ಸಂಧ್ಯಾಮಾಮಿ ಸ್ಟೋರಿ

ಕ್ಲಾಸಿಕ್ ಕತೆಗಳು, ಪ್ರಾಣಿಗಳ ಕತೆಗಳು, ಬುದ್ಧಿವಂತರ ಕತೆಗಳು, ಜಾಣರ ಕತೆಗಳು, ಗಮ್ಮತ್ತಿನ ಕತೆಗಳು ಹೀಗೆ `ಕಲ್ಲುಸಕ್ಕರೆ‘ ಸರಣಿಯಲ್ಲಿ ಐದು ಪುಸ್ತಕಗಳಲ್ಲಿ ಸಂಧ್ಯಾಮಾಮಿ ಮಕ್ಕಳಿಗೆ ಕತೆಯನ್ನು ಹೇಳಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮಕ್ಕಳ ಕತೆಗಳಿಗೆ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಪ್ರಕಟಿಸುವ ಕೆಲಸ ಮಾಡಿದೆ. ಮಕ್ಕಳಿಗೆ ಮುದ ಕೊಡುವ ಚಿತ್ರಗಳಿವೆ. ಒಳಗಿನ ಚಿತ್ರಗಳು ಕಪ್ಪು ಬಿಳುಪು ಎಂಬುದನ್ನು ಬಿಟ್ಟರೆ ಪುಸ್ತಕ ಕಲರ್ ಫುಲ್ಲಾಗಿದೆ. ಕತೆಗಳಲ್ಲಿ ಯಾವುದೇ ವಿಚಾರವಾದ ಇರದ ಕಾರಣ ಮಕ್ಕಳಿಗೆ ಪ್ರಿಯವಾಗುತ್ತದೆ.
`ಸುಖವನ್ನು, ಸಂತೋಷವನ್ನು ಹಂಚಿಕೊಂಡರೆ ನೂರ್ಮಡಿಯಾಗುತ್ತದೆ ಎಂದರು [...]

ವಾತಾವರಣದ ತುಂಬ ಮಧುರತೆ ತುಂಬಿದೆ; ಬಹುಶಃ ನೀನೆಲ್ಲೋ ಮಾತನಾಡುತ್ತಿರಬಹುದು

ಈ ಪುಟ್ಟ ಮೂರು ಕವಿತಾ ಸಂಕಲನಗಳನ್ನು ಅಂದವಾಗಿ ಮುದ್ರಿಸಲಾಗಿದೆ. `ನೀರಜ‘ ಶಿಶು ಪದ್ಯಗಳ ವಸ್ತು ನಿತ್ಯದ ಸಹಜ ಸಂಗತಿಗಳು. ಮಗುವಿಗೆ ಕಥೆಯನ್ನು ಸರಳವಾಗಿ ಹೇಳುವಂತೆ ಇಲ್ಲಿ ಅವನ್ನು ಪುಟ್ಟ ಕವಿತೆ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ನೀರಜ ನೀನು ಬಾಯ್ದೆರೆದೆ/ಅಲ್ಲಿ ಬ್ರಹ್ಮಾಂಡವಿರಲಿಲ್ಲ / ಮಣ್ಣಿತ್ತು, ಕಲ್ಲಿತ್ತು, ನೀರಿತ್ತು, ಕಾಳಿತ್ತು/ – ಇಂತಹ ಚಿಕ್ಕ ಚಿಕ್ಕ ರೂಪಕಗಳು ರೇಖಾ ಚಿತ್ರಗಳೊಂದಿಗೆ ಮಕ್ಕಳ ಗಮನವನ್ನು ಥಟ್ಟನೆ ಸೆಳೆಯುವಂತಿವೆ. ಕವಿತೆಗಳನ್ನು ಮತ್ತಷ್ಟು ಧ್ವನಿ ಪೂರ್ಣವಾಗಿಸಿರುವುದು ಇಲ್ಲಿನ ಶಿವ ಹೂಗಾರರ ರೇಖಾ ಚಿತ್ರಗಳು. ವಾತಾವರಣದ ತುಂಬ [...]

ಮೂಗ್ನಲ್ ಕನ್ನಡ ಪದವಾಡ್ತೀನಿ

ಮಕ್ಕಳಿಗಾಗಿ ರಾಜರತ್ನಂ ಪುಸ್ತಕಗಳು
`ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ‘ – ಇದು ರಾಜರತ್ನಂ ಅವರು ಮಕ್ಕಳಿಗಾಗಿ ಬರೆದ ಮೊದಲ ಕವನ. ರಾಜರತ್ನಂ ಶತಮಾನೋತ್ಸವದ ಸಂದರ್ಭದಲ್ಲಿ (2008) ಬೆಂಗಳೂರಿನ ಸಪ್ನ ಬುಕ್ ಹೌಸ್(www.sapnaonline.com) ಅವರ ಐವತ್ತು ಪುಸ್ತಕಗಳನ್ನು ಪುನರ್ ಮುದ್ರಿಸಿದೆ. `ಕಂದನ ಕಾವ್ಯಮಾಲೆ‘ ಕನ್ನಡದ ಎಲ್ಲ ಕಂದಮ್ಮಗಳ ಕೈಗೆ ಸಿಗಬೇಕಾದ ಸಂಕಲನ. `ಗರುಡನ ಬಳಗ‘, `ಪುಟಾಣಿ ಪಂಚತಂತ್ರ‘, `ಹತ್ತು ದಿಕ್ಕಿನ ಬೆಳಕು‘, `ಏಕಲವ್ಯನ ಕತೆಗಳು‘, `ಮಕ್ಕಳಿಗೆ ಮಣಿದೀಪ‘, `ನರಕದ ನ್ಯಾಯ‘, `ಕಪಿಧ್ವಜ‘, `ಶ್ರೀ [...]

ವಿಜ್ಞಾನದ ಪರಿಕಲ್ಪನೆ ಹಾಗೂ ಚಟುವಟಿಕೆಗಳು

ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಶಾಲೆಗಳಲ್ಲಿ ಲೇಖಕರು ನಡೆಸಿದ ವಿಜ್ಞಾನ ಚಟುವಟಿಕೆಗಳ ಫಲವೇ ಈ ಪುಸ್ತಕ. ವಿವರವಾದ ಚಿತ್ರಗಳ ಸಹಿತ ಪ್ರತಿ ಚಟುವಟಿಕೆಯನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಮಕ್ಕಳು ವಿಜ್ಙಾನ ಚಟುವಟಿಕೆಗಳನ್ನು ಮಾಡುವುದಕ್ಕೆ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ದುಬಾರಿ ಬೆಲೆಯ ಉಪಕರಣಗಳು ಬೇಕಿಲ್ಲ. ಮನೆಯಲ್ಲಿನ ನಿರುಪಯೋಗಿ ವಸ್ತುಗಳನ್ನು ಉಪಯೋಗಿಸಿಕೊಂಡು ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಮಕ್ಕಳು ಸಾಮಾನ್ಯವಾದ ವಸ್ತುಗಳನ್ನು ಬಳಸಿದಾಗ ಮಾತ್ರ ಅವರು ದಿನನಿತ್ಯ ಜೀವನದಲ್ಲಿ ವಿಜ್ಞಾನದ ಪ್ರಸ್ತುತತೆಯನ್ನು ಮನಗಾಣಬಲ್ಲರು.
ಈ ಪುಸ್ತಕದ ಲೇಖಕರಾದ ಶ್ರೀ ಅರವಿಂದ ಗುಪ್ತ [...]

ಮಕ್ಕಳ ಕಾದಂಬರಿ

ಈಗಾಗಲೇ ಮಕ್ಕಳ ಕಾದಂಬರಿಗಳನ್ನು ಬರೆದು ಅನುಭವವಿರುವ ಶರಣಗೌಡ ಎರಡೆತ್ತಿನ ಅವರ ಹೊಸ ಮಕ್ಕಳ ಕಾದಂಬರಿ `ಸಪ್ತರ್ಷಿ
ದ್ವೀಪ‘ ವಿದ್ಯಾರ್ಥಿ ಗಳ ಸ್ವಾರಸ್ಯ ಹಾಗೂ ಕೌತುಕಭರಿತ ಪ್ರವಾಸ ಕಥನ ಲೇಖಕರ ಸುಲಲಿತ ನಿರೂಪಣೆಯಲ್ಲಿ ಮೂಡಿ ಬಂದಿದೆ.
ಮಕ್ಕಳ ಮನಸ್ಸಿಗೆ ರಂಜನೆ ಒದಗಿಸುವುದು `ಸಪ್ತರ್ಷಿ ದ್ವೀಪ‘ ಕಾದಂಬರಿಯ ಮುಖ್ಯ ಉದ್ದೇಶವಾಗಿದ್ದರೂ, ರಂಜನೆಯ ಜೊತೆಗೆ ದೇಶಭಕ್ತಿ ಹಾಗೂ ಸಾಹಸ ಪ್ರವೃತ್ತಿ ಉದ್ದೀಪನದ ಕೆಲಸವನ್ನೂ ಕಾದಂಬರಿ ಮಾಡುತ್ತದೆ.
`ಶಾಲೆ, ಬೋಧಕ ವರ್ಗ ಮತ್ತು ವಿದ್ಯಾರ್ಥಿ ಗಳಲ್ಲಿಯ ಸರಸ ಸುಮಧುರ ಪ್ರೀತಿ ವಿಶ್ವಾಸಗಳ ಸಂಬಂಧವನ್ನು ಶರಣಗೌಡ [...]

ಕಾಪ್ಸೂಲ್ ತಂತ್ರದ ಮಕ್ಕಳ ಕಥೆಗಳು

ಗುಳಿಗೆಯ ರೂಪದಲ್ಲಿ ಪ್ರತಿ ವಿಷಯವನ್ನೂ ನೀಡುವುದು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಜನಪ್ರಿಯಗೊಳ್ಳುತ್ತಿರುವ ಕಥನ ತಂತ್ರ. ಓದಲಿಕ್ಕೆ ಪುರಸೊತ್ತಿಲ್ಲದ, ಕೇವಲ ಓದುವ ಸುಖಕ್ಕಾಗಿ ಮಾತ್ರ ಪುಸ್ತಕ ಕೈಗೆತ್ತಿಕೊಳ್ಳುವ ಸಹೃದಯರು ಕಡಿಮೆ ಆಗುತ್ತಿರುವುದೇ ಈ ಕ್ಯಾಪ್ಸೂಲ್ ತಂತ್ರದ ಜನಪ್ರಿಯತೆಗೆ ಕಾರಣ. ಇಂಥ ಸಂದರ್ಭದಲ್ಲಿ ಜೀನಹಳ್ಳಿ ಸಿದ್ದಲಿಂಗಪ್ಪನವರ ಕೃತಿ ಪ್ರಕಟವಾಗಿದೆ.
ಮನೋವಿಕಾಸಕ್ಕಾಗಿ, ಮನರಂಜನೆಗಾಗಿ ಅಥವಾ ಭಾಷೆ ಕಲಿಯುವ ಉದ್ದೇಶದಿಂದ ಮಕ್ಕಳು ಕಥೆ ಕೇಳುವ ಕಾಲ ಮುಗಿಯಿತು ಎಂದು ಲೇಖಕರು ಭಾವಿಸಿರುವುದರಿಂದಲೋ ಏನೋ, ಕಥೆಗಳಿಗೆ ಜಾಣ್ಮೆಯ ನಂಟು ಕಲ್ಪಿಸಿದ್ದಾರೆ. ಇಲ್ಲಿನ ಕಥೆಗಳನ್ನು [...]

ಕೂಹೂ ಕೂಹೂ ಕೋಗಿಲೆ

ಶಿಶು ಸಾಹಿತ್ಯ ಮಾಲೆಗೊಂದು ಕೊಡುಗೆ.
ಸೃಜನಶೀಲ ಸಾಹಿತ್ಯ ರಚನೆಕಾರರಾಗಿ ಹೊರಹೊಮ್ಮಿ `ಸಜಗೌ‘ ಎಂದೇ ಸರೀಕರಲ್ಲಿ ಕರೆಯಿಸಿಕೊಳ್ಳುವ ಲೇಖಕರು ಶಿಶು ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ.
ಶಾಲೆ, ಗಣಿತ, ವಿಜ್ಞಾನ, ಪಕ್ಷಿ, ಪ್ರಾಣಿ, ಪರಿಸರ, ಮಳೆ, ಸಮುದ್ರ ಮುಂತಾದ ವಿಷಯಗಳನ್ನು ಕವನಗಳ ಮೂಲಕ ಕಲಿಸುವುದು ಹೇಗೆ ಎಂಬ ಪ್ರಶ್ನೆಗೆ ಇವರು ಉತ್ತರ ಹುಡುಕಿದ್ದಾರೆ. ನಿಜವಾಗಿಯೂ ಇದು ಪ್ರಾಥಮಿಕ ಶಾಲಾ ಮಕ್ಕಳ ಜ್ಞಾನದ ಹಸಿವು ಹಿಂಗಿಸುವ ಸರಳ ಮಾರ್ಗೋಪಾಯದ ಸೋಪಾನವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಶಿಶು ಸಾಹಿತ್ಯದ ಕೊರತೆಯನ್ನು ತುಂಬುವ ಅವರ ಪ್ರಯತ್ನ [...]

ಮಕ್ಕಳಿಗಾಗಿ ವಿವಿದ ದೇಶದ ಜಾನಪದ ಕಥೆಗಳು

ಲೇಖಕರು : ಡಿ. ಎನ್. ಶ್ರೀನಾಥ್
ಪ್ರಕಾಶಕರು : ರವೀಂದ್ರ ಪುಸ್ತಕಾಲಯ
ಪುಟಗಳು : 88
ಬೆಲೆ: ರೂ.40.00
ಕೃಪೆ : ಪ್ರಜಾವಾಣಿ