ಪುಸ್ತಕ ಹಬ್ಬದಲ್ಲಿ ನಮ್ಮ ಸ್ಟಾಲ್ – 254 ಪುಸ್ತಕ ಪ್ರೀತಿ

ಪುಸ್ತಕ ಹಬ್ಬ

ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭವಾಗುವ ಪುಸ್ತಕೋತ್ಸವದಲ್ಲಿ 340 ಕ್ಕೂ ಹೆಚ್ಚು ಮಳಿಗೆಗಳಿವೆ. ಲಕ್ಷಾಂತರ ಪುಸ್ತಕಗಳಿವೆ. ಇದೊಂದು ಜ್ಞಾನ ಭಂಡಾರ.
ಪುಸ್ತಕ ಪ್ರಿಯರು ಕಾತರದಿಂದ ನಿರೀಕ್ಷಿಸುವ ಬೆಂಗಳೂರು ಪುಸ್ತಕ ಹಬ್ಬ ಶುಕ್ರವಾರ 06-11-2009 ದಿಂದ ಹತ್ತು ದಿನ ಕಾಲ ಅರಮನೆ ಮೈದಾನದಲ್ಲಿ ನಡೆಯಲಿದೆ.
ಏಷ್ಯಾದ ಎರಡನೇ ಅತಿ ದೊಡ್ಡ ಪುಸ್ತಕೋತ್ಸವ ಎನ್ನುವುದು ಇದರ ಹೆಗ್ಗಳಿಕೆ. ಈ ಬಾರಿಯದು ಏಳನೇ ವರ್ಷದ ಪುಸ್ತಕೋತ್ಸವ.
ಮೂರು ಲಕ್ಷಕ್ಕೂ ಅಧಿಕ ಮಂದಿ ಪುಸ್ತಕ ಪ್ರೇಮಿಗಳು ಭೇಟಿ ಸಂಘಟಕರ ಅಂದಾಜು. ಈ ಕಾರಣದಿಂದಾಗಿಯೇ ದೇಶದ ಪ್ರಮುಖ ಪ್ರಕಾಶಕರು ತಮ್ಮ [...]

ಯಾದ್ ವಶೀಮ್ ಗೆ ೨೦೦೭ ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಐವರಿಗೆ ಸಾಹಿತ್ಯ ಅಕಾಡೆಮಿ ಗರಿ
ಹಿರಿಯ ಸಾಹಿತಿ ಪ್ರೊ.ಅ.ರಾ.ಮಿತ್ರ ರೊಂದಿಗೆ ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮತ್ತು ಲಕ್ಷ್ಮಣ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2007ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಕಾವ್ಯ ಕಾದಂಬರಿ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಿಂದ 18 ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಬಹುಮಾನಿತ ಕೃತಿಗಳು :
ಕಾವ್ಯ – ಒಡೆಯಲಾರದ ಪ್ರತಿಮೆ – ಬಸವರಾಜ ವಕ್ಕುಂದ
ಕಾದಂಬರಿ – ಯಾದ್ ವಶೀಮ್ – ನೇಮಿಚಂದ್ರ
ಸಣ್ಣಕತೆ – ನನ್ನ ಇನ್ನಷ್ಟು ಕತೆಗಳು – [...]

ಒಂಟಿ ಒಬ್ಬಂಟಿ

ಗಂಡು ವೇಷಧಾರಿಗಳೆಲ್ಲ ಗಂಡಸರಲ್ಲ, ಸೀರೆ ಉಟ್ಟವರೆಲ್ಲ ಹೆಂಗಸರಲ್ಲ, ನಪುಂಸಕರಲ್ಲಿ ಹತ್ತು ಹಲವು ವಿಧದ ನಪುಂಸಕರಿದ್ದಾರೆ ಎನ್ನುವ ಲೇಖಕರು ಮನುಷ್ಯರು ಎಂಬ ಮಾನವ ಕುಲದ ಬದುಕನ್ನು `ಒಬ್ಬ ಒಬ್ಬಂಟಿ‘ ಕಾದಂಬರಿಯನ್ನಾಗಿಸಿದ್ದಾರೆ. ನಪುಂಸಕರು, ಜೋಗಿ ಜೋಗತಿಯರ ಬದುಕಿನ ಸುತ್ತಸಾಗುವ `ಒಂಟಿ ಒಬ್ಬಂಟಿ‘, ಕಾದಂಬರಿ ಎಂದರೆ ಕಾದಂಬರಿಯೇ ಅಲ್ಲ. ಸಂಶೋಧನಾಗ್ರಂಥ ಎಂದರೂ ಸರಿಯೇ. ಆದರೆ ಅದನ್ನು ಲೇಖಕರು ಅಲ್ಲಗಳೆಯುತ್ತಾರೆ. ಜನಪದ ಕಥೆ ಆಧಾರವಾಗಿದ್ದರೂ ಕಥಾವಸ್ತು ಮಾತ್ರ ಸಮಕಾಲೀನ. ಬೈಲಹೊಂಗಲ, ಸವದತ್ತಿಗಳಲ್ಲಿನ ಜೋಗ, ಜೋಗತಿಯರ ನಂಬಿಕೆ, ಆಚರಣೆಗಳ ಪ್ರತೀಕ ಈ ಕಾದಂಬರಿ ಎಂದೇ [...]

ಹಳ್ಳಿ ಥೇಟರ್ ಎಟ್ ಬೆಳ್ಳೇಕೆರೆ

ರಂಗಭೂಮಿ ಬೆಂಗಳೂರಿನಿಂದ ಆಚೆ ಹೋಗಿಲ್ಲ ಎಂಬ ಭಾವನೆ ಮೂಡುವಂತೆ ಸದ್ಯದ ಸ್ಥಿತಿ ಇದೆ. ಪ್ರಕಟವಾಗುವ ಪತ್ರಿಕಾ ವಿಮಶರ್ೆಗಳಲ್ಲಿ ಬೆಂಗಳೂರಿನ ನಾಟಕಗಳೇ ತುಂಬಿರುತ್ತವೆ. ದೃಶ್ಯ ಮಾಧ್ಯಮಗಳ ಪಾಲಿಗೆ ಥಿಯೇಟರ್ ಅಕ್ಷರಶಃ `ಮೃತ ರಂಗಭೂಮಿ‘. ಬೆಂಗಳೂರಿನ ಹೊರಗೂ ರಂಗಭೂಮಿ ಇದೆ ಎಂದು ಹೇಳಲು ಆದಾರಕ್ಕೆ ನೀನಾಸಂ, ರಂಗಾಯಣಗಳನ್ನಷ್ಟೇ ಹೆಸರಿಸುತ್ತೇವೆ. ಆದರೆ ತಿಪಟೂರು, ಸಾಣೆಹಳ್ಳಿ, ಶಿವಮೊಗ್ಗ, ಉಡುಪಿಗಳಲ್ಲಿ ರಂಗಭೂಮಿಯನ್ನು ಹಲವರು ಹಚ್ಚಿಕೊಂಡು, ಬೆಳೆಸುತ್ತಿದ್ದಾರೆ. ಗ್ರಾಮೀಣ ರಂಗಭೂಮಿ ಇನ್ನೂ ಹೆಚ್ಚು ಹುಲುಸಾಗಿದೆ.
ಈ ನಿಟ್ಟಿನಲ್ಲಿ `ಬೆಳ್ಳೇಕೆರೆ ಹಳ್ಳಿ ಥೇಟರ್‘ ಎಂಬ ಕೃತಿ ಇಲ್ಲಿ ಉಲ್ಲೇಖಾರ್ಹ. [...]

ಸ್ಟಾಲ್ ನಂ.462 ಪುಸ್ತಕ ಪ್ರೀತಿಗೆ ಭೇಟಿಕೊಡಿ

ಪುಸ್ತಕ ಪ್ರೀತಿ ಈಗ ಪುಸ್ತಕ ವಿತರಣೆ ಕೆಲಸವನ್ನೂ ಭರದಿಂದ ಮಾಡುತ್ತಿದೆ, ಈ ಬಾರಿ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75ನೇ ಕನ್ನಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತನ್ನದೇ ಸ್ಟಾಲ್ ಇಟ್ಟುಕೊಳ್ಳುವ ಮೂಲಕ.
ಇತ್ತೀಚೆಗೆ 6 ವೈವಿಧ್ಯಮಯ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಚಿಂತನ ಪುಸ್ತಕದ ಎಲ್ಲಾ ಪುಸ್ತಕಗಳನ್ನು ಹಾಗೇ ಬೇರೆ ಬೇರೆ ಪ್ರಕಾಶನದ ಆಯ್ದ ಪುಸ್ತಕಗಳನ್ನು ಆರಿಸಲು ಸ್ಟಾಲ್ ನಂ.462 ಗೆ ಭೇಟಿಕೊಡಿ.

2008 ವರ್ಷದ ಓದು

ಸಪ್ನ ಬುಕ್ ಹೌಸ್ ಟಾಪ್ -10 (26-10-2008)

ಸಪ್ನ ಬುಕ್ ಹೌಸ್ (ದೂ.40114455, ಫ್ಯಾಕ್ಸ್:22269648)

1. ಡಿ ಕಂಪನಿ, ಲೆೆ:ರವಿ ಬೆಳಗೆರೆ, ಪ್ರ:ಭಾವನಾ ಪ್ರಕಾಶನ ಬೆ:ರೂ.250/-

2. ಜನಪ್ರಿತ ನೂರಾರು ಅರ್ಥಸಹಿತ ಗಾದೆಗಳು ಲೆೆ: ಸಂಪಟೂರು ವಿಶ್ವನಾಥ, ಪ್ರ:ವಸಂತ ಪ್ರಕಾಶನ, ಬೆಂಗಳೂರು ಬೆ:ರೂ.100/-

3. ಬೆತ್ತಲೆ ಜಗತ್ತು-7 ಲೇ:ಪ್ರತಾಪ್ ಸಿಂಹ ಪ್ರ:ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆ:ರೂ.120/-

4. ಶ್ರೀ ರಮಣ ಮಹಷರ್ಿಗಳೊಡನೆ ಮಾತುಕತೆ ಲೇ:ಡಾ.ವೇಣುಗೋಪಾಲ ರಾವ್, ಪ್ರ:ಶ್ರೀ ರಮಣಾಶ್ರಮ, ತಿರುವಣ್ಣಾಮಲೈ ಬೆ:ರೂ.200/-

5. ಜೀವನ ಮತ್ತು ಆರೋಗ್ಯ್ರ, ಲೇ:ಡಾ.ಎಂ. ಬಿ. ರಾಮಮೂತರ್ಿ, ಪ್ರ:ಅನಿಕೇತನ ಪ್ರಕಾಶನ, ಬೆಂಗಳೂರು [...]

ಡಾ. ಆರ್. ವಿ. ಭಂಡಾರಿ ಅವರಿಗೆ ಶೃದ್ಧಾಂಜಲಿ

ಬೆಳಕು ಹಂಚಿದ ಬಾಲಕನನ್ನು ಕೆತ್ತಿದ ಡಾ. ಆರ್.ವಿ. ಭಂದಾರಿ ಡಾ ಇನ್ನಿಲ್ಲ. ಅವರ ಕೆಲವು ಕೃತಿಗಳು ಇವು.
ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ)
ಕೊಲೆಗಾರ ಪತ್ತೆಯಾಗಲಿಲ್ಲ (ಕವನ ಸಂಕಲನ)
ಬೆಂಕಿಯ ಮಧ್ಯೆ (ಕಾದಂಬರಿ)
ಬಿರುಗಾಳಿ (ಕಾದಂಬರಿ)
ಗೋಡೆಗಳು ಮತ್ತು ನೆರೆ ಹಾವಳಿ (ಕಾದಂಬರಿ)
ತಲೆಮಾರು (ಕಾದಂಬರಿ)
ಯಾನ ಮತ್ತು ಇತರ ನಾಟಕಗಳು (ಮಕ್ಕಳ ನಾಟಕಗಳು)
ಕೇವಲ ಸಹಿ (ನವ ಸಾಕ್ಷರ ಸಾಹಿತ್ಯ)
ಇಟ್ಟ ಹೆಜ್ಜೆ ಮುಂದಕೆ (ನವ ಸಾಕ್ಷರ ಸಾಹಿತ್ಯ)
ಐದು ಯಕ್ಷಗಾನ ಏಕಾಂಕ ಪ್ರಸಂಗಗಳು (ನವ ಸಾಕ್ಷರ ಸಾಹಿತ್ಯ)
ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ (ಮಕ್ಕಳ ನಾಟಕಗಳು)
ಬೆಳಕಿನೆಡೆಗೆ [...]

ಹಿರಿಯ ಬಂಡಾಯ ಸಾಹಿತಿ ಆರ್.ವಿ.ಭಂಡಾರಿ ಇನ್ನಿಲ್ಲ.

ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಆರ್.ವಿ.ಭಂಡಾರಿ (72) ದೀರ್ಘಕಾಲದ ಅಸ್ವಸ್ಥತೆಯ ನಂತರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಪರಿಚಿತರಾಗಿದ್ದ ಇವರು ಬಂಡಾಯ ಸಾಹಿತ್ಯದ ಆರಂಭದ ಚಳುವಳಿಯ ದಿನಗಳಲ್ಲಿ ಅದರ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲೊಬ್ಬರಾಗಿದ್ದರು.
ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ), ಬೆಂಕಿಯ ಮಧ್ಯೆ, ಬಿರುಗಾಳಿ, ಯಶವಂತನ ಯಶೋಗೀತೆ (ಮೂರೂ ಕಾದಂಬರಿ), ಯಾನ, ಬೆಳಕಿನೆಡೆಗೆ (ಮಕ್ಕಳ ನಾಟಕಗಳು), ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್ಷ (ವೈಚಾರಿಕ ವಿಮರ್ಶಾ ಸಂಕಲನ) ಮೊದಲಾದ ಕೃತಿಗಳನ್ನು ರಚಿಸಿದ್ದ ಭಂಡಾರಿಯವರಿಗೆ [...]