ತೇನೆ ಹಕ್ಕಿಯ ತಳಮಳ

ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ, ಸಂಶೋಧನಾ ವಿದ್ಯಾರ್ಥಿ, ಅದ್ಯಾಪಕ ಹಾಗೂ ಅದ್ಯಾಪಕೇತರ ಸಿಬ್ಬಂದಿಯ ಕವಿತೆಗಳನ್ನೆಲ್ಲಾ ಸಂಕಲಿಸಿ ಪುಸ್ತಕ ತಂದಿರುವ ಈ ಪ್ರಯೋಗ, ಉತ್ಸಾಹದೊಂದಿಗೆ ಗುಣಮಟ್ಟವನ್ನೂ ಕಾಯ್ದುಕೊಂಡಿದೆ ಎನ್ನುವುದಕ್ಕಾಗಿ ಸ್ವಾಗತಾರ್ಹ, ಜಾಗತೀಕರಣ, ದಿಡೀರ್ ಶ್ರೀಮಂತಿಕೆ, ಮನುಷ್ಯ ಸಂಬಂಧಗಳನ್ನು ಕಡೆಗಣಿಸುವ ವ್ಯಾವಹಾರಿಕ ದೃಷ್ಟಿ ಸಾಮಾಜಿಕ ಕಾಳಜಿ, ಮಹಿಳೆ, ರೈತರ ಸಂಕಷ್ಟಗಳಿಗೆ ಸ್ಪಂದನ ಇತ್ಯಾದಿ ವಸ್ತು, ವಿಷಯಗಳನ್ನು ಹೊಂದಿರುವ ಸಂಕಲನ ಸಾಕಷ್ಟು ಸಮಕಾಲೀನವಾಗಿಯೂ ಇದೆ. ಅಂತೆಯೇ ಇದು ಕನ್ನಡ ಕಾವ್ಯ ದಲಿತ-ಬಂಡಾಯ ಶೈಲಿಗಳ ನಂತರ ಪಡೆದುಕೊಳ್ಳುತ್ತಿರುವ `ಅಂತರಂಗದ ಧ್ಯಾನದ ಅಭಿವ್ಯಕ್ತಿಎಂದು ಬೆನ್ನುಡಿಕಾರ ಶಿವರಾಮು ಕಾಡನಕುಪ್ಪೆ ಅಭಿಪ್ರಾಯಪಡುತ್ತಾರೆ. ಅರವಿಂದ ಮಾಲಗತ್ತಿ, ಆರ್ವಿಯಸ್ ಸುಂದರಂ, ಪ್ರೀತಿ ಶುಭಚಂದ್ರ, ಸಿ.ನಾಗಣ್ಣರಂತಹ ಹೆವಿ ವೆಯ್ಟ್ಗಳ ಜತೆಗೇ ಪ್ರಕಟವಾಗಿರುವ ಸುಧೀಂದ್ರಕುಮಾರ್, ಆರ್. ಅವರ ಜಿಲೇಬಿ ಬರೆಯುವ ಹುಡುಗಿ ಕುರಿತ ಈ ಕವಿತೆ ಹೇಗಿದೆ ಹೇಳಿ?

ಅವಳ ತಳ್ಳುಗಾಡಿಯ ಸುತ್ತ / ನೊಣದಂತೆ ಗಿಜಿಗುಡುತ್ತಾ/ ಆಗಿನ್ನೂ ಗಂಟಲೊಡೆದ ಹುಡುಗರು / ಅವರ ಕೈಯಲ್ಲಿ, ಕೈ ಬೆರಳುಗಳಲ್ಲಿ / ಸನ್ನೆ ಮಿಡುಕಾಟಗಳು / ಅವಳತ್ತ ಹಾರುತ್ತಿವೆ …. ಅಜ್ಜನ ಕತೆ ಕೇಳುವಷ್ಟೆ ಧ್ಯಾನದಲ್ಲಿ / ಬಿಸಿ ಜಿಲೇಬಿಗಳ ತಂತಿಯಲ್ಲೆತ್ತಿ / ಜಿಡ್ಡಾದ ತಟ್ಟೆಯೊಳಗೆ ಜೋಡಿಸುತ್ತಾಳೆ.

ಶೀರ್ಷಿಕೆ : ತೇನೆ ಹಕ್ಕಿಯ ತಳಮಳ ಸಂಪಾದಕರು : ಪ್ರೊ. ನೀಲಗಿರಿ ಎಂ. ತಳವಾರ್ ಪ್ರಕಾಶಕರು : ಜ್ಯೋತಿ ಪ್ರಕಾಶನ ಪುಟಗಳು : 160 ಬೆಲೆ: ರೂ.180/-

ಕೃಪೆ : ವಿಜಯ ಕರ್ನಾಟಕ

ನಿಮ್ಮ ಟಿಪ್ಪಣಿ ಬರೆಯಿರಿ