ಶೀರ್ಷಿಕೆ:ಜಗವೆಲ್ಲ ನಗುತಿರಲಿ ಲೇಖಕರು:ಶೈಲಾ ಛಬ್ಬಿ ಸಂಪಾದಕರು:ಅವನಿ ರಸಿಕರ ರಂಗ ಪ್ರಕಾಶನ ಪುಟ:126 ಬೆಲೆ:80 ಪ್ರಕಟಣೆ:2010
Filed under: ಪ್ರಬಂಧ ಸಂಕಲನ | Leave a Comment »
ಶೀರ್ಷಿಕೆ:ಜಗವೆಲ್ಲ ನಗುತಿರಲಿ ಲೇಖಕರು:ಶೈಲಾ ಛಬ್ಬಿ ಸಂಪಾದಕರು:ಅವನಿ ರಸಿಕರ ರಂಗ ಪ್ರಕಾಶನ ಪುಟ:126 ಬೆಲೆ:80 ಪ್ರಕಟಣೆ:2010
Filed under: ಪ್ರಬಂಧ ಸಂಕಲನ | Leave a Comment »
ಇದು ಲಲಿತ ಪ್ರಬಂಧಗಳ ಸಂಕಲನ. ಬದುಕಿನಲ್ಲ ಕಾಣಿಸುವ ಪುಟ್ಟ ಸಂಗತಿಗಳ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಲು ಪ್ರಯತ್ನಿಸಿ ಬರೆದ ಲೇಖನಗಳ ಸರಮಾಲೆ. ಈ ಪುಸ್ತಕ ಕರ್ನಾಟಕದ ಎಲ್ಲಾ ನವಕರ್ನಾಟಕ ಪುಸ್ತಕ ಮಳಿಗೆಗಳು, ಸ್ವಪ್ನ ಪುಸ್ತಕ ಮಳಿಗೆ, ಅಂಕಿತ ಪುಸ್ತಕ ಮಳಿಗೆ, ಜಯನಗರದ “ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ಶೀರ್ಷಿಕೆ:ಗುಬ್ಬಿ ಎಂಜಲು ಲೇಖಕರು:ಶಿವು ಕೆ. ಪ್ರಕಾಶಕರು:ತುಂತುರು ಪ್ರಕಾಶನ ಪುಟಗಳು: ಬೆಲೆ:ರೂ.
Filed under: ಪ್ರಬಂಧ ಸಂಕಲನ | Tagged: ಗುಬ್ಬಿ ಎಂಜಲು, ತುಂತುರು ಪ್ರಕಾಶನ, ಶಿವು ಕೆ. | Leave a Comment »
ಈ ಪುಸ್ತಕದ ವಿಚಾರವೇ ಹೊಸತು. ಮುಂಜಾನೆ ಚುಮುಚುಮು ಬೆಳಕಿನಲ್ಲಿ ನಡೆಯುವ ದಿನಪತ್ರಿಕೆ ವಿತರಣೆ ಎನ್ನುವ ಸಂತೆಯೊಳಗೆ ನಡೆಯುವ ವೈವಿಧ್ಯತೆಗಳನ್ನು ಪರಿಚಯಿಸುವಲ್ಲಿ ಒಂದು ಪ್ರಯತ್ನ. ಈ ಪುಸ್ತಕ ಮೊದಲ ಮುದ್ರಣ ಪ್ರತಿಗಳೆಲ್ಲ ಮುಗಿದು ಎರಡನೇ ಮುದ್ರಣವಾಗಿದೆ. ಈ ಪುಸ್ತಕ ಕರ್ನಾಟಕದ ಎಲ್ಲಾ ನವಕರ್ನಾಟಕ ಪುಸ್ತಕ ಮಳಿಗೆಗಳು, ಸ್ವಪ್ನ ಪುಸ್ತಕ ಮಳಿಗೆ, ಸ್ವಪ್ನ ಪುಸ್ತಕ ಮಳಿಗೆ, ಜಯನಗರದ “ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ಶೀರ್ಷಿಕೆ:ವೆಂಡರ್ ಕಣ್ಣು ಲೇಖಕರು:ಶಿವು ಕೆ. ಪ್ರಕಾಶಕರು: ಪುಟಗಳು: ಬೆಲೆ:ರೂ.
Filed under: ಪ್ರಬಂಧ ಸಂಕಲನ | Tagged: ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆ, ನವಕರ್ನಾಟಕ ಪುಸ್ತಕ ಮಳಿಗೆ, ವೆಂಡರ್ ಕಣ್ಣು, ಶಿವು ಕೆ., ಸ್ವಪ್ನ ಪುಸ್ತಕ ಮಳಿಗೆ | Leave a Comment »
ಶೀರ್ಷಿಕೆ:ಹಿಡಿಯದ ಹಾದಿ ಲೇಖಕರು:ಗಿರಡ್ಡಿ ಗೋವಿಂದರಾಜ ಪ್ರಕಾಶಕರು:ಮನೋಹರ ಗ್ರಂಥಮಾಲೆ ಪುಟಗಳು:160 ಬೆಲೆ:ರೂ.70/- ಕೃಪೆ: ದೇಶ ಕಾಲ ವಿಶೇಷ
Filed under: ಪ್ರಬಂಧ ಸಂಕಲನ | Tagged: ಗಿರಡ್ಡಿ ಗೋವಿಂದರಾಜ, ದೇಶ ಕಾಲ ವಿಶೇಷ, ಮನೋಹರ ಗ್ರಂಥಮಾಲೆ, ಹಿಡಿಯದ ಹಾದಿ | Leave a Comment »
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಲಲಿತ ಪ್ರಬಂಧ ವಿಭಾಗದಲ್ಲಿ ಪುಸ್ತಕ ಪ್ರಶಸ್ತಿ ಪಡೆದ ಕೃತಿ. ಒಳ್ಳೆಯ ಕತೆ ಬರೆಯುವವರೆಲ್ಲರೂ ಒಳ್ಳೆಯ ಪ್ರಬಂಧಗಳನ್ನು ಬರೆಯುತ್ತಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. “ಹೊರಗೂ ಮಳೆ ಒಳಗೂ ಮಳೆ” ಎಂಬ ಅತ್ಯುತ್ತಮ ಕಥಾಸಂಕಲನ ಕೊಟ್ಟ ನಮ್ಮ ನಡುವಿನ ಪ್ರತಿಭಾಶಾಲಿ ಕತೆಗಾರ ಚ.ಹ. ರಘುನಾಥ ಒಳ್ಳೆಯ ಪ್ರಬಂಧಗಳನ್ನು ಬರೆದಿದ್ದಾರೆನ್ನುವುದಕ್ಕೆ ಈ ಪ್ರಬಂಧಗಳು ಸಾಕ್ಷಿ. ಇಲ್ಲಿಯ `ರಾಗಿಮುದ್ದೆ’, `ಅಧರಂ ಮಧುರಂ’, `ಮಳೆಯ ಮೂರು ಹನಿ’, `ಜಾತ್ರೆಯೆಂಬ ಕಾಮನಬಿಲ್ಲು’ ಇತ್ಯಾದಿ ಪ್ರಬಂಧಗಳು ತಮ್ಮ ಕ್ಲಾಸಿಕ್ ಲಕ್ಷಣಗಳಿಂದ ಬೆರಗುಗೊಳಿಸುತ್ತವೆ. [...]
Filed under: ಪ್ರಬಂಧ ಸಂಕಲನ | Tagged: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿ, ಛಂದ ಪುಸ್ತಕ, ರಘುನಾಥ ಚ. ಹ., ರಾಗಿಮುದ್ದೆ | Leave a Comment »
ಹಿರಿಯ ಲೇಖಕಿ ಎಚ್.ಎಸ್.ಪಾರ್ವತಿಯವರು ಬರೆದ ೧೯ ಲೇಖನಗಳ ಸಂಗ್ರಹವಿದು. ಲೇಖಕಿ ಬೇರೆ ಬೇರೆ ಪುಸ್ತಕಗಳ ಮೇಲೆ ಬರೆದ ಲೇಖನಗಳನ್ನು ಒಂದೆಡೆ ತಂದಿದ್ದಾರೆ. ಇವುಗಳಲ್ಲಿ ಬಹಳಷ್ಟು ಸಂಭಾವನಾ ಗ್ರಂಥಗಳಿಗೆ ಬರೆದವು ಎಂಬುದು ವಿಶೇಷ. ನಾ.ಡಿಸೋಜಾ ಅವರ ‘ಕುಂಜಾಲು ಕಣಿವೆಯ ಕೆಂಪು ಹೂ’, ‘ಪಟ್ಟ ಮಹಾದೇವಿ ಶಾಂತಲಾ ಬಗ್ಗೆ ಪ್ರಕಟವಾಗಿರುವ ಕಾದಂಬರಿಗಳು’,‘ಅನಕೃ ಅವರ ಕಥಾ ಸಾಹಿತ್ಯ’, ‘ನವೋದಯ ಕಥೆಗಳು’ ಇಂಥ ಲೇಖನಗಳಲ್ಲೆಲ್ಲ ಲೇಖಕಿಯ ತಲಸ್ಪರ್ಶಿಯಾದ ಅಧ್ಯಯನ ಇರುವುದು ಕಾಣುತ್ತದೆ. ನಾ.ಡಿಸೋಜಾ ಅವರ ಕಾದಂಬರಿಯ ಬಗ್ಗೆ ಬರೆದುದನ್ನು ಬಿಟ್ಟರೆ ಲೇಖಕಿ ಆಧುನಿಕ [...]
Filed under: ಪ್ರಬಂಧ ಸಂಕಲನ | Tagged: ಎಚ್.ಎಸ್.ಪಾರ್ವತಿ, ಕಿರಣ್ ಬುಕ್ ಡಿಸ್ಟ್ರಿಬ್ಯುಟರ್ಸ್, ಸಾಹಿತ್ಯ ಲಹರಿ | Leave a Comment »
ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಲೇಖಕರು ಡಾಕ್ಟರೇಟ್ ಪದವಿಗಾಗಿ ಸಲ್ಲಿಸಿದ ಪ್ರೌಢ ಪ್ರಬಂಧ ಈಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ಇಲ್ಲಿನ ಕೆಲವು ಲೇಖನಗಳು ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜಾಗತೀಕರಣದ ಹಲವು ಮಗ್ಗಲುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಗ್ರಾಮ ಭಾರತದ ಮೇಲೆ ಜಾಗತೀಕರಣದ ಪ್ರಭಾವ ಕುರಿತು ಚರ್ಚಿಸಿದ್ದಾರೆ. ದೇಶದ ಬೃಹತ್ ಮಾನವ ಸಂಪನ್ಮೂಲವನ್ನು ಶಿಕ್ಷಣ, ಆರೋಗ್ಯ, ನೀಡಿ ಸದುಪಯೋಗಪಡಿಸಿಕೊಂಡರೆ ಮಾತ್ರ ಜಾಗತೀಕರಣದ ಲಾಭ ಭಾರತಕ್ಕೆ ಆಗಬಹುದು. ಈ ಪ್ರಕ್ರಿಯೆಯಲ್ಲಿ ಭಾರತ ಎಚ್ಚರದಿಂದ ಹೆಜ್ಜೆ ಇಡಬೇಕಾಗುವುದು ಎಂದು ಲೇಖಕರು ಅಭಿಪ್ರಾಯ [...]
Filed under: ಪ್ರಬಂಧ ಸಂಕಲನ | Tagged: ಜಾಗತೀಕರಣ ಮತ್ತು ಗ್ರಾಮ ಭಾರತ, ಡಾ.ಎನ್.ಜಗದೀಶಕೊಪ್ಪ, ಸಂಯುಕ್ತ ಕರ್ನಾಟಕ, ಸಿಂಚನ ಗ್ರಂಥಮಾಲೆ ಹಾವೇರಿ | Leave a Comment »
ಮುಂಬಯಿ ಮತ್ತು ಹನೇಹಳ್ಳಿಗಳ ನಡುವೆ ಸುಳಿವ ಆತ್ಮಗಳನ್ನು ಪಾತ್ರ ಮಾಡುವ ಕತೆಗಾರ ಯಶವಂತ ಚಿತ್ತಾಲ. ಕತೆಗಾರರಾಗಿ ಹೆಸರಾದರೂ ಅವರು ಕತೆಗಳ ಬಗ್ಗೆ ಅತ್ಯುತ್ತಮವಾಗಿ ಮಾತಾಡಬಲ್ಲರು, ಬರೆಯಬಲ್ಲವರು. ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಸಮಾರಂಭವೊಂದಕ್ಕೆ ಬಂದಿದ್ದಾಗ ಅವರು ಮಾಡಿದ ಭಾಷಣವನ್ನು ಸಾಹಿತ್ಯಾಸಕ್ತರು ಮರೆತಿಲ್ಲ. ಆ ಭಾಷಣದ ಪೂರ್ಣಪಾಠವೂ ಸೇರಿದಂತೆ ಚಿತ್ತಾಲರು ಬರೆದ ಅನೇಕ ಲೇಖನಗಳನ್ನು ಸಂಕಲಿಸಿ, `ಅಂತಃಕರಣ‘ವನ್ನು ಇದೀಗ ಹೊರತರಲಾಗಿದೆ. ಇದರಲ್ಲಿ ಚಿತ್ತಾಲರು ಅನೇಕ ಕಡೆ ಮಾಡಿದ ಭಾಷಣಗಳಿವೆ. `ಓದುವ ಕೋಣೆಯಲ್ಲಿ‘ ವಿಭಾಗದಲ್ಲಿ ಅವರನ್ನು ಪ್ರಭಾವಿಸಿದ ಲೇಖಕರ, ಗೆಳೆಯರ, [...]
Filed under: ಪ್ರಬಂಧ ಸಂಕಲನ | Tagged: ಅಂತಃಕರಣ, ಕನ್ನಡ ಪ್ರಭ, ಕ್ರಿಸ್ಟ್ ಯೂನಿವರ್ಸಿಟಿ ಕನ್ನಡ ಸಂಘ, ಯಶವಂತ ಚಿತ್ತಾಲ | Leave a Comment »
ಗಿರೀಶ ಕಾರ್ನಾಡರು ಆಗೊಮ್ಮೆ ಈಗೊಮ್ಮೆ ಗೀಚಿದ ಲೇಖನಗಳನ್ನು, ಟಿಪ್ಪಣಿಗಳನ್ನು, ಭಾಷಣಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಪರಿವಿಡಿಯಲ್ಲಿರುವ ವೈವಿಧ್ಯ ಬೆಪ್ಪು ಹಿಡಿಸುತ್ತದೆ : ಶಿವರಾಮ ಕಾರಂತರ `ಅಳಿದ ಮೇಲೆ‘ ಕಾದಂಬರಿ ಕುರಿತು ಬರದದ್ದು, ಕನ್ನಡ ಸಿನೇರಂಗದಲ್ಲಿ ಜಾತಿ ಸಂಘರ್ಷ, ನಾಗರಿಕ / ಸೈನಿಕ ಮುಂತಾದ ತಲೆ ಬರಹಗಳ ಅರ್ಥಾರ್ಥ ಸಂಬಂಧವಿಲ್ಲದ ಲೇಖಗಳು ಇಲ್ಲಿ ಒಟ್ಟುಗೂಡಿವೆ. ಕಾರ್ನಾಡರದು ಎಂಬ ಕಾರಣಕ್ಕಾಗಿ. ಒಂದು ವಿಧದಲ್ಲಿ ಒಳ್ಳೆಯದೇ. ಏಕೆಂದರೆ ಕಾರ್ನಾಡರ ವಿಶಿಷ್ಟ ಕನ್ನಡ, ತೊಡಕಿನ ವಾಕ್ಯಗಳು, ಒಗಚು ಶೈಲಿ (ಅವರ ನಾಟಕಗಳಲ್ಲಿ ಸಿಗುವುದಕ್ಕಿಂತ ಭಿನ್ನವಾಗಿರುವ) [...]
Filed under: ಪ್ರಬಂಧ ಸಂಕಲನ | Tagged: ಆಗೊಮ್ಮೆ ಈಗೊಮ್ಮೆ, ಕನ್ನಡ ಪ್ರಭ, ಗಿರೀಶ ಕಾರ್ನಾಡ, ಮನೋಹರ ಗ್ರಂಥಮಾಲಾ, ವಿಜಯ ಕರ್ನಾಟಕ | Leave a Comment »
ಅಮೆರಿಕನ್ನಡಿಗರು ಕಳೆದ ಕೆಲವು ವರುಷಗಳಿಂದ ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಮೌಲಿಕ ಕೊಡುಗೆ ನೀಡುತ್ತಾ ಬಂದಿದ್ದಾರೆ. ಗುರುಪ್ರಸಾದ್ ಕಾಗಿನೆಲೆ, ಶ್ರೀವತ್ಸ ಜೋಶಿ, ಜ್ಯೋತಿ ಮಹಾದೇವ್, ತ್ರಿವೇಣಿ ಶ್ರೀನಿವಾಸ್, ಮೋಹನ್ ಮುಂತಾದವರ ಕೃತಿಗಳು ಈಗಾಗಲೇ ಬಂದಿವೆ. ಅಹಿತಾನಲ ಕೂಡ ಈ ಹಿಂದೆ ಕನ್ನಡ ಸಾಹಿತ್ಯದ ಕುರಿತು ಬರೆದಿದ್ದಾರೆ. ಅಹಿತಾನಲ ಗಂಭೀರ ಸಾಹಿತ್ಯಾಸಕ್ತಿಯವರು. ಅವರು ಒಂದು ಲಹರಿಯಲ್ಲಿ ಬರೆದ ಪ್ರಬಂಧಗಳ ಸಂಕಲನ `ಕಲಬೆರಕೆ‘. ಇಲ್ಲಿರುವ ಹದಿಮೂರು ಪ್ರಬಂಧಗಳೂ ಸಂಕಲನ `ಕಲಬೆರಕೆ‘, ಇಲ್ಲಿರುವ ಹದಿಮೂರು ಪ್ರಬಂಧಗಳೂ ಕಲಬೆರಕೆ ಹೆಸರನ್ನ ಸಮರ್ಥಿಸುತ್ತವೆ. `ಶಿವರುದ್ರಪ್ಪನವರೊಂದಿಗೆ ರಸನಿಮಿಷಗಳು‘ [...]
Filed under: ಪ್ರಬಂಧ ಸಂಕಲನ | Tagged: ಅಹಿತಾನಲ, ಕನ್ನಡ ಪ್ರಭ, ಕಲಬೆರಕೆ, ಮನೋಹರ ಗ್ರಂಥಮಾಲಾ | Leave a Comment »