ಶೀರ್ಷಿಕೆ: ಮದುವೆಯ ಆಲ್ಬಂ ಲೇಖಕರು:ಗಿರೀಶ ಕಾರ್ನಾಡ್ ಪ್ರಕಾಶಕರು:ಮನೋಹರ ಗ್ರಂಥಮಾಲಾ ಪುಟಗಳು:100 ಬೆಲೆ:ರೂ.60/- ಕೃಪೆ: ದೇಶ ಕಾಲ ವಿಶೇಷ
Filed under: ನಾಟಕ-ರಂಗಭೂಮಿ | Tagged: ಗಿರೀಶ ಕಾರ್ನಾಡ್, ದೇಶ ಕಾಲ ವಿಶೇಷ, ಮದುವೆಯ ಆಲ್ಬಂ, ಮನೋಹರ ಗ್ರಂಥಮಾಲಾ | Leave a Comment »
ಶೀರ್ಷಿಕೆ: ಮದುವೆಯ ಆಲ್ಬಂ ಲೇಖಕರು:ಗಿರೀಶ ಕಾರ್ನಾಡ್ ಪ್ರಕಾಶಕರು:ಮನೋಹರ ಗ್ರಂಥಮಾಲಾ ಪುಟಗಳು:100 ಬೆಲೆ:ರೂ.60/- ಕೃಪೆ: ದೇಶ ಕಾಲ ವಿಶೇಷ
Filed under: ನಾಟಕ-ರಂಗಭೂಮಿ | Tagged: ಗಿರೀಶ ಕಾರ್ನಾಡ್, ದೇಶ ಕಾಲ ವಿಶೇಷ, ಮದುವೆಯ ಆಲ್ಬಂ, ಮನೋಹರ ಗ್ರಂಥಮಾಲಾ | Leave a Comment »
ಶೀರ್ಷಿಕೆ: ನಟನೆಯ ಪಾಠಗಳು ಲೇಖಕರು:ಪ್ರಸನ್ನ ಪ್ರಕಾಶಕರು:ಕನ್ನಡ ಪುಸ್ತಕ ಪ್ರಾಧಿಕಾರ ಪುಟ:368 ಬೆಲೆ:ರೂ.150/-
Filed under: ನಾಟಕ-ರಂಗಭೂಮಿ | 1 Comment »
ರಂಗಭೂಮಿ ಬೆಂಗಳೂರಿನಿಂದ ಆಚೆ ಹೋಗಿಲ್ಲ ಎಂಬ ಭಾವನೆ ಮೂಡುವಂತೆ ಸದ್ಯದ ಸ್ಥಿತಿ ಇದೆ. ಪ್ರಕಟವಾಗುವ ಪತ್ರಿಕಾ ವಿಮಶರ್ೆಗಳಲ್ಲಿ ಬೆಂಗಳೂರಿನ ನಾಟಕಗಳೇ ತುಂಬಿರುತ್ತವೆ. ದೃಶ್ಯ ಮಾಧ್ಯಮಗಳ ಪಾಲಿಗೆ ಥಿಯೇಟರ್ ಅಕ್ಷರಶಃ `ಮೃತ ರಂಗಭೂಮಿ‘. ಬೆಂಗಳೂರಿನ ಹೊರಗೂ ರಂಗಭೂಮಿ ಇದೆ ಎಂದು ಹೇಳಲು ಆದಾರಕ್ಕೆ ನೀನಾಸಂ, ರಂಗಾಯಣಗಳನ್ನಷ್ಟೇ ಹೆಸರಿಸುತ್ತೇವೆ. ಆದರೆ ತಿಪಟೂರು, ಸಾಣೆಹಳ್ಳಿ, ಶಿವಮೊಗ್ಗ, ಉಡುಪಿಗಳಲ್ಲಿ ರಂಗಭೂಮಿಯನ್ನು ಹಲವರು ಹಚ್ಚಿಕೊಂಡು, ಬೆಳೆಸುತ್ತಿದ್ದಾರೆ. ಗ್ರಾಮೀಣ ರಂಗಭೂಮಿ ಇನ್ನೂ ಹೆಚ್ಚು ಹುಲುಸಾಗಿದೆ. ಈ ನಿಟ್ಟಿನಲ್ಲಿ `ಬೆಳ್ಳೇಕೆರೆ ಹಳ್ಳಿ ಥೇಟರ್‘ ಎಂಬ ಕೃತಿ ಇಲ್ಲಿ [...]
Filed under: ನಾಟಕ-ರಂಗಭೂಮಿ, Uncategorized | Tagged: ಅಭಿನವ ಪ್ರಕಾಶನ, ಕನ್ನಡ ಪ್ರಭ, ಪ್ರಸಾದ್ ರಕ್ಷಿದಿ, ಬೆಳ್ಳೇಕೆರೆ ಹಳ್ಳಿ ಥೇಟರ್ | Leave a Comment »
ತಮ್ಮ ಕತೆ ಕಾದಂಬರಿಗಳಿಂದ ಪ್ರಸಿದ್ಧರಾಗಿರುವ ವಿವೇಕ ಶಾನಭಾಗದ ಎರಡನೆಯ ನಾಟಕ `ಬಹುಮುಖಿ‘. ನಗರಾಭಿಮುಖ ಚಲನೆ ತುಂಬ ತೀವ್ರವಾಗಿರುವ ತೀರಾ ಸಮಕಾಲೀನವೆನ್ನಿಸುವ ವಿದ್ಯಮಾನಗಳಿಗೆ ಒಡ್ಡಿದ ರೂಪಕದಂತಿರುವ ಈ ನಾಟಕ ಈ ಹೊತ್ತಿನ ಅನೇಕ ಮುಖ್ಯ ಪ್ರಶ್ನೆಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆ. ಹಲವು ಪಾತ್ರ, ಘಟನೆಗಳ ಸುತ್ತ ಹೆಣೆದುಕೊಂಡಿರುವ ಈ ನಾಟಕವು ಸದ್ಯದ ನಗರದ ಜೀವನ ಕ್ರಮದಲ್ಲಿ `ಯಶಸ್ವಿ‘ಯಾಗುವುದು ಹೇಗೆ, `ಸುಖಿ‘ಯಾಗಿರುವುದು ಹೇಗೆ ಎಂಬ ಆತಂಕದಲ್ಲಿರುವ ವ್ಯಕ್ತಿಗಳ ಪಾಡನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಬೆಂಗಳೂರು ಎಂಬುದು ಈ ನಾಟಕದಲ್ಲಿ ಜನಭರಿತವಾದ ಕೇವಲ [...]
Filed under: ನಾಟಕ-ರಂಗಭೂಮಿ | Tagged: ಅಕ್ಷರ ಪ್ರಕಾಶನ ಹೆಗ್ಗ, ಬಹುಮುಖಿ, ವಿಜಯ ಕರ್ನಾಟಕ, ವಿವೇಕ ಶಾನಭಾಗ | Leave a Comment »
ಕಥೆ, ನಾಟಕ, ಚಿತ್ರಕಲೆಯ ಬಹುರೂಪಿ ಚೌಗಲೆ ಅವರು ಅನುವಾದ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಮರಾಠಿಯ ಹಲವು ಪ್ರಮುಖ ನಾಟಕಗಳನ್ನು ಅವು ಕನ್ನಡದ್ದೇ ಸ್ವಂತ ಕೃತಿ ಎನಿಸುವಷ್ಟು ಸಮರ್ಥವಾಗಿ ರೂಪಾಂತರಿಸಿದ್ದಾರೆ. ನಾಟಕ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಚೌಗಲೆ ಅವರ ಸಣ್ಣ ಕಥೆ ಆಧರಿಸಿ ಮತ್ತೊಬ್ಬ ನಟ, ನಿರ್ದೇಶಕ, ಲೇಖಕ ಶಿರೀಷ ಜೋಷಿ `ಬೆಸುಗೆಗೊಳ್ಳದ ಹಳಿಗಳು‘ ಎಂಬ ನಾಟಕವಾಗಿಸಿದ್ದಾರೆ. ನಾಟಕದ ಶೀರ್ಷಿಕೆ `ಬೆಸುಗೆಗೊಳ್ಳದ …‘ ಎಂದಿದ್ದರೂ ಈ ಇಬ್ಬರು ಪ್ರತಿಭಾವಂತರ ಜುಗಲ್ ಬಂದಿಯಿಂದಾಗಿ ನಾಟಕ ಬಿಗಿಯಾದ ಬಂಧದಿಂದ ಸುಮಧುರವಾಗಿ [...]
Filed under: ನಾಟಕ-ರಂಗಭೂಮಿ | Tagged: ಗಾಂಧಿ-ಅಂಬೇಡ್ಕರ, ಡಿ.ಎಸ್.ಚೌಗಲೆ, ಬೆಸುಗೆಗೊಳ್ಳದ ಹಳಿಗಳು, ಶಿರೀಷ ಜೋಷಿ, ಸುಧಾ | Leave a Comment »
ಖ್ಯಾತ ಕವಿ-ನಾಟಕಕಾರ ಎಚ್.ಎಸ್.ಶಿವಪ್ರಕಾಶರ ನಾಲ್ಕು ಕಿರುನಾಟಕಗಳ ಸಂಕಲನ ಮದುವೆಯ ಆಟಗಳು. `ಮದುವೆಯ ಹೆಣ್ಣು` ಎಂಬ ಮೊದಲ ನಾಟಕ ತೋಂಡ ಬುಡಕಟ್ಟಿನ ವಿಶಿಷ್ಟ ಮದುವೆಯ ಸಂಪ್ರದಾಯವನ್ನು ಆಧರಿಸಿದ್ದರೆ, ಎರಡನೆಯ ನಾಟಕವಾದ `ಕಸಂದ್ರಾ` ಈಸ್ಖಿಲಸ್ ರಚಿತ ಗ್ರೀಕ್ ನಾಟಕ ತ್ರಿವಳಿಯಲ್ಲಿ ಒಂದಾದ ಅಗಮೆಮ್ನಾನ್ ನಾಟಕದ ರೂಪಾಂತರ, ಮೂರನೆಯದಾದ `ಸತಿ` ಶಿವ-ದಾಕ್ಷಾಯಣಿ ಪುರಾಣ ಪ್ರಸಂಗವನ್ನಾಧರಿಸಿದೆ. ಕೊನೆಯ ನಾಟಕವಾದ `ಮಕರಚಂದ್ರ` ಲೇಖಕರು ದಾಖಲಿಸಿರುವಂತೆ, ಜಪಾನಿ ಭಾಷೆಯ `ನೋ ನಾಟಕ` `ಡಮಾಸ್ ಡ್ರಮ್` ಎಂಬುದನ್ನು ಆಧರಿಸಿದೆ. ಈ ನಾಲ್ಕು ನಾಟಕಗಳಲ್ಲಿ `ಕಸಂದ್ರ` ಹೊರತುಪಡಿಸಿದರೆ ಉಳಿದ [...]
Filed under: ನಾಟಕ-ರಂಗಭೂಮಿ | Tagged: ಅಭಿನವ, ಎಚ್ ಎಸ್ ಶಿವಪ್ರಕಾಶ್, ಪ್ರಜಾವಾಣಿ, ಮದುವೆಯ ಆಟಗಳು (ನಾಟಕಗಳ | Leave a Comment »
ಕನ್ನಡದ ಮಕ್ಕಳ ರಂಗಭೂಮಿಯಲ್ಲಿ ಡಾ. ಆರ್.ವಿ. ಭಂಡಾರಿ ಆದ್ಯರು. ಮಕ್ಕಳ ಕತೆ, ಕಾದಂಬರಿ, ನಾಟಕ ಯಾವುದೇ ಇರಲಿ ಇವುಗಳ ರಚನೆಯಲ್ಲಿ ಅವರು `ಪ್ರಸಿದ್ಧ’ರಲ್ಲದಿದ್ದರೂ `ಸಿದ್ಧ’ರು. ಮಕ್ಕಳ ರಂಗಭೂಮಿಯ ಚಹರೆ ಇನ್ನೂ ಸ್ಪಷ್ಟವಾಗುತ್ತಿದ್ದ ಕಾಲದಲ್ಲಿಯೇ ಅವರು ಇಂದು ನಾವು ಯಾವುದನ್ನು ಮಕ್ಕಳ ರಂಗಭೂಮಿಯ ಗಂಭೀರ ಪ್ರಯೋಗ ಅನ್ನುತ್ತಿದ್ದೇವೆಯೋ ಅಂತಹ ಮಾದರಿಗಳನ್ನು ರಚಿಸಿದವರು, ಪ್ರಯೋಗಿಸಿದವರು. ಆರ್.ವಿ. ಮಕ್ಕಳ ನಾಟಕಗಳನ್ನು `ಚಂದಕ್ಕಾಗಿ’ ಬರೆದವರಲ್ಲ. ಅದನ್ನು ಚಂದಗೊಳಿಸಲಿಕ್ಕಾಗಿಯೇ ಕಷ್ಟಪಟ್ಟವರಲ್ಲ. ನಿರ್ದಷ್ಟ `ಆಶಯಗಳು’ ಅದರ ಬೆನ್ನ ಹಿಂದೆಯೇ ಇರುತ್ತದೆ. ಆದರೆ ಅವು ಗೊಂದಲಗೊಳ್ಳದೇ ಸರಳ, [...]
Filed under: ನಾಟಕ-ರಂಗಭೂಮಿ | Tagged: ಆರ್.ವಿ.ಭಂಡಾರಿ, ಬಂಡಾಯ ಪ್ರಕಾಶನ, ಬಣ್ಣದ ಹಕ್ಕಿ(ಮಕ್ಕಳಿಗ | Leave a Comment »
ರಾಜಶೇಖರ ಕದಂಬ ಮೈಸೂರಿನ ರಂಗಚಟುವಟಿಕೆಗಳಲ್ಲಿ ಸರ್ವಾಂತರ್ಯಾಮಿ. ರಂಗಕರ್ಮಿಗಳ, ನಟನಟಿಯರ ಸಖ್ಯ ಬೆಳೆಸಿಕೊಂಡು ಅವರ ಏಳಿಗೆಗಾಗಿ ಸದ್ದುಗದ್ದಲವಿಲ್ಲದೆ ಓಡಾಡುತ್ತಾ, ಅವರಿಗೆಲ್ಲಾ ಸಲ್ಲಬೇಕಾದ ಗೌರವಾದರಗಳಿಗಾಗಿ ಓಡಾಡುವ ಹಿರಿಯ ಚೇತನ ಎನ್ನುತ್ತಾರೆ ನ. ರತ್ನ. ಕದಂಬ ಬರೆದಿರುವ `108 ರಂಗಮುಖಗಳು‘ ಪುಸ್ತಕ ಕರ್ನಾಟಕದಲ್ಲಿರುವ ರಂಗಕರ್ಮಿಗಳ ಪರಿಚಯ. ಎಲ್ಲಾ ಭಾಗಗಳ ಕಲಾವಿದರನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ ಕದಂಬ. ಪ್ರಸ್ತುತ ರಂಗಭೂಮಿಯಲ್ಲಿ ಪ್ರಚಲಿತವಿರುವ ಹಿಂದೆ ಸಾಕಷ್ಟು ಕೆಲಸ ಮಾಡಿ ಸಂಧ್ಯಾಕಾಲದಲ್ಲಿರುವ ವಯೋವೃದ್ಧ ಕಲಾವಿದರ ಪರಿಚಯವನ್ನು ಮಾಡುವ ಅಪರೂಪದ ಕೆಲಸ ಕದಂಬ ಮಾಡಿದ್ದಾರೆ. ಶೀರ್ಷಿಕೆ : [...]
Filed under: ನಾಟಕ-ರಂಗಭೂಮಿ | Tagged: 108 ರಂಗಮುಖಗಳು, ಭಾರತಿ ಪ್ರಕಾಶನ, ರಾಜಶೇಖರ ಕದಂಬ | Leave a Comment »
ನಾಡಿನ ಹಿರಿಯರು, ರಂಗಕರ್ಮಿಗಳು ಎಂದು ಖ್ಯಾತರಾದವರು ಎ.ಎಸ್.ಮೂರ್ತಿ. ಮೂರ್ತಿ ವಯಸ್ಸಿನಲ್ಲಿ ಹಿರಿಯರಾದರೂ ಕೀ ರ್ತಿಯೂ ಅಷ್ಟೇ ದೊಡ್ಡದು. `ಒಂದು ವಿಧದಲ್ಲಿ ನಾಟಕವನ್ನು ಅವರು ಬಾಳಿನ ಅತ್ಯಂತ ಪ್ರಮುಖ ಕಾರ್ಯ ಎಂದು ತೀರ್ಮಾ ನಿಸಿಬಿಟ್ಟಿದ್ದರು. ಒಂದು ವಿಧದಲ್ಲಿ ಅದು ಅವರಿಗೆ ರಕ್ತಗತವಾಗಿ ಬಂದ ಆಸಕ್ತಿ. ಅವರ ತಂದೆ ಅ.ನ.ಸುಬ್ಬರಾಯರು ಸ್ವತಃ ನಾಟಕಕಾರರೂ ರಂಗಕರ್ಮಿಗಳೂ ಆಗಿದ್ದರು. ಅವರಿಗೆ ಕಲೆಯೇ ಜೀವನವಾಗಿತ್ತು’. `ಕಲಾಮಂದಿರದ ಆಶ್ರಯದಲ್ಲಿ ಎ.ಎಸ್.ಮೂರ್ತಿಯವರು ಎಷ್ಟೊಂದು ಜನ ಯುವಕ ಯುವತಿಯರನ್ನು ಅಭಿನಯ ಕಲೆಯಲ್ಲಿ ತಯಾರು ಮಾಡಿದರು ಎಂಬುದೇ ಆಶ್ಚರ್ಯಕರವಾಗದ ವಿಷಯ’ [...]
Filed under: ನಾಟಕ-ರಂಗಭೂಮಿ | Tagged: ಎ.ಎಸ್.ಮೂರ್ತಿ, ದೇಸಿ v/s ಪರದೇಸಿ, ಸುಂದರ ಪ್ರಕಾಶನ | Leave a Comment »
ಅಕಿರಾ ಕುರಸೋವಾ ಜಪಾನಿ ಸಿನೆಮಾ `ರಾನ್‘ನ ಆಧಾರಿತ ನಾಟಕ `ಅಗ್ನಿಲೋಕ‘ವನ್ನು ರೂಪಾಂತರ ಮಾಡಿ ಕನ್ನಡಕ್ಕೆ ತಂದಿದ್ದಾರೆ ವಸಂತ ಬನ್ನಾಡಿ. ತಿಂಗಳ ಬೆಳಕು ಪ್ರಕಾಶನ ಇದನ್ನು ಆಕರ್ಷಕವಾಗಿ ಪ್ರಕಟಿಸಿದೆ. 30 ರೂ ಗೆ ಇಷ್ಟು ಒಳ್ಳೆಯ ಪುಸ್ತಕ ಸಿಗುತ್ತದೆ ಎನ್ನುವುದು ಖುಷಿಯ ವಿಚಾರ. ಬನ್ನಾಡಿಯವರ ರೂಪಾಂತರ ಸೊಗಸಾಗಿದೆ. ಸಿನೆಮಾ ಆಗಿ `ರಾನ್‘ಗಿದ್ದ ಸಾಧ್ಯತೆಗಳನ್ನು ನಾಟಕಕ್ಕೆ ಅಳವಡಿಸುವಲ್ಲಿ ಅವರು ಸಫಲರಾಗಿದ್ದಾರೆ. ರಾನ್ ನೋಡಿರುವವರು ಈ ಪುಸ್ತಕವನ್ನು ಖಂಡಿತಾ ಇಷ್ಟಪಡುತ್ತಾರೆ, ನೋಡದಿದ್ದವರು ಕೂಡಾ. ಬಹುಶಃ `ರಾಶೋಮನ್‘ ನಂತರ ಕುರಸೋವಾನ ಇನ್ನೊಂದು ಸಿನೆಮಾ [...]
Filed under: ನಾಟಕ-ರಂಗಭೂಮಿ | Tagged: ಅಕಿರಾ ಕುರಸೋವಾ, ಅಗ್ನಿಲೋಕ, ತಿಂಗಳ ಬೆಳಕು ಪ್ರಕಾಶನ, ರಾನ್, ವಸಂತ ಬನ್ನಾಡಿ | Leave a Comment »