಿಶಿಷ್ಟವಾದುದು. ಯಾಕೆಂದರೆ ಇದು ಒಬ್ಬ ಭೂಮಾಲಿಕನ ವಿರುದ್ಧ ಮಾತ್ರವಲ್ಲ. ಮಾಜಿ ದೊರೆ ಹಾಗೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧ ಸಂಘಟನೆಗೊಂಡ ಚಳವಳಿ ಆಗಿತ್ತು. ಸ್ವತಂತ್ರ ಪ್ರಾಂತ್ಯವಾಗಿದ್ದ ಸೊಂಡೂರು ಬ್ರಿಟೀಷರು ಭಾರತ ಬಿಟ್ಟುಕೊಟ್ಟ ಬಳಿಕ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯವೂ ಹೌದು. ಸೊಂಡೂರು ರಾಜಮನೆತನ ಕಾಂಗ್ರೇಸ್ ಚಳವಳಿಯನ್ನು ನಿಷೇಧಿಸಿತ್ತು. ಮುಂದೆ ಇದೇ ವಂಶದವರು ಅರಸು ಮಂತ್ರಿ ಮಂಡಲದಲ್ಲಿ ದೀರ್ಘಕಾಲ ಅರ್ಥ [...]

ಸಮಕಾಲೀನ ಸಾಹಿತ್ಯ ಚರಿತ್ರೆ

ಹಿರಿಯ ಕವಿ, ವಿಮರ್ಶಕ ಸುಮತೀಂದ್ರ ನಾಡಿಗರು ಬರೆದಿರುವ ಈ ಸಮಕಾಲೀನ ಸಾಹಿತ್ಯ ಚರಿತ್ರೆ, ಇವತ್ತಿನ ಸಂದರ್ಭಕ್ಕೆ ತುಂಬಾ ಅಗತ್ಯವಾಗಿತ್ತು. ಸಾಹಿತ್ಯ ಚರಿತ್ರೆ ಅಂದರೆ ನವೋದಯ, ಪ್ರತಿಶೀಲ, ನವ್ಯ, ನವ್ಯೋತ್ತರ ಸಾಹಿತ್ಯ ಚಳವಳಿಗಳ ದಾಖಲೆ ಎಂತಾಗಿಬಿಟ್ಟು ಎಲ್ಲಿ ನೋಡಿದರೂ ಅವೇ, ಎಷ್ಟು ಓದಿದರೂ ಅವೇ ಅಂತಾಗಿಬಿಟ್ಟಿದ್ದಾಗ ಹೀಗೊಂದು ಕಾಂಟೆಂಪೊರೆರಿ ದಾಖಲೆ ಸೆಳೆಯುತ್ತದೆ. ಇದರ ಸ್ವರೂಪವೂ ಭಿನ್ನವಾಗಿರಬೇಕೆಂದು ಬಯಸುತ್ತಾ ಕಳೆದ 50-60 ವರುಷಗಳಲ್ಲಿ ಯಾವ ಸಾಹಿತಿಗಳು ಯಾವ ಸಾಹಿತಿಗಳನ್ನು ಭೇಟಿಯಾದರು, ಅವರ ಸಂಬಂಧ ಹೇಗಿತ್ತು, ಅವರು ಸಾಹಿತ್ಯಕ್ಕೆ ಸಂಬಂಧಿಸಿದ ಎಂತಹ [...]

Follow

Get every new post delivered to your Inbox.