`ರೊಟ್ಟಿ ಮತ್ತು ಗುಲಾಬಿ’ ಘೋಷಣೆಯ ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ

ರೊಟ್ಟಿ – ತುಂಬಿದ ಹೊಟ್ಟೆಯ ಹಾಗೂ  ಗುಲಾಬಿ – ಗೌರವಾನ್ವಿತ ಬದುಕಿನ ಸಂಕೇತ. ಕೆಲವು ಮಹಿಳೆಯರು ಮಹಿಳೆ ಎನ್ನುವ ಕಾರಣದಿಂದಲೇ ಹಸಿವಿನಿಂದ ಬಳಲುತ್ತಿದ್ದರೆ ಇನ್ನೊಂದು ಭಾಗ ಹಸಿವಿನಿಂದಲ್ಲದಿದ್ದರೂ ತನ್ನೆಲ್ಲಾ ಕೊಡುಗೆಯಿದ್ದರೂ ನಿರ್ಧಾರದಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ `ಎರಡನೇ ದರ್ಜೆ’ಗೆ ತಳ್ಳಲ್ಪಡುವ ಅವಮಾನದಿಂದ ಬಳಲುತ್ತಿದ್ದಾಳೆ. ಮಹಿಳೆಯ ಕುರಿತಾದ ಜೀವವಿರೋಧಿ ತಾರತಮ್ಯದ ವಿರುದ್ಧ ಹೋರಾಡಿದ, ಹೋರಾಡುತ್ತಿರುವ ಕೋಟಿ ಮಹಿಳೆಯರಿಗೆ ನಮ್ಮ ಧನ್ಯವಾದಗಳು. ಇಂತಹ ಸಮರಧೀರ ಮಹಿಳೆಯರಿಂದಾಗಿಯೇ (ನಿರಂತರ ಹೋರಾಟದ ನೂರು ವರ್ಷಗಳ ನಂತರವೂ) ಮಹಿಳೆಯರಿಗೆ ಕೆ(ಹ)ಲವು ಕೊರತೆಗಳಿದ್ದರೂ ಇಷ್ಟಾದರೂ ಒಳ್ಳೆಯ [...]

ಮಹಿಳಾ ಸಾಕ್ಷರತೆಯ ದಿನವಾದ ಇಂದು ಮರೆಯಬಾರದ ವಿಮೋಚಕಿಯನ್ನು ನೆನೆಯೋಣ

ಇಂದಿನ ವಿಶ್ವ ಸಾಕ್ಷರತಾ ದಿನವನ್ನು ಯುನೆಸ್ಕೋ ಮಹಿಳಾ ಸಾಕ್ಷರತೆಯ ದಿನವಾಗಿ ಆಚರಿಸುತ್ತಿದೆ. ಮಹಿಳಾ ಸಾಕ್ಷರತೆಯ ಬಗ್ಗೆ ಮಾತನಾಡಿದಾಗ ಭಾರತೀಯ ಮಹಿಳೆಯರು ಮೊದಲು ನೆನಸಬೇಕಾದ ವ್ಯಕ್ತಿ ಸಾವಿತ್ರೀಬಾಯಿ ಫುಲೆ. ದೇಶದ ಮೊಟ್ಟ ಮೊದಲ ಮಹಿಳಾ ಗುರುವೆಂಬ ಖ್ಯಾತಿಗೆ ಪಾತ್ರರಾದ ಸಾವಿತ್ರೀಬಾಯಿ ಫುಲೆ ಅವರು ತನ್ನ ಕಾರ್ಯದಲ್ಲಿ ಸಾಕಷ್ಟು ವಿಘ್ನಗಳನ್ನು ಎದುರಿಸಿದ್ದರು. ಅವರೇ ಸ್ಥಾಪಿಸಿದ ಹೆಣ್ಣುಮಕ್ಕಳ ಶಾಲೆಗೆ ಓದಿಸಲು ಹೋಗುವಾಗ ಮೇಲು ಜಾತಿಯ ಗಂಡಸರು ಅವರ ಮೇಲೆ ಕೆಸರು, ಮಣ್ಣು, ಧೂಳುಗಳನ್ನು ಎಸೆಯುತ್ತಿದ್ದರಂತೆ. ಅಂತಹ ಸಂದರ್ಭದಲ್ಲೂ ದೃತಿಗೆಡದೆ ಮಹಿಳಾ ಸಾಕ್ಷರತೆಗಾಗಿ [...]

ಪ್ರಾಸ ಪ್ರಯಾಸ ಪ್ರವೀಣ!

ಬಿ.ಎಸ್. ಕೇಶವರಾವ್, ಚಿಕ್ಕದಾಗಿ, ಬಿ.ಎಸ್.ಕೆ. ಹಾಗೆಂದರೆ `ಬಿಟ್ಟರೆ ಸಿಗದ ಕೇಡಿ‘ ಎಂದು ವೈ.ಎನ್.ಕೆ. ಹೇಳುತ್ತಿದ್ದರಂತೆ. ವೈ.ಎನ್.ಕೆ. ಕುರಿತು ಬಿ.ಎಸ್.ಕೆ. ಬರೆಯುತ್ತಾರೆ:`ಪೂರ್ವದಿಂದಲೂ ಅಷ್ಟೇ, ಪದಗಳೊಡನೆ ಫನ್ ಮಾಡುವುದರಲ್ಲಿ ಪಾಖಡಾ ಎನ್ನುವಂತೆ ತಮ್ಮ ಪೆನ್ ಬಳಸಿ ಪ್ರಖ್ಯಾತರಾಗಿದ್ದ ವೈ.ಎನ್.ಎ. ಇತ್ತೀಚೆಗೆ ವಿಮಾನದಲ್ಲಿ ಹಾರುತ್ತಿರುವಾಗ ಹೃದಯಾಘಾತಕ್ಕೊಳಗಾಗಿ ಯಾರೊಬ್ಬರಿಗೂ ಚಿಕಿತ್ಸೆ ನೀಡುವ ಅವಕಾಶ ಕೊಡದೇ ಆಕಾಶದಲ್ಲೇ ಅಸುನೀಗಿ ಅದೃಶ್ಯರಾಗಿ ಹೋದರು.‘ ಇದು ಅವರ ಪ್ರಾಸಭರಿತ ಶೈಲಿಗೊಂದು ಸಣ್ಣ ಉದಾಹರಣೆ. ಪ್ರಾಣ ಹೋದರೂ ಪ್ರಾಸ ಬಿಡುವುದಿಲ್ಲ ಎನ್ನುವ ಹೊಸಗಾದೆಯನ್ನೂ ಅವರಿಗೋಸ್ಕರ ಸೃಷ್ಟಿಸಬಹುದು. ಎಂದೋ ಬರೆದ [...]

ಜುಗಲಬಂದಿ ಚಿಂತಕ

ಅತ್ಯುತ್ತಮ ಕತೆ ಕಾದಂಬರಿ ಬರೆದು, ವಿಮರ್ಶಾ ಮಾರ್ಗವನ್ನು ರೂಪಿಸಿ, ಸಂಸ್ಕೃತಿ ಚಿಂತನೆಗೆ ಹೊರಳಿ ಅಲ್ಲಿ ಗಟ್ಟಿಯಾಗಿ ನಿಲ್ಲಲು ಅನಂತಮೂರ್ತಿಯವರು ಹವಣಿಸಿದ್ದು ಚಲಾವಣೆಯ ಒತ್ತಡವೇ? ಸಮಾಜವಾದಿಯಾಗಿ ಸಾಹಿತ್ಯಲೋಕ ಪ್ರವೇಶಿಸಿ, ಸಂಸ್ಕೃತಿ ಚಿಂತಕರಾಗಿ ಬೆಳೆದು ಈಗ `ಸಮಾಜವಾದಿ‘ ಎಂದು ಕೇವಲ ಹೇಳಿಕೊಳ್ಳಬೇಕಾದ ತಮ್ಮ ಬೆಳವಣಿಗೆಯನ್ನು ಅನಂತಮೂರ್ತಿ ನೇರವಾಗಿ ಎದುರಿಸಿದ್ದಾರೆಯೇ ಇಂಥ ಪ್ರಶ್ನೆಗಳನ್ನು ಕೇಳುತ್ತಿರುವವರು ಜಿ.ಕೆ.ರವೀಂದ್ರಕುಮಾರ್. ಅನಂತಮೂರ್ತಿಯವರು ತಮ್ಮ ಏಕಾಂತವನ್ನು ಕಳೆದುಕೊಂಡಿದ್ದಾರೆ. ಗಾಂಧೀಜಿಯನ್ನು ಹೆಜ್ಜೆಹೆಜ್ಜೆಗೂ ಜ್ಞಾಪಿಸಿಕೊಳ್ಳುವ ಅವರು ಗಾಂಧೀಜಿಯ ಮೌನವನ್ನು ಬಲವಂತವಾಗಿ ಆದರೂ ಒಂದು ವ್ರತದಂತೆ ಕಾಣಬೇಕಾಗಿದೆ ಎಂದೂ ರವೀಂದ್ರಕುಮಾರ್ ಅಭಿಪ್ರಾಯ. [...]

Follow

Get every new post delivered to your Inbox.