ನಾಚಿಕೆಯಿಂದ ತಲೆತಗ್ಗಿಸುವ ದಿನ

ಡಿಸೆಂಬರ‍್ 6, 1992. ತಮ್ಮ ಜಾತ್ಯಾತೀತ ಸಂವಿಧಾನದ ಬಗ್ಗೆ ಹೆಮ್ಮೆ ಪಡುವಂತಹ ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ದಿನ. ಈ ದಿನದಂದು ಭಾರತೀಯರ ಹೆಮ್ಮೆಯ ಜಾತ್ಯಾತೀತ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಿಷ್ಟೆಯ ಮಹಾ ಗೋಪುರಗಳು ನೆಲಕಚ್ಚಿದ ದಿನ. ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್  ಖ್ಯಾತ ಆಂಗ್ಲ ದೈನಿಕ [...]

ಸಾಹಿತ್ಯ ವಿಮರ್ಶೆಯ ಲೋಕದರ್ಶನ

ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ ಬಂದ ಅಧ್ಯಯನಶೀಲನ ಟಿಪ್ಪಣಿಗಳಿವು. ಇದು ಕಳೆದ ನಲವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದ ಮೂವತ್ತೆಂಟು ಮುನ್ನುಡಿ ಮತ್ತು ಪ್ರಸ್ತಾವನೆಗಳ ಸಂಗ್ರಹ. ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಸಾಮಾಜಿಕ ಅಧ್ಯಯನ, ಮುಂತಾಗಿ ಕನ್ನಡ ಸಾಹಿತ್ಯ ವಲಯದ ಅನೇಕ ಮುಖ್ಯ ಕ್ರಿಯಾಶೀಲ ಬರಹಗಳ ಜೊತೆ ಅಷ್ಟೇ ಕ್ರಿಯಾಶೀಲವಾಗಿ ಒಡನಾಡುತ್ತ [...]

ವರ್ಧಮಾನ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು

ಕನ್ನಡದ ಮುಖ್ಯ ವಿಮರ್ಶಕರಾದ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ತಮ್ಮ `ತರು ತಳೆದ ಪುಷ್ಪ’ ವಿಮರ್ಶಾ ಕೃತಿಗೆ ವರ್ಧಮಾನ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಉದಯೋನ್ಮುಖ ಲೇಖಕ ವಸುದೇಂದ್ರ ತಮ್ಮ `ಯುಗಾದಿ’ ಕಥಾ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಿಬ್ಬರಿಗೂ ನಮ್ಮ ಪ್ರೀತಿಪೂರ್ವಕ, ಗೌರವಪೂರ್ವಕ ಅಭಿನಂದನೆಗಳು. `ನನಗೆ ಭಾವನೆಗಳಿಲ್ಲದ ಲೋಕದಲ್ಲಿ ನಂಬಿಗೆಯಿಲ್ಲ, ನಾವು ದ್ವೀಪಗಳಾಗುವುದು ಬೇಡ, ಗೋಡೆ ಕಟ್ಟುವುದು ಬೇಡ, ನಾವು ಸೇತುವೆ ಕಟ್ಠೋಣ ದೀಪ ಹಚ್ಚೋಣ. ‘ ಇದು ಖ್ಯಾತ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಮೂಡುಬಿದಿರೆಯ [...]

ಸ್ತ್ರೀಮತವನುತ್ತರಿಸಲಾಗದೇ ಧರ್ಮಶಾಸ್ತ್ರದೊಳ್

ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ, ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ. ಎಲ್ಲಾ ಕೃತಿಗಳಲ್ಲೂ [...]

ತಾವು ಒಬ್ಬ ಓದುಗ ಎಂಬ ವಿನಯದಿಂದಲೇ

ಆನಂದ ಋಗ್ವೇದಿಯವರು ಕವಿ, ಕಥೆಗಾರ ಹಾಗೂ ನಾಟಕಕಾರರೂ ಆಗಿದ್ದಾರೆ. ಅವರು ಬರೆದ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಇದು. ಇದು ಕೇವಲ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಮಾತ್ರವಾಗಿಲ್ಲ. ಇಲ್ಲಿ ಕನ್ನಡ ಲೇಖಕರ ಕುರಿತಂತೆ ನುಡಿ ಚಿತ್ರಗಳೂ ಇವೆ. ಈ ಭಾಗದಲ್ಲಿ ಅಕಾಲಿಕ ನಿಧನ ಹೊಂದಿದ ವಿಭಾ ತಿರಕಪಡಿ, ಮುದೇನೂರು ಸಂಗಣ್ಣ, ಚಿ.ಶ್ರೀನಿವಾಸರಾಜು ಅವರ ಕುರಿತ ನುಡಿಚಿತ್ರಗಳು ಆಪ್ತವಾಗಿವೆ. ಇವೆಲ್ಲವೂ ಅವರ ವೈಯಕ್ತಿಕ ಸಂಬಂಧ ಹಾಗೂ ನೆನಪುಗಳಿಂದ ಕಟ್ಟಿದ ನುಡಿಚಿತ್ರಗಳಾಗಿವೆ. `ಹಾದಿ ಒಂದು’ ಎಂಬ ಭಾಗದಲ್ಲಿ ಹಿ.ಚಿ.ಬೋರಲಿಂಗಯ್ಯ, ಬಾಳಾಸಾಹೇಬ ಲೋಕಾಪುರ, [...]

ಚಿತ್ರ-ಕತೆ

ಕತೆಗಾರ, ಅನುವಾದಕ ಎ.ಎನ್.ಪ್ರಸನ್ನ ನಾಟಕ, ಕಿರುತೆರೆ, ಸಿನಿಮಾರಂಗದಲ್ಲೂ ತಮ್ಮ ಆಸಕ್ತಿ ಹರಿಯಬಿಟ್ಟವರು. ಅವರ `ಚಿತ್ರ-ಕತೆ’ ಪುಸ್ತಕ ಜಾಗತಿಕ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಲ್ಲಿ ಒಂದು. ಸಿನೆಮಾ ಒಂದು ಭಾಷೆ ಎಂದು ಹೇಳುತ್ತಲೇ ಅದೊಂದು ಕಲಾಪ್ರಕಾರ ಎನ್ನುವ ಲೇಖಕರು ಪುಸ್ತಕದಲ್ಲಿ ಅದನ್ನು ವಿವರಿಸಿದ್ದಾರೆ. ಸಿನೆಮಾ ಭಾಷೆಯ ರೀತಿ ಕೆಲಸ ಮಾಡುತ್ತದೆ. ಅದು ಹಾಗೆ ಕೆಲಸ ಮಾಡುವುದರಿಂದ ಕತೆಯನ್ನು ಪ್ರಸ್ತುತಪಡಿಸುವುದಿಲ್ಲ. ಕತೆಯನ್ನು ಹೇಳುತ್ತದೆ. ಅದರಿಂದಲೇ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದು ಸುಲಭ ಎಂಬುದು ಅವರ ಅಭಿಪ್ರಾಯ. ಅಲ್ಲದೆ ಸಿನಿಮಾವನ್ನು ನೋಡುವುದಕ್ಕಿಂತ ನೋಡದ [...]

ಅಶೋಕ ವೃಕ್ಷ

ಟಿ.ಪಿ.ಅಶೋಕ ಕಳೆದ 15 ವರ್ಷಗಳಲ್ಲಿ ಬರೆದ 37 ವಿಮರ್ಶಾತ್ಮಕ ಲೇಖನಗಳ ಸಂಕಲನ `ಸಾಹಿತ್ಯ ಸಂಬಂಧ‘. ಆಧುನಿಕ ಕನ್ನಡ ಸಾಹಿತ್ಯದ ಅನೇಕ ಮುಖ್ಯ ಲೇಖಕರು, ಕೃತಿಗಳು ಮತ್ತು ಅನುಭವಗಳ ಸುತ್ತ ಹೆಣೆದಿರುವ ಬರಹಗಳಿವು. ಕಂಬಾರರಿಂದ ಶಂಕರ ಮೊಕಾಶಿಯವರೆಗೆ, ಚಿನು ಅಚಿಬೆಯಿಂದ ಚದುರಂಗರವರೆಗೆ ಈ ಪುಸ್ತಕ ವಿಸ್ತರಿಸುತ್ತದೆ. ಕವಿತೆ, ಕತೆ, ಕಾದಂಬರಿ, ನಾಟಕ, ವಿಮರ್ಶೆ ಈ ವಿಭಾಗಗಳಲ್ಲಿ ಟಿ.ಪಿ.ಚಿಂತನೆಯ ಬೀಜ ಬಿತ್ತಿದ್ದಾರೆ. `ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಓದುಗರೊಡನೆ ಅವರು ನಡೆಸಿರುವ ನೇರ ಸಂವಾದಗಳಿಂದ ಚೋದಿತವಾಗಿರುವ ಇಲ್ಲಿನ ಬಹಳಷ್ಟು ಬರಹಗಳು ತೋಂಡಿ [...]

ಅನ್ಯೋನ್ಯ

ಜಿ.ಎನ್.ಆರ್. ಅವರ ಈ ವಿಮರ್ಶಾ ಕೃತಿಯ ವೈಶಿಷ್ಟ್ಯವೆಂದರೆ, ಅನಂತಮೂರ್ತಿಯವರ `ಭವ್ಯ‘, ಕುಂವೀ ಅವರ `ಅರಮನೆ‘ಯಂತಹ ಲೇಟೆಸ್ಟ್ ಕೃತಿಗಳ ಕುರಿತು ಬರಹಗಳಿರುವುದು. ಯಾವ ತೂಕದ ವಿಮರ್ಶಾ ಕೃತಿ ತೆಗೆದುಕೊಂಡರೂ ಅದರಲ್ಲಿನ್ನೂ ಯಶೋಧರನ ಜನ್ನ ಚರಿತ್ರೆ, ಆನಂದಕಂದರ ಕತೆಗಳು ಮುಂತಾದ ತಲೆಬರಹಗಳನ್ನೂ ನೋಡಿ ಬೇಜಾರು ಬರುತ್ತಿರುವಾಗ ಇಂತಹದೊಂದು ಪ್ರಸ್ತುತತೆ ಅವಶ್ಯ. ರಂಗನಾಥರಾವ್ ಪತ್ರಿಕೆಯೊಂದರ ಪುರವಣಿ ಸಂಪಾದಕರೂ ಆಗಿದ್ದ ಕಾರಣ ಹೀಗೆ ಪ್ರೆಸ್ ನಿಂದ ಹೊರಬೀಳುವ ಗರಿ ಗರಿ ಕಾದಂಬರಿಗಳ ಕಡೆ ಅವರ ಗಮನ ಹರಿದಿದ್ದೀತು. ಆದರೆ ಅವರ ಶೈಲಿ ಮಾತ್ರ [...]

ವಿಮರ್ಶೆ : ನಮ್ಮಲ್ಲಿ ಸಸಿ ನೆಟ್ಟ ಕೂಡಲೇ ಒಣಗಿ ಹೋಗುತ್ತಿರುವ ದುರಂತ

ವಿಫುಲವಾಗಿ ಒಂದೇ ಸಮನಾಗಿ ವಿಮರ್ಶಾ ಬರವಣಿಗೆಯನ್ನು ಮಾಡಿಕೊಂಡು ಬಂದಿರುವ ಹಿರಿಯ ವಿಮರ್ಶಕ ಜಿ.ಎಸ್.ಆಮೂರ, ತಮ್ಮ ಈ ಸಂಕಲನಕ್ಕೆ `ಪ್ರಕಾರ,ಪ್ರೇರಣೆ, ಪ್ರಯೋಗ‘ ಎಂಬ ಅಡಿಸಾಲನ್ನು ಕೊಟ್ಟಿದ್ದಾರೆ. `ಪ್ರಕಾರಗಳು‘ ವಿಭಾಗದಡಿ ಸಣ್ಣ ಕತೆ ಒಂದು ವ್ಯಾಖ್ಯೆ ತರದ ಎವರ್ ಗ್ರೀನ್ ವಿಷಯಗಳಿವೆ. ಕಾವ್ಯದಲ್ಲಿ ಆಕೃತಿ ಹಾಗೂ ಆಶಯ, ಕಾದಂಬರಿಯ ಸ್ವರೂಪ, ನಾಟಕ ಕುರಿತ ಲೇಖನಗಳಲ್ಲಿ ಅರಿಸ್ಟಾಟಲ್ ಉಲ್ಲೇಖವಿರುವಂತೆ ಭಾರತೀಯ ಕಾವ್ಯ ಮೀಮಾಂಸೆಯ ಉಲ್ಲೇಖವೂ ಇದೆ. `ಪ್ರೇರಣೆಗಳು‘ ವಿಭಾಗದಲ್ಲಿ ಎಮರ್ಸನ್ ನಲ್ಲಿ ರೂಪದ ಕಲ್ಪನೆ, ಟಿ.ಎಸ್.ಎಲಿಯೆಟ್ ಕಾವ್ಯ ಮೀಮಾಂಸೆ ಜತೆ ತುಸು [...]

ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ

ಎಲ್ಲ ಭಾರತೀಯ ಭಾಷೆಗಳು ಜೀವಂತವಾಗಿ ತಮ್ಮ ಶಕ್ತಿ-ಸಾಮಥ್ರ್ಯವನ್ನು ಪ್ರಕಟಿಸಲು ಸಜ್ಜಾಗುವುದೆಂದರೆ ಸೃಜನಶೀಲತೆಯನ್ನು ಸಾಮಾಜಿಕ ಸನ್ನಿವೇಶದಲ್ಲಿ, ಜಾಗತಿಕ ಇಕ್ಕಟ್ಟಿನಲ್ಲಿ ಎಚ್ಚರಾಗಿಸಿಕೊಳ್ಳುವುದೆಂದೇ ಅರ್ಥ. ಇಂದಿನ ಅತ್ಯಂತ ಆಳವಾದ ಬಿಕ್ಕಟ್ಟಿನ `ಕನ್ನಡ ಕಾವ್ಯ‘ ತನ್ನ ಸೃಜನಮುಖವನ್ನು ಪ್ರಖರವಾಗಿಸಿಕೊಳ್ಳಲು ಮೈಯೆಲ್ಲಾ ಕಾಲು, ನಾಲಿಗೆಯಾಗಿಸಿಕೊಳ್ಳಬೇಕಾಗಿದೆ. ಈ ಪ್ರಯತ್ನದ ಹಾದಿಯಲ್ಲಿ ಕವಿಗಳು ತಮ್ಮ ಸೃಷ್ಟಿಕ್ರಿಯೆಗಳನ್ನು ಪ್ರಶ್ನಿಸಿಕೊಳ್ಳುತ್ತಾ ಸಾಗಿದಾಗ ಮಾತ್ರ ಬಾಳಿನ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. `ಜಾಗತೀಕರಣದ ಎದುರಲ್ಲಿ: ಕವಿತೆ‘ ಲೇಖನದಲ್ಲಿರುವ ಮೇಲಿನ ಸಾಲುಗಳು ಡಾ.ಗುಂಡಣ್ಣ ಕಲಬುರ್ಗಿಯವರ `ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ‘ ಕೃತಿಯ ಒಟ್ಟಾರೆ [...]

Follow

Get every new post delivered to your Inbox.