ಶಿಕ್ಷಣ ನೋಟ (ಶೈಕ್ಷಣಿಕ ಲೇಖನಗಳ ಸಂಕಲನ)

ನಿವೃತ್ತ ಶಿಕ್ಷಕರ ಮೌಲಿಕ ಕೊಡುಗೆಯಿದು. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಶಿಕ್ಷಣರಂಗದ ಇಪ್ಪತ್ತೇಳು ಚಿಂತನಗಳಿವು. ಮಕ್ಕಳ ದೃಷ್ಟಿಯಿಂದ ಶಿಕ್ಷಣ ವ್ಯವಸ್ಥೆಯ ಅವಲೋಕನ, ಶಿಕ್ಷಣ ರಂಗದ ಈಗಿನ ಗೊತ್ತು-ಗುರಿಗಳ ಅರ್ಥಪೂರ್ಣ ವಿಶ್ಲೇಷಣೆ, ಮಕ್ಕಳಿಂದು ಶಿಕ್ಷಣವಂತರಾಗದೆ ಜ್ಞಾನದಿಂದ ವಂಚಿತರಾಗಿ ಮಾಹಿತಿ ಹೊತ್ತ ಕತ್ತೆಗಳಾಗುತ್ತಿರುವುದಕ್ಕೆ ಖೇದ – ಹೀಗೆ ಹಲವಾರು ಆಯಾಮಗಳ ತಳಸ್ಪರ್ಶಿ ವಿವೇಚನೆಯೂ ಇಲ್ಲಿದೆ

ಲೇಖಕರು : ಸಿ. ಎಚ್. ಕೃಷ್ಣ ಶಾಸ್ತ್ರಿ ಬಾಳಿಲ

ಪ್ರಕಾಶಕರು : ಜ್ಞಾನಾಗಂಗಾ ಪುಸ್ತಕ ಮಳಿಗೆ

ಪುಟಗಳು : 262

ಬೆಲೆ: ರೂ. 90.00

ಕೃಪೆ : ತುಷಾರ