ಹುತಾತ್ಮ ಭಗತ್ ಸಿಂಗರ ಅಲ್ಪಕಾಲದ ಬದುಕಿನ ಅಸಾಮಾನ್ಯ ಹರಹಿನ ಸಂಗ್ರಹರೂಪ

ಕೇವಲ 23 ವರ್ಷಗಳ ಬದುಕು. ಅಷ್ಟರಲ್ಲೇ ಇತಿಹಾಸದಲ್ಲಿ ಒಂದು ಶಾಶ್ವತ ಸ್ಥಾನ ಪಡೆದ ಭಗತ್ ಸಿಂಗ್ ಹುತಾತ್ಮನಾಗಿ ೮೦ ವರ್ಷಗಳಾಗುತ್ತಿದ್ದರೂ ಈಗಲೂ ಯುವಜನರ ಆರಾಧ್ಯ ಮೂರ್ತಿ, ಅದರಲ್ಲೂ ಒಂದು ಸಮಾನತೆಯ ಸಮಾಜದ ಕನಸನ್ನು ತುಂಬಿಕೊಂಡಿರುವವರಿಗೆ. ಧೈರ್ಯ, ಸಾಹಸ, ತ್ಯಾಗ, ಜತೆಗೆ ತಾತ್ವಿಕ ಸ್ಪಷ್ಟತೆ ಮತ್ತು ಜನಮಾನಸವನ್ನು ತಟ್ಟು ಸಾಮರ್ಥ್ಯ ಅವರ ಬದುಕನ್ನು ಅಮರಗಾಥೆಯನ್ನಾಗಿಸಿದೆ. ಸಹಜವಾಗಿಯೇ ಬಾಲಿವುಡ್ ಕೂಡಾ ಈ ಗಾಥೆಯ ಆಕರ್ಷಣೆಗೆ ಒಳಗಾಗದಿಲ್ಲ. ಅವರ ಮೇಲೆ ಕನಿಷ್ಟ ಐದು ಚಲನಚಿತ್ರಗಳು ತಯಾರಾಗಿವೆ. ಬರವಣಿಗೆಗಳಂತೂ ಲೆಕ್ಕವಿಲ್ಲದಷ್ಟು. ಭಗತ್ ಸಿಂಗ್ [...]

ಮಾನವ ಜನಾಂಗದ ವಿಕಾಸಕ್ಕೆ ಎಂದಿನಿಂದಲೂ ವಿಜ್ಞಾನ ಪೂರಕ ಕೆಲಸ ಮಾಡುತ್ತಲೇ ಬಂದಿದೆ

ಒಣಗಿದ ಎರಡು ಕಟ್ಟಿಗೆ ತುಂಡುಗಳು ಘರ್ಷಣೆಯಾದರೆ ಬೆಂಕಿ ಹುಟ್ಟಿಕೊಳ್ಳುತ್ತದೆ ಎಂಬ ಸತ್ಯ ನಮಗೆ ಗೋಚರವಾದದ್ದು ಶಿಲಾಯುಗದಲ್ಲೇ. ಯಾರೋ ಒಬ್ಬ ನಮ್ಮ ಪೂರ್ವಿಕ ಇದನ್ನು ಪತ್ತೆ ಹಚ್ಚಿದ. ವಿಜ್ಞಾನದ ಬೇರುಗಳು ಅಲ್ಲಿಂದಲೇ ಟಿಸಿಲೊಡೆದಿವೆ. ವಿಜ್ಞಾನದ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಶರವೇಗದಲ್ಲಿ ಮುನ್ನಡೆದಿರಬಹುದು. ಆದರೆ ಮಾನವ ಜನಾಂಗದ ವಿಕಾಸಕ್ಕೆ ಎಂದಿನಿಂದಲೂ ವಿಜ್ಞಾನ ಪೂರಕ ಕೆಲಸ ಮಾಡುತ್ತಲೇ ಬಂದಿದೆ. ಅಂತೆಯೇ ಭಾರತೀಯ ಪ್ರಾಚೀನ ವಿಜ್ಞಾನಿಗಳು ಎಂಬ ಗ್ರಂಥದ ಶೀರ್ಷಿಕೆಯೇ ಕುತೂಹಲ ಹುಟ್ಟಿಸುತ್ತದೆ. ವೈದ್ಯಕೀಯ ಶಾಸ್ತ್ರದ ಅಚ್ಚರಿ ಧನ್ವಂತರಿ ಕ್ರಿ.ಪೂ.2000-1000ಕ್ಕೆ ಸೇರಿದವನು. ವೇದಗಳ [...]

ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ

`ಮರೆಯಲ್ಲಿರುವ ಮಹಾನುಭಾವರು‘ ಮಾಲಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ `ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ‘ ಪುಸ್ತಕ ಎರಡು ರೀತಿಯಿಂದ ಮುಖ್ಯವಾದದು. ಮೊದಲನೆಯದು, ಪ್ರಚಾರದ ಪ್ರಭಾವಳಿಯಿಂದ ದೂರವುಳಿದ ಸಾಧಕನೊಬ್ಬನನ್ನು ಪರಿಚಯಿಸುವುದು. ಎರಡನೆಯದು, ಮುಂತಕಾ ಅವರ ಪರಿಚಯದ ಮೂಲಕ ಅವರ ದಾರಿಯಲ್ಲಿ ನಡೆಯಲು ಕೆಲವರನ್ನಾದರೂ ಕೃತಿ ಪ್ರಭಾವಿಸಬಹುದು ಎನ್ನುವುದು. ಮುಂತಕಾ ಓರ್ವ ವಿಲಕ್ಷಣ ಛಾಯಾಗ್ರಾಹಕ. ಬೀದರ್ ನ ಈ ಛಾಯಾಗ್ರಾಹಕನನ್ನು ಲೇಖಕರು ಕ್ಯಾಮರಾ ಇಂಜಿನಿಯರ್ ಎನ್ನುತ್ತಾರೆ. ಏಕೆಂದರೆ ಫೋಟೋ ಕ್ಲಿಕ್ಕಿಸುವುದಕ್ಕೆ ಮಾತ್ರಾ ಮುಂತಕಾ ಅವರ ಪ್ರತಿಭೆ ಸೀಮಿತವಲ್ಲ. ಅವರ ಬಳಿ [...]

Follow

Get every new post delivered to your Inbox.