ಅನಕೃ ಶತಮಾನೋತ್ಸವ, `ಮುಖ್ಯಮಂತ್ರಿ’ ಗೆ ಅಭಿನಂದನೆ

`ಕಲಾಗಂಗೋತ್ರಿರಂಗತಂಡ ಜೂನ್ 25 ಮತ್ತು 26 ರಂದು ಎರಡು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಮಯ ಸಂಜೆ 6 ಗಂಟೆಗೆ.

ಕೇಳುವ ಕಾದಂಬರಿ : ಜೂನ್ 25 ರಂದು ನಡೆಯುವ ಅನಕೃ ಶತಮಾನೋತ್ಸವ ಸಮಾರಂಭದಲ್ಲಿ ಅನಕೃ ಕಾದಂಬರಿ `ಸಂಧ್ಯಾರಾಗಕೇಳುವ ಕಾದಂಬರಿಯಾಗಿ, ಅಂದರೆ ಸಿ.ಡಿ. ರೂಪದಲ್ಲಿ ಬಿಡುಗಡೆಗೊಳ್ಳಲಿದೆ. ನಂತರ ಅನಕೃ ಅವರ ಚೊಚ್ಚಲ ನಾಟಕ `ಮದುವೆಯೋ ಮನೆಹಾಳೋನಾಟಕದ ಪ್ರದರ್ಶನವಿದೆ.

`ಮುಖ್ಯಮಂತ್ರಿಗೆ ಅಭಿನಂದನೆ: ಜೂನ್ 26 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೊಸ ಅಧ್ಯಕ್ಷ ಹಾಗೂ ಶಾಸಕ ಮುಖ್ಯಮಂತ್ರಿ ಚಂದ್ರು ಅವರಿಗೆ ಅಭಿನಂದನೆ. ಬಳಿಕ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಬದುಕು ಮತ್ತು ಕಾವ್ಯಗಳನ್ನಾಧರಿಸಿದ `ಮೈಸೂರು ಮಲ್ಲಿಗೆನಾಟಕ ಪ್ರದರ್ಶನಗೊಳ್ಳಲಿದೆ.

ತುಳುನಾಡಿನ ಮುಸ್ಲಿಮರು

ವಹಾಬ್ ದೊಡ್ಡಮನೆ ಈಗಾಗಲೇ ಇಂಗ್ಲೀಷ್ನಲ್ಲಿ ತುಳುನಾಡಿನ ಮುಸ್ಲಿಮರ ಕುರಿತಾಗಿ ಬರೆದ ಪುಸ್ತಕವನ್ನು ಪರಿಷ್ಕರಿಸಿ ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಸಾಕಷ್ಟು ಮಾಹಿತಿ, ಆಕರಗಳನ್ನು ಕಲೆಹಾಗಿ ಲೇಖಕರು ಈ ಪುಸ್ತಕವನ್ನು ಬರೆದಿದ್ದಾರೆ.

ಈ ಪುಸ್ತಕ ಮುಖ್ಯವಾಗಿ ತುಳುನಾಡಿನ (ದಕ್ಷಿಣ ಕನ್ನಡದ) ಮುಸ್ಲಿಮರ ಒಟ್ಟಾರೆ ಸಾಂಸ್ಕೃತಿಕ ಸ್ವರೂಪವನ್ನು ಕೊಡಲು ಪ್ರಯತ್ನಿಸುತ್ತದೆ. ಇತಿಹಾಸದ ಆಧಾರ ಇಟ್ಟುಕೊಂಡೇ ಇವರು ಮುಸ್ಲಿಮ್ ಸಮುದಾಯದ ಚಿತ್ರಣವನ್ನು ನೀಡುತ್ತಾರೆ. ಬಹುಮುಖ್ಯವಾಗಿ `ಬ್ಯಾರಿಗಳು‘, `ತುರ್ಕರು‘, `ನವಾಯಿತರು‘, `ಮೇಮನರು‘, `ಶಿಯಾಗಳು‘ – ಕುರಿತಾಗಿ ಇಲ್ಲಿ ಪರಿಚಯಿಸಲಾಗಿದೆ. ತುಳುನಾಡಿನೊಂದಿಗೆ ಇಸ್ಲಾಮಿನ ಸಂಪರ್ಕ, ಅರಬ್ ತುಳುನಾಡಿನ ವ್ಯಾಪಾರಿ ಸಂಬಂಧ, ಭಾವೈಕ್ಯತೆಯ ಪರಂಪರೆಯ ಬಗ್ಗೆ, ಪ್ರವಾಸಿಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

`ಇಂದು ಮುಸ್ಲಿಮರು ಜಗತ್ತಿನ ಎಲ್ಲಾ ಕಡೆಯಲ್ಲೂ ಕಷ್ಟದಲ್ಲಿದ್ದಾರೆ. ಮುಸ್ಲಿಮರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ನಮ್ಮ ದೇಶದಲ್ಲಿ ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ ಮುಸ್ಲಿಮರನ್ನೂ, ಅವರ ಆರ್ಥಿಕ ಶಕ್ತಿಯನ್ನು ಬಲಹೀನ ಮಾಡುವ ಹುನ್ನಾರಎಂದು ಲೇಖಕರು ತಮ್ಮ ಮೊದಲ ಮಾತಿನಲ್ಲಿ ಹೇಳಿಕೊಂಡಿದ್ದಾರೆ.

ಕೋಮುಸಾಮರಸ್ಯ ಅಂತರ್ಜಲವಾಗುಳ್ಳ `ತುಳುನಾಡಿನ ಮುಸ್ಲಿಮರುಪುಸ್ತಕ ಅರ್ಥಪೂರ್ಣವಾಗಿ ಕಾಣುತ್ತದೆ.

ಲೇಖಕರು : ಡಾ. ವಾಹಬ್ ದೊಡ್ಡಮನೆ ಪ್ರಕಾಶಕರು : ಗ್ರೀನ್ ವರ್ಲ್ಡ್ ಪುಟಗಳು :244 ಬೆಲೆ: ರೂ.225/-

ಕೃಪೆ : ಪ್ರಜಾವಾಣಿ