Posted on March 8, 2009 by pusthakapreeethi
`ಮಾತೆಯರು ಮಾನ್ಯರಾಗಿದ್ದಾಗ‘ ಡಾ. ದೇವಿಪ್ರಸಾದ್ ಚಟ್ಟೋಪಧ್ಯಾಯರ ಪುಟ್ಟ ಅಂತೆಯೇ ವಿಚಾರ ಪ್ರಚೋದಕ ಪುಸ್ತಕ.
ಕೃಷಿಕಾರ್ಯದ ತಿಳುವಳಿಕೆಯಿಂದಲೇ ಎಲ್ಲ ನಾಗರೀಕತೆಗಳು ಉಗಮಗೊಂಡವು. ಈಜಿಪ್ಟ್, ಮೆಸಪಟೋಮಿಯ ಮತ್ತು ಮೊಹೆಂಜೋದಾರೋ – ಈ ಅಪರೂಪದ ಹಾಗೂ ವಿಸ್ಮಯಕರ ನಾಗರೀಕತೆಗಳೆಲ್ಲಾ ನದಿ ದಂಡೆಗಳ ಮೇಲೆಯೇ ಬೆಳೆದವಲ್ಲವೇ? ಕೃಷಿಕಾರ್ಯದ ತಿಳುವಳಿಕೆ ಖಗೋಳ ವಿಜ್ಞಾನದ, ತರುವಾಯ ಇತರ ವಿಜ್ಞಾನಗಳ ಆವಿಷ್ಕಾರಕ್ಕೆ ಕಾರಣವಾಯಿತು.
ಕೃಷಿ ಕೆಲಸದ ಆವಿಷ್ಕಾರವೇ ನಾಗರೀಕತೆಗಳ ಬುನಾದಿ ಎಂಬುದು ಸರಿಯಷ್ಟೆ. ಆದರೆ ಈ ಆವಿಷ್ಕಾರದ ಮೂಲ ಕಾರಣಕರ್ತರು ಯಾರು? ಪುರುಷರೋ? ಸ್ತ್ರೀಯರೋ? ಉತ್ತರ ಕೇಳಿದರೆ ಈಗಿನವರಾದ ನಮಗೆ [...]
Filed under: ಮಹಿಳಾ ಸಾಹಿತ್ಯ | 1 Comment »
Posted on February 12, 2009 by pusthakapreeethi
ಆರೋಗ್ಯವಂತ ಹೆಣ್ಣು ಇರುವ ಕುಟುಂಬವೇ ಆರೋಗ್ಯವಂತವಾಗಿರುತ್ತದೆ. ಹೆಣ್ಣಿನ ಅಸ್ತಿತ್ವ, ಸ್ವಾತಂತ್ರ್ಯ, ಮೂಲಭೂತ ಅಗತ್ಯಗಳನ್ನೇ ಕಡೆಗಣಿಸುತ್ತಾ ಬಂದ ಭಾರತೀಯ ಸಮಾಜ ಒಂದು ರೀತಿಯಲ್ಲಿ ಇಡೀ ದೇಶದ ಹಿಂದುಳಿಯುವಿಕೆಗೆ ಕಾರಣವಾಗಿದೆಯೆಂದರೆ ತಪ್ಪಾಗದು.
ಈ ನಿಟ್ಟಿನಲ್ಲಿ ಮಹಿಳಾ ಆರೋಗ್ಯ ಒಂದು ಮರುಚಿಂತನೆ ಪುಸ್ತಕ ಆರೋಗ್ಯಕರ ಪುಸ್ತಕ. ಇಲ್ಲಿ ಚರ್ಚೆಯಾಗಿರುವ ವಿಷಯಗಳು ಮತ್ತು ಅಂಕಿ ಅಂಶಗಳನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಇವತ್ತಿಗೂ ನಮ್ಮ ಸಮಾಜದಲ್ಲಿ ಮಕ್ಕಳಾಗದ ದಂಪತಿಗಳಲ್ಲಿ ಹೆಣ್ಣಿನ ಸಮಸ್ಯೆಯೇ ದೊಡ್ಡದೆಂಬಂತೆ ಬಿಂಬಿಸಲಾಗುತ್ತಿದೆ. ಹೆರುವ ಹೊಟ್ಟೆ ಅವಳದಾದ ಕಾರಣಕ್ಕೆ ಅವಳನ್ನೆ ಅಪರಾಧಿಯಂತೆ ಕಾಣಲಾಗುತ್ತದೆ. ಗಂಡಸು ಪರೀಕ್ಷೆಗೊಳಪಡುವುದೆ [...]
Filed under: ಮಹಿಳಾ ಸಾಹಿತ್ಯ | Tagged: ಉದಯವಾಣಿ, ಡಾ. ಕೆ. ಸರೋಜ, ಪ್ರಸಾರಾಂಗ ಕನ್ನಡ ವಿ. ವಿ. ಹಂಪಿ, ಮಹಿಳಾ ಆರೋಗ್ಯ - ಒಂದು ಮರುಚಿಂತನೆ | Leave a Comment »
Posted on September 26, 2008 by pusthakapreeethi
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕುರಿತ ಲೇಖನಗಳ ಸಂಗ್ರಹ ಇದು. ಇವು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುವ ಘಟನೆಗಳನ್ನು ಆಧರಿಸಿ, ಸ್ತ್ರೀಗೆ ಆಗುತ್ತಿರುವ ಅನ್ಯಾಯ, ಅನಿಷ್ಟಗಳನ್ನು ವಿಮರ್ಶಿಸುತ್ತದೆ, ಮತ್ತು ಆ ಮೂಲಕ ತಿಳಿವನ್ನುಂಟುಮಾಡುತ್ತವೆ.
ಸ್ತ್ರೀಯರ ಕುರಿತು ಈ ಸಮಾಜ ಕಟ್ಟಿಕೊಂಡ ಅರಿವಿನ ಎಲ್ಲ ಆಯಾಮಗಳನ್ನು, ಅವುಗಳ ಹಿಂದಿನ ನಿಜಸ್ಥಿತಿಯನ್ನು ಪ್ರಸ್ತುತ ಸಂಕಲನದ ಲೇಖನಗಳು ವಿಶ್ಲೇಷಿಸುತ್ತವೆ. `ಈ ವಿಶ್ಲೇಷಣೆಯನ್ನು `ಸ್ತ್ರೀವಾದ‘ ಎನ್ನುವುದಕ್ಕಿಂತ `ಸ್ತ್ರೀಪ್ರಜ್ಞೆ‘ ಎಂದು ಕರೆಯುವುದೇ ಸೂಕ್ತ‘ – ಎಂದು ಮುನ್ನುಡಿಯಲ್ಲಿ ಜಿ. ರಾಜಶೇಖರ್ ಹೇಳಿರುವುದು ವಸ್ತುನಿಷ್ಟ ಸಂಗತಿಯೇ [...]
Filed under: ಮಹಿಳಾ ಸಾಹಿತ್ಯ | Tagged: ಉತ್ತರೆಯ ಅಳಲು, ಕೆ. ಶಾರದಾ ಭಟ್, ಸುಮಂತ ಪ್ರಕಾಶನ | 2 Comments »
Posted on June 9, 2008 by kandhakanmani
ಫೀಮೇಲೇ ಮೇಲು
`ಮೇಲ್ಜಾತಿಯ ಪುರುಷನು ಕೆಳಜಾತಿಯ ಸ್ತ್ರೀಯೊಡನೆ ಮದುವೆಯಾದರೆ ಅವಳೊಡನೆ ಸಂತತಿ ಎಂದರೆ ಮಕ್ಕಳಿಗಾಗಿ, ಅಧರ ಚುಂಬನ, ಮುದ್ದಾಡುವುದು, ಸಹಶಯ್ಯೆ, ಒಂದೇ ಹಾಸಿಗೆಯಲ್ಲಿ ಕೂಡಿ ಮಲಗುವುದು ಇತ್ಯಾದಿಗಳನ್ನು ಮಾಡದೆ ಕೇವಲ ಅಂಗಸಂಗ ಅನುಭವಿಸುವುದು ಒಳ್ಳೆಯದು‘
`ಅಂದರೆ ಶ್ರೇಣೀಕೃತ ಸಮಾಜದಲ್ಲಿ ಕೆಳಜಾತಿಯ ಸ್ತ್ರೀಯರು ಮೇಲ್ಜಾತಿಯ ಪುರುಷರ ಭೋಗಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ ಕೆಳಜಾತಿಯ ಪುರುಷ ಮೇಲ್ಜಾತಿಯ ಸ್ತ್ರೀಯನ್ನು ಮಾತ್ರ ಭೋಗಿಸಬಾರದು ಎನ್ನುವುದು ಎಂಥ ನ್ಯಾಯ ಎನ್ನಿಸುತ್ತದೆ. ಅಲ್ಲದೆ ಕೆಳಜಾತಿಯ ಸ್ತ್ರೀಯೊಡನೆ ಮೇಲ್ಜಾತಿಯ ಪುರುಷ ಮದುವೆಯಾದರೂ ಅಂಗಸಂಗ ಅನುಭವಿಸಬಹುದು ಎಂದು ಹೇಳುವುದೇ [...]
Filed under: ಮಹಿಳಾ ಸಾಹಿತ್ಯ | 1 Comment »