Posted on May 23, 2009 by pusthakapreeethi
ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು
ವೈ.ಎನ್.ಕೆ. ಬರೆದ ಈ ಅಣಕವಾಡು ಸಾರ್ವಕಾಲಿಕ. ಕನ್ನಡದ ಹಿರಿಯ ಕವಿಗಳೂ ಅಣಕವಾಡು ಬರೆದಿದ್ದಾರೆ. ಹಿರಿಯ ಕವಿಗಳ ಕವಿತೆಗಳೂ ಸೊಗಸಾದ ಅಣಕವಾಡುಗಳಾಗಿ ರಂಜಿಸಿವೆ. ಬ್ರಹ್ಮಮುರಾರಿ ಸದಾಶಿವ ಲಿಂಗಂ ಎಂಬ ಲಿಂಗಾಷ್ಟಕದ ಸಾಲುಗಳನ್ನೂ ಬುದ್ದಿವಂತರು ಅಣಕು ಮಾಡಿದ್ದಾರೆ:
ಮೋಹಿನಿ ಮೋಹಕ ಮಾದಕ ಲಂಚಮ್
ಮಡದಿಯ ಕೋಪ ನಿವಾರಕ ಲಂಚಮ್
ಮಂತ್ರಿಯ ಮನವನು ಗೆಲ್ಲುವ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್
ಇಂಥ ಸೊಗಸಾದ ಅಣಕವಾಡುಗಳನ್ನು ಬರೆಯುತ್ತಾ ಬಂದಿರುವವರು ಎನ್.ರಾಮನಾಥ್. ‘ಹಗಲು ಹರಿಯಿತು ಇರುಳು ಕರಗಿತು, ಏಳು ಪಯಣಿಗ ಎಚ್ಚರಾ‘ ಎಂಬ ಚಕ್ರತೀರ್ಥದ [...]
Filed under: ಹಾಸ್ಯ ಸಾಹಿತ್ಯ | Tagged: ಎನ್.ರಾಮನಾಥ್, ಕನ್ನಡ ಪ್ರಭ, ಪ್ರಶಾಂತ ಪ್ರಕಾಶನ, ಮಾಸದ ಅಣಕು ಗೀತೆಗಳು | Leave a Comment »
Posted on November 15, 2008 by pusthakapreeethi
ಕಲಾಕ್ಷೇತ್ರದ ಮೆಟ್ಟಿಲಿನೊಂದಿಗೆ ಸೂತ್ರಧಾರ ನಡೆಸುವ ಸಂಭಾಷಣೆಯ ರೂಪದಲ್ಲಿರುವ ಇಲ್ಲಿನ 73 ಹಾಸ್ಯಬರಹಗಳು ಕಳೆದ ಒಂದು ದಶಕದ ರಂಗಚಟುವಟಿಕೆಯನ್ನು ಮೆಚ್ಚುಗೆ, ವ್ಯಂಗ್ಯೋಕ್ತಿ, ಟೀಕೆ-ಟಿಪ್ಪಣಿಗಳೊಂದಿಗೆ ದಾಖಲಿಸುತ್ತದೆ. ಮೆಟ್ಟಿಲನ್ನು ರಂಗ ವ್ಯವಸ್ಥೆಯ ಪ್ರತೀಕವಾಗಿಸಿಕೊಂಡು ಸೂತ್ರಧಾರ ಒಟ್ಟು ರಂಗ ಚಟುವಟಿಕೆಯ ಸಾಕ್ಷಿಪ್ರಜ್ಞೆಯಂತೆ `ಪನ್‘ ಮಾಡುತ್ತ ಹೋಗುವ ಇಲ್ಲಿನ ಬರಹಗಳು ಕನ್ನಡದಲ್ಲಿ ವಿಶಿಷ್ಟವಾದವುಗಳು.
ಎರಡು ದಶಕಗಳ ಹಿಂದೆ ರಂಗಭೂಮಿಗೆ ಮೀಸಲಾದ `ಸೂತ್ರಧಾರ ವಾರ್ತಾಪತ್ರ‘ಕ್ಕೆ ಈ ತರಹದ ಬರಹವನ್ನು ಆರಂಭಿಸಿದ ರಾಮಯ್ಯ ಅದರಿಂದ ಎಷ್ಟು ಪ್ರಸಿದ್ಧರಾದರೆಂದರೆ ಅವರಿಗೆ ಸೂತ್ರಧಾರ ರಾಮಯ್ಯ ಎಂಬ ಹೆಸರೇ ಗಟ್ಟಿಯಾಯಿತು. ಮಧ್ಯೆ [...]
Filed under: ಹಾಸ್ಯ ಸಾಹಿತ್ಯ | Tagged: ಕಲಾಕ್ಷೇತ್ರದ ಮೆಟ್ಟಲಿ, ಮಂಗಳ ಪ್ರಕಾಶನ ಬೆಂಗಳೂ, ಸುಧಾ, ಸೂತ್ರಧಾರ ರಾಮಯ್ಯ | Leave a Comment »
Posted on October 15, 2008 by pusthakapreeethi
ಎನ್ಕೆ ಸುಬ್ರಹ್ಮಣ್ಯರ ಹಾಸ್ಯ ಬರಹಗಳ ಸಂಕಲನ `ಸಂತೆಯಲ್ಲಿ ಸುಬ್ರಹ್ಮಣ್ಯ‘. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಅನುಭವವನ್ನು ಒಳಗೊಂಡ ಬರಹಗಳಿವು. ಮಧ್ಯಮವರ್ಗದ ಕನಸು ಹಾಗೂ ಜೀವನದ ವಿವರಗಳು ಇಲ್ಲಿ ಬರಹದ ರೂಪವನ್ನು ತಾಳಿವೆ.
ಹಾಗೆಂದು ಇಲ್ಲಿನ ಹದಿನೇಳು ಬರಹಗಳು ಸೀಮಿತ ಅನುಭವದ ಲೋಕದ ಒಳಗಷ್ಟೇ ಓಡಾಡುವುದಿಲ್ಲ. ಇಲ್ಲಿ ಸಂತೆ, ಕಂಪ್ಯೂಟರ್, ವಿಂಬಲ್ಡನ್, ಹೋಗಬೇಕಾದ ಅಮೆರಿಕಾ ಯಾತ್ರೆ, ಗುಜರಿ ಬಜಾರ್ ಬಗ್ಗೆಯೂ ಲೇಖನಗಳಿವೆ. ಲೇಖಕರು ಆಸಕ್ತಿಯಿಂದ ಓದಿಸಿಕೊಳ್ಳುವಂತೆ, ಲವಲವಿಕೆಯಿಂದ, ತಮಾಷೆಯಾಗಿ ಬರೆಯುತ್ತಾರೆ. ಇದಕ್ಕೆ ಹರಿಣಿ ಅವರ ವ್ಯಂಗ್ಯಚಿತ್ರಗಳು ಪುಟಕೊಟ್ಟಿವೆ.
ಶೀರ್ಷಿಕೆ: ಸಂತೆಯಲ್ಲಿ ಸುಬ್ರಹ್ಮಣ್ಯ [...]
Filed under: ಹಾಸ್ಯ ಸಾಹಿತ್ಯ | Tagged: ಎನ್ಕೆ ಸುಬ್ರಹ್ಮಣ್ಯ, ನವ ಕರ್ನಾಟಕ ಪ್ರಕಾಶನ, ಸಂತೆಯಲ್ಲಿ ಸುಬ್ರಹ್ಮಣ | Leave a Comment »
Posted on September 12, 2008 by pusthakapreeethi
ಹಿರಿಯ ವ್ಯಂಗ್ಯಚಿತ್ರಕಾರ ವಿ. ಗೋಪಾಲ್ ರ ಎರಡನೆಯ ವ್ಯಂಗ್ಯಚಿತ್ರಗಳ ಸಂಕಲನ ಇದು. `ಪಾಕೆಟ್ ಕಾರ್ಟೂನ್‘ ಗಳೆಂದು ಕರೆಯಲ್ಪಡುವ ವ್ಯಂಗ್ಯಚಿತ್ರಗಳನ್ನು ಅವರು ಇಲ್ಲಿ ಪ್ರಕಟಿಸಿದ್ದಾರೆ.
ಹಾಗೆ ನೋಡಿದರೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಇಂಥ ವ್ಯಂಗ್ಯ ಚಿತ್ರಗಳಿಗೆ ಆಯುಸ್ಸು ಕಡಿಮೆ. ಕಾಲದ ಪ್ರವಾಹದಲ್ಲಿ ಬದುಕಿ ಉಳಿಯುವುದು ಎಲ್ಲೋ ಕೆಲವಷ್ಟು ಮಾತ್ರ. ಹೀಗಿದ್ದಾಗಲೂ ಗೋಪಾಲ್ ದೈನಿಕದ ಬದುಕಿನಲ್ಲಿ ಹೊಮ್ಮುವ ಹಾಸ್ಯವನ್ನು ತಮ್ಮ ಗೆರೆಗಳಲ್ಲಿ ಹಿಡಿದಿಟ್ಟಿದ್ದಾರೆ.
ಕೇವಲ ನಗಿಸುವ ವ್ಯಂಗ್ಯಚಿತ್ರಗಳಾಗದೆ ಮನುಷ್ಯ ಸ್ವಭಾವದ ವಕ್ರತೆಗೆ ಹಿಡಿದ ಕನ್ನಡಿ ಈ ಚಿತ್ರಗಳು.
ಮುನ್ನುಡಿಯಲ್ಲಿ ಎಂ.ಎಸ್.ನರಸಿಂಹಮೂರ್ತಿಯವರು ಗುರುತಿಸಿರುವಂತೆ `ಗೋಪಾಲರ [...]
Filed under: ಹಾಸ್ಯ ಸಾಹಿತ್ಯ | Tagged: ನಗೆ ರೇಖೆಗಳು, ವಿ. ಗೋಪಾಲ್ | Leave a Comment »
Posted on August 9, 2008 by pusthakapreeethi
Kefa, the pen name of A. V. Keshavamurthy, is a familiar name for those who have been reading humorous writings published in Kannada periodicals. He was popular in the 70s and 80s. For unknown reasons, he receded to oblivion without much recognition. This is a collection of his select writings respectfully edited by one of [...]
Filed under: ಹಾಸ್ಯ ಸಾಹಿತ್ಯ | Leave a Comment »