ವಿಶ್ವ ಆರೋಗ್ಯದಿನದ ಶುಭಾಶಯಗಳೊಂದಿಗೆ

ಭಾರತದಲ್ಲಿ ಜನಾರೋಗ್ಯ ಸಾಧನೆ ದೇಶ ಸ್ವಾತಂತ್ರ್ಯ ಪಡೆದು ಆರು ದಶಕಗಳೇ ಕಳೆದರೂ ಸಾಧ್ಯವಾಗದಿರುವುದು ವಿಷಾದದ ಸಂಗತಿ. ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಹಣ ಬಹಳ ಕಡಿಮೆ. ಬಡತನ, ಅನಕ್ಷರತೆ ಹೆಚ್ಚಾಗಿರುವ ಈ ದೇಶದಲ್ಲಿ ಸಹಜವಾಗಿಯೇ ರೋಗರುಜಿನಗಳು ಕೂಡ ಅಧಿಕ. ಔಷಧಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿರುವುದರಿಂದ ಮತ್ತು ಸರ್ಕಾರವೂ ಕೂಡ ಖಾಸಗೀಕರಣ ನೀತಿಗೆ ಪ್ರೋತ್ಸಾಹ ಕೊಡುತ್ತಿರುವುದರಿಂದ ರೋಗ ಚಿಕಿತ್ಸೆಗೆ ತಗಲುವ ವೆಚ್ಚಕ್ಕಿಂತ ರೋಗಪತ್ತೆಯ ವಿಧಾನಗಳಿಗೆ ಜನತೆ ಹಣ ಹೆಚ್ಚು ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಯಾಗಿದೆ. ಗ್ರಾಮೀಣ [...]

ಮಹಿಳಾ ಆರೋಗ್ಯ; ಒಂದು ಮರುಚಿಂತನೆ

ಡಾ.ಕೆ.ಸರೋಜಾ ಅವರು ಮಹಿಳೆಯರ ಆರೋಗ್ಯ ಕುರಿತಂತೆ ಹಲವಾರು ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಅವರು ಪಡೆದು `ಮಹಿಳಾ ಆರೋಗ್ಯ; ಒಂದು ಮರುಚಿಂತನೆ’ ಎಂಬ ಗ್ರಂಥವನ್ನು ರಚನೆ ಮಾಡಿದ್ದಾರೆ. `ಜೀವನ್ ಭದ್ರಾಣಿ ಪಶ್ಯತಿ’ ಎಂಬ ಹಳೆಯ ಮಾತೊಂದುಂಟು. ಪ್ರತಿಯೊಬ್ಬರೂ ತಮ್ಮ ಸ್ವಾಸ್ಥ್ಯದ ಕಡೆ ಲಕ್ಷ್ಯ ವಹಿಸಬೇಕು. ಒಂದು ಪಕ್ಷ ಲಕ್ಷ್ಯ ವಹಿಸದಿದ್ದರೆ ಜೀವಕ್ಕೆ ಹಾನಿ. ಆ ಹಾನಿಯಿಂದ ಕುಟುಂಬದ ಹಾನಿ. ಹೀಗಾಗಿ, ಇದೊಂದು ಸ್ವಾಸ್ಥ್ಯದ ದುರಂತದಮಾಲೆ ಆದೀತು. ಮಹಿಳೆಯರ ದೇಹ ಮತ್ತು ವಿಶಿಷ್ಟವಾದುದು. [...]

ಹೆಲ್ತ್ ಕೇರ್

ಆರೋಗ್ಯ ಸಂಬಂಧಿ ಲೇಖನಗಳು ಯಾವತ್ತೂ ಸಕಾಲಿಕವಾದದ್ದರಿಂದ ಅವು ಸಾರ್ವಕಾಲಿಕವೂ! ಹಾಗಂತ ಅನಾರೋಗ್ಯದ ಬಗ್ಗೆ ಆರೋಗ್ಯಕರ ಲೇಖನಗಳನ್ನು ಬರೆಯುವುದು ಸುಲಭವೇನಲ್ಲ. ಸರಳತೆ ಮತ್ತು ಸ್ಪಷ್ಟತೆ ಅಲ್ಲಿ ಬಹಳ ಮುಖ್ಯ. ಇಂತಹ ಪುಸ್ತಕಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ. ಕಾಯಿಲೆಗಳ ಬಗೆಗಿನ ಸಂಶಯ, ಪ್ರಶ್ನೆಗಳನ್ನು ನಿವಾರಿಸಿ ಸಮಾಧಾನ ನೀಡುವಲ್ಲಿ ಇವುಗಳ ಪಾಲು ದೊಡ್ಡದು. ಆರು ಭಾಗಗಳಲ್ಲಿ ಹರಡಿಕೊಂಡಿರುವ ಈ ಪುಸ್ತಕದಲ್ಲಿ ಕಣ್ಣಿನ ನಾನಾ ತೊಂದರೆಗಳ ಬಗ್ಗೆಯೇ ಇಪ್ಪತ್ತು ಲೇಖನಗಳಿವೆ. ಪತ್ರಿಕೆಯಲ್ಲಿ ಆಗಾಗ ಪ್ರಕಟವಾಗಿರುವ ಈ ಲೇಖನಗಳು, ಪುಸ್ತಕದಲ್ಲಿ ಒಟ್ಟಾಗಿ ಒಂದು ತರಹದ [...]

ಪ್ರಕೃತಿ ಜೀವನ

ಪ್ರಕೃತಿ ಜೀವನ ತಜ್ಞರಾಗಿ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ನಿರ್ದೇಶಕರಾಗಿ ಸುದೀರ್ಘ ಅನುಭವ ಮತ್ತು ಪರಿಶ್ರಮಗಳ ಫಲವಾಗಿ ಮೂಡಿದ ಕೃತಿ ಪ್ರಕೃತಿ ಜೀವನ. ಇವತ್ತು ನಾನಾ ಕಾರಣಗಳಿಂದಾಗಿ ಮಾನವಕುಲವೇ ಪ್ರಕೃತಿಗೆ ಬೆನ್ನು ಹಾಕಿ ಹೊರಟಿದೆ. ಪ್ರಕೃತಿಯಿಂದ ದೂರವಾದಂತೆ ಅನೇಕ ಕಾಯಿಲೆಗಳ ಸಮೀಪ ಹೋಗಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಮತ್ತೆ ಪ್ರಕೃತಿಯೇ ಅನೇಕ ಪರಿಹಾರಗಳನ್ನು ಒದಗಿಸಬಲ್ಲುದು. ಈ ಪುಸ್ತಕದಲ್ಲಿ ಲೇಖಕರು ಚಿಕ್ಕಪುಟ್ಟವೆನ್ನಬಹುದಾದ ಉದಾಹರಣೆಗಳ ಮೂಲಕ ಮನಸಿನಾಳಕ್ಕೆ ಇಳಿಯುವಂತೆ ವಿವರಿಸುತ್ತಾರೆ. ನೋವಿನ ಮೂಲ, ಕಾಯಿಲೆಯ ಕಾರಣಗಳನ್ನು ಹುಡುಕುತ್ತಾ ನಂತರ ಪರಿಹಾರಗಳ ಕಡೆಗೆ [...]

ಬೈ ದ ಡಾಕ್ಟರ್, ಫಾರ್ ದ ಡಾಕ್ಟರ್, ಥಟ್ ಅಂತ ಕೊಳ್ಳಿ!

ಐದಕ್ಕಿಂತಲೂ ಹೆಚ್ಚು ಬಾರಿ ಮರುಮುದ್ರಣಗೊಂಡಿರುವ ಡಾ.ಸಿ.ಆರ್.ಚಂದ್ರಶೇಖರ್ ರ ಕೃತಿಗಳ ಸಂಖ್ಯೆ 30. ಸಿ.ಆರ್.ಸಿ. ಒಟ್ಟು 159 ಪುಸ್ತಕಗಳು ಒಂದಕ್ಕಿಂತ ಹೆಚ್ಚಿನ ಮರುಮುದ್ರಣ ಕಂಡಿವೆ. ಅಂದರೆ ಶೇ.75ಕ್ಕಿಂತಲೂ ಹೆಚ್ಚಿನ ಪುಸ್ತಕಗಳು ಮರುಮುದ್ರಣವನ್ನು ಕಂಡಿವೆ ಎಂದಂತಾುತು. ಹೀಗೆ ಡಾ. ನಾ. ಸೋಮೇಶ್ವರರು ಸಿ.ಆರ್.ಸಿ. ಯವರ ಕುರಿತು ಬರೆದ `ಮನಸ್ವಿಯಲ್ಲಿ ಲೆಕ್ಕ ಹಾಕುತ್ತಾರೆ. `ಮನಸ್ವಿ ಸಿ.ಆರ್.ಸಿ.ಯವರ 60 ವರ್ಷಗಳ ಬದುಕು-ಬರಹವನ್ನು ಸೋಮೇಶ್ವರರು ವಿಶಿಷ್ಟವಾಗಿ ದಾಖಲಿಸಿರುವ ಪುಸ್ತಕ. ಸೋಮೇಶ್ವರರು ಪ್ರೀತಿುಂದ ಹೊಗಳಿಕೆಗಳಲ್ಲೇ ಈ ಪುಸ್ತಕವನ್ನು ಬರೆದಿಲ್ಲ. ತುಲನಾತ್ಮಕ ಅಧ್ಯಯನದಿಂದ ಹೊರಬಂದಿರುವ ಕೃತಿುದು. ಸಿ.ಆರ್.ಸಿ. [...]

ನನಗೆ ಗೀತೆ, ಕುರಾನ್, ಬೈಬಲ್ ಸರ್ವವೂ ಆಗಿರುವ ಒಂದು ಪುಸ್ತಕ

ಪುಸ್ತಕ ಪ್ರೀತಿ ಬ್ಲಾಗ್ ಓದುಗರಿಗೆ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷದ ಮೊದಲ ದಿನ ನನಗೆ ಗೀತೆ, ಕುರಾನ್, ಬೈಬಲ್ ಸರ್ವವೂ ಆಗಿರುವ ಒಂದು ಪುಸ್ತಕದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ಈ ಪುಸ್ತಕ ಮನಶ್ಶಾಸ್ತ್ರಕ್ಕೆ ಸಂಬಂದಿಸಿದ್ದು. ಇದೇನು ಮೊದಲ ವರ್ಷದ ಮೊದಲ ದಿನ ಇಂತಹ ಪುಸ್ತಕವನ್ನು ಪರಿಚಯಿಸಲು ಹೊರಟಿದ್ದು ಎಂದು ಬೇಸರಿಸಬೇಡಿ. ಇದು ಅಂತಿಂಥ ಪುಸ್ತಕವಲ್ಲ! ನನ್ನಲ್ಲಿ ನನಗೆ ನಂಬಿಕೆ ಹುಟ್ಟಿಸಿದ ಪುಸ್ತಕ ಇದು. ನನ್ನ ಎಲ್ಲಾ ನಕಾರಾತ್ಮಕ ಅನುಭವಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡಿದ ಪುಸ್ತಕ ಇದು. [...]

ನಿಮ್ಮ ಕೈಯಲ್ಲಿ

ಡಾ. ವಸುಂಧರಾ ಭೂಪತಿ ಈ ಹೆಸರು ಯಾರು ಕೇಳಿಲ್ಲ? ವೈದ್ಯಕೀಯ ಲೇಖನಗಳನ್ನು ಓದುವವರು ಖಂಡಿತಾ ಓದಿರುತ್ತಾರೆ. `ಜಗತ್ತಿನ ಅತ್ಯಂತ ದೊಡ್ಡ ಡಾಕ್ಟರ್ ಗಳೆಂದರೆ ಡಾ.ಪಥ್ಯ, ಡಾ. ಶಾಂತಿ, ಡಾ.ಆನಂದ‘ ಎಂದು ಜೊನಾಥನ್ ಸ್ವಿಫ್ಟ್ ಹೇಳಿದ್ದಾನೆಂದು `ನನ್ನ ಮಾತು‘ ಬರೆಯುತ್ತಾರೆ ಭೂಪತಿ. ಕೆಲವು ಸಾಮಾನ್ಯ ಕಾಯಿಲೆಗಳಿಗೆ ಕಾರಣಗಳು, ಆಹಾರ ಕ್ರಮ, ವೃದ್ಧಾಪ್ಯದ ಸಮಸ್ಯೆಗಳು ಮತ್ತು ಅವುಗಳಿಗೆ ಅನುಸರಿಸಬೇಕಾದ ಕ್ರಮಗಳು ಮುಂತಾದವುಗಳ ಕುರಿತು `ಆರೋಗ್ಯ ಆರೈಕೆ – ನಿಮ್ಮ ಕೈಯಲ್ಲಿ‘ ಪುಸ್ತಕವನ್ನು ಆಯುರ್ವೇದ ಡಾಕ್ಟರ್ ಬರೆದಿದ್ದಾರೆ. `ನಮ್ಮ ಆಹಾರ ಕ್ರಮ [...]

ವಿಜ್ಞಾನದ ಕಾಲದಲ್ಲಿ ತಲೆಗೆ `ಮದ್ದು ಹಾಕುವ ಕೆಲಸ’ ಈ ಚರ್ಚಾಸ್ಪದ ಪುಸ್ತಕ ಮಾಡುತ್ತದೆ!

ವಿಜ್ಞಾನವೆಂಬ ಯಜಮಾನನಿಗೆ ಅರ್ಥಾತ್ ಆಧುನಿಕತೆಯ ಜನತೆಯ ಜ್ಞಾನ ಸೊರಗಿ, ಸೋತುಹೋಯಿತು. ಇಲ್ಲಿಂದಲೇ ಬಡವರ ಸೋಲು ಆರಂಭವಾಯಿತು. ಎಲ್ಲ ಸ್ಥಳೀಯ ಜ್ಞಾನಿಗಳು ಮತ್ತು ಕುಶಲಕರ್ಮಿಗಳು ಕೈಚೆಲ್ಲಿದರು. ಅನೇಕ ಶತಮಾನಗಳ ಜ್ಞಾನ ಅವನತಿಯ ಹಾದಿ ಹಿಡಿಯಿತು. ಇದೇ ಜಾನಪದ; ಜನರ ಜ್ಞಾನವಿಜ್ಞಾನ ಎಂದು ಬೆನ್ನುಡಿಯಲ್ಲಿ ಹೇಳಿದ್ದಾರೆ ಡಾ. ಟಿ.ಗೋವಿಂದರಾಜು ಪುಸ್ತಕ `ಜನಪದ ವೈದ್ಯ‘. ವಿಜ್ಞಾನದ ಸಾಮಾಜಿಕರಣದ ಕುರಿತು ಮಾತನಾಡುವ ಪುಸ್ತಕವಿದು. ಶತಮಾನಗಳ ನಿರಂತರ ಜ್ಞಾನವನ್ನು ಪ್ರಸ್ತುತ ಸಂದರ್ಭಕ್ಕೆ ತಂದುಕೊಳ್ಳುವ ಪ್ರಯತ್ನವಾಗಿ ಗೋವಿಂದರಾಜುರವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ಕರ್ನಾಟಕ ಜಾನಪದ ವೈದ್ಯ [...]

ಕರ್ನಾಟಕ ವಿಷ ವೈದ್ಯ ಪರಂಪರೆ

ಕರ್ನಾಟಕ ವಿಷ ವೈದ್ಯ ಪರಂಪರೆ ಕೃತಿ ವೈದ್ಯಕೀಯದ ಅದರಲ್ಲೂ ಆಯುರ್ವೇದ ವೈದ್ಯ ಪದ್ಧತಿಯ ಅನೇಕ ವಿಚಾರಗಳನ್ನು ಅನಾವರಣಗೊಳಿಸಿದೆ. ವಿಷ ನಮ್ಮ ದೇಹಕ್ಕೆ ಎಷ್ಟೊಂದು ಅಪಾಯಕಾರಿ ಎಂಬುದಂತೂ ಸತ್ಯ. ಕವಿ ಮಂಗರಸನ `ಖಗೇಂದ್ರಮಣಿದರ್ಪಣ‘ ಕನ್ನಡ ಭಾಷೆಯ ಮೊದಲ ವೈದ್ಯಗ್ರಂಥ. ಇದರಲ್ಲಿ ವೈದ್ಯ ಪದ್ಧತಿಯನ್ನು ಕಂದಪದ್ಯಗಳಲ್ಲಿ ಹೇಳಲಾಗಿದೆ. ಪ್ರೊ. ಎಂ. ಮರಿಯಪ್ಪ ಭಟ್ಟರು ಸಂಪಾದಿಸಿದ ಈ ಕೃತಿಯ ನಂತರ ಇದೇ ಮಾದರಿಯ ಕೃತಿ ಕನ್ನಡದಲ್ಲಿ ಬಹುಶಃ ಬಂದಿಲ್ಲ. ಈ ಕೊರತೆಯನ್ನು ನೀಗಿಸಿದವರು ಡಾ. ಸತ್ಯನಾರಾಯಣ ಭಟ್. ಈ ಕೃತಿಯಲ್ಲಿ ಖಗೇಂದ್ರಮಣಿಯ [...]

ಯಶಸ್ಸು ಹಾಗೂ ನೆಮ್ಮದಿಯ ಬದುಕು

ಹಲವು ಬಗೆಯ ಜಂಜಡ, ಸಂಕೀರ್ಣತೆಗಳಿಗೆ ಒಳಗಾಗಿರುವ ಆಧುನಿಕ ಬದುಕಿನಲ್ಲಿ ಯಶಸ್ಸಿನ ಹುಡುಕಾಟ ಹಿಂದೆಂದಿಗಿಂತ ಹುಚ್ಚು ವೇಗದಲ್ಲಿ ಸಾಗಿದೆ ಮತ್ತು ಅಳಿವು-ಉಳಿವಿನ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಒಂದೇ ನಾಣ್ಯದ ಎರಡು ಮುಖಗಳಾಗಿರುವ ಯಶಸ್ಸು ಹಾಗೂ ನೆಮ್ಮದಿಯ ಪಾರ್ಶ್ವ ಭಾಗಗಳನ್ನು ವಿವರಿಸುವ ಈ ಪುಸ್ತಕ ಕರ್ನಾಟಕದ ಖ್ಯಾತ ಮನೋವಿಜ್ಞಾನಿಗಳಲ್ಲಿ ಒಬ್ಬರಾದ ಡಾ. ಸಿ.ಆರ್. ಚಂದ್ರಶೇಖರ್ ಬರೆದಿರುವುದು ಎನ್ನುವ ಕಾರಣಕ್ಕಾಗಿಯೇ extra weightage, footage ಗಳಿಸಿಕೊಂಡಿದೆ ಎಂದರೆ ತಪ್ಪಿಲ್ಲ. ತಿಳಿಯಾದ ಭಾಷೆಯಲ್ಲಿ ಪ್ರಶ್ನೋತ್ತರ ರೂಪದಲ್ಲಿ ಲೇಖಕರು ಸನ್ನಿವೇಶದ ಒಂದು ಅಥೆಂಟಿಕ್ ಚಿತ್ರಣ ನೀಡುತ್ತಾರೆ. [...]

Follow

Get every new post delivered to your Inbox.