ಭವಿಷ್ಯದಲ್ಲಿ ಹೆಣ್ಣಿಗೆ `ದ್ರೌಪದಿ’ಯ ಕಷ್ಟ ಬರದಿರಲಿ!!!

`ವರದಕ್ಷಿಣೆ ಎಂಬುದು ಹುಟ್ಟದಿರುವ ಹೆಣ್ಣುಮಗುವಿಗೂ ಕಡುವೈರಿ‘. ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುವ ಜಿಲ್ಲೆಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಮಂಡ್ಯ ಜಿಲ್ಲೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಂಡುಕೊಂಡ ಅಂಶವಿದು ಎಂದು ಪುಸ್ತಕದ ಮುನ್ನುಡಿಯಲ್ಲಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಯ ಡೋನಾ ಫರ್ನಾಂಡೀಸ್ ಹೇಳುತ್ತಾರೆ.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳಿಗೆ ಕಾರಣಗಳೇನು ಎಂಬುದನ್ನು ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳನ್ನು ಈ ಕೃತಿ ವಿವರವಾಗಿ ದಾಖಲಿಸಿದೆ. `ಮಂಡ್ಯದ ಏಳು ತಾಲ್ಲೂಕುಗಳ ನೂರಾರು ಹಳ್ಳಿಗಳಲ್ಲಿ ಎಲ್ಲ ವಯೋಮಾನದ ಜನರೂ [...]

ತಲಪರಿಗೆ – ವಿಶಿಷ್ಟ ಪಾರಂಪರಿಕ ಜಲನಿಧಿ

ಕನ್ನಡದಲ್ಲಿ ಇದು ತಲಪರಿಗೆ( ಹಾಗೆಂದರೇನು ಎಂದು ಕೇಳಬೇಡಿ!) ಕುರಿತ ಮೊದಲ ಪುಸ್ತಕ ಎಂಬ ಹೆಚ್ಚುಗಾರಿಕೆ ಇದಕ್ಕಿದೆ. ಇಂಬು ಕೊಡುವಂತೆ `ಹನಿಗೂಡಿಸೋಣ‘ ಖ್ಯಾತಿಯ `ಮಳೆಶ್ರೀ‘ ಪಡ್ರೆ `ತಲಪರಿಕೆಗಳ ಅದ್ಭುತ ಪ್ರಪಂಚದ ಬಾಗಿಲು ನನ್ನೆದುರು ತೆರೆದದ್ದು ತಿಂಗಳುಗಳ ಈಚೆಗೆ. ಇಷ್ಟರಲ್ಲೇ ಅವು ನನ್ನನ್ನು ನಿಬ್ಬೆರಗಾಗಿಸಿವೆ.
ಈಗ ಧೈರ್ಯವಾಗಿ ಹೇಳಬಲ್ಲೆ, ಈ ಜಲನಿಧಿಗಳು ತುಮಕೂರಿಗೆ ಮಾತ್ರವಲ್ಲ, ರಾಜ್ಯಕ್ಕೆ, ದೇಶಕ್ಕೇ ಅಭಿಮಾನ‘ ಎಂದು ಉದ್ಗರಿಸಿದ್ದಾರೆ. (ವಿಷಯ ಕುರಿತು ಶುದ್ಧಾಂಗ ಅಜ್ಞಾನ ಹೊಂದಿರುವವರಿಗಾಗಿ ಈ ಟಿಪ್ : ತಲಪರಿಗೆಗಳು ತುಮಕೂರು ಜಿಲ್ಲೆಯಲ್ಲಿ ಕಂಡುಬರುವ ಅತ್ಯಂತ [...]