ದೊರೆತಿರುವ ವಸ್ತು ಅವಶೇಷಗಳು ಏನು ತಿಳಿಸುತ್ತವೆ

ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯ ಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ. ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ; ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ [...]

ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು

ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು. ವಿಶ್ವ ಭೂಮಿ ದಿನ ಅಂದರೆ ಭೂಮಿತಾಯಿಯ ಬಗ್ಗೆ ಪ್ರೀತಿ ವಿಶ್ವಾಸ ಗೌರವವನ್ನು ತೋರಿಸಿ ಆಕೆಯ ಆರೈಕೆ ಮಾಡುವ ಮತ್ತು ನಮ್ಮ ಮಕ್ಕಳು ಇದೇ ದಾರಿಯಲ್ಲಿ ಮುನ್ನಡೆಯುವಂತೆ ಮಾಡುವ ಕರ್ತವ್ಯವನ್ನು ನೆನಪಿಸುವ ದಿನ.  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ. www.earthday.org/earthday2010 , http://www.earthday.org/earthday2010 , http://www.earthday.org/pledges/make-children-habituate-planting-trees-will-save-our-earth-educate-people-use-solar-power ಇತ್ತೀಚೆಗೆ ಭೂಮಿ ತಾಯಿಗೆ ಜ್ವರ ಬರುತ್ತಿದೆ. ಯಾಕೆ ಬರುತ್ತಿರಬಹುದು. ಭೂಮಿ ತಾಯಿಯ ಜ್ವರವನ್ನು ಇಳಿಸಲು ನಾವು ಏನು ಮಾಡಬಹುದು. ಭೂಮಿ ಮತ್ತು [...]

ಸ್ತ್ರೀಮತವನುತ್ತರಿಸಲಾಗದೇ ಧರ್ಮಶಾಸ್ತ್ರದೊಳ್

ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ, ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ. ಎಲ್ಲಾ ಕೃತಿಗಳಲ್ಲೂ [...]

ಸುವರ್ಣ ಕರ್ನಾಟಕ ವಿಜ್ಞಾನ ಬಾಗಿನ

ಜೀವದ ಹುಟ್ಟಿನ ನಿಜಸ್ಥಿತಿಯನ್ನು ವಿವರಿಸಿ, ನಿಮಗೆ ತಾಜಾ ಮಾಹಿತಿಯನ್ನೊದಗಿಸುತ್ತದೆ ಈ ಕಿರು ಪುಸ್ತಕ. ಸರಳವಾದ ಭಾಷೆ, ಕುತೂಹಲ ಕೆರಳಿಸುವ ಘಟನೆಗಳು ಹಾಗೂ ಸನ್ನಿವೇಶಗಳು, ನಿಮ್ಮ ಚಿಂತನೆಯನ್ನು ಕೆದಕುವಂತಹ ಮಂಡನೆ, ರೋಮಾಂಚಕಾರೀ ವೈಜ್ಞಾನಿಕ ಪತ್ತೇದಾರಿಯ ಸ್ವಾರಸ್ಯಮಯ ನಿರೂಪಣೆ, ವಿಜ್ಞಾನಿಗಳು ಅನುಭವಿಸಿದ ಕಷ್ಟ ನಷ್ಟಗಳು, ಅವರು ಪಟ್ಟ ಅವಮಾನ, ಅವರು ಎದುರಿಸಿದ ಘೋರ ಘರ್ಷಣೆಗಳು, ಕಾಲಾನುಕಾಲಕ್ಕೆ ಹೇಗೆ ಹೊಸ ಹೊಸ ವಿಜ್ಞಾನಿಗಳು ಅವತರಿಸಿ, ಕೆಚ್ಚಿನಿಂದ, ಕಿಚ್ಚಿನಿಂದ, ಈ ಚಕ್ರವ್ಯೂಹವನ್ನು ಭೇದಿಸಿ, ಮುನ್ನುಗ್ಗಿ, ಮೂಡನಂಬಿಕೆಗಳನ್ನು ಸಾರಾಸಗಟಾಗಿ ತರಿದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು [...]

ಪಕಟವಾಗಿ ೧೫೦ ವರ್ಷಗಳಾಗಿದ್ದರೂ ಇನ್ನೂ ವಾದ ವಿವಾದವನ್ನು ಸೃಷ್ಟಿಸುತ್ತಿರುವ ಪುಸ್ತಕದ ಕರ್ತೃ

ಜಗತ್ತಿನಾದ್ಯಂತ ಶ್ರೇಷ್ಟ ವಿಜ್ಞಾನಿ ಮತ್ತು ವಿಕಾಸವಾದದ ತಜ್ಞ ಚಾರ್ಲ್ಸ್ ಡಾರ್ವಿನ್ ನ ದ್ವಿ ಶತಮಾನೋತ್ಸವವನ್ನು 2009ರಲ್ಲಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಡಾರ್ವಿನ್ ನ ವಿಚಾರವಾಗಿ ವಿಜ್ಞಾನ ಲೇಖಕರುಗಳು ಬರೆದು ಈಗಾಗಲೇ ಪ್ರಕಟವಾಗಿರುವ ಲೇಖನಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ `ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು‘. ಡಾರ್ವಿನ್ ನ ಕೃತಿ `ದಿ ಒರಿಜಿನ್ ಆಫ್ ಸ್ಪೀಸೀಸ್‘ ಪ್ರಕಟವಾಗಿ 150 ವರ್ಷಗಳಾಗಿದ್ದರೂ ಅದರ ಪರ ವಾದ ವಿವಾದಗಳು ನಡೆಯುತ್ತಿದ್ದು, ವಿಕಾಸವಾದಕ್ಕೆ ಗಟ್ಟಿ ಮೆರುಗನ್ನು ಆಧುನಿಕ ಜೀವರಾಸಾಯನಿಕ ವಿಜ್ಞಾನದಲ್ಲಿ ಕಾಣಲಾಗುತ್ತಿದೆ. ಡಾರ್ವಿನ್ [...]

ಸಣ್ಣ ಕತೆ; ಸ್ವರೂಪ-ಚಿಂತನೆ

ಸಣ್ಣಕತೆ ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪುಗೊಂಡಿದ್ದರೂ ಕತೆಯನ್ನು ಹೇಳುವ ಪರಂಪರೆ ಹೊಸದೇನೂ ಅಲ್ಲ. ಇಂಗ್ಲೀಷ್ ಸಾಹಿತ್ಯದ ಪರಿಚಯದಿಂದ ಸಣ್ಣಕತೆಯ ಮಾದರಿ ಹುಟ್ಟಿಕೊಂಡಿದೆ ಎಂದು ವಿಮರ್ಶಕರು ಪರಿಭಾವಿಸಿಕೊಂಡು ಬಂದಿದ್ದಾರೆ. ಅಂಥ ಗ್ರಹಿಕೆಯಿಂದ ಇಪ್ಪತ್ತನೆಯ ಶತಮಾನದ ಆರಂಭದಿಂದ ಇದುವರೆಗೆ ಬಂದಿರುವ ಕಥಾ ಸಾಮಾಗ್ರಿಯನ್ನು ನೋಡಲಾಗುತ್ತಿದೆ. ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾ ಲೇಖನಗಳ ಸಂಗ್ರಹ `ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ’ ಇದೇ ಜಾಡಿನಲ್ಲಿ ಸಾಗಿರುವ ಚಿಂತನೆ. ಗಿರಡ್ಡಿ ಗೋವಿಂದರಾಜ `ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾಪರಂಪರೆಯ ಸಹಜ ಬೆಳವಣಿಗೆಯ [...]

ಸಾಗರ ಮತ್ತು ಸಾವು.

`ಸಾಗರಕ್ಕೆ ಸಾವುಂಟೇ?’ ಎಂಬ ಪುಸ್ತಕದ ಶೀರ್ಷಿಕೆಯೇ ಮಹಾ `ಬೋರ್-ಗರೆತ‘ ಎನ್ನಿಸುತ್ತದೆ. ಕರ್ನಾಟಕ ವಿಜ್ಞಾನ ಪರಿಷತ್ತು ಇಂಥ ಕಡಲತೀರಕ್ಕೆ ಕೈ ಹಾಕಲು ಡಾ. ವಿ.ಎನ್.ನಾಯಕ್ ರಿಗೆ ಅಪ್ಪಣೆ ಕೊಟ್ಟಿದೆ. ಸಮುದ್ರ ಮತ್ತು ತೀರಪ್ರದೇಶಗಳ ಪರಿಸರ ಸಂರಕ್ಷಣೆಯ ಕಾಳಜಿಯನ್ನು ನಾಯಕರ ಬರವಣಿಗೆಯಲ್ಲಿ ಕಾಣಬಹುದು. ಕಡಲಜೀವಶಾಸ್ತ್ರದ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾಗಿರುವ ಅವರ `ಸಾಗರಕ್ಕೆ ಸಾವುಂಟೇ‘ ಯಾರಿಗಾಗಿ ಎಂಬ ವೈಜ್ಞಾನಿಕ ಪ್ರಶ್ನೆ ಏದ್ದೇಳುತ್ತದೆ. ಆದರೆ ಶಾಲಾಕಾಲೇಜಿನ ಮಕ್ಕಳನ್ನು ಈ ಪುಸ್ತಕಗಳು ತಲುಪಬೇಕೆಂಬುದು ವಿಜ್ಞಾನ ಪರಿಷತ್ತಿನ ಮಹದಾಸೆಯಾಗಿದೆ. ಆದ್ದರಿಂದ ಅದು ಈಡೇರಿದೆ ಎಂಬುದನ್ನು ಖಂಡಿತಾ [...]

ಬುದ್ಧ ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಮಹಾನ್ ಬಂಡಾಯಗಾರ

ವಡ್ಡಗೆರೆ ನಾಗರಾಜಯ್ಯ ಅವರ ವಿಮರ್ಶಾ ಬರಹಗಳ ಸಂಕಲನ `ಬುದ್ಧನೆಡೆಗೆ‘. ಕೋಟಿಗಾನಹಳ್ಳಿ ರಾಮಯ್ಯನವರ ಪ್ರಕಾರ ವಡ್ಡಗೆರೆ, ದಲಿತ ಚಳವಳಿಯ ಮೇಣಿಹಾಲು ಕುಡಿದು ಬೆಳೆದವರು. ದಲಿತ ಚಳವಳಿಗೆಯ ಅನುಭವ ಮತ್ತು ಕಾಣ್ಕೆಗಳೇ ಅವರ ಆಲೋಚನಾ ಕ್ರಮವನ್ನು ರೂಪಿಸಿ ಮುನ್ನಡೆಸುತ್ತಿರುವುದು ಇಲ್ಲಿನ ಎಲ್ಲಾ ಲೇಖನಗಳಲ್ಲೂ ಸ್ಪಷ್ಟ. ತಂಗ್ನಿಟ್ಟಿನ್ ಈರನಾಗನ ಮೊಮ್ಮಗ ವಡ್ಡಗೆರೆ ನಾಗರಾಜಯ್ಯ ಮುನ್ನುಡಿಯಲ್ಲಿ ಅವರ ಪೂರ್ವೇತಿಹಾಸವನ್ನು ನೆನಪಿಸಿಕೊಂಡಿದ್ದಾರೆ. `ಅಸಾದಿ‘ ಖಂಡಕಾವ್ಯದಿಂದ ಜನಪ್ರಿಯರಾದ ನಾಗರಾಜಯ್ಯ, ನಾಲ್ಕೈದು ವರುಷಗಳ ಅವಧಿಯಲ್ಲಿ ಬರೆದ ವಿಮರ್ಶಾ ಲೇಖನಗಳನ್ನೆಲ್ಲ ಸಂಗ್ರಹಿಸಿ ಈ ಕೃತಿ ಹೊರತಂದಿದ್ದಾರೆ. ಮೊನ್ನೆ ಮೊನ್ನೆ [...]

ವಿಜ್ಞಾನ ಮತ್ತು ವಿಜ್ಞಾನಿಗಳು – ದಂತಕತೆಗಳ ಸಂಕಲನ

ಈ ಪುಸ್ತಕದ ಮುಖಪುಟ ನೋಡಿ ಶೀರ್ಷಿಕೆ ಓದುತ್ತಿದ್ದಂತೆ ನನ್ನ ಮೊದಲ ಯೋಚನೆ ನನ್ನ 10 ವರ್ಷ ವಯಸ್ಸಿನ ಮಗನ ಈ ಹುಟ್ಟುಹಬ್ಬದ ಉಡುಗೊರೆಯ ಪಟ್ಟಿಯಲ್ಲಿ ಇದನ್ನು ಸೇರಿಸಬೇಕು ಎಂಬುದು. ಇದು 1994ರಲ್ಲಿ ಮುದ್ರಣಗೊಂಡ ಎ ಎನ್ ಕೊಠಾರಿ ಮತ್ತಿತರರು ಬರೆದ Of Science and Scientists ದ ಕನ್ನಡ ರೂಪ. ನ್ಯಾಷನಲ್ ಬುಕ್ ಟ್ರಸ್ಟನ ಸುಮಾರು 14 ಪುಸ್ತಕ ಮಾಲಿಕೆಗಳಲ್ಲೊಂದಾದ ಜನಪ್ರಿಯ ವಿಜ್ಞಾನ ಮಾಲೆ ಯ ಒಂದು ಬಿಡಿ ಜನಪ್ರಿಯ ವಿಜ್ಞಾನ ಹೊತ್ತಿಗೆ ಇದು. ಪುಸ್ತಕದ ಮೊದಲ [...]

ಕನಸಿನ ಬಗ್ಗೆ – ಅಂತರ್ಜಾಲದಲ್ಲಿ

ನಿದ್ದೆಯ ಸಮಯದಲ್ಲಿ ಕನಸುಗಳು ಮೂಡುವ ಹಾಗೂ ಕೆನಸುಗಳ ಮೂಲಕ ಮನುಷ್ಯ ತನ್ನ ಆಸೆ ಆಕಾಂಕ್ಷೆ ಮತ್ತು ಸಮಸ್ಯೆಗಳ ಪರಿಹಾರ ಸೂಚಿಸುವ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಿದೆ. ಕನಸುಗಳು ಯಾವ ರೀತಿ ಸೃಷ್ಟಿಯಾಗುತ್ತವೆಂಬುದನ್ನು ವಿಶ್ಲೇಷಿಸಿ ಕನಸುಗಳಲ್ಲಿ ಮೂಡುವ ಸಂಕೇತಗಳನ್ನು ವೈಜ್ಞಾನಿಕವಾಗಿ ವಿವರಿಸಲು ಲೇಖಕರು ಪ್ರಯತ್ನಿಸಿದ್ದಾರೆ. ಈ ಕಿರು ಹೊತ್ತಿಗೆ ಕನಸುಗಳ ಬಗ್ಗೆ ವೈಜ್ಞಾನಿಕವಾಗಿ ವಿಷಯಗಳನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಸಹಾಯಕವಾಗಲಿದೆ. ಈ ಪುಸ್ತಕ ಈಗ ಅಂತರ್ಜಾಲದಲ್ಲಿ ಲಭ್ಯವಿದೆ http://www.archive.org/download/KannadaEbook-KanasembaMayaloka/KanasembaMayaloka.pdf ಶೀರ್ಷಿಕೆ : ಕನಸೆಂಬ ಮಾಯಾಲೋಕ ಲೇಖಕರು : ಡಾ. ಜೆ. [...]

Follow

Get every new post delivered to your Inbox.