ಸಾಹಿತಿ, ಸಾಹಿತ್ಯ, ವಿಮರ್ಶೆ

ಲೇಖಕರು : ಪಿ. ಲಂಕೇಶ್

ಪ್ರಕಾಶಕರು : ಲಂಕೇಶ್ ಪ್ರಕಾಶನ

ಪುಟಗಳು : 496

ಬೆಲೆ: ರೂ.300.00

ಕೃಪೆ : ಪ್ರಜಾವಾಣಿ

 

ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಚೊಕ್ಕವಾಗಿ, ತಪ್ಪಿಲ್ಲದೆ ಪ್ರಕಟಿಸಿರುವ ಈ ಕೈಪಿಡಿ ಡಾ. ಸಿ. ಆರ್. ಚಂದ್ರಶೇಖರ್ ಅವರು ಬರೆದದ್ದು ಎನ್ನುವ ಕಾರಣಕ್ಕಾಗಿಯೇ ಅತ್ಯಂತ ಉಪಯುಕ್ತ. ತತ್ಸಂಬಂಧಿತ ವಿಷಯಗಳ ಕುರಿತಂತೆ ಸಿ.ಆರ್. ಅವರಿಗೆ ಇರುವ ಕಾಳಜಿ ಅವರ ಶೈಲಿ, ವಿಷಯ ನಿರ್ವಹಣೆಯಲ್ಲಿ ಪಾರದರ್ಶಕವಾಗಿದೆ.

ಹದಿ ಹರೆಯ ಬಾಳಿನ ವಸಂತಕಾಲವಾಗಿರುವಂತೆ age of turbulence ಸಹ ಎಂದು ಆರಂಭಿಸುವ ಲೇಖಕರು ಟೀನೇಜರ್ಸ್ ಗೆ ಒಪ್ಪಿತವಾಗುವ ರೀತಿಯಲ್ಲಿಯೇ Adolescent ಪದದಲ್ಲಿಯೇ ಇರುವ Academic problems, Disappointments, Old v/s New traditions and Life Style, Low self esteem, Expressions/communications problem, Sexuality, Expression of Anger and Agression, Need for Substance use and abuse ಹಾಗೂ Targest ಎಂಬುದಾಗಿ ಪಟ್ಟಿ ಮಾಡಿದ್ದಾರೆ. (ಇದೀಗ ಅಪ್ಪ-ಅಮ್ಮಂದಿರು ಬೆರಳು ಮಡಚಿ ಪಟ ಪಟ ಜ್ಞಾಪಿಸಿಕೊಳ್ಳಬಹುದು!)

ವ್ಯಕ್ತಿತ್ವದ ಸಮಸ್ಯೆಗಳನ್ನು `ಅವನ/ಳ ಸ್ವಭಾವವೇ ಹಾಗೆಎಂದು ಬಿಟ್ಟರೆ ಮುಂದೆ ಭಾರೀ ಹೊಡತ ತಿನ್ನಲು ಸಿದ್ಧರಿರಬೇಕೆಂದು ಬಹುಪಾಲು ಪಾಲಕರಿಗೆ ವೇದ್ಯವಾಗಿರುವ ಕಾಲ ಇದು.

ಹಾಗಾಗಿ ಈ ಪುಸ್ತಕ ತಿಳಿಸಿಕೊಡುವ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುವ `ಜೀವನ ಕೌಶಲ‘ (ಪರಿಣಾಮಕಾರಿ ಸಂವಹನ, ಒಳ್ಳೆಯ ಸ್ನೇಹ ಸಂಬಂಧ ನಿರ್ಮಾಣ, ಭಾವನೆಗಳ ಹತೋಟಿ ಇತ್ಯಾದಿ) ಗಳನ್ನು ಮಕ್ಕಳಿಗೆ ಕಲಿಸಲು (ಕೆಲ ಸಮಯ ತಾವೂ ಕಲಿಯಲು) ಅವರು ಎಷ್ಟು ಬೇಗ ಸಿದ್ಧರಾದರೆ ಅಷ್ಟು ಒಳ್ಳೆಯದು.

ಲೇಖಕರು : ಡಾ. ಸಿ.ಆರ್.ಚಂದ್ರಶೇಖರ್

ಪ್ರಕಾಶಕರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ಪುಟಗಳು : 110

ಬೆಲೆ: ರೂ.40.00

ಕೃಪೆ : ವಿಜಯ ಕರ್ನಾಟಕ