ಕರ್ಕಿ ಮೇಳ ಶುರುವಾಗಿದ್ದು ಸುಮಾರು 1800 ರಲ್ಲಿ

ಈ ಪುಸ್ತಕ ನಾರಾಯಣ ಮಧ್ಯಸ್ಥ ಅವರ ಅಧ್ಯಯನದ ಫಲವಾಗಿದೆ. ಅವರು ಉತ್ತರ ಕನ್ನಡದ ಹೊನ್ನಾವರದ ಕರ್ಕಿ ಯಕ್ಷಗಾನ ಮೇಳದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಎಂದಿನ ಅಕಡಮಿಕ್ ಅಧ್ಯಯನದ ಕ್ರಮವನ್ನು ಅನುಸರಿಸಿರುವ ಮಧ್ಯಸ್ಥರು ಮೊದಲ ಮೂರು ಅಧ್ಯಾಯಗಳನ್ನು ಅಧ್ಯಯನದ ಉದ್ದೇಶ, ವ್ಯಾಪ್ತಿ, ಯಕ್ಷಗಾನದ ಹಿನ್ನೆಲೆಗೆ ಮೀಸಲಾಗಿರಿಸಿದ್ದಾರೆ.
ಉತ್ತರ ಕನ್ನಡ ತಿಟ್ಟಿನ ಪರಂಪರೆ ಪ್ರಸಂಗ, ಬಣ್ಣಗಾರಿಕೆ, ನೃತ್ಯಾಭಿನಯ, ಮುದ್ರೆಗಳ ಬಳಕೆ, ಹಿಮ್ಮೇಳಗಳ ವಿಶೇಷತೆಯಿಂದಾಗಿ ಪಡುವಲಪಾಯ ಯಕ್ಷಗಾನದಲ್ಲಿ ತನ್ನದೇ ಆದ ಪರಂಪರೆ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದೆ – ಎಂದು ಗುರುತಿಸುತ್ತಾರೆ ಲೇಖಕರು. ಈ [...]

ಬೆಳ್ಳಿ ತೆರೆ ಬೆಳಗಿದವರು

ಚಿತ್ರರಂಗದ ಆಕರ ಗ್ರಂಥ
ಕನ್ನಡ ಚಿತ್ರರಂಗಕ್ಕಾಗಿ ದುಡಿದವರ ಕುರಿತ ಮಾಹಿತಿಗಳು ಈ ಪುಸ್ತಕದಲ್ಲಿದೆ. ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ದುಡಿದ ಕಲಾವಿದರು, ತಂತ್ರಜ್ಞರ ಪರಿಚಯವನ್ನು ಸಂಕ್ಷಿಪ್ತವಾಗಿ ಈ ಕೃತಿ ನೀಡುತ್ತದೆ.
`ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ವಿವರ ಕಟ್ಟುತ್ತಾ ಹೋಗುವ ಈ ಲೇಖನಗಳನ್ನು ಒಂದು ಒಳ್ಳೆಯ ಆಕರ ಸಾಮಾಗ್ರಿಯಾಗಿ ನೋಡಬಹುದು. ಲೇಖಕನ ವೈಯಕ್ತಿಕ ಅನಿಸಿಕೆಗಳನ್ನು ಇಲ್ಲಿ ಸೇರಿಸಿಲ್ಲವಾದ್ದರಿಂದ ವಿಷಯದ ಮೇಲ್ಮೈ ದಾಟಿ ಒಳನುಗ್ಗಿ ನೋಡುವವರಿಗೆ ಸ್ವಲ್ಪ ನಿರಾಶೆಯಾಗಬಹುದು. ಆದರೆ ಒಂದು ವಿಷಯ ಸೂಚಿ [...]